SOCIAL MEDIA

Newsletter

PARTNER SITES
Select Language Select State

ಕುಡಿದ ಮತ್ತಿನಲ್ಲಿ ಸಣ್ಣ ಕಿರಿಕ್‌, ಸ್ಕೆಚ್‌ ಹಾಕಿ ಕೊಟ್ಟ ರೌಡಿಶೀಟರ್‌.. ಆಟೋದಲ್ಲಿ ಮಲಗಿದ್ದಾಗ ಮುಗಿಸಿಯೇ ಬಿಟ್ಟರು

ಕುಡಿದ ಮತ್ತಿನಲ್ಲಿ ಆರೋಪಿಗಳು ಮತ್ತು ಪುರುಷೋತ್ತಮ್‌ ನಡುವೆ ಸಣ್ಣದಾದ ಕಿರಿಕ್ ಆಗಿತ್ತು. ಇದರಿಂದ ದ್ವೇಷ ಸಾಧಿಸಿದ್ದ ಆರೋಪಿಗಳು ಸ್ಕೆಚ್ ಹಾಕಿ ಪುರುಷೋತ್ತಮ್‌ನನ್ನು ಕೊಂದೆ ಬಿಟ್ಟಿದ್ದಾರೆ.

Written By Bhimappa
Published: Oct 03, 2026, 10:37 AM IST | Updated: Oct 03, 2026, 10:45 AM IST
Image Credit: Mandya_Gandhinagar
Join

Mandya Gandhinagar Purushottam murder case: ಮಂಡ್ಯದ ಗಾಂಧಿನಗರದಲ್ಲಿ ಆಟೋದಲ್ಲಿ ಮಲಗಿದ್ದ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಕುಡಿದ ಮತ್ತಿನಲ್ಲಿ ಮೃತನು ಮತ್ತು ಆರೋಪಿಗಳ ನಡುವೆ ಸಣ್ಣದಾದ ಗಲಾಟೆ ಆಗಿತ್ತು. ಇದೇ ಸೇಡು ಇಟ್ಟುಕೊಂಡಿದ್ದ ಆರೋಪಿಗಳು ಕೃತ್ಯ ಎಸಗಲು ಪ್ಲಾನ್‌ ಮಾಡುತ್ತಿದ್ದರು. ಅದರಂತೆ ಆತ ಆಟೋದಲ್ಲಿ ಮಲಗಿದ್ದ ಸಮಯವನ್ನು ಕಾಯುತ್ತಿದ್ದ ಕಿರಾತಕರು ಕತ್ತು ಕುಯ್ದು ಕೊಲೆ ಮಾಡಿದ್ದಾರೆ. ಸದ್ಯ ಈ ಸಂಬಂಧ ತನಿಖೆ ನಡೆಸಿದ್ದ ಮಂಡ್ಯದ ಪಶ್ಚಿಮ ವಿಭಾಗದ ಪೊಲೀಸರು 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ. 

ಮಂಡ್ಯದ ಗಾಂಧಿನಗರದ ನಿವಾಸಿ ಪುರುಷೋತ್ತಮ್ (47) ಕೊಲೆಯಾದ ವ್ಯಕ್ತಿ ಆಗಿದ್ದಾರೆ. ಗಾಂಧಿ ನಗರದ ನಿವಾಸಿಗಳಾದ ಮನೋಜ್ ಕುಮಾರ್, ಕಮಲೇಶ್, ಪುನೀತ್ ಕುಮಾರ್, ಚೇತನ್, ನಿತಿನ್, ಹೇಮಂತ್ ಕೊಲೆ ಮಾಡಿದ ಆರೋಪಿಗಳು. ಕುಡಿದ ಮತ್ತಿನಲ್ಲಿ ಆರೋಪಿಗಳು ಮತ್ತು ಪುರುಷೋತ್ತಮ್‌ ನಡುವೆ ಸಣ್ಣದಾದ ಕಿರಿಕ್ ಆಗಿತ್ತು. ಇದರಿಂದ ಕೋಪಿಸಿಕೊಂಡಿದ್ದ ಆರೋಪಿಗಳು ಸ್ಕೆಚ್ ಹಾಕಿ ಪುರುಷೋತ್ತಮ್‌ನನ್ನು ಕೊಂದೆ ಬಿಟ್ಟಿದ್ದಾರೆ. ಪುರುಷೋತ್ತಮ್‌ ಆಟೋದಲ್ಲಿ ಮಲಗಿದ್ದ ವೇಳೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಸೆಪ್ಟೆಂಬರ್‌ 21 ರಂದು ಮಂಡ್ಯ ನಗರದ ಗಾಂಧಿನಗರದಲ್ಲಿ ಈ ಘಟನೆ ನಡೆದಿತ್ತು. ಇದಾದ ಮೇಲೆ ಪ್ರಕರಣ ದಾಖಲು ಮಾಡಲಾಗಿತ್ತು. ಹೀಗಾಗಿ ಪೊಲೀಸರು ತನಿಖೆ ಆರಂಭಿಸಿದ್ದರು.

