• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮೈಸೂರು
  • /ಸಫಾರಿಯಲ್ಲಿ ಮೊಬೈಲ್ ಬಳಕೆಗೆ ಬ್ರೇಕ್‌! ಪ್ರವಾಸಿಗರು, ಚಾಲಕರು, ಗೈಡ್‌ಗಳಿಗೂ ನಿರ್ಬಂಧ

ಸಫಾರಿಯಲ್ಲಿ ಮೊಬೈಲ್ ಬಳಕೆಗೆ ಬ್ರೇಕ್‌! ಪ್ರವಾಸಿಗರು, ಚಾಲಕರು, ಗೈಡ್‌ಗಳಿಗೂ ನಿರ್ಬಂಧ

ಸಫಾರಿ ಆರಂಭಿಸುವ ಮೊದಲು ಪ್ರವಾಸಿಗರು ತಮ್ಮ ಮೊಬೈಲ್‌ ಫೋನ್‌ಗಳನ್ನ ನಿಗದಿತ ಕೌಂಟರ್‌ಗಳಲ್ಲಿ ಇಟ್ಟು ತೆರಳುವಂತೆ ಸೂಚಿಸಲಾಗಿದೆ. ಸಫಾರಿಯ ಸಂದರ್ಭದಲ್ಲಿ ಮೊಬೈಲ್‌ ಬಳಕೆಯನ್ನ ನಿಯಂತ್ರಿಸುವುದರ ಜೊತೆಗೆ, ಪ್ರವಾಸಿಗರು ಹಾಗೂ ಸಿಬ್ಬಂದಿ ನಿಯಮಗಳನ್ನ ಪಾಲಿಸುವುದನ್ನ ಖಚಿತಪಡಿಸಿಕೊಳ್ಳಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಲಿದೆ.

Written ByPuttaraj K Alur
Published: Oct 10, 2026, 12:03 PM IST|Updated: Oct 10, 2026, 12:16 PM IST
joinshare
ಸಫಾರಿಯಲ್ಲಿ ಮೊಬೈಲ್ ಬಳಕೆಗೆ ಬ್ರೇಕ್‌! ಪ್ರವಾಸಿಗರು, ಚಾಲಕರು, ಗೈಡ್‌ಗಳಿಗೂ ನಿರ್ಬಂಧ
Image Credit: Bandipur Safari

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
Mysuru Dasara 2026: ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾಗೆ ನಿರ್ಬಂಧ! ಕಾರಣವೇನು ಗೊತ್ತಾ?

Mysuru Dasara 2026: ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾಗೆ ನಿರ್ಬಂಧ! ಕಾರಣವೇನು ಗೊತ್ತಾ?

2

ಗೃಹಲಕ್ಷ್ಮಿ ಹೊಸ ನಿಯಮ; ಪ್ರತಿ ತಿಂಗಳು 2000 ರೂ. ಬೇಕಿದ್ರೆ ಈ ದಾಖಲೆಗಳನ್ನು ಹೊಸದಾಗಿ ನೀಡಲೇಬೇಕು

3

ಸಫಾರಿಯಲ್ಲಿ ಮೊಬೈಲ್ ಬಳಕೆಗೆ ಬ್ರೇಕ್‌! ಪ್ರವಾಸಿಗರು, ಚಾಲಕರು, ಗೈಡ್‌ಗಳಿಗೂ ನಿರ್ಬಂಧ

4

ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆಗೆ ಭಾರೀ ಭದ್ರತೆ; ಮೆಟ್ರೋ, ರೈಲು ಸೇವೆಗಳಿಗೆ ನಿರ್ಬಂಧ, ಇಂಟರ್ನೆಟ್ ಸ್ಥಗಿತ!

