• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಹುಬ್ಬಳ್ಳಿ ಧಾರವಾಡ
  • /ಮದುವೆ ಮಾಡಿಸಿದವನಿಂದಲೇ ಸಂಸಾರಕ್ಕೆ ಕನ್ನ: 45 ವರ್ಷದ ವ್ಯಕ್ತಿ ಜೊತೆ 25 ವರ್ಷದ ಮಹಿಳೆ ಪರಾರಿ!

ಮದುವೆ ಮಾಡಿಸಿದವನಿಂದಲೇ ಸಂಸಾರಕ್ಕೆ ಕನ್ನ: 45 ವರ್ಷದ ವ್ಯಕ್ತಿ ಜೊತೆ 25 ವರ್ಷದ ಮಹಿಳೆ ಪರಾರಿ!

ಮದುವೆ ಮಾಡಿಸಿದವನ ಜೊತೆಯಲ್ಲೇ ಪತ್ನಿ ಪರಾರಿಯಾಗಿರುವ ಶಾಕಿಂಗ್‌ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಬೆಳಕಿಗೆ ಬಂದಿದೆ. 45 ವಯಸ್ಸಿನ ವ್ಯಕ್ತಿಯೊಂದಿಗೆ 25 ವರ್ಷದ ಮಹಿಳೆ ಎಸ್ಕೇಪ್ ಆಗಿದ್ದಾಳೆ.

Written ByYashaswini V
Published: Nov 05, 2026, 13:09 IST|Updated: Nov 05, 2026, 13:11 IST
joinshare
ಮದುವೆ ಮಾಡಿಸಿದವನಿಂದಲೇ ಸಂಸಾರಕ್ಕೆ ಕನ್ನ: 45 ವರ್ಷದ ವ್ಯಕ್ತಿ ಜೊತೆ 25 ವರ್ಷದ ಮಹಿಳೆ ಪರಾರಿ!

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಮದುವೆ ಮಾಡಿಸಿದ ವ್ಯಕ್ತಿಯೊಂದಿಗೆ ಮಹಿಳೆಯೊಬ್ಬಳು ಎಸ್ಕೇಪ್‌ ಆಗಿರುವ ವಿಚಿತ್ರ ಘಟನೆಯೊಂದು ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ಸೈಕಲ್‌ಗಾರ ಓಣಿಯಲ್ಲಿ ಬೆಳಕಿಗೆ ಬಂದಿದೆ. ಚಾಂದ್ ಸುಲ್ತಾನ ಎಂಬ 25 ವರ್ಷದ ಮಹಿಳೆ, ಜಾಕೀರ್ ಹಬಿಬುಲ್ಲಾ ವೀರಪುರ ಎಂಬ 45 ವರ್ಷದ ವ್ಯಕ್ತಿ ಜೊತೆ ಪರಾರಿಯಾಗಿದ್ದಾಳೆ. ಇದರಿಂದಾಗಿ ಚಾಂದ್ ಸುಲ್ತಾನಳ ಪತಿ ದಾದಫೀರ್ ಅನಸರ್ ಅಲಿ ಮುಲ್ಲಾ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ.

2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಮಹಿಳೆ:
ಲಭ್ಯವಿರುವ ಮಾಹಿತಿಗಳ ಪ್ರಕಾರ, 2020ರಲ್ಲಿ ದಾದಫೀರ್ ಅನಸರ್ ಅಲಿ ಮುಲ್ಲಾ ಎಂಬಾತ ಚಾಂದ್ ಸುಲ್ತಾನ ಎಂಬಾಕೆಯ ಜೊತೆ ಮದುವೆ ಆಗಿದ್ದರು. ಈ ದಂಪತಿಗೆ ಒಂದು ಗಂಡು ಮಗು ಕೂಡ ಜನಿಸಿತ್ತು.

ಮದುವೆಯಾಗಿ ಮಗು ಜನಿಸಿದ್ರೂ ಹಳೆ ಪ್ರೇಮ ಬಿಡದ ಮಹಿಳೆ:
ದಾದಫೀರ್ ಅನಸರ್ ಅಲಿ ಮುಲ್ಲಾ ಜೊತೆ ಮದುವೆ ಆಗಿ ಮಗು ಜನಿಸಿದ ಮೇಲೂ ತನ್ನ ಹಳೆ ಪ್ರೇಮವನ್ನು ಬಿಡ ಮಹಿಳೆ ಚಾಂದ್ ಸುಲ್ತಾನ, ಇವರ ಮದುವೆ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಾಕೀರ್ ಹಬಿಬುಲ್ಲಾ ವೀರಪುರ ಎಂಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.

ಚಿಕ್ಕಪ್ಪನ ಜೊತೆಯಲ್ಲೇ ಮಹಿಳೆ ಅಕ್ರಮ ಸಂಬಂಧ:
ವಿಶೇಷವೆಂದರೆ 45 ವರ್ಷದ ಜಾಕೀರ್ ಹಬಿಬುಲ್ಲಾ ವೀರಪುರ, ಚಾಂದ್ ಸುಲ್ತಾನಳಿಗೆ ಸಂಬಂಧದಲ್ಲಿ ಚಿಕ್ಕಪ್ಪನೇ ಆಗಬೇಕು. ಆದರೂ, ತಂದೆ ಮಗಳ ಪವಿತ್ರ ಸಂಬಂಧಕ್ಕೂ ಬೆಲೆ ಕೊಡದ ಈ ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರು.

ಈ ಬಗ್ಗೆ ಹಿಂದೆಯೂ ಅನುಮಾನಗಳಿತ್ತು. ಇತ್ತೀಚೆಗೆ ಶಾಮಿಯಾನ ಅಂಗಡಿಯಲ್ಲೇ ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರಂತೆ. ಬಳಿಕ ಹಿರಿಯರು ಬುದ್ಧಿವಾದ ಹೇಳಿ, ಆಕೆಗೆ ಸಂಸಾರ ಸರಿ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರಂತೆ. ಆದರೂ, ಅಕ್ರಮ ಸಂಬಂಧಕ್ಕೆ ಬ್ರೇಕ್ ಬೀಳಲಿಲ್ಲ. ಬದಲಿಗೆ, ಗಂಡನ ಜೊತೆ ಜಗಳ ಮಾಡಿಕೊಂಡು ತವರು ಮನೆಗೆ ಹೋದ ಚಾಂದ್ ಸುಲ್ತಾನ ಮತ್ತೆ ವಾಪಸ್ ಬರಲೇ ಇಲ್ಲ. ಮತ್ತೊಂದೆಡೆ ಮೊದಲ ಗಂಡನಿಗೆ ಡಿವೋರ್ಸ್‌ ಸಹ ನೀಡದೆ ಚಾಂದ್ ಸುಲ್ತಾನ ತನ್ನ ಮಗುವನ್ನೂ ಕರೆದುಕೊಂಡು ಜಾಕೀರ್ ಹಬಿಬುಲ್ಲಾ ವೀರಪುರ ಜೊತೆ ಪರಾರಿ ಆಗಿದ್ದಾಳೆ.

ಒಂದೆಡೆ ಮದುವೆ ಮಾಡಿಸಿದವನೇ ಸಂಸಾರಕ್ಕೆ ಕನ್ನ ಹಾಕಿದ್ದರೆ, ಸಂಬಂಧದಲ್ಲಿ ಚಿಕ್ಕಪ್ಪ ಆಗಿರುವ ವ್ಯಕ್ತಿ ಜೊತೆಯಲ್ಲೇ ಆಕ್ರಮ ಸಂಬಂಧ ಹೊಂದಿದ್ದ ಮಹಿಳೆ ಮೊದಲ ಗಂಡನಿಗೆ ಕೈಕೊಟ್ಟು ಮಗುವಿನೊಂದಿಗೆ ಜೂಟ್‌ ಆಗಿದ್ದಾಳೆ. ಮತ್ತೊಂದೆಡೆ, ನಂಬಿಸಿ ಮದುವೆ ಮಾಡಿಸಿದ್ದವನೇ ಈಗ ಪತ್ನಿಯೊಂದಿಗೆ ಪರಾರಿ ಆಗಿದ್ದು, ಪತ್ನಿ, ಮಗು ಕಳೆದುಕೊಂಡು ಕಂಗಾಲಾಗಿದ್ದಾನೆ.

ಈ ವಿಚಿತ್ರ ಘಟನೆಯಿಂದ ಮೊದಲ ಪತಿ ದಾದಫೀರ್ ಅನಸರ್ ಅಲಿ ಮುಲ್ಲಾ ಸಂಸಾರ ಅಲ್ಲೋಲ ಕಲ್ಲೋಲವಾಗಿದೆ. ಈ ರೀತಿ ತನಗೆ ಮೋಸ ಮಾಡಿದ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿರುವ ದಾದಫೀರ್ ಅನಸರ್ ಅಲಿ ಮುಲ್ಲಾ, ತಮ್ಮ ಹೆಂಡತಿ-ಮಗು ಮರಳಿ ಕೊಡಿಸಿ, ನ್ಯಾಯ ಒದಗಿಸುವಂತೆ ಅಳಲು ತೋಡಿಕೊಂಡಿದ್ದಾರೆ. 
 

Add Zee News as a Preferred Source
TAGS:
Crime
Kannada News