SOCIAL MEDIA

Newsletter

PARTNER SITES
Select Language Select State

17 ವರ್ಷಗಳ ಹಿಂದೆ ಲವ್ ಮ್ಯಾರೇಜ್, ಅದೊಂದು ವಿಷಯಕ್ಕೆ ಕಲ್ಲಿನಿಂದ ಜಜ್ಜಿ..ಜಜ್ಜಿ.. ಪತ್ನಿಯ ಕೊ*ಲೆ

ಪತಿ ಹೆಂಡತಿಯ ಶೀಲದ ಮೇಲೆ ಶಂಕೆ ಪಟ್ಟು, 17 ವರ್ಷಗಳ ಕಾಲ ಜೊತೆಯಾಗಿದ್ದಾಕೆಯನ್ನ ಅತ್ಯಂತ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ದಾರುಣ ಘಟನೆ ನಡೆದಿದೆ.

Written By Bhimappa
Published: Sep 29, 2026, 04:35 PM IST | Updated: Sep 29, 2026, 04:46 PM IST
Image Credit: Wife_Case
Join

Belgavi Bailhongal Amatur Nayanagar near Wife death Case: ಸಂಸಾರ ಅಂದ ಮೇಲೆ ಸಣ್ಣಪುಟ್ಟ ಕಲಹಗಳು ಸಹಜ. ಅದನ್ನು ಸರಿದೂಗಿಸಿಕೊಂಡು ಇಬ್ಬರು ಒಟ್ಟಿಗೆ ಹೋಗುವುದು ಜಾಣತನ. ಮನೆಯಲ್ಲಿ ಮಕ್ಕಳು, ಪೋಷಕರು, ಮನೆಗೆ ಬಂದು ಹೋಗುವ ಸಂಬಂಧಿಕರನ್ನು ಸರಿಯಾಗಿ ಮಾತನಾಡಿಸಿ ಉಪಚರಿಸುವುದು ಗಂಡ, ಹೆಂಡತಿಯ ಜವಾಬ್ದಾರಿ. ಆದ್ರೆ ಇಲ್ಲೊಬ್ಬ ಪತಿ ಹೆಂಡತಿಯ ಶೀಲದ ಮೇಲೆ ಶಂಕೆ ಪಟ್ಟು, 17 ವರ್ಷಗಳ ಕಾಲ ಜೊತೆಯಾಗಿದ್ದಾಕೆಯನ್ನ ಅತ್ಯಂತ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಈ ರೀತಿಯೊಂದು ಧಾರುಣ ಘಟನೆ ನಡೆದಿದ್ದು, ಕಲ್ಲಿನಿಂದ ಜಜ್ಜಿ ಪತ್ನಿಯನ್ನ ಕೊಲೆ ಮಾಡಿ ಪೊದೆಯಲ್ಲಿ ಎಸೆದು ಪರಾರಿಯಾಗಿದ್ದಾನೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಪತ್ನಿ ಶೀಲದ ಮೇಲೆ ಶಂಕೆ, ಕಲ್ಲಿನಿಂದ ಜಜ್ಜಿ ಬರ್ಬರ ಕೊಲೆ.!
17 ವರ್ಷಗಳ ಹಿಂದೆ ಲವ್ ಮ್ಯಾರೇಜ್, ಸಣ್ಣ ಸಂಶಯಕ್ಕೆ ಪತ್ನಿಗೆ ಚಟ್ಟ
ಬೈಕ್ ಮೇಲೆ ಕರೆದೊಯ್ದು, ಬರ್ಬರ ಹತ್ಯೆಗೈದ ಪಾಪಿ ಪತಿ.!

ಹೌದು, ಪ್ರೀತಿ ಮಾಡಿ ಮದುವೆಯಾಗಿದ್ದ ಆ ದಂಪತಿ, 17 ವರ್ಷಗಳ ಕಾಲ ಸುಖ ಸಂಸಾರ ನಡೆಸಿದರು. ಆದರೆ, ಇತ್ತೀಚೆಗೆ ಆತನ ಮನಸ್ಸಿನಲ್ಲಿ ಮೂಡಿದ ಒಂದು ಸಂಶಯ, ಇಡೀ ಕುಟುಂಬದಲ್ಲಿ ಸೂತಕದ ಛಾಯೇ ನಿರ್ಮಾಣ ಮಾಡಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಗೊಲ್ಲರ ಓಣಿಯ ನಿವಾಸಿ, 31 ವರ್ಷದ ಲಕ್ಷ್ಮಿ ಮಾಡಮಗೇರಿ ಕೊಲೆಯಾದ ನತದೃಷ್ಡ ಮಹಿಳೆ. ಕಳೆದ ಏಳು ತಿಂಗಳಿಂದ ಕಿರುಕುಳ ತಾಳಲಾರದೆ ಲಕ್ಷ್ಮಿ ಗಂಡ ರಾಜು ಎಂಬಾತನಿಂದ ದೂರ ಉಳಿದಿದ್ದಳು.

ಅಷ್ಟೇ ಅಲ್ಲದೆ, ನ್ಯಾಯಾಲಯದಲ್ಲಿ ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದಳು. ಆದ್ರೆ ಇದೇ ಕೋಪದಲ್ಲಿದ್ದ ಪತಿ, ನಿನ್ನೆ ಮಧ್ಯಾಹ್ನ ಮಾತುಕತೆ ನೆಪದಲ್ಲಿ ಆಕೆಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಬಾರದ ಊರಿಗೆ ಕಳಿಸಿದ್ದಾನೆ. ಪ್ರತಿದಿನ ಕೆಲಸಕ್ಕೆ ಹೋಗಿ ಮನೆಗೆ ಬರ್ತಿದ್ದಾಕೆ ಇಂದು ಮನೆಗೆ ಬರಲಿಲ್ಲಾ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದು, ಸಹೋದರಿ ಕೊಲೆ‌ ಮಾಡಿರುವ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ಅಂತಾ ಆಕೆಯ ಕುಟುಂಬಸ್ಥರು ಒತ್ತಾಯ ಮಾಡಿದ್ದಾರೆ.

ಇನ್ನು ಕಳೆದ 17 ವರ್ಷಗಳ‌ ಹಿಂದೆ ಪ್ರೀತಿಸಿ ಮದುವೆ ಮಾಡಿಕೊಂಡಿದ್ದಾಕೆಯ ಮೇಲೆಯೆ ಪತಿರಾಯನಿಗೆ ಸಂಶಯ ಬರಲು ಶುರುವಾಗಿದೆ. ಜೊತೆಗೆ ಗಂಡನ ಬಿಟ್ಟು ದೂರ ಉಳಿದಿದ್ದಕ್ಕೆ ಕುಪಿತಗೊಂಡಿದ್ದ ರಾಜು ಮಾಡಮಗೇರಿ ಪತ್ನಿ ಮನವೊಲಿಸಿ ಬೈಕ್ ಮೇಲೆ ಕರೆದುಕೊಂಡು ಹೋಗಿದ್ದಾನೆ. ಬೈಲಹೊಂಗಲ ಸಮೀಪದ ಅಮಟೂರು ಮತ್ತು ನಯಾನಗರ ಮಾರ್ಗ ಮಧ್ಯದ ರಸ್ತೆಯಲ್ಲಿ ಬೈಕ್ ನಿಲ್ಲಿಸಿದ ಆರೋಪಿ, ಪತ್ನಿಯೊಂದಿಗೆ ಮತ್ತೆ ಗಲಾಟೆ ತೆಗೆದಿದ್ದಾನೆ.

ಈ ವೇಳೆ ಉದ್ರೇಕಗೊಂಡ ಪಾಪಿ ಪತಿ, ರಸ್ತೆ ಬದಿಯಲ್ಲಿದ್ದ ಪೊದೆಗೆ ಕರೆದೊಯ್ದು ಕಲ್ಲನ್ನು ಎತ್ತಿ ಹಾಕಿದ್ದಾನೆ. ಬಳಿಕ ಲಕ್ಷ್ಮಿ ತಲೆಗೆ ಕಲ್ಲು ತೆಗೆದುಕೊಂಡು ಜಜ್ಜಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದರು. ಕರುಣೆ ತೋರಿಸದ ಆತ, ಶವವನ್ನು ರಸ್ತೆ ಪಕ್ಕದ ಪೊದೆಯೊಳಗೆ ಎಸೆದು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಘಟನಾ ಸ್ಥಳಕ್ಕೆ ಬೈಲಹೊಂಗಲ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಶವಾಗಾರದ ಎದುರು ಮೃತ ಮಹಿಳೆ ಸಂಬಂಧಿಕರು ರಾಜು ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಆರೋಪಿ ರಾಜುಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಸದ್ಯ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಮಾಡಿ ತಲೆಮರೆಸಿಕೊಂಡಿರುವ ಆರೋಪಿಯನ್ನು ಪೊಲೀಸರು ಬಂಧಿಸಿ ಹಿಂಡಲಗ ಜೈಲಿಗೆ ಕಳಿಸಿದ್ದಾರೆ. ಇತ್ತ 17 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಸುಂದರ ಸಂಸಾರದ ಕನಸು ಕಂಡವಳು ದುರಂತ ಅಂತ್ಯ ಕಂಡಿದ್ದಾಳೆ. 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES