ದಸರಾ ಆಚರಣೆ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅಸಮಾಧಾನ.!
Mysore Dasara: ಮೈಸೂರು ದಸರಾ ಮುಕ್ತಾಯಗೊಂಡ ಬೆನ್ನಲ್ಲೇ ದಸರಾ ಆಚರಣೆ ಹಾಗೂ ಅರಮನೆಯ ಧಾರ್ಮಿಕ ಕಾರ್ಯಕ್ರಮಗಳ ನಿರ್ವಹಣೆ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Mysore Dasara: ಮೈಸೂರು ದಸರಾ ಮುಕ್ತಾಯಗೊಂಡ ಬೆನ್ನಲ್ಲೇ ದಸರಾ ಆಚರಣೆ ಹಾಗೂ ಅರಮನೆಯ ಧಾರ್ಮಿಕ ಕಾರ್ಯಕ್ರಮಗಳ ನಿರ್ವಹಣೆ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಲ್ಕು ಪುಟಗಳ ಪತ್ರ ಬರೆದಿರುವ ಅವರು, ಪೊಲೀಸ್ ಇಲಾಖೆಯ ಸಮನ್ವಯದ ಕೊರತೆ, ಜಟ್ಟಿಕಾಳಗದ ಗೊಂದಲ, ಚಿನ್ನದ ಅಂಬಾರಿ ಭದ್ರತೆ ಹಾಗೂ ಅಂಬಾರಿ ಹೊರುವ ಆನೆಯ ಮಾಹಿತಿ ನೀಡುವಲ್ಲಿ ವಿಳಂಬದ ಬಗ್ಗೆ ಆಕ್ಷೇಪಿಸಿದ್ದಾರೆ.
ಮೈಸೂರು ದಸರಾ ಈ ಬಾರಿ ರಾಜವಂಶಸ್ಥರು Vs ಸರ್ಕಾರ ಎಂಬಾತಾಗಿದೆ. ಅರಮನೆಯ ಖಾಸಗಿ ಸ್ಥಳಕ್ಕೆ ಅನಧಿಕೃತ ತಡೆಬೇಲಿ ಹಾಕಿ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸಲಾಗಿದೆ ಎಂದು ರಾಜಮಾತೆ ಆರೋಪಿಸಿದ್ದು, ಆಯುಧಪೂಜೆ ಮತ್ತು ವಿಜಯದಶಮಿಯಂದು ರಾಜಮನೆತನದ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಯಾವುದೇ ಅಡ್ಡಿಯಿಲ್ಲದೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಚಿನ್ನದ ಅಂಬಾರಿ ರಾಜಮನೆತನದ ಖಾಸಗಿ ಆಸ್ತಿ, ಅದರ ಭದ್ರತೆಯಲ್ಲಿ ಯಾವುದೇ ಲೋಪವಾಗಬಾರದು ಎಂದು ಎಚ್ಚರಿಸಿದ್ದಾರೆ.
ಇನ್ನು ಇದಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ ರಾಜಮಾತೆಯ ಪತ್ರಕ್ಕೆ ಪ್ರತಿಕ್ರಿಯಿಸಿದ್ದು, ಸರ್ಕಾರ ಆರಂಭದಿಂದಲೂ ರಾಜಮನೆತನದೊಂದಿಗೆ ಸಂಪರ್ಕದಲ್ಲಿದ್ದು, ದಸರಾ ಆಚರಣೆಗೆ ಅಗತ್ಯ ಸಹಕಾರ ನೀಡಿದೆ ಎಂದು ಹೇಳಿದ್ದಾರೆ. ಜಟ್ಟಿಕಾಳಗದ ವಿಚಾರದಲ್ಲಿ ಮಾತ್ರ ಗೊಂದಲ ಉಂಟಾಗಿದ್ದು, ಉಳಿದಂತೆ ಯಾವುದೇ ದೊಡ್ಡ ಸಮಸ್ಯೆ ಆಗಿಲ್ಲ ಎಂದಿದ್ದಾರೆ. ಅಂಬಾರಿ ಬಳಕೆಗೆ ಸರ್ಕಾರ ಹಣ ಪಾವತಿಸುತ್ತದೆ. ಅಂಬಾರಿ ಹೊರುವ ಆನೆಯ ಆಯ್ಕೆಯಲ್ಲಿ ಅರಣ್ಯ ಇಲಾಖೆಯ ನಿರ್ಧಾರ ವಿಳಂಬವಾದ ಕಾರಣ ಮಾಹಿತಿ ನೀಡಲು ತಡವಾಗಿರಬಹುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಇನ್ನು ರಾಜಮನೆತನದ ಅಸಮಾಧಾನ ಹಾಗೂ ಸಲಹೆಗಳನ್ನು ಪರಿಶೀಲಿಸಲು ಸರ್ಕಾರ ಸಿದ್ಧವಿದ್ದು, ಅಗತ್ಯವಿದ್ದರೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.ಒಟ್ಟಿನಲ್ಲಿ, ಮೈಸೂರು ದಸರಾ ಮುಗಿದ ಬೆನ್ನಲ್ಲೇ ರಾಜಮನೆತನ ಮತ್ತು ಸರ್ಕಾರದ ನಡುವೆ ಧಾರ್ಮಿಕ ಆಚರಣೆಗಳು, ಪೊಲೀಸ್ ಭದ್ರತೆ, ಚಿನ್ನದ ಅಂಬಾರಿ ಹಾಗೂ ಜಟ್ಟಿಕಾಳಗದ ವಿಚಾರವಾಗಿ ಹೊಸ ಚರ್ಚೆ ಆರಂಭವಾಗಿದ್ದು ಇದು ಮುಂದೆ ಯಾವ ಹಂತಕ್ಕೆ ಹೋಗುತ್ತೆ ಎಂಬುದೆ ಯಕ್ಷ ಪ್ರಶ್ನೆಯಾಗಿದೆ.