5

ನಾನಾ ಪಾಟೇಕರ್ ಸಾಯುವ ಮುನ್ನ ಗೆಳೆಯನಿಗೆ ಮಾಡಿದ್ದ ಮೆಸೇಜ್‌ ಏನು? ರಾತ್ರಿ 2.30ಕ್ಕೆ ಅಸಲಿಗೆ ನಡೆದಿದ್ದೇನು ಗೊತ್ತಾ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Mobile Phone Ban in Safari: ವನ್ಯಜೀವಿ ಸಫಾರಿಗೆ ತೆರಳುವ ಪ್ರವಾಸಿಗರು ಇನ್ಮುಂದೆ ಮೊಬೈಲ್‌ ಫೋನ್‌ ಬಳಸಿ ಪ್ರಾಣಿಗಳ ದೃಶ್ಯಗಳನ್ನ ಸೆರೆಹಿಡಿಯಲು ಸಾಧ್ಯವಾಗುವುದಿಲ್ಲ. ಸುಪ್ರೀಂಕೋರ್ಟ್‌ನ ಆದೇಶ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (NTCA) ನಿರ್ದೇಶನಗಳ ಹಿನ್ನೆಲೆಯಲ್ಲಿ, ಕರ್ನಾಟಕದ ಹುಲಿ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಯ ಸಫಾರಿಗಳಲ್ಲಿ ಮೊಬೈಲ್‌ ಫೋನ್‌ ಬಳಕೆಯನ್ನ ನಿರ್ಬಂಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

ಕರ್ನಾಟಕ ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳ ಕೋರ್‌ ಭಾಗಗಳಲ್ಲಿನ ಪರಿಶಿಷ್ಟ ಪ್ರವಾಸ ವಲಯಗಳಲ್ಲಿ (Tourism Zones) ಮೊಬೈಲ್‌ ಫೋನ್‌ ಬಳಕೆಯನ್ನ ಸಂಪೂರ್ಣವಾಗಿ ನಿಷೇಧಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರಾದ ಕುಮಾರ್‌ ಪುಷ್ಕರ್‌ ಸೂಚನೆ ನೀಡಿದ್ದಾರೆ. ಅಕ್ಟೋಬರ್‌ 9ರಂದು ಹೊರಡಿಸಿರುವ ಈ ಆದೇಶವು ವನ್ಯಜೀವಿಗಳ ಸಂರಕ್ಷಣೆ ಹಾಗೂ ಸಫಾರಿ ಚಟುವಟಿಕೆಗಳ ನಿಯಂತ್ರಣದ ದೃಷ್ಟಿಯಿಂದ ಮಹತ್ವ ಪಡೆದಿದೆ.

ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಕ್ರಮ

ಮಾನವ-ವನ್ಯಜೀವಿ ಸಂಘರ್ಷವನ್ನ ಕಡಿಮೆ ಮಾಡುವುದು ಮತ್ತು ಹುಲಿಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ಮಾನವನ ಹಸ್ತಕ್ಷೇಪವನ್ನ ನಿಯಂತ್ರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಹುಲಿ ಸಂರಕ್ಷಿತ ಪ್ರದೇಶಗಳ ಕೋರ್‌ ಆವಾಸಸ್ಥಾನಗಳಲ್ಲಿ ಮೊಬೈಲ್‌ ಫೋನ್‌ ಬಳಕೆಗೆ ಅವಕಾಶ ನೀಡಬಾರದು ಎಂಬ ನಿರ್ದೇಶನವನ್ನ ಪಾಲಿಸುವಂತೆ ಅರಣ್ಯ ಇಲಾಖೆಗೆ ಸೂಚಿಸಲಾಗಿದೆ. ಆದೇಶದ ಪ್ರಕಾರ, ಸಫಾರಿಗೆ ತೆರಳುವ ಪ್ರವಾಸಿಗರು ಮಾತ್ರವಲ್ಲದೆ ಸಫಾರಿ ವಾಹನಗಳ ಚಾಲಕರು ಹಾಗೂ ಪ್ರವಾಸಿಗರಿಗೆ ಮಾಹಿತಿ ನೀಡುವ ಪ್ರಕೃತಿ ಮಾರ್ಗದರ್ಶಕರು (Nature Guides) ಕೂಡ ಮೊಬೈಲ್‌ ಫೋನ್‌ ಬಳಕೆಯ ನಿರ್ಬಂಧವನ್ನ ಪಾಲಿಸಬೇಕಾಗುತ್ತದೆ.

