SOCIAL MEDIA

Newsletter

PARTNER SITES
Select Language Select State

ಶವ ಸಾಗಿಸಲು ದಸರಾ-ದೀಪಾವಳಿ ಪ್ರವಾಸದ ನಾಟಕ! ಇಂದುಶೇಖರ್‌ನ ವಿಭಿನ್ನ ಪ್ಲ್ಯಾನ್ ಕಂಡು ಪೊಲೀಸರೇ ಶಾಕ್‌!

ಏಳು ಶವಗಳನ್ನ ಒಂದೇ ಬಾರಿಗೆ ಸಾಗಿಸುವ ಬದಲು ಹಂತ ಹಂತವಾಗಿ ಸಾಗಿಸಲು ಆರೋಪಿ ವಿಭಿನ್ನ ವಿಧಾನ ಅನುಸರಿಸಿದ್ದ ಎನ್ನಲಾಗಿದೆ. ತನ್ನ ಕಾರಿಗೆ ಪತ್ರಕರ್ತರ ಪ್ರವಾಸದ ಬ್ಯಾನರ್ ಅಳವಡಿಸಿಕೊಂಡು ವಿವಿಧ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದ ಎಂಬ ಅಂಶವೂ ತನಿಖೆಯಲ್ಲಿ ಗಮನ ಸೆಳೆದಿದೆ.

Written By Puttaraj K Alur
Published: Nov 16, 2026, 14:59 IST | Updated: Nov 16, 2026, 15:41 IST
Image Credit: Rajajinagar Murder Case
Join

Rajajinagar Serial Murder Case: ಬೆಂಗಳೂರು ರಾಜಾಜಿನಗರದ ಏಳು ಜನರ ಸರಣಿ ಹ*ತ್ಯೆ ಪ್ರಕರಣದಲ್ಲಿ ಆರೋಪಿಯ ಶವ ಸಾಗಿಸುವ ತಂತ್ರದ ಕುರಿತು ಹಲವು ಅಂಶಗಳು ಬೆಳಕಿಗೆ ಬರುತ್ತಿವೆ. ಏಳು ಶವಗಳನ್ನ ಸಾಗಿಸಲು ಆರೋಪಿ ಇಂದುಶೇಖರ್ ರೂಪಿಸಿದ್ದ ಎನ್ನಲಾದ ಯೋಜನೆ ಇದೀಗ ಪ್ರಕರಣದ ತನಿಖೆಯಲ್ಲಿ ಪ್ರಮುಖ ವಿಚಾರವಾಗಿದೆ. ದೀಪಾವಳಿ ಪ್ರವಾಸದ ಹೆಸರಿನಲ್ಲಿ ಕಾರಿನಲ್ಲಿ ಶವಗಳನ್ನ ಸಾಗಿಸಿದ್ದ ಎನ್ನಲಾಗಿದ್ದು, ಈ ವೇಳೆ ಯಾರಿಗೂ ಅನುಮಾನ ಬಾರದಂತೆ ಪತ್ರಕರ್ತರ ಪ್ರವಾಸದ ಬ್ಯಾನರ್ ಬಳಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಏಳು ಶವಗಳನ್ನ ಒಂದೇ ಬಾರಿಗೆ ಸಾಗಿಸುವ ಬದಲು ಹಂತ ಹಂತವಾಗಿ ಸಾಗಿಸಲು ಆರೋಪಿ ವಿಭಿನ್ನ ವಿಧಾನ ಅನುಸರಿಸಿದ್ದ ಎನ್ನಲಾಗಿದೆ. ತನ್ನ ಕಾರಿಗೆ ಪತ್ರಕರ್ತರ ಪ್ರವಾಸದ ಬ್ಯಾನರ್ ಅಳವಡಿಸಿಕೊಂಡು ವಿವಿಧ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದ ಎಂಬ ಅಂಶವೂ ತನಿಖೆಯಲ್ಲಿ ಗಮನ ಸೆಳೆದಿದೆ. ಈ ರೀತಿಯ ವ್ಯವಸ್ಥೆಯಿಂದ ದಾರಿಯಲ್ಲಿ ಯಾರಾದರೂ ಪ್ರಶ್ನಿಸಿದರೂ ಅನುಮಾನ ಮೂಡದಂತೆ ನೋಡಿಕೊಳ್ಳುವುದು ಆತನ ಉದ್ದೇಶವಾಗಿತ್ತು ಎನ್ನಲಾಗಿದೆ.

ಪತ್ರಕರ್ತರ ಪ್ರವಾಸದ ಹೆಸರಿನಲ್ಲಿ ಬ್ಯಾನರ್!