ಕೊಲೆಯಾದ ಪುರುಷೋತ್ತಮ್ ಹಾಗೂ ಆರೋಪಿಗಳ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯಾಗಿತ್ತು. ಗಲಾಟೆ ವೇಳೆ ಕೊಲೆಯಾದ ಪುರುಷೋತ್ತಮ್ ಹಾಗೂ ಮನೆಯವರು ಆರೋಪಿಗಳ ನಡುವೆ ಜಗಳವಾಗಿತ್ತು. ಕೊಲೆ ಮಾಡಲು ಆರೋಪಿಗಳಲ್ಲಿ ಒಬ್ಬನಾದ ಚೇತನ್ ಸಂಪೂರ್ಣವಾದ ಪ್ಲಾನ್ ಮಾಡಿಕೊಟ್ಟಿದ್ದನು. ಚೇತನ್‌ ಯಾರೆಂದು ನೋಡುವುದಾದರೆ, ಈ ಹಿಂದೆ ಕೆಲವೊಂದು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಅಲ್ಲದೇ ಇವನು ರೌಡಿಶೀಟರ್‌ ಕೂಡ ಆಗಿದ್ದಾನೆ. ಹೀಗಾಗಿ ಕೃತ್ಯ ಹೇಗೆಲ್ಲ ನಡೆಯಬೇಕು ಎಂದು ಉಳಿದ ಆರೋಪಿಗಳಿಗೆ ಯೋಜನೆ ಹಾಕಿಕೊಟ್ಟಿದ್ದನು. 
 
ಚೇತನ್‌ನ ಹಾಕಿಕೊಟ್ಟ ಪ್ಲಾನ್‌ನಂತೆ ಆರೋಪಿಗಳು ರಾತ್ರಿ ವೇಳೆ ಆಟೋದಲ್ಲಿ ಪುರುಷೋತ್ತಮ್ ಮಲಗಿದ್ದಾಗ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಇದಾದ ಮೇಲೆ ಕೊಲೆ ಸಂಬಂಧ ಪಶ್ವಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಆರೋಪಿಗಳ ಪತ್ತೆಗೆ ತಂಡ ಎಸ್‌ಪಿ ತಂಡ ರಚನೆ ಮಾಡಿದ್ದರು. ತನಿಖೆ ಕೈಗೊಂಡಿದ್ದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ರೌಡಿಶೀಟರ್‌ ಒಬ್ಬನ ಪ್ಲಾನ್‌ ಕೂಡ ಇರುವುದು ಕೂಡ ಬೆಳಕಿಗೆ ಬಂದಿದೆ. ಈ ಪ್ರಕರಣವನ್ನು ಮಂಡ್ಯ ಪಶ್ಚಿಮ ಠಾಣಾ ಪೊಲೀಸರು ಭೇದಿಸಿ, ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ. ಮಂಡ್ಯ ಪೊಲೀಸರ ತಂಡಕ್ಕೆ ಎಸ್‌ಪಿ ಶೋಭಾರಾಣಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಪುರುಷೋತ್ತಮ್‌ನನ್ನು ಕಳೆದುಕೊಂಡ ಅವರ ಕುಟುಂಬ ಕಣ್ಣೀರು ಹಾಕುತ್ತಿದೆ. ದುಡಿದು ಮನೆ ಸಂಸಾರ ನಡೆಸಿಕೊಂಡು ಹೋಗುತ್ತಿದ್ದವನೇ ಇಲ್ಲದಿದ್ದರಿಂದ ಅವರ ಗೋಳು ಕೇಳುವವರೆ ಇಲ್ಲ. ಮಲಗಿದ್ದಾಗ ಕತ್ತು ಕುಯ್ದು ಜೀವ ತೆಗೆದು ಬಿಟ್ಟಿದ್ದಾರೆ. ನಮ್ಮ ಕುಟುಂಬವನ್ನು ನೋಡುವವರು ಯಾರೆಂದು ಕುಟುಂಬಸ್ಥರ ಅಳಲು ಆಗಿದೆ. ಒಂದೇ ಏರಿಯಾದವರು ಆಗಿದ್ದರೂ ಸದಾ ದ್ವೇಷದಿಂದ ಕೊತ ಕೊತ ಕುದಿಯುತ್ತಿದ್ದರು. ಕುಡಿದ ಮತ್ತಿನಲ್ಲಿ ಆರೋಪಿಗಳು ಮತ್ತು ಪುರುಷೋತ್ತಮ್‌ ನಡುವೆ ಆದ ಸಣ್ಣದಾದ ಕಿರಿಕ್ ಬದುಕನ್ನೇ ಹಾಳು ಮಾಡಿದೆ. ದ್ವೇಷ ಸಾಧಿಸಿದ್ದ ಆರೋಪಿಗಳು ಸ್ಕೆಚ್ ಹಾಕಿ ಪುರುಷೋತ್ತಮ್‌ನನ್ನು ಕೊಂದೆ ಬಿಟ್ಟಿದ್ದಾರೆ. ಮಾಡಿದ ಕೃತ್ಯದಿಂದ ಒಂದು ಜೀವವೇ ಹೋಗಿದ್ದು, ಆರೋಪಿಗಳನ್ನು ಜೈಲಿಗೆ ಕಳುಗಿಸಲಾಗಿದೆ. ಪೊಲೀಸರು ನಡೆಸಿದ ತನಿಖೆ ಯಶಸ್ವಿಯಾಗಿದ್ದು ಆರು ಆರೋಪಿಗಳು ಕಂಬಿ ಹಿಂದೆ ಹೋಗಿದ್ದಾರೆ.  
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES