• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಹುಬ್ಬಳ್ಳಿ ಧಾರವಾಡ
  • /ಮೊಬೈಲ್‌ಗಾಗಿ ಗೆಳೆಯನ ಜೀವನೇ ತೆಗೆದ ಕಿರಾತಕ ಸ್ನೇಹಿತ.. ಅಸಲಿಗೆ ಆಗಿದ್ದು ಏನು?

ಮೊಬೈಲ್‌ಗಾಗಿ ಗೆಳೆಯನ ಜೀವನೇ ತೆಗೆದ ಕಿರಾತಕ ಸ್ನೇಹಿತ.. ಅಸಲಿಗೆ ಆಗಿದ್ದು ಏನು?

20 ಸಾವಿರದ ಮೊಬೈಲ್‌ಗಾಗಿ ಸ್ನೇಹಿತನ‌ ಕೊಂದ ಆರೋಪಿ ಅಂದರ್ ಆಗಿದ್ದಾನೆ. ಮೊಬೈಲ್ ಕಳ್ಳತನ ಮಾಡಿದ್ದಿಯಾ ಅಂದಿದ್ದಕ್ಕೆ ಕೊಲೆಗೈದಿದ್ದ ಹಂತಕನನ್ನು ವಿದ್ಯಾಗಿರಿ ಪೊಲೀಸರು ಅಂದರ್ ಮಾಡಿದ್ದಾರೆ.

Written ByBhimappa
Published: Sep 28, 2026, 07:12 PM IST|Updated: Sep 28, 2026, 07:14 PM IST
joinshare
ಮೊಬೈಲ್‌ಗಾಗಿ ಗೆಳೆಯನ ಜೀವನೇ ತೆಗೆದ ಕಿರಾತಕ ಸ್ನೇಹಿತ.. ಅಸಲಿಗೆ ಆಗಿದ್ದು ಏನು?
Image Credit: Dharwad_Accused_Yallappa

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

2

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

3

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

4

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

5

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Dharwad Inox Theater near case: ಸ್ನೇಹ, ಗೆಳೆತನ ಎಂದರೆ ಒಂದು ಕಾಲದಲ್ಲಿ ಬಿಡಿಸಲಾಗದ ಸಂಬಂಧ ಇರುತ್ತಿತ್ತು. ಅಂದರೆ ಬಂಧು-ಬಳಗ ಬಿಟ್ಟು ಹೋದರೂ ಸ್ನೇಹ ಬಿಟ್ಟು ಹೋಗುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಈಗಿನ ಸ್ನೇಹ, ಗೆಳೆತನ ಎಲ್ಲ ಬರೀ ಮಾಯಾಂಗನೆ ಆಗೋಗಿದೆ. ಸ್ನೇಹಿತನಂತೆ ಜೊತೆಗೆ ಇದ್ದು ಕೊನೆಗೆ ನಮಕ್‌ಕರಾಮ್ ಕೆಲಸ ಮಾಡುತ್ತಾರೆ. ಅಂತಹ ಸಮಾಜ ಇಂದು ಸೃಷ್ಟಿಯಾಗುತ್ತಿದೆ. ತಂತ್ರಜ್ಞಾನ ಬೆಳೆದಂತೆ ಕ್ರೈಮ್‌ಗಳು ಕೂಡ ಸಾಕಷ್ಟು ಹೆಚ್ಚಾಗುತ್ತಿವೆ. ಇಲ್ಲಿ ಕೇವಲ ಮೊಬೈಲ್‌ಗೆ ಒಂದು ಜೀವನೇ ಹೋಗಿದೆ.

ಹೆಣ್ಣು, ಹೊನ್ನು, ಮಣ್ಣಿಗಾಗಿ ಕೊಲೆ ಮಾಡಿರುವುದನ್ನು ಕೇಳಿದ್ದೇವೆ, ನೋಡಿದ್ದೇವೆ ಆದ್ರೆ ಇಲ್ಲೊಬ್ಬ ಹಂತಕ ಗೆಳೆಯ ಕೇವಲ 20 ಸಾವಿರದ ಮೊಬೈಲ್‌ಗಾಗಿ ಜೀವನ ಗೆಳೆಯನ ಜೀವವನ್ನೇ ತೆಗೆದಿದ್ದಾನೆ. ಈ ಘಟನೆ ನಡೆದಿದ್ದು ಎಲ್ಲಿ, ಅದೆಲ್ಲಿ ಆ ಕೊಲೆ ಹೇಗಾಯ್ತು, ಈ ಕೃತ್ಯ ಎಸಗಿದ ಆ ಕಿರಾತಕ ಗೆಳೆಯ ಯಾರು ಎನ್ನುವುದರ ಸಂಪೂರ್ಣವಾದ ಮಾಹಿತಿ ಇಲ್ಲಿದೆ. ಸ್ನೇಹಿತ ಜೀವ ತೆಗೆದ ಆರೋಪಿ ಎಂಥಹ ಕ್ರೂರಿ ಆಗಿರಬಹುದು?.  

20 ಸಾವಿರದ ಮೊಬೈಲ್‌ಗಾಗಿ ಸ್ನೇಹಿತನ‌ ಕೊಂದ ಆರೋಪಿ ಅಂದರ್ ಆಗಿದ್ದಾನೆ. ಮೊಬೈಲ್ ಕಳ್ಳತನ ಮಾಡಿದ್ದಿಯಾ ಅಂದಿದ್ದಕ್ಕೆ ಕೊಲೆಗೈದಿದ್ದ ಹಂತಕನನ್ನು ವಿದ್ಯಾಗಿರಿ ಪೊಲೀಸರು ಅಂದರ್ ಮಾಡಿದ್ದಾರೆ. ಕಳೆದ ತಿಂಗಳು 20 ರಂದು ಧಾರವಾಡದ ಐನಾಕ್ಸ್ ಥಿಯೇಟರ್ ಬಳಿ ಆರೋಪಿ ತನ್ನ ಆತ್ಮೀಯ ಸ್ನೇಹಿತನನ್ನೆ ಹತ್ಯೆ ಮಾಡಿ ಪರಾರಿಯಾಗಿದ್ದ ಇದೀಗ ಹತ್ಯೆಗೈದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಹಣಮಂತ ಅಣ್ಣಿಗೇರಿ ಕೊಲೆಯಾದ ದುರ್ದೈವಿಯಾಗಿದ್ದು, ಯಲ್ಲಪ್ಪ ಬಂಡಿವಡ್ಡರ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಮೃತ ಹನುಮಂತ 20 ಸಾವಿರದ ಮೊಬೈಲ್ ಖರೀದಿಸಿದ್ದನು. ಆದರೆ ಕೆಲವೇ ದಿನಗಳಲ್ಲಿ ಸ್ನೇಹಿತ ಯಲ್ಲಪ್ಪ ಮೊಬೈಲ್ ಕಳ್ಳತನ ಮಾಡಿದ್ದ ಹೀಗಾಗಿ ಮೃತ ಹನುಮಂತ ನನ್ನ ಮೊಬೈಲ್ ಕಳ್ಳತನ ಮಾಡಿದ್ದಿ ಅಂದಿದ್ದ ಇದರಿಂದ ಸಿಟ್ಟಿಗೆದ್ದು ಕಂಠಪೂರ್ತಿ ಕುಡಿಸಿ ಹಣಮಂತನನ್ನು ಸ್ನೇಹಿತ ಯಲ್ಲಪ್ಪ ಕೊಲೆಗೈದಿದ್ದ ಕೊಲೆಯ ಜಾಡು ಹಿಡಿದು ಪೊಲೀಸರು ತನಿಖೆ ಆರಂಭಿಸಿ ಆರೋಪಿ ಯಲ್ಲಪ್ಪನನ್ನು ಸೆರೆಮನೆಗೆ ಕಳಿಸಿದ್ದಾರೆ.

