ಕಾರು ಓಡಿಸುವುದು ಕಲಿಸುತ್ತೇನೆ ಎಂದು ಪುಸಲಾಯಿಸಿ ಪಕ್ಕದ ಮನೆಯ ಬಾಲಕನನ್ನು ಕರೆದುಕೊಂಡು ಹೋಗಿ ಕಿಡ್ನಾಪ್ ಮಾಡಿ ಹಾಲೋಬ್ರಿಕ್ಸ್‌ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಯಲಹಂಕದ ವಿನಾಯಕನಗರದಲ್ಲಿ ನಡೆದಿದೆ. ಕ್ರೂರ ವ್ಯಕ್ತಿಯು ಬಾಲಕನ ಮುಖಕ್ಕೆ ಹೇಗೆಂದರೆ ಹಾಗೆ ಹೊಡೆದು ಕೊಲೆ ಮಾಡಿ ಆಂಧ್ರ ಪ್ರದೇಶಕ್ಕೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದನು. ಆದರೆ ಗಾಬರಿಯಲ್ಲಿ ಮಾಡಿದ ಸರಣಿ ಆಕ್ಸಿಡೆಂಟ್‌ನಿಂದ ಕಿರಾತಕ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಏನಿದು ಕಿಡ್ನಾಪ್ ಕೇಸ್, ಸರಣಿ ಆಕ್ಸಿಡೆಂಟ್ ಆಗಿದ್ದು ಹೇಗೆ, ಬಾಲಕನನ್ನ ಕಿಡ್ನಾಪ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ನಾ, ಪೊಲೀಸರ ಕೈಗೆ ಆರೋಪಿ ಸಿಕ್ಕಿದ್ದು ಹೇಗೆ, ಪಕ್ಕದ ಮನೆಯ ಬಾಲಕನ ಕಿಡ್ನಾಪ್ ಮಾಡಿರುವ ಹಿಂದಿನ ಸತ್ಯವೇನು ಎನ್ನುವ ಮಾಹಿತಿ ಇಲ್ಲಿದೆ.
ಬೆಂಗಳೂರು ಯಲಹಂಕದ 13 ವರ್ಷದ ಪ್ರಜ್ವಲ್ ಎಂಬ ಬಾಲಕ ಮೃತ ಹತ್ಯೆಯಾಗಿರುವುದು. ಮೃತ ಪ್ರಜ್ವಲ್ ಪಕ್ಕದ ಮನೆಯ ಭಾಸ್ಕರ್ ರೆಡ್ಡಿಯಿಂದ ಈ ಕೃತ್ಯ ಎಸಗಿದ್ದಾನೆ. ಪ್ರಜ್ವಲ್‌ನನ್ನು ಹಣಕ್ಕಾಗಿ ಕಿಡ್ನಾಪ್ ಮಾಡಿ ಭಾಸ್ಕರ್ ರೆಡ್ಡಿ ಕೊಲೆ ಮಾಡಿದ್ದಾನೆ. ಕೊಲೆ ನಂತರ ರಸ್ತೆಯಲ್ಲಿ ಸರಣಿ ಅಪಘಾತದ ಹೈಡ್ರಾಮಾದಲ್ಲಿ ಪೊಲೀಸರ ಕೈಗೆ ಲಾಕ್ ಆಗಿದ್ದಾನೆ. ಸ್ಥಳೀಯರು ಮತ್ತು ಪೊಲೀಸರ ಸಮಯ ಪ್ರಜ್ಞೆಯಿಂದ ಬಾಲಕನ ಘಟನೆ ಬೆಳಕಿಗೆ ಬಂದಿದೆ. ಯಲಹಂಕದ ವಿನಾಯಕ ನಗರ ನಿವಾಸಿಯಾಗಿರುವ ಭಾಸ್ಕರ್ ರೆಡ್ಡಿ ಮತ್ತು ಮತ್ತು ಪ್ರಜ್ವಲ್. ಮೊನ್ನೆ ಸಂಜೆ ಬಾಲಕನನ್ನ ಕಾರ್‌ನಲ್ಲಿ ಭಾಸ್ಕರ್ ಕರೆದುಕೊಂಡು ಹೋಗಿದ್ದನು.
ಯಲಹಂಕದ ವಿನಾಯಕ ನಗರ ನಿವಾಸಿಯಾಗಿರುವ ಭಾಸ್ಕರ್ ರೆಡ್ಡಿ, ಬಾಲಕ ಪ್ರಜ್ವಲ್‌ನನ್ನು ಮೊನ್ನೆ ಸಂಜೆ ತನ್ನ ಕಾರ್‌ನಲ್ಲಿ ಕರೆದುಕೊಂಡು ಹೋಗಿದ್ದನು. ಮೊದಲು ಗಣಪತಿ ಬಿಡಲು ಪಟಾಕಿ ತರಬೇಕು ಎಂದು ಕರೆದೊಯ್ದಿದಿದ್ದು ಎಂದು ಭಾಸ್ಕರ್ ಪೊಲೀಸರ ಮುಂದೆ ಹೇಳಿದ್ದಾನೆ. ಆದರೆ ಕಾರ್‌ನಲ್ಲಿ ಪ್ರಜ್ವಲ್‌ನನ್ನು ಇಟ್ಟುಕೊಂಡು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಬಾಲಕನಿಂದಲೂ ವಿಡಿಯೋ ಮಾಡಿಸಿ ಪೋಷಕರಿಗೆ ಬೆದರಿಕೆ ಹಾಕಿದ್ದು ಅಲ್ಲದೇ ಕಾರ್‌ನಲ್ಲೇ ಬಾಲಕನ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ್ದನು. ಬಾಲಕನಿಗೆ ಮನಬಂದಂತೆ ಹಿಂಸೆ ಕೂಡ ಬಾಸ್ಕರ್ ರೆಡ್ಡಿ ನೀಡಿದ್ದನು.
ಈ ಎಲ್ಲ ಮಾಡಿದ ಬಳಿಕ ಬಾಸ್ಕರ್ ರೆಡ್ಡಿ ಇನ್ನಷ್ಟು ಕ್ರೂರಿಯಾಗಿ ಹಾಲೋಬ್ರಿಕ್ಸ್‌ನಿಂದ ಬಾಲಕ ಪ್ರಜ್ವಲ್‌ಗೆ ಹೊಡೆದು..ಹೊಡೆದು ಕೊಲೆ ಮಾಡಿದ್ದಾನೆ. ಕೊಲೆ ನಂತರ ಮೃತದೇಹ ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ಎಸ್ಕೇಪ್ ಆಗಲು ಮುಂದಾಗಿದ್ದನು. ಆಂಧ್ರ ಪ್ರದೇಶದ ಕಡೆಗೆ ಎಸ್ಕೇಪ್ ಆಗಲು ಭಾಸ್ಕರ್ ರೆಡ್ಡಿ ಪ್ಲಾನ್ ಮಾಡಿದ್ದನು. ಈ ವೇಳೆ ಗಾಬರಿಯಲ್ಲಿ ಗೋಡೆಗೆ ಕಾರ್ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಬಳ್ಳಾರಿ ಸರ್ವೀಸ್ ರಸ್ತೆಯಲ್ಲಿ ಸರಣಿ ಅಪಘಾತ ಮಾಡಿದ್ದನು. ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದು ಸ್ಥಳೀಯರ ಕೈಗೆ ಭಾಸ್ಕರ್ ರೆಡ್ಡಿ ಸಿಕ್ಕಿಬಿದ್ದಿದ್ದನು.
ಈ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಚಿಕ್ಕಜಾಲ ಪೊಲೀಸರು ಕಾರು ಪರಿಶೀಲನೆ ಮಾಡುವಾಗ ಡಿಕ್ಕಿ ಓಪನ್ ಮಾಡಿದ್ದರು. ಡಿಕ್ಕಿಯಲ್ಲಿ ಬಾಲಕನ ಶವ ನೋಡಿ ಪೊಲೀಸರು ಫುಲ್ ಶಾಕ್ ಆಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಪೊಲೀಸರು, ಭಾಸ್ಕರ್ ರೆಡ್ಡಿಯಿಂದ ಸತ್ಯ ಬಾಯಿ ಬಿಡಿಸಲು ಮುಂದಾಗಿದ್ದಾರೆ. ಈ ವೇಳೆ ಕೊಲೆಯ ದಾರಿ ತಪ್ಪಿಸಲು ಅಪಘಾತದ ನಾಟಕ ಆಡಿದ್ದನು. ದಾರಿಯಲ್ಲಿ ಬರುವಾಗ ಬಾಲಕ ಕಾರಿಗೆ ಅಡ್ಡ ಸಿಕ್ಕಿ ಮೃತಪಟ್ಟಿದ್ದಾನೆ ಎಂದು ಹೇಳಿದ್ದನು.