ಸಫಾರಿ ಪ್ರವೇಶಕ್ಕೂ ಮುನ್ನ ಮೊಬೈಲ್‌ ಜಮಾ ಮಾಡಬೇಕು

ಸಫಾರಿ ಆರಂಭಿಸುವ ಮೊದಲು ಪ್ರವಾಸಿಗರು ತಮ್ಮ ಮೊಬೈಲ್‌ ಫೋನ್‌ಗಳನ್ನ ನಿಗದಿತ ಕೌಂಟರ್‌ಗಳಲ್ಲಿ ಇಟ್ಟು ತೆರಳುವಂತೆ ಸೂಚಿಸಲಾಗಿದೆ. ಸಫಾರಿಯ ಸಂದರ್ಭದಲ್ಲಿ ಮೊಬೈಲ್‌ ಬಳಕೆಯನ್ನ ನಿಯಂತ್ರಿಸುವುದರ ಜೊತೆಗೆ, ಪ್ರವಾಸಿಗರು ಹಾಗೂ ಸಿಬ್ಬಂದಿ ನಿಯಮಗಳನ್ನ ಪಾಲಿಸುವುದನ್ನ ಖಚಿತಪಡಿಸಿಕೊಳ್ಳಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಲಿದೆ. ವನ್ಯಜೀವಿಗಳ ಚಿತ್ರಗಳು ಮತ್ತು ವಿಡಿಯೋಗಳನ್ನ ಸೆರೆಹಿಡಿಯುವ ಉದ್ದೇಶದಿಂದ ಪ್ರವಾಸಿಗರು ಮೊಬೈಲ್‌ ಫೋನ್‌ ಬಳಸುವುದರಿಂದ ಸಫಾರಿ ನಿಯಮಗಳ ಉಲ್ಲಂಘನೆ ಸಂಭವಿಸುವ ಸಾಧ್ಯತೆಯಿದೆ. ಹೀಗಾಗಿ ಸಫಾರಿ ವಲಯಗಳಲ್ಲಿ ಮೊಬೈಲ್‌ ಬಳಕೆಯನ್ನ ತಡೆಯುವ ಮೂಲಕ ನಿಯಮಬದ್ಧ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುತ್ತಿದೆ.

ತುರ್ತು ಸಂಪರ್ಕಕ್ಕೆ ವೈರ್‌ಲೆಸ್‌ ವ್ಯವಸ್ಥೆ

ಸಫಾರಿ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಎದುರಾದರೆ ಸಂಪರ್ಕ ವ್ಯವಸ್ಥೆಯಲ್ಲಿ ತೊಂದರೆಯಾಗದಂತೆ ಸಫಾರಿ ವಾಹನಗಳಲ್ಲಿ ಮೊಬೈಲ್‌ ವೈರ್‌ಲೆಸ್‌ ಸೆಟ್‌ಗಳನ್ನ ಅಳವಡಿಸುವಂತೆ ಸೂಚಿಸಲಾಗಿದೆ. ಇದರಿಂದ ಪ್ರವಾಸಿಗರ ಮೊಬೈಲ್‌ ಬಳಕೆಯನ್ನ ನಿರ್ಬಂಧಿಸಿದರೂ, ತುರ್ತು ಸಂದರ್ಭಗಳಲ್ಲಿ ಅರಣ್ಯ ಸಿಬ್ಬಂದಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನಡುವೆ ಸಂಪರ್ಕ ಸಾಧಿಸಲು ಅನುಕೂಲವಾಗಲಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಫಾರಿ ನಿರ್ವಹಣೆಯಲ್ಲಿ ತೊಡಗಿರುವವರು ನಿಗದಿತ ನಿಯಮಗಳನ್ನ ಪಾಲಿಸುವುದು ಅಗತ್ಯವಾಗಿದೆ. ಮೊಬೈಲ್‌ ಬಳಕೆಗೆ ಬದಲಾಗಿ ಅಧಿಕೃತ ಸಂಪರ್ಕ ವ್ಯವಸ್ಥೆ ಬಳಸುವ ಮೂಲಕ ಸಫಾರಿ ಕಾರ್ಯಾಚರಣೆಗಳನ್ನ ಸುಗಮವಾಗಿ ನಿರ್ವಹಿಸುವ ಉದ್ದೇಶ ಈ ಕ್ರಮದಲ್ಲಿದೆ.