ಇನ್ನೂ, ನಿತ್ಯವೂ ಚಟಕ್ಕೆ ದಾಸನಾಗಿದ್ದ ಯಲ್ಲಪ್ಪ ಚಟಕ್ಕಾಗಿ ಬೇರೆ ಬೇರೆ ಕಡೆ ಓಡಾಡುತ್ತಿದ್ದ ಆದರೆ ಪೊಲೀಸರಿಗೆ ಯಲ್ಲಪ್ಪನ ಸುಳಿವೇ ಸಿಕ್ಕಿರಲಿಲ್ಲ. ನಿನ್ನೆ ರಾತ್ರಿ ಯಲ್ಲಪ್ಪ ಧಾರವಾಡದ ಸಿಬಿಟಿ ಬಳಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಯಾರಿಗೂ ಗೊತ್ತಾಗದಂತೆ ನಿಂತಿದ್ದಾಗ ಆತನ ಚಲನವಲನ ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಖಚಿತ ಮಾಹಿತಿ ಮೆರೆಗೆ ಧಾರವಾಡದ ಸಿಬಿಟಿಗೆ ಬಂದ ವಿದ್ಯಾಗಿರಿ ಪೊಲೀಸರು ಆರೋಪಿ ಯಲ್ಲಪ್ಪ ಬಂಡಿವಡ್ಡರ್ ನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ಒಟ್ಟಾರೆಯಾಗಿ ಆಸ್ತಿ-ಪಾಸ್ತಿಗಾಗಿ, ಹೆಣ್ಣು, ಹೊನ್ನಿಗಾಗಿ ಕೊಲೆಗೈದಿರುವುದನ್ನು ಕೇಳಿದ್ದೇವೆ. ಆದ್ರೆ ಒಂದು ಮೊಬೈಲ್‌ಗಾಗಿ ಜೀವಕ್ಕೆ ಜೀವವಾಗಿದ್ದ ಸ್ನೇಹಿತನ ಕತ್ತು ಕೊಯ್ದಿದ್ದ ಹಂತಕ ಆರೋಪಿ ಇದೀಗ ಪೊಲೀಸರ ಅತಿಥಿಯಾಗಿದ್ದು, ಇಬ್ಬರು ಸ್ನೇಹಿತರ ಪೈಕಿ ಓರ್ವ ಕೊಲೆಯಾಗಿದ್ದರೆ. ಇನ್ನೋರ್ವ ಆರೋಪಿಯಾಗಿ ಸೆರೆಮನೆವಾಸ ಅನುಭವಿಸುವಂತಾಗಿದೆ. 

ಧಾರವಾಡದಲ್ಲಿ 20 ಸಾವಿರದ ಮೊಬೈಲ್‌ಗಾಗಿ ಸ್ನೇಹಿತನ‌ನ್ನೇ ಆರೋಪಿ ಕೊಂದ್ದಿದ್ದು ಈಗ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಮೊಬೈಲ್ ಕಳ್ಳತನ ಮಾಡಿದ್ದಿ ಅಂದಿದಕ್ಕೆ ಹಂತಕ ಕೊಲೆಗೈದಿದ್ದಾನೆ. ಧಾರವಾಡದ ಐನಾಕ್ಸ್ ಥಿಯೇಟರ್ ಬಳಿ ಈ ಘಟನೆ ನಡೆದಿತ್ತು. ಕಳೆದ ತಿಂಗಳು 20 ರಂದು ಈ ಕೊಲೆ ಘಟನೆ ನಡೆದಿದೆ. ಹಣಮಂತ ಅಣ್ಣಿಗೇರಿಯನ್ನು ಕೊಲೆ ಮಾಡಿ ಆರೋಪಿ ಎಸ್ಕೇಪ್‌ ಆಗಿದ್ದನು. 20 ಸಾವಿರದ ಮೊಬೈಲ್ ಖರೀದಿಸಿದ್ದ ಕೊಲೆಯಾದ ಹಣಮಂತ, ಆದರೆ ಕೆಲವೇ ದಿನಗಳಲ್ಲಿ ಮೊಬೈಲ್ ಅನ್ನು ಸ್ನೇಹಿತ ಯಲ್ಲಪ್ಪ ಕಳ್ಳತನ ಮಾಡಿದ್ದನು. 

ಹೀಗಾಗಿ ನನ್ನ ಮೊಬೈಲ್ ಕಳ್ಳತನ ಮಾಡಿದ್ದೀಯಾ ಎಂದು ಹಣಮಂತ ಅಣ್ಣಿಗೇರಿ ಹೇಳಿದ್ದನು. ಇದರಿಂದ ಸಿಟ್ಟಿಗೆದ್ದು ಕಂಠಪೂರ್ತಿ ಕುಡಿಸಿ ಹಣಮಂತನನ್ನು ಸ್ನೇಹಿತ ಯಲ್ಲಪ್ಪ ಕೊಲೆಗೈದಿದ್ದನು. ಸದ್ಯ ಆರೋಪಿ ಯಲ್ಲಪ್ಪ ಬಂಡಿವಡ್ಡರ್ ನನ್ನ ಪೊಲೀಸರು ಬಂಧಿಸಿದ್ದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಧಾರವಾಡದ ವಿದ್ಯಾಗಿರಿ ಠಾಣೆಯ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ. ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ. 

 

Add Zee News as a Preferred Source
TAGS:
Crime