SOCIAL MEDIA

Newsletter

PARTNER SITES
Select Language Select State

ಇತಿಹಾಸ ಪ್ರಸಿದ್ಧ ಕೊಳದಲ್ಲಿ ಗಣಪತಿ ಮೂರ್ತಿ ವಿಸರ್ಜನೆ.. SP ಗೆ ನೋಟಿಸ್ ಜಾರಿ, ಹೆಚ್.ಡಿ ರೇವಣ್ಣ ಕಿಡಿ!

ಹಾಸನಾಂಬಾ ದೇವಾಲಯಕ್ಕೂ ದೇವಿಗೆರೆಗೂ ಸಂಬಂಧವಿದೆ. ಹೀಗಾಗಿ ಈ ಸ್ಥಳದ ಪಾವಿತ್ರ್ಯ ಹಾಗೂ ಪರಿಸರವನ್ನು ಕಾಪಾಡುವುದು ಜಿಲ್ಲಾಡಳಿತದ ಜವಾಬ್ದಾರಿ ಎಂದಿದ್ದಾರೆ. ಗಣಪತಿ ವಿಸರ್ಜನೆಗೆ ಮಹಾನಗರ ಪಾಲಿಕೆ ನಾಲ್ಕು ಕಡೆ ಅವಕಾಶ ಕಲ್ಪಿಸಿತ್ತು.

Written By Bhimappa
Published: Oct 06, 2026, 05:43 PM IST | Updated: Oct 06, 2026, 05:49 PM IST
Image Credit: HD Revanna
Join

Hassan DC issues notice to SP: ಹಾಸನದ ಇತಿಹಾಸ ಪ್ರಸಿದ್ಧ ದೇವಿಗೆರೆ ಕೊಳದಲ್ಲಿ ಗಣಪತಿ ಮೂರ್ತಿ ವಿಸರ್ಜನೆ ವಿಚಾರ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಗಣಪತಿ ವಿಸರ್ಜನೆ ಮಾಡಲಾಗಿದೆ ಎಂದು ಡಿಸಿ ಎಸ್‌ಪಿಗೆ ನೋಟಿಸ್ ಜಾರಿ ಮಾಡಿದ್ದರೆ, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹಾಗೂ ಶಾಸಕ ಸ್ವರೂಪ್ ಪ್ರಕಾಶ್ ಜಿಲ್ಲಾಡಳಿತದ ಕ್ರಮದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಕೊನೆಯ ಕ್ಷಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು ಏಕೆ ಎಂಬ ಪ್ರಶ್ನೆ ಎತ್ತಿದ್ದಾರೆ.

ಹಾಸನದ ದೇವಿಗೆರೆಯಲ್ಲಿ ಪೆಂಡಾಲ್ ಗಣಪತಿ ವಿಸರ್ಜನೆಗೆ ಜಿಲ್ಲಾಧಿಕಾರಿ ಹೇರಿದ ಆದೇಶ ಮತ್ತು ಆದೇಶ ಮೀರಿ ಅದೇ ಜಾಗದಲ್ಲಿ ಗಣೇಶ ವಿಸರ್ಜನೆ ಮಾಡಿ ಆದೇಶ ಉಲ್ಲಂಘನೆ ವಿಚಾರದಲ್ಲಿ ಹಾಸನ ಎಸ್‌ಪಿಗೆ ಡಿಸಿ ನೋಟೀಸ್ ಜಾರಿ ಮಾಡಿದ್ದಾರೆ ಎಂಬ ವಿಚಾರ ಈಗ ರಾಜಕೀಯ ಮೇಲಾಟಕ್ಕೂ ಕಾರಣವಾಗಿದೆ. ಈ ವಿಷಯವಾಗಿ ಹಾಸನ ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ ಇಂದು ಪತ್ರಿಕಾಗೋಷ್ಠಿ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಕೆ.ಎಸ್ ಲತಾ ಕುಮಾರಿ ಅವರು ಮಾತನಾಡಿರೋ ಅವರು ಹಾಸನದ ದೇವಿಗೆರೆ ಕೊಳ ಇತಿಹಾಸ ಮತ್ತು ಪಾವಿತ್ರ್ಯ ಹೊಂದಿರುವ ಸ್ಥಳ. ಹೊಯ್ಸಳರ ಕಾಲದಿಂದಲೂ ದೇವಿಗೆರೆಗೆ ವಿಶೇಷ ಮಹತ್ವವಿದೆ. 

ಹಾಸನಾಂಬಾ ದೇವಾಲಯಕ್ಕೂ ದೇವಿಗೆರೆಗೂ ಸಂಬಂಧವಿದೆ. ಹೀಗಾಗಿ ಈ ಸ್ಥಳದ ಪಾವಿತ್ರ್ಯ ಹಾಗೂ ಪರಿಸರವನ್ನು ಕಾಪಾಡುವುದು ಜಿಲ್ಲಾಡಳಿತದ ಜವಾಬ್ದಾರಿ ಎಂದಿದ್ದಾರೆ. ಗಣಪತಿ ವಿಸರ್ಜನೆಗೆ ಮಹಾನಗರ ಪಾಲಿಕೆ ನಾಲ್ಕು ಕಡೆ ಅವಕಾಶ ಕಲ್ಪಿಸಿತ್ತು. ಈ ಬಗ್ಗೆ ಸಾಕಷ್ಟು ಪ್ರಚಾರವನ್ನೂ ಮಾಡಲಾಗಿತ್ತು. ಆದರೂ ಆದೇಶ ಉಲ್ಲಂಘಿಸಿ ದೇವಿಗೆರೆಯಲ್ಲಿ ಗಣಪತಿ ವಿಸರ್ಜನೆ ಮಾಡಲಾಗಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ. ಹಾಸನಾಂಬಾಗೂ ದೇವಿಗೆರೆಗೂ ಮೊದಲಿಂದಲೂ ಸಂಬಂಧ ಇದೆ. ಈ ಸ್ಥಳದ ಪಾವಿತ್ರ್ಯ ಹಾಗೂ ಪರಿಸರವನ್ನು ಕಾಪಾಡುವುದು ಜಿಲ್ಲಾಡಳಿತದ ಜವಾಬ್ದಾರಿ ಆಗಿದೆ. ಗಣಪತಿ ವಿಸರ್ಜನೆಗೆ ಮಹಾನಗರ ಪಾಲಿಕೆ ನಾಲ್ಕು ಕಡೆ ಅವಕಾಶ ಇತ್ತು. ಆದರೂ ಅಲ್ಲೇ ಹೋಗಿ ವಿಸರ್ಜನೆ ಮಾಡಿದ್ದು ಯಾಕೆ?.

ಆದರೆ ಜಿಲ್ಲಾಡಳಿತದ ಕ್ರಮಕ್ಕೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 72 ವರ್ಷಗಳ ಇತಿಹಾಸ ಹೊಂದಿರುವ ಗಣಪತಿಗೆ ವಿಸರ್ಜನೆಗೆ ನಿರ್ಬಂಧ ವಿಧಿಸಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಇತರೆ ಗಣಪತಿಗಳಿಗೆ ವಿಸರ್ಜನೆಗೆ ಅವಕಾಶ ನೀಡಿರುವಾಗ ಈ ಗಣಪತಿಗೆ ಮಾತ್ರ ಏಕೆ ನಿರ್ಬಂಧ ಎಂದು ಪ್ರಶ್ನಿಸಿರುವ ರೇವಣ್ಣ, ಮೂರು ದಿನ ಮುಂಚಿತವಾಗಿಯೇ ಗಣಪತಿ ಪ್ರತಿಷ್ಠಾಪನ ಸಂಘದವರನ್ನು ಕರೆದು ಮಾತನಾಡಬೇಕಿತ್ತು ಎಂದಿದ್ದಾರೆ. ಎಸ್‌ಪಿಗೂ ನೋಟಿಸ್ ನೀಡಿರುವ ವಿಚಾರದ ಬಗ್ಗೆ ವ್ಯಂಗ್ಯವಾಡಿದ ರೇವಣ್ಣ, ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮುಖ್ಯ ಕಾರ್ಯದರ್ಶಿಗಳು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಇದೀಗ ರೇವಣ್ಣ ಅವರ ಜೊತೆ ಶಾಸಕ ಸ್ವರೂಪ್ ಪ್ರಕಾಶ್ ಕೂಡ ಧ್ವನಿಗೂಡಿಸಿದ್ದಾರೆ. ದೇವಿಗೆರೆಯಲ್ಲಿ ನಗರದ ಬಹುತೇಕ ಗಣಪತಿಗಳ ವಿಸರ್ಜನೆ ನಡೆದಿದ್ದು, 70 ವರ್ಷಗಳ ಇತಿಹಾಸ ಹೊಂದಿರುವ ಪೆಂಡಾಲ್ ಗಣಪತಿಗೆ ಮಾತ್ರ ಕೊನೆಯ ಕ್ಷಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಮೂರು ತಿಂಗಳ ಹಿಂದೆಯೇ ಅನುಮತಿ ಪಡೆಯಲು ಬಂದಾಗ ವಿಸರ್ಜನೆಗೆ ಅವಕಾಶವಿಲ್ಲ ಎಂದು ಹೇಳಬಹುದಿತ್ತು. ಹಣ ಕಟ್ಟಿಸಿಕೊಂಡು ಅದೇ ಹಣದಲ್ಲಿ ಸ್ವಚ್ಛತೆ ಮಾಡಬಹುದಿತ್ತು. ದೇವಿಗೆರೆ ಪಾರ್ಕಿಂಗ್ ಟೆಂಡರ್ ನೀಡಿದರೆ ಅದರಿಂದ ಬರುವ ಹಣವನ್ನು ಸ್ವಚ್ಛತೆಗೂ ಬಳಸಬಹುದಿತ್ತು ಎಂದು ಸ್ವರೂಪ್ ಪ್ರಕಾಶ್ ಹೇಳಿದ್ದಾರೆ.

ದೇವಿಗೆರೆ ಕೊಳದ ಪಾವಿತ್ರ್ಯ ಹಾಗೂ ಪರಿಸರ ಸಂರಕ್ಷಣೆಯ ಅಗತ್ಯವನ್ನು ಜಿಲ್ಲಾಡಳಿತ ಪ್ರತಿಪಾದಿಸುತ್ತಿದ್ದರೆ, ಮತ್ತೊಂದೆಡೆ ಧಾರ್ಮಿಕ ಕಾರ್ಯಕ್ರಮಕ್ಕೆ ಕೊನೆಯ ಕ್ಷಣದಲ್ಲಿ ನಿರ್ಬಂಧ ವಿಧಿಸಿರುವುದನ್ನು ರೇವಣ್ಣ ಹಾಗೂ ಶಾಸಕ ಸ್ವರೂಪ್ ಪ್ರಕಾಶ್ ಪ್ರಶ್ನಿಸಿದ್ದಾರೆ. ಹೀಗಾಗಿ ದೇವಿಗೆರೆ ಗಣಪತಿ ವಿಸರ್ಜನೆ ವಿವಾದ ಇದೀಗ ರಾಜಕೀಯ ವಾಗ್ವಾದಕ್ಕೂ ಕಾರಣವಾಗಿದ್ದು ಜಿಲ್ಲಾ ಮಟ್ಟದ ಅಧಿಕಾರಿಗೆ ಮತ್ತೊಬ್ಬ ಅಧಿಕಾರಿ ನೋಟೀಸ್ ಕೊಡುವ ಬದಲು ಮೇಲಾಧಿಕಾರಿಗಳು, ಸಚಿವರ ಗಮನಕ್ಕೆ ಹಾಸನ ಡಿಸಿ ತರಬಹುದಿತ್ತು ಎಂಬ ಚರ್ಚೆ ಕೂಡ ಸಾರ್ವಜನಿಕವಾಗಿ ಕೇಳಿಬರುತ್ತಿದೆ.
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES