• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಏಳು ಜನರ ಹ*ತ್ಯೆ ಪ್ರಕರಣ: ಸಸ್ಪೆನ್ಸ್ ಸಿನಿಮಾ ನೋಡಿ ಭಯಾನಕ ಹಂತಕನ ಪ್ಲಾನ್; ಪೊಲೀಸರೇ ಶಾಕ್!

ಏಳು ಜನರ ಹ*ತ್ಯೆ ಪ್ರಕರಣ: ಸಸ್ಪೆನ್ಸ್ ಸಿನಿಮಾ ನೋಡಿ ಭಯಾನಕ ಹಂತಕನ ಪ್ಲಾನ್; ಪೊಲೀಸರೇ ಶಾಕ್!

ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಏಳು ಕೊ*ಲೆ ಪ್ರಕರಣದಲ್ಲಿ ಆರೋಪಿ ಇಂದುಶೇಖರ್ ರೂಪಿಸಿದ್ದ ಎನ್ನಲಾದ ಭಯಾನಕ ಯೋಜನೆಗಳು ಪೊಲೀಸರನ್ನೇ ಬೆಚ್ಚಿಬೀಳಿಸಿವೆ. ಹ*ತ್ಯೆಗೂ ಮುನ್ನ ಇಂಗ್ಲಿಷ್ ಸಸ್ಪೆನ್ಸ್ ಸಿನಿಮಾಗಳನ್ನ ವೀಕ್ಷಿಸಿದ್ದ ಹಾಗೂ ಮೃತದೇಹಗಳನ್ನ ಹೇಗೆ ಪ್ಯಾಕ್ ಮಾಡಿ ವಿಲೇವಾರಿ ಮಾಡಬೇಕು ಎಂಬುದರ ಕುರಿತು ಇಂಟರ್ನೆಟ್‌ನಲ್ಲಿ ಮಾಹಿತಿ ಹುಡುಕಿದ್ದ ಎಂಬ ಶಂಕೆ ವ್ಯಕ್ತವಾಗಿದೆ.

Written ByPuttaraj K Alur
Published: Nov 08, 2026, 08:36 IST|Updated: Nov 08, 2026, 08:52 IST
joinshare
ಏಳು ಜನರ ಹ*ತ್ಯೆ ಪ್ರಕರಣ: ಸಸ್ಪೆನ್ಸ್ ಸಿನಿಮಾ ನೋಡಿ ಭಯಾನಕ ಹಂತಕನ ಪ್ಲಾನ್; ಪೊಲೀಸರೇ ಶಾಕ್!
Image Credit: Rajajinagar Murder Case

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Rajajinagar Murder Case: ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಏಳು ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯು ರೂಪಿಸಿದ್ದ ಎನ್ನಲಾದ ಭಯಾನಕ ಯೋಜನೆಗಳು ತನಿಖಾಧಿಕಾರಿಗಳನ್ನೇ ಬೆಚ್ಚಿಬೀಳಿಸಿವೆ. ಹ*ತ್ಯೆ ನಡೆಸಿದ ಬಳಿಕ ಮೃತದೇಹಗಳನ್ನ ಹೇಗೆ ವಿಲೇವಾರಿ ಮಾಡಬೇಕು ಎಂಬುದರ ಬಗ್ಗೆಯೂ ಆರೋಪಿ ಇಂದುಶೇಖರ್ ಮೊದಲೇ ಮಾಹಿತಿ ಸಂಗ್ರಹಿಸಿ ಸಿದ್ಧತೆ ಮಾಡಿಕೊಂಡಿದ್ದ ಎನ್ನುವ ಅಂಶಗಳು ಬೆಳಕಿಗೆ ಬಂದಿವೆ. ಕೊ*ಲೆಗೂ ಮುನ್ನ ಹಲವು ಇಂಗ್ಲಿಷ್ ಸಸ್ಪೆನ್ಸ್ ಸಿನಿಮಾಗಳನ್ನ ವೀಕ್ಷಿಸಿದ್ದಾನೆ ಎಂಬ ಶಂಕೆಯೂ ವ್ಯಕ್ತವಾಗಿದೆ.

ಮೃತದೇಹವನ್ನ ಹೇಗೆ ಪ್ಯಾಕ್ ಮಾಡಬೇಕು, ಅದನ್ನ ವಿಲೇವಾರಿ ಮಾಡುವ ವಿಧಾನ ಯಾವುದು ಎಂಬುದನ್ನ ತಿಳಿದುಕೊಳ್ಳಲು ಇಂದುಶೇಖರ್ ಇಂಟರ್ನೆಟ್‌ನಲ್ಲಿ ಹುಡುಕಾಟ ನಡೆಸಿದ್ದ ಎನ್ನಲಾಗಿದೆ. ಹ*ತ್ಯೆಯ ನಂತರದ ಪ್ರಕ್ರಿಯೆಗಳ ಬಗ್ಗೆಯೂ ಮುಂಚಿತವಾಗಿಯೇ ಮಾಹಿತಿ ಪಡೆದುಕೊಂಡು ಯೋಜನೆ ರೂಪಿಸಿದ್ದ ಎಂಬ ವಿವರಗಳು ಪ್ರಕರಣದ ತನಿಖೆಯ ವೇಳೆ ಪೊಲೀಸರ ಗಮನಕ್ಕೆ ಬಂದಿವೆ.

ಹ*ತ್ಯೆಯ ಬಳಿಕ ಮೃತದೇಹವನ್ನ ಬಾತ್‌ರೂಮ್‌ಗೆ ಕರೆದೊಯ್ಯುತ್ತಿದ್ದ ಆರೋಪಿ

ಆರೋಪಿಯು ಹ*ತ್ಯೆ ನಡೆಸುತ್ತಿದ್ದ ವಿಧಾನಕ್ಕೆ ಸಂಬಂಧಿಸಿದಂತೆ ಕೆಲವು ಆಘಾತಕಾರಿ ಸಂಗತಿಗಳು ಹೊರಬಂದಿವೆ. ಮನೆಯ ಹಾಲ್‌ನಲ್ಲಿ ವ್ಯಕ್ತಿಯ ತಲೆಗೆ ಹೊಡೆದ ತಕ್ಷಣವೇ ಮೃತದೇಹವನ್ನ ಬಾತ್‌ರೂಮ್‌ಗೆ ಎಳೆದುಕೊಂಡು ಹೋಗುತ್ತಿದ್ದ ಎಂದು ತಿಳಿದುಬಂದಿದೆ. ಬಳಿಕ ದೇಹದಲ್ಲಿದ್ದ ರಕ್ತ ಸಂಪೂರ್ಣವಾಗಿ ಹೊರಹೋಗುವವರೆಗೆ ಮೃತದೇಹವನ್ನ ಬಾತ್‌ರೂಮ್‌ನಲ್ಲಿಯೇ ಇರಿಸುತ್ತಿದ್ದ ಎನ್ನಲಾಗಿದೆ. ಒಂದು ವೇಳೆ ಸಂತ್ರಸ್ತರಲ್ಲಿ ಸ್ವಲ್ಪ ಉಸಿರಾಟ ಕಂಡುಬಂದರೂ ಅವರನ್ನ ಬಿಡದೆ, ರುಬ್ಬುವ ಕಲ್ಲಿನಿಂದ ಮತ್ತೆ ಮತ್ತೆ ತಲೆಗೆ ಹೊಡೆದು ಹ*ತ್ಯೆ ಮಾಡುತ್ತಿದ್ದ ಎಂಬ ಆರೋಪವೂ ಕೇಳಿಬಂದಿದೆ. ಈ ರೀತಿಯಾಗಿ ಹ*ತ್ಯೆ ನಡೆಸಿದ ಬಳಿಕ ದೇಹದಲ್ಲಿದ್ದ ರಕ್ತ ಸಂಪೂರ್ಣವಾಗಿ ಹೊರಬರುವಂತೆ ಮಾಡುತ್ತಿದ್ದ ಎನ್ನಲಾಗಿದೆ.

ಮೃತದೇಹ ಪ್ಯಾಕಿಂಗ್‌ಗೂ ಮೊದಲೇ ಸಿದ್ಧತೆ

ದೇಹದಲ್ಲಿರುವ ರಕ್ತ ಸಂಪೂರ್ಣವಾಗಿ ಹೊರಬಂದ ಬಳಿಕ ಮೃತದೇಹವನ್ನ ತಕ್ಷಣವೇ ಪ್ಯಾಕ್ ಮಾಡಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಮೃತದೇಹದಿಂದ ರಕ್ತ ಸಂಪೂರ್ಣವಾಗಿ ಹೊರಬಂದರೆ ಹೆಚ್ಚು ದುರ್ವಾಸನೆ ಬರುವುದಿಲ್ಲ ಎಂಬ ಮಾಹಿತಿಯನ್ನ ಆರೋಪಿ ಮೊದಲೇ ತಿಳಿದುಕೊಂಡಿದ್ದ ಎನ್ನಲಾಗಿದೆ. ಈ ಕಾರಣಕ್ಕಾಗಿ ಮೃತದೇಹ ವಿಲೇವಾರಿ ಮಾಡುವುದಕ್ಕೂ ಮುನ್ನವೇ ಅಗತ್ಯ ಮಾಹಿತಿಯನ್ನ ಸಂಗ್ರಹಿಸಿ, ಅದರಂತೆ ಯೋಜನೆ ರೂಪಿಸಿದ್ದ ಎಂಬ ಸಂಗತಿಗಳು ಪೊಲೀಸರ ತನಿಖೆಯಲ್ಲಿ ಮುನ್ನೆಲೆಗೆ ಬಂದಿವೆ.

ಹ*ತ್ಯೆ ನಡೆಸಿದ ನಂತರ ಸಾಕ್ಷ್ಯಗಳನ್ನ ಮರೆಮಾಚಲು ಮತ್ತು ಮೃತದೇಹಗಳನ್ನ ವಿಲೇವಾರಿ ಮಾಡಲು ಆರೋಪಿ ಅನುಸರಿಸಿದ್ದ ಎನ್ನಲಾದ ವಿಧಾನಗಳು ತನಿಖಾಧಿಕಾರಿಗಳ ಗಮನ ಸೆಳೆದಿವೆ. ತಂದೆ-ಮಗಳು ಸೇರಿ ನಡೆಸಿದ್ದಾರೆ ಎನ್ನಲಾದ ಈ ಕೊ*ಲೆ ಪ್ರಕರಣದಲ್ಲಿ ಮೃತದೇಹಗಳನ್ನ ಪ್ಯಾಕ್ ಮಾಡುವ ವಿಧಾನ ಸೇರಿದಂತೆ ಹಲವು ಅಂಶಗಳು ತನಿಖೆಯ ಭಾಗವಾಗಿವೆ. ಆರೋಪಿಯು ಹ*ತ್ಯೆಗೂ ಮುನ್ನವೇ ಇಂತಹ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ ಎಂಬುದು ಪ್ರಕರಣದ ಗಂಭೀರತೆಯನ್ನ ಮತ್ತಷ್ಟು ಹೆಚ್ಚಿಸಿದೆ.

ಪ್ರಕರಣದ ತನಿಖೆಗೆ ಡಿಸಿಪಿ ನೇಮಗೌಡ ನೇಮಕ

ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಏಳು ಕೊ*ಲೆ ಪ್ರಕರಣದ ತನಿಖೆಯನ್ನ ಗಂಭೀರವಾಗಿ ಪರಿಗಣಿಸಲಾಗಿದೆ. ಪ್ರಕರಣದ ತನಿಖಾಧಿಕಾರಿಯಾಗಿ ಡಿಸಿಪಿ ನೇಮಗೌಡ ಅವರನ್ನ ನೇಮಕ ಮಾಡಲಾಗಿದೆ. ಪ್ರಕರಣದ ಗಂಭೀರತೆ ಹಾಗೂ ಅಪರೂಪದ ಸ್ವರೂಪವನ್ನ ಗಮನದಲ್ಲಿಟ್ಟುಕೊಂಡು ಐಪಿಎಸ್ ಅಧಿಕಾರಿಯನ್ನೇ ತನಿಖಾಧಿಕಾರಿಯಾಗಿ ನೇಮಿಸಿರುವುದು ವಿಶೇಷವಾಗಿದೆ.

