SOCIAL MEDIA

Newsletter

PARTNER SITES
Select Language Select State

ದಸರಾ ಹಬ್ಬದ ಇತಿಹಾಸ ಗೊತ್ತಾ? ರಾವಣನ ಸಂಹಾರದಿಂದ ಮೈಸೂರು ದಸರಾವರೆಗೆ ರೋಚಕ ಕಥೆ!

ನಾಡಹಬ್ಬ ದಸರಾ ಅಂದ್ರೆ ಕರ್ನಾಟಕದ ಹೆಮ್ಮೆ. ಮೈಸೂರು ದಸರಾ ವಿಶ್ವವಿಖ್ಯಾತಿ ಪಡೆದಿರುವ ಈ ಹಬ್ಬದ ಹಿಂದೆ ಶತಮಾನಗಳ ಇತಿಹಾಸವಿದೆ.

Written By Ramya. R. Gowda
Published: Sep 20, 2026, 05:13 PM IST | Updated: Sep 20, 2026, 05:16 PM IST
Join

ನಾಡಹಬ್ಬ ದಸರಾ ಅಂದ್ರೆ ಕರ್ನಾಟಕದ ಹೆಮ್ಮೆ. ಮೈಸೂರು ದಸರಾ ವಿಶ್ವವಿಖ್ಯಾತಿ ಪಡೆದಿರುವ ಈ ಹಬ್ಬದ ಹಿಂದೆ ಶತಮಾನಗಳ ಇತಿಹಾಸವಿದೆ. ದುಷ್ಟ ಶಕ್ತಿಯ ವಿರುದ್ಧ ಒಳ್ಳೆಯದ ವಿಜಯದ ಸಂಕೇತವಾಗಿರುವ ದಸರಾ ಹಬ್ಬದ ಆಚರಣೆ ಹೇಗೆ ಆರಂಭವಾಯ್ತು? ಮೈಸೂರು ದಸರಾ ವಿಶ್ವಪ್ರಸಿದ್ಧಿಯಾಗಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ಇತಿಹಾಸ.

ದಸರಾ... ವಿಜಯದಶಮಿ... ನವರಾತ್ರಿ... ಹೆಸರೇನೇ ಇರಲಿ, ಈ ಹಬ್ಬದ ಮೂಲ ಸಂದೇಶ ಮಾತ್ರ ಒಂದೇ. ಅಧರ್ಮದ ವಿರುದ್ಧ ಧರ್ಮದ ಜಯ, ಕೆಟ್ಟದ್ದರ ವಿರುದ್ಧ ಒಳ್ಳೆಯದ ವಿಜಯ.
ಪುರಾಣಗಳ ಪ್ರಕಾರ, ಮಹಿಷಾಸುರನನ್ನು ದೇವಿ ಚಾಮುಂಡೇಶ್ವರಿ ಸಂಹರಿಸಿದ ದಿನವೇ ವಿಜಯದಶಮಿ ಎಂದು ಆಚರಿಸಲಾಗುತ್ತದೆ.


ಚಾಮುಂಡೇಶ್ವರಿ ದೇವಿ, ಮಹಿಷಾಸುರನ ವಧೆಯ ಕಲಾತ್ಮಕ ದೃಶ್ಯಗಳು. ಮೈಸೂರು ದಸರಾ ಆಚರಣೆಗೆ ಹಲವು ಶತಮಾನಗಳ ಇತಿಹಾಸವಿದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲೇ ವಿಜಯದಶಮಿ ಆಚರಣೆ ಪ್ರಮುಖ ಸ್ಥಾನ ಪಡೆದಿತ್ತು. ನಂತರ ವಿಜಯನಗರ ಸಾಮ್ರಾಜ್ಯದ ಪತನದ ಬಳಿಕವೂ ಈ ಸಂಪ್ರದಾಯ ಮುಂದುವರಿಯಿತು. ಮೈಸೂರು ಅರಸರ ಆಳ್ವಿಕೆಯಲ್ಲಿ ದಸರಾ ಮತ್ತಷ್ಟು ವೈಭವ ಪಡೆದುಕೊಂಡಿತು. ಅರಮನೆ ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಆಚರಣೆಗಳು ಹಾಗೂ ರಾಜಮೆರವಣಿಗೆ ದಸರಾ ಹಬ್ಬದ ಪ್ರಮುಖ ಆಕರ್ಷಣೆಯಾದವು.


ಮೈಸೂರು ಅರಮನೆ, ಹಳೆಯ ದಸರಾ ಛಾಯಾಚಿತ್ರಗಳು, ರಾಜರ ಮೆರವಣಿಗೆ.
ಮೈಸೂರು ದಸರಾದ ಪ್ರಮುಖ ಆಕರ್ಷಣೆ ಎಂದರೆ ಜಂಬೂ ಸವಾರಿ. ಅಲಂಕೃತ ಆನೆಗಳೊಂದಿಗೆ ನಡೆಯುವ ಈ ಭವ್ಯ ಮೆರವಣಿಗೆ ಮೈಸೂರು ದಸರಾಗೆ ವಿಶೇಷ ಗುರುತನ್ನು ನೀಡಿದೆ. ಇಂದಿಗೂ ಅಂಬಾರಿ ಹೊತ್ತ ಆನೆಯ ಮೆರವಣಿಗೆ ನೋಡಲು ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ.


ಕಾಲ ಬದಲಾದರೂ ದಸರಾ ಸಂಭ್ರಮದ ಸ್ವರೂಪ ಬದಲಾಗಿಲ್ಲ. ಅರಮನೆಯ ವೈಭವದ ಜೊತೆಗೆ ಜನರ ನಾಡಹಬ್ಬವಾಗಿಯೂ ದಸರಾ ರೂಪುಗೊಂಡಿದೆ. ನವರಾತ್ರಿ ಸಂದರ್ಭದಲ್ಲಿ ದೇವಿಯ ಆರಾಧನೆ, ಗೊಂಬೆ ಕೂರಿಸುವ ಸಂಪ್ರದಾಯ, ಆಯುಧ ಪೂಜೆ ಮತ್ತು ವಿಜಯದಶಮಿ ಆಚರಣೆಗಳು ಕರ್ನಾಟಕದ ವಿವಿಧ ಭಾಗಗಳಲ್ಲಿ ನಡೆಯುತ್ತವೆ. 

ಹೀಗೆ ಪುರಾಣ, ಪರಂಪರೆ ಮತ್ತು ರಾಜ ವೈಭವವನ್ನು ತನ್ನೊಳಗೆ ಹೊಂದಿರುವ ದಸರಾ, ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಸಂಕೇತವಾಗಿ ಬೆಳೆದಿದೆ. ವಿಜಯದ ಸಂಕೇತವಾಗಿ ಆರಂಭವಾದ ಈ ಹಬ್ಬ, ಇಂದು ನಾಡಿನ ಹೆಮ್ಮೆಯ ಹಬ್ಬವಾಗಿ ಮುಂದುವರಿದಿದೆ.


ದಸರಾ ಕೇವಲ ಹಬ್ಬವಲ್ಲ... ಇದು ನಮ್ಮ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕ. ಮೈಸೂರಿನ ಅರಮನೆಯಿಂದ ಜನಸಾಮಾನ್ಯರ ಮನೆ-ಮನಗಳವರೆಗೆ ಸಂಭ್ರಮ ಮೂಡಿಸುವ ನಾಡಹಬ್ಬವೇ ನಮ್ಮ ದಸರಾ.