ಬಂಡೀಪುರ ಸೇರಿದಂತೆ ಹಲವು ಸಫಾರಿ ಕೇಂದ್ರಗಳಿಗೆ ಅನ್ವಯ

ಚಾಮರಾಜನಗರ ಜಿಲ್ಲೆಯ ಬಂಡೀಪುರ, ಕೆ.ಗುಡಿ, ಪಿ.ಜಿ.ಪಾಳ್ಯ ಹಾಗೂ ಗೋಪಿನಾಥಂ ಸೇರಿದಂತೆ ಸೂಚಿಸಲಾದ ವನ್ಯಜೀವಿ ಸಫಾರಿ ಕೇಂದ್ರಗಳಲ್ಲಿ ಈ ನಿಯಮವನ್ನ ಜಾರಿಗೊಳಿಸುವ ಕುರಿತು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಕೇಂದ್ರಗಳಿಗೆ ಸಫಾರಿಗೆ ತೆರಳುವ ಪ್ರವಾಸಿಗರು ಹೊಸ ನಿಯಮಗಳ ಬಗ್ಗೆ ಮುಂಚಿತವಾಗಿ ತಿಳಿದುಕೊಂಡು ಸಹಕರಿಸುವುದು ಅಗತ್ಯವಾಗಿದೆ. ವನ್ಯಜೀವಿ ಸಫಾರಿ ಪ್ರವಾಸೋದ್ಯಮದಲ್ಲಿ ಪ್ರವಾಸಿಗರ ಸುರಕ್ಷತೆ, ಅರಣ್ಯ ಸಿಬ್ಬಂದಿಯ ಕಾರ್ಯನಿರ್ವಹಣೆ ಹಾಗೂ ಪ್ರಾಣಿಗಳ ನೈಸರ್ಗಿಕ ವಾತಾವರಣದ ರಕ್ಷಣೆಗೆ ಆದ್ಯತೆ ನೀಡುವುದು ಈ ಕ್ರಮದ ಉದ್ದೇಶವಾಗಿದೆ. ಸಫಾರಿಗೆ ತೆರಳುವವರು ಮೊಬೈಲ್‌ ಫೋನ್‌ ಬಳಕೆಗೆ ಸಂಬಂಧಿಸಿದ ಸೂಚನೆಗಳನ್ನ ಪಾಲಿಸಿ, ಅರಣ್ಯ ಇಲಾಖೆಯ ಮಾರ್ಗಸೂಚಿಗಳಿಗೆ ಸಹಕರಿಸಬೇಕಿದೆ.

ಒಟ್ನಲ್ಲಿ ವನ್ಯಜೀವಿಗಳ ವೀಕ್ಷಣೆಗೆ ತೆರಳುವ ಪ್ರವಾಸಿಗರು ಇನ್ಮುಂದೆ ಮೊಬೈಲ್‌ನಲ್ಲಿ ಫೋಟೋ ಮತ್ತು ವಿಡಿಯೋ ಸೆರೆಹಿಡಿಯುವ ಬದಲು, ಅರಣ್ಯ ಇಲಾಖೆಯ ನಿಯಮಗಳನ್ನ ಪಾಲಿಸಿ ಸಫಾರಿಯಲ್ಲಿ ಭಾಗವಹಿಸಬೇಕಾಗಿದೆ. ಈ ನಿರ್ಬಂಧವು ವನ್ಯಜೀವಿ ಸಂರಕ್ಷಣೆಗೆ ಪೂರಕವಾಗುವಂತೆ ಜಾರಿಯಾಗಬೇಕಿದ್ದು, ನಿಯಮಗಳ ಅನುಷ್ಠಾನ ಹೇಗೆ ನಡೆಯಲಿದೆ ಎಂಬುದರ ಮೇಲೆ ಪ್ರವಾಸಿಗರ ಅನುಭವವೂ ಅವಲಂಬಿತವಾಗಿರಲಿದೆ.

Add Zee News as a Preferred Source
TAGS:
Kannada News