ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫಾಲೋವರ್ಸ್ ಹೊಂದಿರುವ ಟ್ಯಾಟೂ ಆರ್ಟಿಸ್ಟ್ ಅರ್ಜುನ್ ಅವರ ಗಂಭೀರವಾದ ಆರೋಪವೊಂದು ಕೇಳಿ ಬಂದಿದೆ. ಮಹಿಳೆಯೊಬ್ಬರು ಟ್ಯಾಟೂ ಆರ್ಟಿಸ್ಟ್ ಅರ್ಜುನ್ ಅವರ ಮೇಲೆ ಆರೋಪ ಮಾಡಿದ್ದು ಅವರು ನೀವು ಅಂದುಕೊಂಡಂತೆ ಇಲ್ಲ. ಸ್ಕ್ರೀನ್ ಅಲ್ಲಿ ಕಾಣುವುದು ಬೇರೆ. ಅವರ ನಿಜ ಜೀನವ ನೀವು ಏನು ನೋಡುತ್ತಿರೋ ಅದು ನನಗೆ ಗೊತ್ತಿಲ್ಲ. ಅವರು ನಿಜ ಜೀವನದಲ್ಲಿ ಇರುವುದೇ ಬೇರೆ. ಅದು ಏನಂತ ನಾನು ಅನುಭವಿಸಿದ್ದೇನೆ. ಆ ವ್ಯಕ್ತಿ ಏನು ಅನ್ನೋದು ನನಗೆ ಗೊತ್ತಿದೆ ಎಂದು ಮಹಿಳೆ ವಿಡಿಯೋದಲ್ಲಿ ಹೇಳಿದ್ದಾರೆ.
ವಿಡಿಯೋವೊಂದರಲ್ಲಿ ಮಾತನಾಡಿರುವ ಮಹಿಳೆ, ಟ್ಯಾಟೂ ಆರ್ಟಿಸ್ಟ್ ಅರ್ಜುನ್ ಅನ್ನುವರು ನನ್ನ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ ಎನ್ನುವ ವಿಷಯ ತಿಳಿದಿದೆ. ಇದು ಎಲ್ಲ ಕಡೆನೂ ಎಲ್ಲರಿಗೂ ಗೊತ್ತಾಗುತ್ತಿದೆ. ಆದರೆ ಅದೆಲ್ಲ ಫೇಕ್ ಆಗಿರುತ್ತದೆ. ಈ ಹಿಂದೆ ನಾನು ವಿಡಿಯೋವೊಂದನ್ನು ಅಪ್‌ಲೋಡ್ ಮಾಡಿದ್ದೆ. ಆರು ಗಂಟೆ ಸುಮಾರಿಗೆ ಅದನ್ನು ನಾನು ಅಪ್‌ಲೋಡ್ ಮಾಡಿದ್ದೆ. ಇದನ್ನು ನೋಡಿದ ಬಳಿಕ ನನ್ನ ಮನೆಗೆ ಬಂದು ನಮ್ಮ ಮೇಲೆ ದಬ್ಬಾಳಿಕೆ ಮಾಡಿದ್ದಾನೆ. ಅಷ್ಟೇ ಅಲ್ಲ ನನಗೆ ಹೊಡೆದಿದ್ದಾನೆ. ಇದರಿಂದ ನನ್ನನ್ನು ನಾನು ರಕ್ಷಣೆ ಮಾಡಿಕೊಳ್ಳುವುದಕ್ಕಾಗಿ ವಾಪಸ್ ಹೊಡೆದಿದ್ದೇನೆ ಎಂದು ಹೇಳಿದ್ದಾರೆ.
ಈ ಹಿಂದೆಯೇ ಟ್ಯಾಟೂ ಆರ್ಟಿಸ್ಟ್ ಅರ್ಜುನ್ ವಿರುದ್ಧ ಸಾಕಷ್ಟು ದೂರುಗಳನ್ನು ಕೊಟ್ಟಿದ್ದೇನೆ. ಅರ್ಜುನ್ ಅವರು ಪರಿಚಯ ಆದ ಮೇಲೆ ಇಬ್ಬರು ಹಣವನ್ನು ಪಡೆದುಕೊಂಡಿದ್ದು, ಅದನ್ನು ವಾಪಸ್ ಕೊಟ್ಟಿರುವುದು ಇದೆ. ಇದರಲ್ಲಿ ಯಾವುದೇ ಸುಳ್ಳು ಇಲ್ಲ. ಬೇರೆ ಕಡೆ ಹೋಗಿ ಸಾಲ ಮಾಡಲಾಗಿದೆ. ಅದನ್ನು ಇನ್ನೂ ಕೊಟ್ಟಿಲ್ಲ. ಹಾಗೇ ನಾನು ದೂರು ಕೊಟ್ಟಿರುವ ಕಾಪಿಗಳು ಸಾಕಷ್ಟು ಇವೆ. ಅವನು ಟಾರ್ಚರ್ ಕೊಡುತ್ತಿರುವುದು, ಬ್ಲ್ಯಾಕ್‌ಮೇಲ್ ಮಾಡುತ್ತಿರುವುದು ಸೇರಿ ಸಾಕಷ್ಟು ಇವೆ ಎಂದು ಮಹಿಳೆ ಹೇಳಿದ್ದಾರೆ.
ಅವರನ್ನು ನಾನು ಕೇಳಬೇಕಂತೆ. ಯಾವುದೇ ಏನು ಎಂದು ಎಲ್ಲವೂ ಸಾಕ್ಷಿ ಸಮೇತ ನಾನು ಕೊಡುತ್ತೇನೆ. ಅವರು ಹೇಳುವುದೆಲ್ಲ ಸುಳ್ಳು ಆಗಿದೆ. ಆ ವ್ಯಕ್ತಿ ಏನು ಅಂತ ನನಗೆ ಗೊತ್ತಿದೆ. ಅವರ ನಿಜ ಮುಖ ಏನು ನೋಡುತ್ತಿದ್ದೀರೋ ಅದು ಗೊತ್ತಿಲ್ಲ. ಅವರಿಂದ ನಾನು ಎಷ್ಟು ಅನುಭವಿಸುತ್ತಿದ್ದೀನಿ ಎಂದು ನನಗೆ ಗೊತ್ತಿದೆ. ನನ್ನ ಅಕ್ಕಪಕ್ಕ ಇರುವ ಎಲ್ಲರಿಗೂ ಆ ವ್ಯಕ್ತಿ ಎಂತವನು ಎನ್ನುಬುದು ಗೊತ್ತಿದೆ. ನೀವು ಅಂದುಕೊಂಡಿರುವ ತರ ಅವರಿಲ್ಲ. ಅವರ ಮೇಲೆ ಹಲ್ಲೆ ಮಾಡುವುದಕ್ಕೆ ಕಾರಣ, ನನ್ನ ಮೇಲೆ ಹಲ್ಲೆ ಮಾಡಿದಾಗ ಪ್ರತಿಯಾಗಿ ಹಲ್ಲೆ ಮಾಡಿದ್ದೇ ಅಷ್ಟೇ ಎಂದಿದ್ದಾರೆ. ಏಕಾಏಕಿ ನಮ್ಮ ಮನೆಗೆ ಬಂದು ನಮ್ಮ ಮೇಲೆ ದಬ್ಬಾಳಿಕೆ ಮಾಡಿ ಹೊಡೆದಿದ್ದರಿಂದ ಜೀವ ಉಳಿಸಿಕೊಳ್ಳುವುದಕ್ಕಾಗಿ ಅವರಿಗೆ ಹೊಡೆದಿದ್ದೇನೆ. ನನ್ನ ಜಾಗದಲ್ಲಿ ಯಾವುದೇ ಹುಡುಗಿ ಇದ್ದರೂ ಇದೇ ಕೆಲಸ ಮಾಡುತ್ತಿದ್ದಳು. ಎಫ್‌ಐಆರ್ ನಾನು ಮಾಡಿಸಿದ್ದೇನೆ ಎಂದು ಹೇಳಿದ್ದಾರೆ.
ನಾನು ಅವರ ಮೇಲೆ ಈಗಾಗಲೆ ಸಾಕಷ್ಟು ದೂರು ನೀಡಿದ್ದೇನೆ. ನನಗೆ ಅರ್ಜುನ್ ಪರಿಚಯ ಆದಾಗಿನಿಂದ ಹಣ ಕೊಡೋದು, ತೆಗೆದುಕೊಳ್ಳೋದು ಮಾಡಿದ್ದೇನೆ. ಬೇಕು ಅಂದಾಗ ಸಾಲ ಮಾಡಿ ಕೂಡ ಹಣ ನೀಡಿದ್ದೇನೆ. ಆದರೆ ಆ ಸಾಲವನ್ನು ಇದುವರೆಗೆ ಆತ ತೀರಿಸಿಲ್ಲ. ನನಗೆ ಟಾರ್ಚರ್ ನೀಡಿದ್ದಾನೆ, ಬ್ಲಾಕ್ ಮೇಲ್ ಮಾಡಿದ್ದಾನೆ. ಅವರು ಹೇಳಿದ ಹಾಗೆ ಕೇಳಬೇಕು ಅಂತಾ ಬೆದರಿಕೆ ಹಾಕ್ತಿದ್ದನು. ಆ ವ್ಯಕ್ತಿ ಏನು ಅನ್ನೋದು ನನಗೆ ಗೊತ್ತಿದೆ, ನಿಜ ಮುಖ ನನಗೆ ಮಾತ್ರ ಗೊತ್ತು. ಅವನಿಂದ ಸಾಕಷ್ಟು ಅನುಭವಿಸಿದ್ದೇನೆ. ಆ ವ್ಯಕ್ತಿ ನೀವು ಅಂದುಕೊಂಡಿರೊ ರೀತಿ ಇಲ್ಲ. ಅವರು ಹಲ್ಲೆ ಮಾಡಿದ್ದಕ್ಕೆ ನಾನು ಹೊಡೆದಿದ್ದೇನೆ ಎಂದು ಮಹಿಳೆ ಒಪ್ಪಿಕೊಂಡಿದ್ದಾರೆ.
ಟ್ಯಾಟೂ ಆರ್ಟಿಸ್ಟ್ ಅರ್ಜುನ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ವಿವಿಧ ವಿಡಿಯೋಗಳ ಮೂಲಕ ಫಾಲೋರ್ಸ್ ಅನ್ನು ಜಾಸ್ತಿ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬೇರೆ ಬೇರೆ ಕಂಟೆಂಟ್‌ಗಳನ್ನು ಕೊಡುತ್ತಾರೆ. ತಮ್ಮದೇ ನಟನೆ ಮೂಲಕ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಟ್ಯಾಟೂ ಕ್ಲಾಸ್ ಕೂಡ ಮಾಡುತ್ತಾರೆ. ಪ್ರತಿ ನಿತ್ಯ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಯಾವುದಾದರೂ ವಿಷಯದ ಕುರಿತು ವಿಡಿಯೋವನ್ನು ಅಪ್‌ಲೋಡ್ ಮಾಡುತ್ತಿರುತ್ತಾರೆ. ಹೀಗಾಗಿಯೇ ಟ್ಯಾಟೂ ಆರ್ಟಿಸ್ಟ್ ಅರ್ಜುನ್ ಅವರು ಹೆಚ್ಚು ಜನರಿಗೆ ಗೊತ್ತು ಎನ್ನಬಹುದು.