ಆರೋಪಿ ಇಂದುಶೇಖರ್ ತನ್ನ ಯೆಲ್ಲೋ ಬೋರ್ಡ್ ಟೊಯೋಟಾ ಇಟಿಯೋಸ್ ಕಾರಿಗೆ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಪತ್ರಕರ್ತರ ಪ್ರವಾಸ ಎಂಬ ಬರಹವಿರುವ ಬ್ಯಾನರ್ ಸಿದ್ಧಪಡಿಸಿ ಕಟ್ಟಿಕೊಂಡಿದ್ದ ಎನ್ನಲಾಗಿದೆ. ಈ ಬ್ಯಾನರ್ ಅನ್ನ ಕಾರಿನ ಮುಂಭಾಗದಲ್ಲಿ ಅಳವಡಿಸಲಾಗಿತ್ತು. ವಿಶೇಷವಾಗಿ ಕಾರಿನ ನಂಬರ್ ಪ್ಲೇಟ್ ಕಾಣದಂತೆ ಬ್ಯಾನರ್ ಅನ್ನ ಅಡ್ಡಲಾಗಿ ಕಟ್ಟಿಕೊಂಡಿದ್ದ ಎಂಬ ಮಾಹಿತಿ ಹೊರಬಂದಿದೆ.

ಕಾರಿನ ಗ್ಲಾಸ್ ಮೇಲೆ 'ಪ್ರೆಸ್' ಎಂಬ ಗುರುತನ್ನ ಹಾಕಿಕೊಂಡಿದ್ದ ಎನ್ನಲಾಗಿದ್ದು, ಅದರ ಕೆಳಭಾಗದಲ್ಲಿ ಪ್ರವಾಸದ ಬ್ಯಾನರ್ ಇರುತ್ತಿತ್ತು. ಇದರಿಂದ ಕಾರು ಪತ್ರಕರ್ತರ ಪ್ರವಾಸಕ್ಕೆ ತೆರಳುತ್ತಿದೆ ಎಂಬ ಭಾವನೆ ಮೂಡುವಂತೆ ವ್ಯವಸ್ಥೆ ಮಾಡಿದ್ದ ಎಂಬ ಆರೋಪ ಕೇಳಿಬಂದಿದೆ. ವಾಹನದ ಮೇಲೆ ಇಂತಹ ಗುರುತುಗಳು ಮತ್ತು ಬ್ಯಾನರ್ ಇದ್ದುದರಿಂದ ಯಾರಾದರೂ ಗಮನಿಸಿದರೂ ಸಾಮಾನ್ಯ ಪ್ರವಾಸದ ವಾಹನವೆಂದು ಭಾವಿಸುವ ಸಾಧ್ಯತೆ ಇತ್ತು ಎಂಬುದು ತನಿಖೆಯಲ್ಲಿನ ಪ್ರಮುಖ ಅಂಶವಾಗಿದೆ.

ಪ್ರಶ್ನಿಸಿದವರಿಗೆ ಠಾಣಾ ವರದಿ, ವಿಸಿಟಿಂಗ್ ಕಾರ್ಡ್!

ಆರೋಪಿ ತನ್ನ ಯೋಜನೆಯನ್ನ ಇನ್ನಷ್ಟು ನಂಬುವಂತೆ ಮಾಡಲು ಮತ್ತೊಂದು ತಂತ್ರವನ್ನೂ ಬಳಸುತ್ತಿದ್ದ ಎನ್ನಲಾಗಿದೆ. ಕಾರಿನ ಬಗ್ಗೆ ಅಥವಾ ಪ್ರಯಾಣದ ಕುರಿತು ಯಾರಾದರೂ ಪ್ರಶ್ನಿಸಿದರೆ ಅವರಿಗೆ ಠಾಣಾ ವರದಿ ಪೇಪರ್ ಹಾಗೂ ವಿಸಿಟಿಂಗ್ ಕಾರ್ಡ್ ತೋರಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಪತ್ರಿಕೆಯ ಹೆಸರಿನಲ್ಲಿ ಪ್ರಯಾಣಿಸಿದರೆ ಜನರಿಗೆ ಅನುಮಾನ ಬರುವುದಿಲ್ಲ ಎಂಬ ಉದ್ದೇಶದಿಂದ ಈ ರೀತಿಯ ಸಿದ್ಧತೆ ಮಾಡಿಕೊಂಡಿದ್ದ ಎನ್ನಲಾಗಿದೆ.

ಹೀಗೆ ಪತ್ರಕರ್ತರ ಪ್ರವಾಸದ ನೆಪ, ಕಾರಿನ ಮೇಲಿನ 'ಪ್ರೆಸ್' ಗುರುತು, ಬ್ಯಾನರ್ ಹಾಗೂ ದಾಖಲೆಗಳ ಮೂಲಕ ತನ್ನ ಪ್ರಯಾಣಕ್ಕೆ ಒಂದು ನಂಬಿಕಾರ್ಹ ಹಿನ್ನೆಲೆ ಸೃಷ್ಟಿಸಲು ಯತ್ನಿಸಿದ್ದ ಎಂಬ ಆರೋಪವಿದೆ. ಶವಗಳನ್ನ ಸಾಗಿಸುವ ಸಂದರ್ಭದಲ್ಲಿ ಇಂತಹ ವಿಭಿನ್ನ ವಿಧಾನಗಳನ್ನ ಬಳಸಿದ್ದ ವಿಚಾರ ಪ್ರಕರಣದ ತನಿಖೆಯಲ್ಲಿ ಮಹತ್ವ ಪಡೆದುಕೊಂಡಿದೆ.

ಸಕಲೇಶಪುರ, ಮಂಗಳೂರು ಭಾಗಗಳಲ್ಲೂ ಸಂಚಾರ

ಇಂದುಶೇಖರ್ ತನ್ನ ಟೊಯೋಟಾ ಇಟಿಯೋಸ್ ಕಾರಿಗೆ ಇದೇ ರೀತಿಯ ಬ್ಯಾನರ್ ಅಳವಡಿಸಿಕೊಂಡು ಸಕಲೇಶಪುರ ಮತ್ತು ಮಂಗಳೂರು ಭಾಗಗಳಲ್ಲಿ ಸಂಚರಿಸಿದ್ದ ಎಂಬ ಮಾಹಿತಿ ಪತ್ತೆಯಾಗಿದೆ. ಈ ಪ್ರದೇಶಗಳಲ್ಲಿ ಪತ್ರಕರ್ತರ ಪ್ರವಾಸದ ಬ್ಯಾನರ್ ಹಾಕಿಕೊಂಡು ಕಾರು ಓಡಾಡಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಇದೇ ಮಾದರಿಯಲ್ಲಿ ಇತರ ಪ್ರದೇಶಗಳಲ್ಲಿಯೂ ಬ್ಯಾನರ್ ಅಳವಡಿಸಿಕೊಂಡು ಪ್ರಯಾಣಿಸಿದ್ದಾನೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ. ವಿವಿಧ ಭಾಗಗಳಲ್ಲಿ ಒಂದೇ ರೀತಿಯ ವ್ಯವಸ್ಥೆಯೊಂದಿಗೆ ಕಾರು ಸಂಚರಿಸಿರುವ ಸಾಧ್ಯತೆಯನ್ನ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಏಳು ಶವಗಳನ್ನ ಸಾಗಿಸಲು ಈ ತಂತ್ರವನ್ನ ಹೇಗೆ ಬಳಸಿಕೊಂಡಿದ್ದ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಮುಂದುವರಿಕೆ

ರಾಜಾಜಿನಗರದ ಏಳು ಜನರ ಸರಣಿ ಹ*ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿಚಾರಣೆ ಸದ್ಯ ಪೊಲೀಸ್ ಕಸ್ಟಡಿಯಲ್ಲಿ ಮುಂದುವರಿದಿದೆ. ಶವಗಳನ್ನ ಸಾಗಿಸಲು ಬಳಸಿದ್ದ ವಾಹನ, ಬ್ಯಾನರ್ ಸಿದ್ಧಪಡಿಸಿದ ವಿಧಾನ, ಪ್ರಯಾಣಿಸಿದ ಪ್ರದೇಶಗಳು ಹಾಗೂ ಇತರ ವಿವರಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಒಟ್ನಲ್ಲಿ ದಸರಾ ಮತ್ತು ದೀಪಾವಳಿ ಪ್ರವಾಸದ ಹೆಸರಿನಲ್ಲಿ ಪತ್ರಕರ್ತರ ಬ್ಯಾನರ್ ಬಳಸಿಕೊಂಡು ಕಾರಿನಲ್ಲಿ ಶವಗಳನ್ನ ಸಾಗಿಸಿದ್ದ ಎನ್ನಲಾದ ಇಂದುಶೇಖರ್‌ನ ಯೋಜನೆ ಪ್ರಕರಣದ ತನಿಖೆಯಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿದೆ. ಈ ಯೋಜನೆಯ ಹಿಂದಿನ ಸಂಪೂರ್ಣ ವಿವರಗಳು ಹಾಗೂ ವಿವಿಧ ಪ್ರದೇಶಗಳಲ್ಲಿ ಕಾರು ಸಂಚರಿಸಿದ್ದ ಕುರಿತು ಪೊಲೀಸರ ವಿಚಾರಣೆ ಮುಂದುವರಿದಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES