• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮಂಗಳೂರು
  • /ಕೊಡಗಿನಲ್ಲಿ ಮತ್ತೆ ಮಾರ್ಧನಿಸಿದ ಗುಂಡಿನ ಸದ್ದು..ಗುಂಡುಹಾರಿಸಿಕೊಂಡು ವೃದ್ಧ ಆತ್ಮಹ*ತ್ಯೆ

ಕೊಡಗಿನಲ್ಲಿ ಮತ್ತೆ ಮಾರ್ಧನಿಸಿದ ಗುಂಡಿನ ಸದ್ದು..ಗುಂಡುಹಾರಿಸಿಕೊಂಡು ವೃದ್ಧ ಆತ್ಮಹ*ತ್ಯೆ

ಗುಂಡು ಹಾರಿಸಿಕೊಂಡು 75 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯವರೊಂದಿಗೆ ಮಾತನಾಡಿದ ಕೆಲವೇ ಹೊತ್ತಿನಲ್ಲಿ ನಡೆದ ಈ ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸ್ಥಳಕಾಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Written ByRamya. R. Gowda
Published: Oct 28, 2026, 03:21 PM IST|Updated: Oct 28, 2026, 03:27 PM IST
joinshare
ಕೊಡಗಿನಲ್ಲಿ ಮತ್ತೆ ಮಾರ್ಧನಿಸಿದ ಗುಂಡಿನ ಸದ್ದು..ಗುಂಡುಹಾರಿಸಿಕೊಂಡು ವೃದ್ಧ ಆತ್ಮಹ*ತ್ಯೆ

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಪರಿಷತ್ ಚುನಾವಣೆ ಫಲಿತಾಂಶ; ಜನರ ಸಂದೇಶದ ಕೂಲಂಕುಷ ಅಧ್ಯಯನ: ಸಿಎಂ ಡಿ ಕೆ ಶಿವಕುಮಾರ್

ಪರಿಷತ್ ಚುನಾವಣೆ ಫಲಿತಾಂಶ; ಜನರ ಸಂದೇಶದ ಕೂಲಂಕುಷ ಅಧ್ಯಯನ: ಸಿಎಂ ಡಿ ಕೆ ಶಿವಕುಮಾರ್

2

ನವೆಂಬರ್ 1ರಿಂದ ಗ್ಯಾಸ್ ಸಿಲಿಂಡರ್ ರೂಲ್ಸ್ ಚೇಂಜ್‌! ಗ್ರಾಹಕರಿಗೆ ಹೊಸ ನಿಯಮ, ವಿತರಕರಿಂದ ಮುಷ್ಕರದ ಎಚ್ಚರಿಕೆ!

3

3% DA ಹೆಚ್ಚಳಕ್ಕೆ ಕೇಂದ್ರ ಕ್ಯಾಬಿನೆಟ್‌ ಅಸ್ತು.. ತುಟ್ಟಿ ಭತ್ಯೆ ಶೇ. 63ಕ್ಕೆ ಏರಿಕೆ

4

ಕ್ಯಾಂಟ‌ರ್ ವಾಹನಕ್ಕೆ ಬೆಂಕಿ, ಬೆಂಕಿ ನಂದಿಸುವ ವೇಳೆ ಅಗ್ನಿಶಾಮಕ ಸಿಬ್ಬಂದಿಗೆ ಗಾಯ

5

ಸರ್ಚ್ ನೆಪದಲ್ಲಿ ದೌರ್ಜನ್ಯ ಎಸಗುವ ಪೊಲೀಸ್ ಅಧಿಕಾರಿಗಳ ಹೆಸರುಗಳನ್ನು ಬರೆದಿಟ್ಟುಕೊಳ್ಳಿ! : ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಗುಂಡು ಹಾರಿಸಿಕೊಂಡು 75 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯವರೊಂದಿಗೆ ಮಾತನಾಡಿದ ಕೆಲವೇ ಹೊತ್ತಿನಲ್ಲಿ ನಡೆದ ಈ ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸ್ಥಳಕಾಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಹೌದು ಹೀಗೊಂದು ಘಟನೆ ನಡೆದಿರೋದು ಕೊಡಗು ಜಿಲ್ಲೆ ಮಡಿಕೇರಿ ನಗರದಲ್ಲಿ.  ವ್ಯಕ್ತಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ. ನಗರದ ಎಫ್‌ಎಂ.ಕೆ.ಎಂ.ಸಿ ಕಾಲೇಜು ಸಮೀಪದ ಮನೆಯಲ್ಲಿ ಈ ಘಟನೆ ನಡೆದಿದ್ದು, ಮೃತರು  ಮಿನ್ನಂಡ ಸನ್ನು ಅವರ ತಂದೆ 75 ವರ್ಷದ ಮಿನ್ನಂಡ ರಾಜಪ್ಪ,. ರಾಜಪ್ಪ ಅವರು ಈ ಹಿಂದೆ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರು. ವಯಸ್ಸಾದ ಬಳಿಕ ಕೆಲಸದಿಂದ ನಿವೃತ್ತರಾಗಿ ಮನೆಯಲ್ಲಿಯೇ ಮಗನ ಮನೆಯಲ್ಲೆ ವಾಸವಾಗಿದ್ದರು. ಮಂಗಳವಾರ ಸಂಜೆ ಸುಮಾರು ನಾಲ್ಕು ಗಂಟೆಯ ವೇಳೆಗೆ ಮನೆಯವರೊಂದಿಗೆ ರಾಜಪ್ಪ ಅವರು ಖುಷಿ ಯಿಂದಲೆ ಮಾತನಾಡಿಕೊಂಡರೆ ಇದ್ದರು ಇದ್ದರು. ಬಳಿಕ ಕೆಲವೇ ಸಮಯದಲ್ಲಿ ದಿಢೀರ್‌ ಆಗಿ ಮನೆಯಲ್ಲಿದ್ದ ಒಂಟಿ ನಳಿಕೆ ಬಂದೂಕಿನಿಂದ ತಮ್ಮದೆ ಮನೆಯ ಒಂದು ರಂನಲ್ಕಿ   ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ಗುಂಡಿನ ಸದ್ದು  ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಕೂಡಲೇ ಮಡಿಕೇರಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದು , ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಡಿಕೇರಿ ನಗರ ಪೊಲೀಸ್ ಠಾಣಾಧಿಕಾರಿ ಶ್ರೀಧರ್ ಹಾಗೂ ಅವರ ತಂಡ ಸ್ಥಳಕಾಗಮಿಸಿ ಮಾಹಿತಿ ಪಡೆದುಕೊಂಡರು ಘಟನೆ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಪೊಲೀಸರು, ರಾಜಪ್ಪ ಅವರು ಬಳಸಿದ್ದ ಸಿಂಗಲ್ ಬ್ಯಾರಲ್  ಕೋವಿಯನ್ನು ವಶಕ್ಕೆ ಪಡೆದಿದ್ದಾರೆ. ಮೆಲ್ನೋಟಕ್ಕೆ ಮಿನ್ನಂಡ ರಾಜಪ್ಪ ಅವರ ಸಾವಿಗೆ ಯಾವುದೇ ನಿಖರ ಕಾರಣ ತಿಳಿದು ಬಾರದ ಹಿನ್ನಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪೊಲೀಸ್ ತನಿಖೆಯ ಬಳಿಕವಷ್ಟೇ ರಾಜಪ್ಪ ಆತ್ಮಹತ್ಯೆಗೆ  ವೈಯಕ್ತಿಕ ಕಾರಣವೇ ಅಥವಾ ಇನ್ಯಾವುದಾದರೂ ಕಾರಣವಿದೆಯೇ ಎಂಬುದು ತಿಳಿಯ ಬೇಕಿದೆ‌. ಸದ್ಯ ಕುಟುಂಬಸ್ಥರಿಂದ ಮಾಹಿತಿ ಪಡೆದ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ. ಕ್ರಮ ಕೈಗೊಂಡಿದ್ದಾರೆ.


ಒಟ್ಟಿನಲ್ಲಿ ವೃದ್ದಾಪ್ಯದಲ್ಲಿ  ಕುಟುಂಬದೊಂದಿಗೆ ನೆಮ್ಮದಿಯ ಜೀವನ ನಡೆಸಬೇಕಿದ್ದ ರಾಜಪ್ಪ ಹೀಗೆ ತಮ್ಮದೆ ಬಂದೂಕಿನಲ್ಲಿ ತಮ್ಮ‌ ಮನೆಯಲ್ಲೆ ಆತ್ಮಹತ್ಯೆಗೆ ಶರಣಾಗಿರುವುದು ಮಾತ್ರ ವಿಪರ್ಯಾಸವೇ ಸರಿ

Add Zee News as a Preferred Source
TAGS:
Kannada News