ವಿಜಯದ ಸಂಕೇತವಾಗಿ ಆಚರಿಸುವ ದಸರಾ ಹಬ್ಬಕ್ಕೆ ಶತಮಾನಗಳ ಇತಿಹಾಸವಿದೆ. ಕೆಟ್ಟದ್ದರ ಮೇಲೆ ಒಳ್ಳೆಯದಕ್ಕೆ ಜಯ ಸಿಕ್ಕ ದಿನವೆಂದು ನಂಬಲಾಗುವ ವಿಜಯದಶಮಿಯ ಹಿಂದೆ ರಾಮಾಯಣದ ಕಥೆಯೂ ಇದೆ.
ಇದೇ ದಸರಾ ಕರ್ನಾಟಕದಲ್ಲಿ ಹೇಗೆ ಮೈಸೂರು ದಸರಾ ಎಂಬ ವಿಶ್ವಪ್ರಸಿದ್ಧ ಆಚರಣೆಯಾಗಿ ರೂಪುಗೊಂಡಿತು? ರಾವಣನ ಸಂಹಾರದಿಂದ ಮೈಸೂರಿನ ಜಂಬೂ ಸವಾರಿವರೆಗೆ ದಸರಾ ಹಬ್ಬದ ರೋಚಕ ಇತಿಹಾಸವೇನು? ನೋಡೋಣ ಈ ವಿಶೇಷ ಪ್ಯಾಕೇಜ್‌ನಲ್ಲಿ.

ದಸರಾ ಎಂದರೇನು?
ದಸರಾ... ನಾಡಿನಾದ್ಯಂತ ಸಂಭ್ರಮದಿಂದ ಆಚರಿಸುವ ಪ್ರಮುಖ ಹಬ್ಬ.ನವರಾತ್ರಿಯ ಒಂಬತ್ತು ದಿನಗಳ ಆಚರಣೆಯ ಬಳಿಕ ಬರುವ ಹತ್ತನೇ ದಿನವೇ ವಿಜಯದಶಮಿ.‘ವಿಜಯದಶಮಿ’ ಎಂಬ ಹೆಸರೇ ಹೇಳುವಂತೆ, ಇದು ವಿಜಯದ ಸಂಕೇತವಾಗಿದೆ. ಅಧರ್ಮದ ವಿರುದ್ಧ ಧರ್ಮದ ಗೆಲುವು... ಕೆಟ್ಟದ್ದರ ಮೇಲೆ ಒಳ್ಳೆಯದರ ಜಯ... ಎಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ.


ರಾಮ-ರಾವಣ ಯುದ್ಧದ ಕಥೆ

ದಸರಾ ಹಬ್ಬದೊಂದಿಗೆ ಅತ್ಯಂತ ಜನಪ್ರಿಯವಾಗಿ ತಳುಕು ಹಾಕಿಕೊಂಡಿರುವುದು ರಾಮಾಯಣದ ಕಥೆ ಸೀತೆಯನ್ನು ರಾವಣ ಅಪಹರಿಸಿದ ಬಳಿಕ, ಶ್ರೀರಾಮ ಮತ್ತು ರಾವಣನ ನಡುವೆ ಭೀಕರ ಯುದ್ಧ ನಡೆಯುತ್ತದೆ.
ಲಂಕೆಯಲ್ಲಿ ನಡೆದ ಈ ಯುದ್ಧದ ಅಂತ್ಯದಲ್ಲಿ ಶ್ರೀರಾಮ ರಾವಣನನ್ನು ಸಂಹರಿಸುತ್ತಾನೆ.ರಾವಣನ ಸಂಹಾರವನ್ನು ಅಧರ್ಮದ ಮೇಲೆ ಧರ್ಮದ ವಿಜಯದ ಸಂಕೇತವಾಗಿ ಕಾಣಲಾಗುತ್ತದೆ.
ಹೀಗಾಗಿ ವಿಜಯದಶಮಿ ದಿನ ದೇಶದ ಹಲವು ಭಾಗಗಳಲ್ಲಿ ರಾವಣನ ಪ್ರತಿಕೃತಿಯನ್ನು ನಿರ್ಮಿಸಿ ದಹಿಸುವ ಸಂಪ್ರದಾಯವೂ ಬೆಳೆದಿದೆ.


ಮಹಿಷಾಸುರ ಮರ್ಧಿನಿ
ಆದರೆ ದಸರಾ ಎಂದರೆ ಕೇವಲ ರಾಮ-ರಾವಣ ಕಥೆಯಲ್ಲ ಶಕ್ತಿಯ ಆರಾಧನೆಯಾದ ನವರಾತ್ರಿಯ ಆಚರಣೆಯಲ್ಲೂ ದಸರಾಕ್ಕೆ ಮಹತ್ವವಿದೆ. ಪುರಾಣದ ಕಥೆಗಳ ಪ್ರಕಾರ, ದೇವತೆಗಳಿಗೆ ಕಾಟ ನೀಡುತ್ತಿದ್ದ ಮಹಿಷಾಸುರನ ವಿರುದ್ಧ ದೇವಿ ದುರ್ಗೆ ಯುದ್ಧ ಮಾಡಿ ಆತನನ್ನು ಸಂಹರಿಸುತ್ತಾಳೆ. ಮಹಿಷಾಸುರನ ಮೇಲಿನ ದೇವಿಯ ವಿಜಯವೂ ದುಷ್ಟತನದ ಮೇಲೆ ಸತ್ಯ ಮತ್ತು ಶಕ್ತಿಯ ಗೆಲುವಿನ ಸಂಕೇತವಾಗಿದೆ.

ಕರ್ನಾಟಕದಲ್ಲಿ ದಸರಾ
ಈ ಪೌರಾಣಿಕ ಹಿನ್ನೆಲೆಯ ಜೊತೆಗೆ ಕರ್ನಾಟಕದ ದಸರಾಕ್ಕೆ ತನ್ನದೇ ಆದ ಐತಿಹಾಸಿಕ ವೈಭವವಿದೆ.ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ವಿಜಯದಶಮಿ ಆಚರಣೆ ಅದ್ದೂರಿಯಾಗಿ ನಡೆಯುತ್ತಿತ್ತು ಎಂಬ ಐತಿಹಾಸಿಕ ದಾಖಲೆಗಳಿವೆ. ರಾಜರು, ಸೈನಿಕರು, ಆನೆ-ಕುದುರೆಗಳು, ಸಂಗೀತ ಮತ್ತು ವೈಭವದ ಮೆರವಣಿಗೆಗಳೊಂದಿಗೆ ವಿಜಯದಶಮಿಗೆ ವಿಶೇಷ ಮಹತ್ವ ನೀಡಲಾಗುತ್ತಿತ್ತು. ವಿಜಯನಗರದ ವೈಭವ ಕುಂದಿದ ಬಳಿಕ ಈ ರಾಜ ಪರಂಪರೆಯ ಹಲವು ಅಂಶಗಳು ಮೈಸೂರು ಅರಸರ ದಸರಾ ಆಚರಣೆಯಲ್ಲೂ ಹೊಸ ರೂಪದಲ್ಲಿ ಮುಂದುವರಿದವು.

ಮೈಸೂರು ದಸರಾ ಹುಟ್ಟಿದ್ದು ಹೇಗೆ?

ಮೈಸೂರು ದಸರಾ ಎಂದಾಕ್ಷಣ ನೆನಪಾಗುವುದು ಅರಮನೆ, ಅಂಬಾರಿ ಹೊತ್ತ ಗಜಪಡೆ, ಜಂಬೂ ಸವಾರಿ ಮತ್ತು ಲಕ್ಷಾಂತರ ಜನರ ಸಂಭ್ರಮ. ಮೈಸೂರು ಅರಸರ ಆಳ್ವಿಕೆಯಲ್ಲಿ ದಸರಾ ಪ್ರಮುಖ ರಾಜಕೀಯ ಮತ್ತು ಸಾಂಸ್ಕೃತಿಕ ಉತ್ಸವವಾಗಿ ಬೆಳೆದಿತು.ಅರಮನೆಯಲ್ಲಿ ವಿಶೇಷ ಪೂಜೆ, ದರ್ಬಾರ್, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮೆರವಣಿಗೆಗಳು ನಡೆಯುತ್ತಿದ್ದವು.ಕ್ರಮೇಣ ಅರಮನೆಯೊಳಗಿನ ರಾಜೋತ್ಸವ ಜನೋತ್ಸವವಾಗಿ ರೂಪುಗೊಂಡಿತು.

ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ.

ಅಲಂಕೃತ ಆನೆಗಳ ಗಜಪಡೆಯೊಂದಿಗೆ ನಡೆಯುವ ಈ ವೈಭವದ ಮೆರವಣಿಗೆ ಮೈಸೂರು ದಸರಾದ ಪ್ರತೀಕವಾಗಿ ಗುರುತಿಸಿಕೊಂಡಿದೆ.ಚಿನ್ನದ ಅಂಬಾರಿ, ಸಾಂಸ್ಕೃತಿಕ ಕಲಾತಂಡಗಳು, ಜಾನಪದ ಕಲಾವಿದರು, ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳು... ಹೀಗೆ ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಒಂದೇ ಮೆರವಣಿಗೆಯಲ್ಲಿ ಕಣ್ತುಂಬಿಕೊಳ್ಳಬಹುದು. ರಾವಣನ ಸಂಹಾರದಿಂದ ಆರಂಭಿಸಿ ಮಹಿಷಾಸುರ ಮರ್ಧಿನಿಯ ಆರಾಧನೆ, ವಿಜಯನಗರದ ರಾಜ ವೈಭವದಿಂದ ಮೈಸೂರು ಅರಸರ ದಸರಾ ಸಂಪ್ರದಾಯದವರೆಗೆ... ದಸರಾ ಹಬ್ಬ ಕೇವಲ ಹಬ್ಬವಲ್ಲ, ಶತಮಾನಗಳ ಇತಿಹಾಸ ಮತ್ತು ಸಂಸ್ಕೃತಿಯನ್ನು ಹೊತ್ತಿರುವ ಪರಂಪರೆ. ಇದೇ ಕಾರಣಕ್ಕೆ ಮೈಸೂರು ದಸರಾ ಇಂದಿಗೂ ನಾಡಿನ ಹೆಮ್ಮೆಯ ಆಚರಣೆಯಾಗಿ ಮುಂದುವರಿದಿದೆ.

ಇಂದಿನ ದಸರಾ

ಒಂದು ಕಾಲದಲ್ಲಿ ರಾಜಮನೆತನದ ಉತ್ಸವವಾಗಿದ್ದ ದಸರಾ... ಇಂದು ಎಲ್ಲರ ಹಬ್ಬವಾಗಿದೆ.ಧಾರ್ಮಿಕ ಆಚರಣೆಗಳ ಜೊತೆಗೆ ಕಲೆ, ಸಾಹಿತ್ಯ, ಸಂಗೀತ, ಜಾನಪದ, ಪ್ರವಾಸೋದ್ಯಮ ಮತ್ತು ಸ್ಥಳೀಯ ಸಂಸ್ಕೃತಿಯ ಪ್ರದರ್ಶನಕ್ಕೂ ದಸರಾ ವೇದಿಕೆಯಾಗಿದೆ.ಹೀಗಾಗಿ ದಸರಾ ಎಂದರೆ ಕೇವಲ ಹಬ್ಬವಲ್ಲ... ಇದು ವಿಜಯದ ಸಂದೇಶ, ಪರಂಪರೆಯ ಪ್ರತಿಬಿಂಬ ಮತ್ತು ನಾಡಿನ ಸಂಸ್ಕೃತಿಯ ಸಂಭ್ರಮ.


 

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES