SOCIAL MEDIA

Newsletter

PARTNER SITES
Select Language Select State

ನನಗೆ ವಿಚ್ಚೇದನ ಬೇಡ ಪತಿ ಬೇಕು ಎಂದು ಗಂಡನ ಮನೆ ಮುಂದೆ ಪತ್ನಿಯ ಧರಣಿ

ಗಂಡ ಹೆಂಡಿರ ಜಗಳ ಉಂಡು ಮಲಗೋವರೆಗೆ ಎಂಬ ಗಾದೆ ಇದೆ. ಆದರಿಲ್ಲಿ, ಗಂಡ-ಹೆಂಡತಿ ಜಗಳ ಬೀದಿಗೆ ಬಂದಿದೆ. ವಿಚ್ಚೇದನ ಬೇಡ... ನನ್ನ ಗಂಡ ಬೇಕು.. ಎಂದು ಮನೆ ಎದುರು ಹೆಂಡತಿ ಧರಣಿ ಕುಳಿತಿರುವ ಘಟನೆ ನಡೆದಿದೆ. ಈ ಘಟನೆ ನಡೆದಿದ್ದೆಲ್ಲಿ? ಏನಿದು ಜಗಳ ಎಂಬ ವಿಚಾರದ ಬಗ್ಗೆ ಇಲ್ಲಿದೆ ಮಾಹಿತಿ.

Written By Yashaswini V
Published: Sep 29, 2026, 04:19 PM IST | Updated: Sep 29, 2026, 04:21 PM IST
Join

ಹಾವೇರಿ ಜಿಲ್ಲೆಯಲ್ಲಿ ಕೌಟುಂಬಿಕ ಕಲಹವೊಂದು ಇದೀಗ ಬೀದಿಗೆ ಬಂದಿದೆ. ಪತಿಯ ಮನೆ ಮುಂದೆ ಪತ್ನಿಯೊಬ್ಬಳು ಕಳೆದ ನಾಲ್ಕೈದು ದಿನಗಳಿಂದ ಹಗಲು ರಾತ್ರಿ ಧರಣಿ ನಡೆಸುತ್ತಿದ್ದಾಳೆ. ತನಗೆ ಮನೆಗೆ ಕರೆದುಕೊಂಡು ಹೋಗುವಂತೆ ಪತ್ನಿ ಪಟ್ಟು ಹಿಡಿದಿದ್ದಾಳೆ. ಇತ್ತ ಪತಿ, ಪತ್ನಿಯ ಆರೋಪಗಳನ್ನು ತಳ್ಳಿಹಾಕಿದ್ದು, ಹಲವು ಕಾರಣಗಳನ್ನು ನೀಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ‌. ಏನಿದು ಪ್ರಕರಣ ಅಂತಿರ ಈ ಕುರಿತು ಕಂಪ್ಲೀಟ್ ವರದಿ ಇಲ್ಲಿದೆ..

ಒಂದೆಡೆ ಮನೆ ಮುಂದೆ ಪತಿ ಬೇಕೇ ಬೇಕು ಅಂತ ಪಟ್ಟು ಹಿಡಿದು ಕುಳಿತಿರುವ ಮಹಿಳೆ. ಇನ್ನೊಂದೆಡೆ ಪತ್ನಿಯೂ ಬೇಡ ಜೀವನವೂ ಬೇಡಾ ಅಂತಿರುವ ಯುವಕ. ಈ ದೃಶ್ಯಗಳು ಕಂಡು ಬಂದಿದ್ದು ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕು ಬೀರನಕೊಪ್ಪ ಗ್ರಾಮದಲ್ಲಿ.

ವಿಚ್ಚೇದನ ಬೇಡ.. ಪತಿ ಬೇಕು...!
ಹೌದು, ಪತಿ ಮನೆ ಮುಂದೆ ಕಳೆದ ನಾಲ್ಕೈದು ದಿನಗಳಿಂದ 32 ವರ್ಷದ ಪತ್ನಿ ಉಷಾ ಧರಣಿ ನಡೆಸುತ್ತಿದ್ದಾಳೆ. ಹಗಲು ರಾತ್ರಿ ಎನ್ನದೆ ಮನೆ ಮುಂದೆ ಕುಳಿತು, ತನ್ನನ್ನು ಮನೆಗೆ ಕರೆದುಕೊಂಡು ಹೋಗುವಂತೆ ಪಟ್ಟು ಹಿಡಿದಿದ್ದಾಳೆ. ನನ್ನನ್ನು ಪತಿ ಪ್ರವೀಣ್ ನಂಬಿಸಿ ವಿವಾಹವಾಗಿದ್ದಾನೆ. ಈಗ ಏಕಾಏಕಿ ನನಗೆ ತಿಳಿಯದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನನಗೆ ವಿಚ್ಛೇದನ ಬೇಡ... ನನ್ನ ಪತಿ ಮನೆಗೆ ಕರೆದುಕೊಂಡು ಹೋಗಬೇಕು ಅಂತ ಪತ್ನಿ ಉಷಾ ಪಟ್ಟು ಹಿಡಿದ್ದಾಳೆ.

ಇನ್ನೂ ತುಮಕೂರಿನ ಜಯನಗರ ನಿವಾಸಿಯಾಗಿರುವ ಉಷಾ, ಬೀರನಕೊಪ್ಪ ಗ್ರಾಮದ ಪ್ರವೀಣ್ ಈಳಗೇರ್ ಅವರನ್ನು ಸುಮಾರು ಒಂದು ವರ್ಷದ ಹಿಂದೆ ರಿಜಿಸ್ಟರ್ ಮದುವೆಯಾಗಿದ್ದರು. ಇಬ್ಬರೂ ತುಮಕೂರಿನ ದಾಬಸ್‌ಪೇಟೆಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ವೇಳೆ ಪರಿಚಯವಾಗಿದ್ದರು. ಪರಿಚಯ ಸ್ನೇಹವಾಗಿ, ಬಳಿಕ ಪ್ರೀತಿಯಾಗಿ ಬದಲಾಗಿದ್ದು, ನಂತರ ಇಬ್ಬರೂ ವಿವಾಹವಾಗಿ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಆದ್ರೆ, ಮದುವೆ ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯ ಆರಂಭವಾಗಿತ್ತು ಎನ್ನಲಾಗಿದೆ.

ಉಷಾಗೆ ಈ ಹಿಂದೆ ಮದುವೆಯಾಗಿದ್ದು, ಕೆಲವು ಕಾರಣಗಳಿಂದಾಗಿ ಬಳಿಕ ವಿಚ್ಛೇದನವಾಗಿತ್ತು ಎನ್ನಲಾಗಿದೆ. ಇನ್ನೂ ಈ ವಿಚಾರ ತಿಳಿಸಿದರು ಪ್ರವೀಣ್ ಉಷಾಳನ್ನ ವಿವಾಹವಾಗಿದ್ರು ಎಂದು ಉಷಾ ಹೇಳಿದ್ದಾರೆ. ಆದರೆ ಇದೀಗ ಪ್ರವೀಣ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು ಉಷಾ ಅವರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಇತ್ತ ಉಷಾ ಬಗ್ಗೆ ಪ್ರವೀಣ್ ಸಾಲು ಸಾಲು ಆರೋಪ ಮಾಡ್ತಿದ್ದಾನೆ. ಸಣ್ಣಪುಟ್ಟ ವಿಚಾರಗಳಿಗೆ ಜಗಳ ಮಾಡುತ್ತಾರೆ. ನನ್ನ ಪೋಷಕರನ್ನ ಭೇಟಿ ಮಾಡುವುದಕ್ಕೂ ವಿರೋಧಿಸುತ್ತಾಳೆ. ನನ್ನ ಸಹೋದರಿಗೆ ಸಹಾಯ ಮಾಡಬಾರದು ಅಂತ ಹೇಳುತ್ತಾಳೆ. ಈ ಕಾರಣಗಳಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದು ಪತಿ ಪ್ರವೀಣ್‌ ಹೇಳಿದ್ದಾರೆ.

ಇನ್ನು ಇಷ್ಟೇ ಅಲ್ಲ, ಉಷಾ ಅವರ ಮೊದಲ ಪತಿಯಿಂದ ವಾಯ್ಸ್ ಮೆಸೇಜ್‌ಗಳು ಬರುತ್ತವೆ. ಈ ಬಗ್ಗೆ ಪ್ರಶ್ನಿಸಿದಾಗಲೂ ಜಗಳ ಮಾಡುತ್ತಾಳೆಂದು ಪ್ರವೀಣ್ ಆರೋಪಿಸಿದ್ದಾರೆ. ಇನ್ನು ತಮ್ಮ ವಿರುದ್ಧ ಅಟ್ರಾಸಿಟಿ ಕೇಸ್ ಹಾಕುವುದಾಗಿ ಹಾಗೂ ತುಮಕೂರಿಗೆ ಬಂದರೆ ಬದುಕಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂಬ ಆರೋಪವನ್ನೂ ಪ್ರವೀಣ್ ಮಾಡಿದ್ದಾರೆ. ಈ ಆರೋಪಗಳನ್ನು ಉಷಾ ತಳ್ಳಿಹಾಕಿದ್ದು, ಪತಿ ತಮ್ಮನ್ನು ನಂಬಿಸಿ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಒಟ್ಟಿನಲ್ಲಿ ಒಂದೆಡೆ ಪತಿ ಪತ್ನಿಯ ಮೇಲೆ ಸಾಲು ಸಾಲು ಆರೋಪಗಳನ್ನು ಮಾಡುತ್ತಾ ಆಕೆಯೊಂದಿಗೆ ಬದುಕಲು ಸಾಧ್ಯವೇ ಇಲ್ಲ, ನನಗೆ ಜೀವನವೇ ಬೇಡ ಎಂದು ಹೇಳುತ್ತಿದ್ದರೆ.  ಮನೆಗೆ ಕರೆದುಕೊಂಡು ಹೋಗುವಂತೆ ಪತ್ನಿ ಧರಣಿ ನಡೆಸುತ್ತಿದ್ದಾಳೆ. ಈ ಇಬ್ಬರ ನಡುವಿನ ವೈವಾಹಿಕ ಕಲಹ ಇದೀಗ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇದೆ. ಸದ್ಯ ಈ ದಂಪತಿಗಳ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದು. ಇದರ ಸತ್ಯಾಸತ್ಯತೆ ಪೊಲೀಸ್ ಠಾಣೆ ತನಿಖೆಯಿಂದ ಸ್ಪಷ್ಟವಾಗಬೇಕಿದೆ. 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES