SOCIAL MEDIA

Newsletter

PARTNER SITES
Select Language Select State

MRPL ಸ್ಫೋಟದ ಹಿಂದೆ ಕಾಂತೇರಿ ಜುಮಾದಿ ಕಾರಣಿಕ?

‘ನನ್ನ ದೈವಸ್ಥಾನ ಕೆಡವಿದರೆ ಬೆಂಕಿ ಸುರಿಸುತ್ತೇನೆ ಎಂದು ಎಚ್ಚರಿಸಿದ್ದ ಕಾಂತೇರಿ ಜುಮಾದಿ ದೈವ.. ನಿಜವಾಯ್ತಾ ದೈವದ ಎಚ್ಚರಿಕೆ?

Written By Yashaswini V
Published: Oct 01, 2026, 12:08 PM IST | Updated: Oct 01, 2026, 12:20 PM IST
Join

ಮಂಗಳೂರಿನ ಕರಾವಳಿ ತೈಲ ಸಂಸ್ಕರಣಾ ಘಟಕ ಎಂಆರ್‌ಪಿಎಲ್‌ನಲ್ಲಿ ಸಂಭವಿಸಿದ ಭೀಕರ ಸ್ಫೋಟದ ಬೆನ್ನಲ್ಲೇ ಈಗ ತುಳುನಾಡಿನಲ್ಲಿ ಹೊಸದೊಂದು ಚರ್ಚೆ ಕಾಳ್ಗಿಚ್ಚಿನಂತೆ ಹಬ್ಬಿದೆ! "ನನ್ನ ದೈವಸ್ಥಾನವನ್ನು ಕೆಡವಿದರೆ ಅಥವಾ ಮುಟ್ಟಿದರೆ ಬೆಂಕಿ ಸುರಿಸುತ್ತೇನೆ" ಎಂದು ದೈವ ನುಡಿದಿತ್ತಾ? ದೈವದ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದೇ ಈ ಅನಾಹುತಕ್ಕೆ ಕಾರಣವಾಯ್ತಾ ಎಂಬ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಎದ್ದಿವೆ. ಎಂಆರ್‌ಪಿಎಲ್‌ನ ಈ ಬೆಂಕಿ ಅನಾಹುತಕ್ಕೆ ಕಾರಣವಾಯ್ತಾ ಕಾರಣಿಕದ ಕಾಂತೇರಿ ಜುಮಾದಿ ದೈವದ ಆಕ್ರೋಶ? ಎಂಬ ವದಂತಿ ವೇಗವಾಗಿ ಹರಡುತ್ತಿದೆ. ಏನಿದು, ಕಾಂತೇರಿ ಜುಮಾದಿ ಕಾರಣಿಕ? ಇದಕ್ಕೂ, ಎಂಆರ್‌ಪಿಎಲ್‌ ಸ್ಫೋಟಕ್ಕೂ ಇರುವ ನಂಟೇನು ಎಂಬ ಮಾಹಿತಿ ಇಲ್ಲಿದೆ.

ಒಂದು ಕಡೆ ತಾಂತ್ರಿಕ ದೋಷದಿಂದ ಸ್ಫೋಟವಾಗಿದೆ ಎಂದು ಅಧಿಕಾರಿಗಳು ಹೇಳ್ತಿದ್ರೆ, ಇನ್ನೊಂದೆಡೆ ದೈವಿಕ ಶಕ್ತಿಯ ಕಾರಣಿಕ ಎಂದು ಸ್ಥಳೀಯರು ನಂಬುತ್ತಿದ್ದಾರೆ. ತುಳುನಾಡಿನಲ್ಲಿ ದೈವದ ನುಡಿಗೆ ಅಪಾರ ಮಾನ್ಯತೆ ಇದೆ. ದೈವದ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಕೈಗೊಂಡ ನಿರ್ಧಾರವೇ ಈ ಅನಾಹುತಕ್ಕೆ ದೈವಾಕ್ರೋಶದ ರೂಪದಲ್ಲಿ ತಿರುಗಿದೆ ಎಂಬುದು ಹಲವು ಸ್ಥಳೀಯರ ಬಲವಾದ ನಂಬಿಕೆಯಾಗಿದೆ.

ಕಾಂತೇರಿ ಜುಮಾದಿ ದೈವ ಏನು ಹೇಳಿತ್ತು?
ನನ್ನ ಸ್ಥಾನ ಕೆಡವಿದ್ರೆ ಬೆಂಕಿ ಸುರಿಸ್ತೀನಿ ಎಂದು ನಾಲ್ಕು ತಿಂಗಳ ಹಿಂದೆಯೇ ದೈವ ಎಚ್ಚರಿಕೆ ಕೊಟ್ಟಿತ್ತಂತೆ... ಅಷ್ಟೇ ಅಲ್ಲದೆ, ನನ್ನ ಮಣ್ಣನ್ನ ಉಳಿಸಿಕೊಳ್ಳೋಕೆ ನನಗೆ ಗೊತ್ತು, ಒಂದು ವರ್ಷದೊಳಗೆ ತೀರ್ಮಾನ ಕೊಡ್ತೀನಿ ಎಂದು ದೈವ ಹೇಳಿತ್ತಂತೆ. ವಶಪಡಿಸಿಕೊಂಡ ಭೂಮಿಗೆ ಹೋರಾಟ ಕೂಡಾ ನಡೀತಾ ಇತ್ತು. ದೈವಕ್ಕೆ ಭೂಮಿಯನ್ನು ಮರಳಿ ನೀಡುವಂತೆ ಹೋರಾಟ ನಡೀತಾ ಇತ್ತು. ಇದೀಗ ನಿನ್ನೆ ನಡೆದಿರುವ ದುರಂತದೆ ಬೆನ್ನಲ್ಲೇ, ಕಾಂತೇರಿ ಜುಮಾದಿ ದೈವದ ಕೋಪ ಈ ರೀತಿಯಲ್ಲಿ ಸ್ಪೋಟಗೊಂಡಿದೆ ಎಂಬ ವದಂತಿ ಕಾಡ್ಗಿಚ್ಚಿನಂತೆ ಹಬ್ಬಿದೆ.   

ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ಇದೊಂದು ತಾಂತ್ರಿಕ ಲೋಪ ಎಂದು ಹೇಳಲಾಗುತ್ತಿದ್ದರೂ, ಕರಾವಳಿಯ ಜನರಲ್ಲಿ ದೈವಾರಾಧನೆ ಮತ್ತು ಕಾಂತೇರಿ ಜುಮಾದಿಯ ಕಾರಣಿಕದ ಮೇಲಿರುವ ಶ್ರದ್ಧೆ ಈ ಘಟನೆಯನ್ನು ದೈವಿಕ ಕೋಪದ ಕೋನದಲ್ಲೂ ನೋಡುವಂತೆ ಮಾಡಿದೆ.

ಎಂಆರ್‌ಪಿಎಲ್‌ ನಲ್ಲಿ ಸ್ಫೋಟ:
ಅದು ಕಡಲನಗರಿಯಲ್ಲಿರುವ ಬೃಹತ್ ಕಾರ್ಖಾನೆ. ಅದರ ಹೆಸರು ಎಂಆರ್‌ಪಿಎಲ್‌. ಸೆಪ್ಟೆಂಬರ್‌ 30ರ ಬುಧವಾರದಂದು ಮಟ ಮಟ ಮಧ್ಯಾಹ್ನ ಅಲ್ಲಿ ಭೂಮಿಯನ್ನೇ ನಡುಗಿಸುವ ರೀತಿಯಲ್ಲಿ ಸ್ಫೋಟ ಉಂಟಾಗಿ ದಟ್ಟ ಹೊಗೆ ಆವರಿಸಿತ್ತು. ನೋಡುವಷ್ಟರಲ್ಲಿ ಮೀನಿನನಗರಿಯಲ್ಲಿ ಕೂಡಾ ಕಂಪಿಸಿದ ಅನುಭವ ಆಗಿದ್ದು ಓರ್ವ ಸುಟ್ಟು ಕರಕಲಾಗಿ ಸಾವನ್ನಪ್ಪಿದ್ದಾನೆ.

