ಬೆಳ್ತಂಗಡಿಯಲ್ಲಿ ಚಿರತೆ ಓಡಾಟ.. ನಾಯಿ ಮೇಲೆ ದಾಳಿ.. ಗ್ರಾಮಸ್ಥರಲ್ಲಿ ಆತಂಕ
Belthangady leopard attack wildlife conflict: ಬೆಳ್ತಂಗಡಿ: ಮನೆಯೊಂದರಲ್ಲಿ ಕಟ್ಟಿ ಹಾಕಿದ್ದ ನಾಯಿಯ ಮೇಲೆ ಚಿರತೆಯೊಂದು ದಾಳಿ ಮಾಡಿ ಎಳೆದೊಯ್ದ ಘಟನೆ ಬಳಂಜ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ಬಳಂಜದ ಹೇರಾದ ಪಾಂಡಿರಾಜ್ ಜೈನ್ ಎಂಬವರ ಮನೆಯಲ್ಲಿ ನಾಯಿಯನ್ನು ಸರಪಳಿಯಿಂದ ಕಟ್ಟಲಾಗಿತ್ತು.
ಬೆಳ್ತಂಗಡಿ: ಮನೆಯೊಂದರಲ್ಲಿ ಕಟ್ಟಿ ಹಾಕಿದ್ದ ನಾಯಿಯ ಮೇಲೆ ಚಿರತೆಯೊಂದು ದಾಳಿ ಮಾಡಿ ಎಳೆದೊಯ್ದ ಘಟನೆ ಬಳಂಜ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ಬಳಂಜದ ಹೇರಾದ ಪಾಂಡಿರಾಜ್ ಜೈನ್ ಎಂಬವರ ಮನೆಯಲ್ಲಿ ನಾಯಿಯನ್ನು ಸರಪಳಿಯಿಂದ ಕಟ್ಟಲಾಗಿತ್ತು. ರಾತ್ರಿ ವೇಳೆ ಮನೆಯ ಆವರಣಕ್ಕೆ ನುಗ್ಗಿದ ಚಿರತೆ, ನಾಯಿಯ ಮೇಲೆ ದಾಳಿ ಮಾಡಿ ಎಳೆದುಕೊಂಡು ಹೋಗಿತ್ತು. ನಂತರ ಹತ್ತಿರದ ಬೆಟ್ಟದ ಬಳಿ ಸರಪಳಿ ಪತ್ತೆಯಾಗಿದೆ.
ಕುಟುಂಬ ಸದಸ್ಯರು ಬೆಳಿಗ್ಗೆ ಎದ್ದಾಗ ಘಟನೆ ಬೆಳಕಿಗೆ ಬಂದಿದ್ದು, ಚಿರತೆ ಮನೆ ಆವರಣಕ್ಕೆ ನುಗ್ಗಿ ನಾಯಿಯ ಮೇಲೆ ದಾಳಿ ಮಾಡಿರುವುದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.ಘಟನೆಯ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಗ್ರಾಮಸ್ಥರು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಚಿರತೆ ಜನವಸತಿ ಪ್ರದೇಶಗಳಿಗೆ ಮರಳುವ ಸಾಧ್ಯತೆ ಇರುವುದರಿಂದ, ಅಗತ್ಯವಿದ್ದರೆ ಬೋನು ಅಳವಡಿಸಿ ಸೆರೆಹಿಡಿಯಬೇಕೆಂದು ಅವರು ವಿನಂತಿಸಿದ್ದಾರೆ.
ಬಳಂಜದಲ್ಲಿ ಚಿರತೆ ಹಾವಳಿ
ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದಲ್ಲಿ ಚಿರತೆ ಹಾವಳಿ ಆತಂಕ ಸೃಷ್ಟಿಸಿದೆ. ಮನೆಯ ಆವರಣಕ್ಕೆ ನುಗ್ಗಿದ ಚಿರತೆಯೊಂದು ಸರಪಳಿಯಿಂದ ಕಟ್ಟಿಹಾಕಿದ್ದ ನಾಯಿಯ ಮೇಲೆ ದಾಳಿ ಮಾಡಿ, ಎಳೆದೊಯ್ದಿದೆ. ಬೆಳಗ್ಗೆ ಕುಟುಂಬಸ್ಥರು ಎದ್ದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಚಿರತೆ ಓಡಾಟದಿಂದ ಸ್ಥಳೀಯರು ಆತಂಕಗೊಂಡಿದ್ದು, ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದಲ್ಲಿ ಚಿರತೆ ಆತಂಕ...