ತನ್ನ ಗೆಳೆಯ ಹೇಳಿದಂತೆ ಆಂಧ್ರಪ್ರದೇಶದ ಕಡೆ ಮೃತದೇಹ ಜೊತೆ ಹೋಗುತ್ತಿದ್ದೆ ಎಂದು ಪೊಲೀಸರ ವಿಚಾರಣೆ ವೇಳೆ ಆರೋಪಿ ಭಾಸ್ಕರ್ ರೆಡ್ಡಿ ಕಥೆ ಕಟ್ಟಿದ್ದನು. ಆದರೆ ಪ್ರಾಥಮಿಕ ತನಿಖೆಯಲ್ಲಿ ಕೊಲೆ ಮಾಡಿರೋದು ಪತ್ತೆ ಆಗಿದೆ. ಹಾಲೋ ಬ್ರಿಕ್‌ನಿಂದ ಹೊಡೆದು ಗುರುತೇ ಸಿಗದಂತೆ ಬಾಲಕನ ಜೀವ ತೆಗೆದಿದ್ದಾನೆ. ಸದ್ಯ ಆರೋಪಿ ಭಾಸ್ಕರ್ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದು ಇನ್ನಷ್ಟು ಹೆಚ್ಚಿನ ವಿಚಾರಣೆ ಮಾಡುತ್ತಿದ್ದಾರೆ.
ಆರೋಪಿ ಬಾಸ್ಕರ್ ರೆಡ್ಡಿ ಖಾಸಗಿ ಕಂಪನಿಯಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದನು. ಭಾಸ್ಕರ್ ರೆಡ್ಡಿ ಹಾಗೂ ಪ್ರಜ್ವಲ್ ಕುಟುಂಬಸ್ಥರು ಇಬ್ಬರೂ ಸ್ಥಿತಿವಂತರು. ಅಕ್ಕಪಕ್ಕದ ಮನೆಯವರಾದ ಹಿನ್ನೆಲೆ ಇಬ್ಬರ ಮಧ್ಯೆ ಒಳ್ಳೆ ಸ್ನೇಹ ಕೂಡ ಇದೆ. ಆಗಾಗ ಒಬ್ಬರ ಮನೆಗೆ ಒಬ್ಬರು ಹೋಗಿ ಬರುವಷ್ಟು ಸ್ನೇಹ ಇದೆ. ರಿಯಲ್ ಎಸ್ಟೇಟ್, ಫೈನಾನ್ಸ್ ಕೆಲಸ ಮಾಡ್ತಿದ್ದ ಬಾಲಕನ ತಂದೆ ಮನೋಹರ್ ಅವರಿಗೆ ಆರೋಪಿ ಭಾಸ್ಕರ್ ರೆಡ್ಡಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಹಣ ತಂದು ಕೊಡದಿದ್ದರೇ ಮಗನ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ. ಈ ವಿಷಯವನ್ನು ಬಾಲಕನ ತಂದೆ ಮನೋಹರ್ ಅವರು, ಭಾಸ್ಕರ್ ರೆಡ್ಡಿ ತಂದೆಯ ಮುಂದೆ ಹೇಳಿದ್ದಾರೆ.
ಇದರಿಂದ ಗಾಬರಿಗೊಂಡ ಭಾಸ್ಕರ್ ರೆಡ್ಡಿ ತಂದೆ ಏನು ಮಾಡುವುದು ಗೊತ್ತಾಗಿಲ್ಲ. ಹೀಗಾಗಿ ಬಾಲಕನ ತಂದೆ ಮತ್ತು ಆರೋಪಿ ತಂದೆ ಇಬ್ಬರೂ ಸೇರಿ ಹುಡುಕಾಟ ನಡೆಸಿದ್ದಾರೆ. ಆರೋಪಿ ಹಾಗೂ ಬಾಲಕನಿಗಾಗಿ ಹುಡುಕಾಟ ಮಾಡುತ್ತಿದ್ದರು. ಕಾರಿನ ಮೇಲೆ ಬಾಲಕನಿಗೆ ಇಂಟ್ರೆಸ್ಟ್ ಇರುವ ಕಾರಣ ಕಾರು ಓಡಿಸೋಕೆ ಕೊಡ್ತೀನಿ ಅಂತಾ ಕರೆದಿದ್ದ ಆರೋಪಿ. ಕಾರು ಓಡಿಸೋದು, ಕಾರುಗಳು ಅಂದ್ರೆ ಇಂಟ್ರೆಸ್ಟ್ ಹೊಂದಿದ್ದ ಬಾಲಕ ಅವನ ಕರೆದಾಗ ಹೋಗಿದ್ದಾನೆ. ಪಕ್ಕದ ಮನೆಯವ ಹಿನ್ನೆಲೆ ಬಾಲಕನ ಬಗ್ಗೆ ಆರೋಪಿ ಎಲ್ಲ ಮಾಹಿತಿ ತಿಳಿದುಕೊಂಡಿದ್ದನು.
ಕಾರು ಕೊಡ್ತೀನಿ ಬಾ ಎಂದು ಬಾಲಕನನ್ನ ಪುಸಲಾಯಿಸಿ ಆರೋಪಿ ಭಾಸ್ಕರ್ ಕರೆದೊಯ್ದಿದ್ದನು. ಕುಡಿದ ಮತ್ತಿನಲ್ಲಿ ಬಾಲಕನನ್ನ ಕರೆದೊಯ್ದಿದ್ದನು. ನಂತರ ವಿಡಿಯೋ ಮಾಡಿ ಬಾಲಕನ ಪೋಷಕರಿಗೆ ಬೆದರಿಕೆ ಹಾಕಿದ್ದನು. ಲಕ್ಷಾಂತರ ರೂಪಾಯಿ ಹಣ ಕೊಡಿ ಇಲ್ಲ, ಸಾಯಿಸೋದಾಗಿ ಬೆದರಿಕೆ ಹಾಕಿದ್ದನು. ವಿಚಾರ ಗೊತ್ತಾದ ಕೂಡಲೇ ಆರೋಪಿ ತಂದೆಗೆ ಮಾಹಿತಿ ನೀಡಿದ್ದ ಬಾಲಕನ ತಂದೆ. ಇಬ್ಬರೂ ಆರೋಪಿಗೆ ಕರೆ ಮಾಡಿ ಬೈದಿದ್ದರು. ವಾಪಸ್ ಬರುವಂತೆ ಹೇಳಿದ್ದರು. ಅಲ್ಲದೇ ಪೊಲೀಸ್ರಿಗೆ ಮಾಹಿತಿ ನೀಡಿ ಆರೋಪಿಗಾಗಿ ಇಬ್ಬರಿಂದಲೂ ಹುಡುಕಾಟ ಮಾಡುತ್ತಿದ್ದರು.
ಅಷ್ಟರಲ್ಲಿ ಆಗಲೇ ಬಾಲಕನ ಕೊಲೆ ಮಾಡಿ ಆರೋಪಿ ಭಾಸ್ಕರ್ ರೆಡ್ಡಿ ಪರಾರಿಯಾಗಲು ಮುಂದಾಗಿದ್ದನು. ಗಾಬರಿಯಲ್ಲಿ ಆ್ಯಕ್ಸಿಡೆಂಟ್ ಮಾಡಿ ಪೊಲೀಸರಿಗೆ ತಾನೇ ಸಿಕ್ಕಿಕೊಂಡಿದ್ದಾನೆ. ಸದ್ಯ ಆರೋಪಿಯನ್ನ ಪೊಲೀಸರು ಹೆಚ್ಚಿನ ವಿಚಾರಣೆ ಮಾಡುತ್ತಿದ್ದಾರೆ. ಕಿಡ್ನಾಪ್‌ಗೆ ಅಸಲಿ ಕಾರಣ ಏನು?, ಹಣದ ವಿಷಯ ಅಲ್ಲದೇ ಬೇರೆ ಏನಾದರೂ ಕಾರಣ ಇದೆಯಾ ಅನ್ನೋ ತನಿಖೆಯನ್ನು ಪೊಲೀಸರು ಮಾಡುತ್ತಿದ್ದಾರೆ. ಚಿಕ್ಕಜಾಲ ಪೊಲೀಸರಿಂದ ತನಿಖೆ ಮುಂದುವರೆದಿದೆ.