ಡಿಸಿಪಿ ನೇಮಗೌಡ ಅವರು ಸ್ವತಃ ಪ್ರಕರಣದ ಸಂಪೂರ್ಣ ತನಿಖೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ತನಿಖೆಯನ್ನ ವಿವಿಧ ಆಯಾಮಗಳಲ್ಲಿ ಮುಂದುವರಿಸಲು ವಿಶೇಷ ತಂಡಗಳನ್ನ ರಚಿಸಿ ಕಾರ್ಯಾಚರಣೆಗೆ ಇಳಿಸಿದ್ದಾರೆ. ಪ್ರಕರಣದ ಪ್ರತಿಯೊಂದು ಅಂಶವನ್ನೂ ಪರಿಶೀಲಿಸುವ ನಿಟ್ಟಿನಲ್ಲಿ ತಂಡಗಳು ಕೆಲಸ ಮಾಡುತ್ತಿವೆ.

ಮೂರು ಎಸಿಪಿಗಳ ತಂಡದಿಂದ ವಿವಿಧ ಆಯಾಮಗಳಲ್ಲಿ ತನಿಖೆ

ಪ್ರಕರಣದ ತನಿಖೆಗಾಗಿ ಮೂರು ಎಸಿಪಿಗಳ ತಂಡಗಳನ್ನ ರಚಿಸಲಾಗಿದೆ. ಈ ತಂಡಗಳು ಪ್ರತ್ಯೇಕ ಆಯಾಮಗಳಲ್ಲಿ ತನಿಖೆ ನಡೆಸುತ್ತಿವೆ. ಕೊ*ಲೆ ನಡೆದ ಸಂದರ್ಭ, ಆರೋಪಿಗಳು ಅನುಸರಿಸಿದ ವಿಧಾನ, ಮೃತದೇಹಗಳನ್ನ ಪ್ಯಾಕ್ ಮಾಡಿದ ರೀತಿ ಹಾಗೂ ವಿಲೇವಾರಿಗೆ ಸಂಬಂಧಿಸಿದ ಮಾಹಿತಿಗಳನ್ನ ತನಿಖೆಯ ವ್ಯಾಪ್ತಿಗೆ ತೆಗೆದುಕೊಳ್ಳಲಾಗಿದೆ.

ಒಟ್ನಲ್ಲಿ ರಾಜಾಜಿನಗರ ವ್ಯಾಪ್ತಿಯ ಏಳು ಕೊ*ಲೆ ಪ್ರಕರಣವು ಹಲವು ಆಘಾತಕಾರಿ ಸಂಗತಿಗಳಿಂದ ತೀವ್ರ ಕುತೂಹಲ ಮೂಡಿಸಿದೆ. ಹ*ತ್ಯೆಗೂ ಮುನ್ನ ಇಂಟರ್ನೆಟ್‌ನಲ್ಲಿ ಮಾಹಿತಿ ಹುಡುಕಾಟ ನಡೆಸಿದ್ದು, ಸಸ್ಪೆನ್ಸ್ ಸಿನಿಮಾಗಳನ್ನ ವೀಕ್ಷಿಸಿರುವ ಶಂಕೆ ಹಾಗೂ ಮೃತದೇಹ ವಿಲೇವಾರಿಗೆ ರೂಪಿಸಿದ್ದ ಎನ್ನಲಾದ ಯೋಜನೆಗಳು ತನಿಖೆಯಲ್ಲಿ ಪ್ರಮುಖ ಅಂಶಗಳಾಗಿವೆ. ಡಿಸಿಪಿ ನೇಮಗೌಡ ಅವರ ನೇತೃತ್ವದಲ್ಲಿ ವಿಶೇಷ ತಂಡಗಳು ತನಿಖೆ ಮುಂದುವರಿಸಿವೆ.

Add Zee News as a Preferred Source
TAGS:
Crime
Kannada News