ಬಳಂಜದ ಹೇರಾ ನಿವಾಸಿ ಪಾಂಡಿರಾಜ್ ಜೈನ್ ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ಮನೆಯ ಆವರಣದಲ್ಲಿ ನಾಯಿಯನ್ನು ಸರಪಳಿಯಿಂದ ಕಟ್ಟಿಹಾಕಲಾಗಿತ್ತು. ಭಾನುವಾರ ರಾತ್ರಿ ಮನೆಯ ಆವರಣಕ್ಕೆ ನುಗ್ಗಿದ ಚಿರತೆ, ಏಕಾಏಕಿ ನಾಯಿಯ ಮೇಲೆ ದಾಳಿ ಮಾಡಿದೆ. ಚಿರತೆ ದಾಳಿ ಮಾಡಿದ್ದಷ್ಟೇ ಅಲ್ಲ... ನಾಯಿಯನ್ನು ಸರಪಳಿ ಸಮೇತ ಎಳೆದುಕೊಂಡು ಹೋಗಿದೆ. ಬೆಳಗ್ಗೆ ಕುಟುಂಬ ಸದಸ್ಯರು ಎದ್ದು ನೋಡಿದಾಗ ನಾಯಿ ಕಾಣೆಯಾಗಿತ್ತು. ಬಳಿಕ ಮನೆಯ ಸಮೀಪ ಪರಿಶೀಲನೆ ನಡೆಸಿದಾಗ, ಹತ್ತಿರದ ಬೆಟ್ಟದ ಬಳಿ ನಾಯಿಯನ್ನು ಕಟ್ಟಿದ್ದ ಸರಪಳಿ ಪತ್ತೆಯಾಗಿದೆ.
ಜನವಸತಿ ಪ್ರದೇಶದಲ್ಲೇ ಚಿರತೆ ಓಡಾಟ...
ಮನೆಯ ಆವರಣಕ್ಕೆ ನುಗ್ಗಿ ನಾಯಿಯ ಮೇಲೆ ದಾಳಿ ಮಾಡಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಚಿರತೆ ಮತ್ತೆ ಜನವಸತಿ ಪ್ರದೇಶಗಳಿಗೆ ಬರುವ ಸಾಧ್ಯತೆ ಇದೆ ಎನ್ನುವ ಭಯ ಸ್ಥಳೀಯರನ್ನು ಕಾಡುತ್ತಿದೆ.ಚಿರತೆ ಓಡಾಟದಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಗತ್ಯವಿದ್ದರೆ ಬೋನು ಅಳವಡಿಸಿ ಚಿರತೆಯನ್ನು ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಘಟನೆಯ ಮಾಹಿತಿ ಅರಣ್ಯ ಇಲಾಖೆಗೆ ನೀಡಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಜನವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಮನೆಯಿಂದ ಹೊರಬರುವಾಗ ಎಚ್ಚರಿಕೆ ವಹಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ. ಮನೆಯ ಆವರಣಕ್ಕೆ ನುಗ್ಗಿ ಕಟ್ಟಿಹಾಕಿದ್ದ ನಾಯಿಯನ್ನೇ ಎಳೆದೊಯ್ದಿರುವ ಚಿರತೆ... ಬಳಂಜ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಅರಣ್ಯ ಇಲಾಖೆ ಕೂಡಲೇ ಕ್ರಮ ಕೈಗೊಂಡು ಚಿರತೆಯ ಚಲನವಲನದ ಮೇಲೆ ನಿಗಾ ಇಡಬೇಕಿದೆ.