ಬಾಂಬ್ ಬ್ಲಾಸ್ಟ್‌ಗೆ AI, ChatGPT, Gemini ಮೊರೆ! ರಾಯಚೂರಿನಿಂದ ಬಸ್‌ನಲ್ಲಿ ಬಾಂಬ್ ತಂದಿದ್ದ ಕಿಡಿಗೇಡಿಗಳು?
AI Chat GPT and Gemini used in bomb blast :ಪುಲಕೇಶಿನಗರದಲ್ಲಿ ಇತ್ತೀಚೆಗೆ ನಡೆದಿದ್ದ ಸ್ಫೋಟದ ಪ್ರಕರಣದ ಸತ್ಯಾಸತ್ಯತೆ ಈಗ ಹೊರಬಿದ್ದಿದೆ.
AI Chat GPT and Gemini used in bomb blast :ಪುಲಕೇಶಿನಗರದಲ್ಲಿ ಇತ್ತೀಚೆಗೆ ನಡೆದಿದ್ದ ಸ್ಫೋಟದ ಪ್ರಕರಣದ ಸತ್ಯಾಸತ್ಯತೆ ಈಗ ಹೊರಬಿದ್ದಿದೆ.ಕೇವಲ ವೈಯಕ್ತಿಕ ದ್ವೇಷ ಹಾಗೂ ಆಸ್ತಿ ವಿವಾದಕ್ಕಾಗಿ ಐಇಡಿ (IED) ಬಾಂಬ್ ಸ್ಫೋಟಿಸಿ ಕೊಲೆಗೆ ಸಂಚು ರೂಪಿಸಿದ್ದ ಅಸ್ಸಾಂ ಮೂಲದ ಖತರ್ನಾಕ್ ಕಿಡಿಗೇಡಿ ಗಳನ್ನು ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳ ಪ್ಲ್ಯಾನಿಂಗ್ ಕೇಳಿದ್ರೆ ನಿಜಕ್ಕೂ ಯಾವ ವಿಜ್ಞಾನಿಗಳಿಗೂ ಇವರು ಕಡಿಮೆ ಇರಲಿಲ್ಲ ಎನ್ನುವಂತಿದೆ.
ಬಾಂಬ್ ಬ್ಲಾಸ್ಟ್ ಗೆ ವಿಚಾರಕ್ಕೆ ಕೊನೆಗೂ ತಾರ್ಕಿಕ ಅಂತ್ಯ ಸಿಕ್ಕಿದೆ. ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಅಲ್ಲಾವುದ್ದೀನ್ ಎಂಬಾತನನ್ನು ಮುಗಿಸುವುದಕ್ಕಾಗಿಯೇ ಈ ಬಾಂಬ್ ಸ್ಕೆಚ್ ಹಾಕಲಾಗಿತ್ತು. ಅಸ್ಸಾಂ ಮೂಲದ ಅಲ್ಲಾವುದ್ದೀನ್ ಹಾಗೂ ಪ್ರಮುಖ ಆರೋಪಿ ಜಾಯಿದ್ ವುಲ್ ಹುಸೇನ್ (ಜಲಾಲುದ್ದೀನ್) ದಾಯಾದಿ ಸಂಬಂಧಿಗಳಾಗಿದ್ದು, ಇಬ್ಬರ ನಡುವೆ ಜಮೀನು ಮತ್ತು ಹಣಕಾಸಿನ ವಿಚಾರವಾಗಿ ತೀವ್ರ ವೈಷಮ್ಯವಿತ್ತು. ಅಷ್ಟೇ ಅಲ್ಲದೆ, ಜಾಯಿದ್ ವುಲ್ ತಂಗಿಯ ಮದುವೆಯನ್ನು ಅಲ್ಲಾವು ದ್ದೀನ್ ಮುರಿದಿದ್ದ ಎಂಬ ಆರೋಪವು ಸಹ ಇದೆ.ಹುಡುಗ ಸರಿಯಿಲ್ಲ ಎಂದು ಹುಡುಗಿ ಮನೆಯವರಿಗೆ ಹೇಳಿ ಮದುವೆ ನಿಲ್ಲಿಸಿದ್ದ. ಈ ದ್ವೇಷದ ಕಿಚ್ಚಿನಿಂದಲೇ ಅಲ್ಲಾವುದ್ದೀನ್‌ನನ್ನು ಮುಗಿಸಲು ಆರೋಪಿ ಸ್ಕೆಚ್ ಹಾಕಿದ್ದ ಎನ್ನುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಸೇಡು ತೀರಿಸಿಕೊಳ್ಳಲು ಜಾಯಿದ್ ವುಲ್, ತನ್ನ ಸ್ನೇಹಿತರಾದ ಸಾಜಿದ್ ವುಲ್ ಇಸ್ಲಾಂ ಹಾಗೂ ಬುರ್ಹಾನ್ ಅಹಮದ್ ಜೊತೆ ಸೇರಿ ವಾಟ್ಸಾಪ್ ಗ್ರೂಪ್ ಮಾಡಿಕೊಂಡಿದ್ದ. 8ನೇ ತರಗತಿ ಮಾತ್ರ ಓದಿದ್ದ, ರಾಯಚೂರಿನ ಮಸ್ಕಿಯಲ್ಲಿ ವೆಲ್ಡಿಂಗ್ ಹಾಗೂ ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದ ಬುರ್ಹಾನ್ ಅಹಮದ್, ಚಾಟ್ ಜಿಪಿಟಿ, AI ಹಾಗೂ ಡಿಪ್ ಟೆಕ್ ಮೂಲಕ ಮಾಹಿತಿ ಪಡೆದು ಐಇಡಿ (IED) ಬಾಂಬ್ ಸಿದ್ಧಪಡಿಸಿದ್ದ.ಪಟಾಕಿ ಮದ್ದು, ಬ್ಯಾಟರಿ, ಸರ್ಕ್ಯೂ ಟ್ ಹಾಗೂ ಬಟನ್ ಫಿಕ್ಸ್ ಮಾಡಿ ಸ್ಫೋಟಕ ಪಾರ್ಸೆಲ್ ರೆಡಿ ಮಾಡಿದ್ದ.ಮಸ್ಕಿಯಲ್ಲಿ ಬಾಂಬ್ ಸಿದ್ಧಪಡಿಸಿದ ಬುರ್ಹಾನ್, ಬಸ್ ಮೂಲಕ ಅದನ್ನು ಬೆಂಗಳೂರಿಗೆ ತಂದಿದ್ದ. ಬಳಿಕ ಸಾಜಿದ್ ನೀಡಿದ ಶೆಲ್ಟರ್‌ನಲ್ಲಿ ಉಳಿದುಕೊಂಡು, ನಿರ್ಮಾಣ ಹಂತದ ಕಟ್ಟಡದ ಬಳಿ ಬಂದು ಪಾರ್ಸೆಲ್ ಇಟ್ಟಿದ್ದ. ಬೇರೆಯವರ ಫೋನ್ ಬಳಸಿ ಅಲ್ಲಾವುದ್ದೀನ್ ಗೆ ಕರೆ ಮಾಡಿ, ಪಾರ್ಸೆಲ್ ಬಂದಿದೆ ರಿಸೀವ್ ಮಾಡಿಕೋ ಎಂದಿದ್ದ. ಅಲ್ಲಾವುದ್ದೀನ್ ಆ ಪಾರ್ಸೆಲ್ ಅನ್ನು ಪೇಂಟರ್ ಸೂರಜ್‌ಗೆ ಕೊಟ್ಟಿದ್ದ. ಮಾರನೇ ದಿನ ಪಾರ್ಸೆಲ್ ಓಪನ್ ಮಾಡಲು ಹೋದಾಗ ತಕ್ಷಣ ಭೀಕರ ಬ್ಲಾಸ್ಟ್ ಸಂಭವಿಸಿದೆ.
ಕಾರ್ಮಿಕ ಸೂರಜ್ ಗಂಭೀರ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಪ್ರಕರಣ ಬೆನ್ನತ್ತಿದ ಪೂರ್ವ ವಿಭಾಗದ ಪೊಲೀಸರು,10 ವಿಶೇಷ ತಂಡಗಳನ್ನು ರಚಿಸಿ ಬರೋಬ್ಬರಿ 1500 CCTV ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಅಸ್ಸಾಂ ಪೊಲೀಸರು, ರಾಯಚೂರು ಪೊಲೀಸರು ಹಾಗೂ ATC ಅಧಿಕಾರಿಗಳ ನೆರವಿನಿಂದ ಪ್ರಕರಣವನ್ನು ಭೇದಿಸಿ, ಕೃತ್ಯ ಎಸಗಿದ ಮೂವರನ್ನೂ ಈಗ ಕಂಬಿ ಎಣಿಸುವಂತೆ ಮಾಡಿದ್ದಾರೆ.
ಅದೇನೆ ಹೇಳಿ. ಇಂತಹ ಖರ್ತಾನಕ್ ಗಳ ಪ್ಲ್ಯಾನಿಂಗ್ ನಿಂದ ತಲೆ ಕೆಡಿಸಿಕೊಂಡಿದ್ದ ಪೊಲೀಸರು, ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇದ್ರಿಂದ ಪೊಲೀಸರ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.