ಎಂಆರ್‌ಪಿಎಲ್‌ ಈ‌ ಹಿಂದೆಯೂ ಅನೇಕ ಆರೋಪಗಳನ್ನು ಹೊತ್ತುಕೊಂಡ ಕಾರ್ಖಾನೆ. ವಿವಿಧ ಆರೋಪಗಳು ಜೀವಂತವಾಗಿರುವಾಗಲೇ ಈ ಭೀಕರ ಸ್ಫೋಟ ಸಂಭವಿಸಿದೆ. MRPLನ ‘ಕೋಕರ್ ಹೈಡ್ರೋಟ್ರೀಟರ್ ಘಟಕ’ದಲ್ಲಿ ಹೆಚ್ಚಿನ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ‘ಕೋಲ್ಡ್ ಸೆಪರೇಟರ್’ ಒಡೆದ ಪರಿಣಾಮ ಈ ಅಗ್ನಿ ಅವಘಡ ಸಂಭವಿಸಿದ್ದು ಆಕಾಶದ ಎತ್ತರಕ್ಕೆ ದಟ್ಟ ಹೊಗೆ ಆವರಿಸಿತ್ತು.

ಘಟನೆಯ ಬಳಿಕ ಅವಘಡ ಸಂಭವಿಸಿದ ಘಟಕದ ಕಾರ್ಯಾಚರಣಾ ಪ್ರದೇಶವನ್ನು ಪ್ರತ್ಯೇಕಿಸಲಾಗಿದೆ. MRPLನ ತುರ್ತು ಸ್ಪಂದನಾ ಹಾಗೂ ಅಗ್ನಿಶಾಮಕ ತಂಡಗಳು ಬೆಂಕಿಯನ್ನು ನಿಯಂತ್ರಿಸಲು ಮತ್ತು ನಂದಿಸಲು ಕಾರ್ಯಾಚರಣೆ ನಡೆಸಿದ್ದು ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.

ಎಂಆರ್‌ಪಿಎಲ್‌ನಲ್ಲಿ ಸಂಭವಿಸಿದ ಈ ಭಾರೀ ಸ್ಫೋಟ, ಅಗ್ನಿ ಅವಘಡದಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದು, ಒಬ್ಬ ವ್ಯಕ್ತಿ ತೀವ್ರ ಸುಟ್ಟ ಗಾಯಗಳಾಗಿದ್ದರೆ, ಎಂಟು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಮೃತಪಟ್ಟಿರುವ ವ್ಯಕ್ತಿಯನ್ನು ಮನಿಶ್ ಕರ್ಕರ (30) ಎಂದು ಪತ್ತೆಹಚ್ಚಲಾಗಿದೆ. ಈತ ಮೂಲತಃ ಮುಲ್ಕಿ ಮೂಲದವರಾಗಿದುದ ಗುತ್ತಿಗೆ ಆಧಾರದಲ್ಲಿ ಇಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಇನ್ನು ‌ಘಟನಾ ಸ್ಥಳಕ್ಕೆ ಶಾಸಕ ಭರತ್ ಶೆಟ್ಟಿ, ಸಂಸದ ಬ್ರಿಜೇಶ್ ಚೌಟ, ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್‌ಪೂಜಾರಿ, ಸಿಪಿಐಎಂ‌ ಮುಖಂಡ ‌ಮುನೀರ್ ಕಾಟಿಪಳ್ಳ‌ ಸೇರಿದಂತೆ ಇತರ ನಾಯಕರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸದ್ಯ ಘಟನೆ ಕಂಡು ಸಂತ್ರಸ್ತರು ಜೀವ ಭಯದಲ್ಲಿದ್ದು, ಸೂಕ್ತ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಮತ್ತೊಂದೆಡೆ ದೈವಾಕ್ರೋಶದಿಂದಲೇ ಎಂಆರ್‌ಪಿಎಲ್‌ನಲ್ಲಿ ಈ ರೀತಿಯ ಭೀಕರ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯರು ಮಾತನಾಡುತ್ತಿದ್ದಾರೆ. ದೈವದ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಕೈಗೊಂಡ ನಿರ್ಧಾರದಿಂದಲೇ ಈ ರೀತಿಯ ಅನಾಹುತ ಸಂಭವಿಸಿದೆ ಎಂಬುದು ಅವರ ನಂಬಿಕೆ ಆಗಿದೆ.

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES