• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ರಾಜ್ಯ ರಾಜಧಾನಿಯಲ್ಲಿಂದು ಬೆಂಗಳೂರು–ಗೋವಾ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

ರಾಜ್ಯ ರಾಜಧಾನಿಯಲ್ಲಿಂದು ಬೆಂಗಳೂರು–ಗೋವಾ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

ಬೆಂಗಳೂರು - ಗೋವಾ ನಡುವೆ ವಂದೇ ಭಾರತ್‌ ರೈಲು ಸಂಚಾರಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

Written ByYashaswini V
Published: Nov 13, 2026, 08:48 IST|Updated: Nov 13, 2026, 11:15 IST
joinshare
ರಾಜ್ಯ ರಾಜಧಾನಿಯಲ್ಲಿಂದು ಬೆಂಗಳೂರು–ಗೋವಾ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರಿನ ಜೀವನಾಡಿ ನಮ್ಮ ಮೆಟ್ರೋದ ಪಿಂಕ್‌ ಲೈನ್‌ ಸಂಚಾರದ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಇಂದು ನಗರಕ್ಕೆ ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಬೆಂಗಳೂರು – ಗೋವಾ ನಡುವೆ ಸಂಚರಿಸಲಿರುವ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೂ ಚಾಲನೆ ನೀಡಲಿದ್ದಾರೆ.

ಬೆಂಗಳೂರು – ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್: 
ಇಂದು (ನ. 13) ಬೆಂಗಳೂರಿನ SMVT ರೈಲು ನಿಲ್ದಾಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬೆಂಗಳೂರು–ಗೋವಾ ನಡುವೆ ಸಂಚರಿಸಲಿರುವ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಈ ವಿಶೇಷ ರೈಲಿಗೆ ಚಾಲನೆ ನೀಡಲಿದ್ದಾರೆ.

ಮಂಗಳೂರು ಜಂಕ್ಷನ್‌ನಿಂದಲೂ ಸಿಗಲಿದೆ ಚಾಲನೆ:
ಇಂದು ಬೆಂಗಳೂರು – ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಿಂದ ಚಾಲನೆ ನೀಡಿದರೆ, ಮರು ಮಾರ್ಗದಲ್ಲಿ ಈ ವಿಶೇಷ ರೈಲಿಗೆ ಮಂಗಳೂರು ಜಂಕ್ಷನ್‌ನಿಂದಲೂ ಮತ್ತೊಂದು ಉದ್ಘಾಟನಾ ಸಮಾರಂಭ ನಡೆಯಲಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ನವೆಂಬರ್ 15ರಿಂದ ಸಾರ್ವಜನಿಕರಿಗಾಗಿ ನಿಯಮಿತ ರೈಲು ಸಂಚಾರ ಆರಂಭಕ್ಕೆ ಮಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ.

ಭಾರತೀಯ ರೈಲ್ವೆಯ ಯಶವಂತಪುರದಿಂದ ಗೋವಾದ ಮಡಗಾಂವ್‌ವರೆಗೆ ರೈಲು ಸಂಚಾರ, ಬೆಂಗಳೂರು – ಗೋವಾ ನಡುವೆ ನೇರ ರೈಲು ಸಂಪರ್ಕ ಕಲ್ಪಿಸಿದ ವಂದೇ ಭಾರತ್ ಒಟ್ಟು 13 ಗಂಟೆ 20 ನಿಮಿಷಗಳ ಪ್ರಯಾಣದ ಅವಧಿಯಲ್ಲಿ ಸುಮಾರು 670 ಕಿಲೋಮೀಟರ್ ದೂರ ಕ್ರಮಿಸಲಿದೆ.

ರೈಲಿನಲ್ಲಿದೆ ಒಟ್ಟು 16 ಬೋಗಿಗಳ ವ್ಯವಸ್ಥೆ: 
ಬೆಂಗಳೂರು – ಗೋವಾ ವಂದೇ ಭಾರತ್ ರೈಲು 16 ಬೋಗಿಗಳನ್ನು ಒಳಗೊಂಡಿದ್ದು ಸುಮಾರು 1,128 ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಇರಲಿದೆ.

ಯಶವಂತಪುರದಿಂದ ಮಡಗಾಂವ್‌ವರೆಗೆ 12 ಮಧ್ಯಂತರ ನಿಲುಗಡೆಗಳು:
ಯಶವಂತಪುರದಿಂದ ಮಡಗಾಂವ್‌ವರೆಗೆ ಸಂಚರಿಸಲಿರುವ ರೈಲು ಶ್ರವಣಬೆಳಗೊಳ, ಹಾಸನ, ಸಕಲೇಶಪುರದಲ್ಲಿ ರೈಲಿಗೆ ನಿಲುಗಡೆ ನೀಡಲಿದೆ. ಇದಲ್ಲದೆ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಮಂಗಳೂರು ಜಂಕ್ಷನ್‌ನಲ್ಲಿಯೂ ಈ ರೈಲು ಸ್ಟಾಪ್‌ ನೀಡಲಿದ್ದು, ಉಡುಪಿ, ಕುಂದಾಪುರ, ಬೈಂದೂರು, ಮುರ್ಡೇಶ್ವರಕ್ಕೆ ತೆರಳುವವರಿಗೂ ಅನುಕೂಲವಾಗಲಿದೆ. ಗೋಕರ್ಣ ರೋಡ್, ಕಾರವಾರ ಮಾರ್ಗವಾಗಿ ಈ ರೈಲು ಗೋವಾ ತಲುಪಲಿದೆ.

ಬೆಂಗಳೂರು – ಗೋವಾ ವಂದೇ ಭಾರತ್ ರೈಲು ಸಮಯ:
ಬೆಂಗಳೂರು – ಗೋವಾ ವಂದೇ ಭಾರತ್ ಯಶವಂತಪುರದಿಂದ ಬೆಳಗ್ಗೆ 7:35ಕ್ಕೆ ರೈಲು ಪ್ರಯಾಣ ಆರಂಭಿಸಲಿದ್ದು, ರಾತ್ರಿ 8:55ಕ್ಕೆ ಗೋವಾದ ಮಡಗಾಂವ್ ತಲುಪಲಿದೆ. ಮಡಗಾಂವ್‌ನಿಂದ ಬೆಳಗ್ಗೆ 8:20ಕ್ಕೆ ಬೆಂಗಳೂರಿಗೆ ಮರು ಪ್ರಯಾಣ ಆರಂಭಿಸಲಿರುವ ರೈಲು ರಾತ್ರಿ 9:15ಕ್ಕೆ ಯಶವಂತಪುರ ರೈಲು ನಿಲ್ದಾಣವನ್ನು ತಲುಪಲಿದೆ.

ವಾರದಲ್ಲಿ ಆರು ದಿನ ಸಂಚರಿಸಲಿರುವ ಬೆಂಗಳೂರು - ಗೋವಾ ವಂದೇ ಭಾರತ್‌ ರೈಲು:
ವಾರದಲ್ಲಿ ಆರು ದಿನ ಸಂಚರಿಸಲಿರುವ ವಂದೇ ಭಾರತ್ ಯಶವಂತಪುರದಿಂದ ಹೊರಡುವ ರೈಲಿಗೆ ಬುಧವಾರ ವಾರದ ರಜೆ ಇರಲಿದ್ದು, ಮಡಗಾಂವ್‌ನಿಂದ ಹೊರಡುವ ರೈಲಿಗೆ ಗುರುವಾರ ವಾರದ ರಜೆ ಇರಲಿದೆ.

ಬೆಂಗಳೂರು – ಗೋವಾ ವಂದೇ ಭಾರತ್ ರೈಲು ಟಿಕೆಟ್ ದರ:
* ಬೆಂಗಳೂರು–ಗೋವಾ ವಂದೇ ಭಾರತ್ AC ಚೇರ್ ಕಾರ್ ಟಿಕೆಟ್ ದರ -  ₹2,200
* ಎಕ್ಸಿಕ್ಯೂಟಿವ್ ಚೇರ್ ಕಾರ್ ಟಿಕೆಟ್ ದರ -  ₹3,865 ಇರಲಿದೆ.

ಬೆಂಗಳೂರು – ಗೋವಾ ವಂದೇ ಭಾರತ್ ರೈಲಿನ ವಿಶೇಷತೆಗಳು:
* ಸೆಮಿ ಹೈ ಸ್ಪೀಡ್ ತಂತ್ರಜ್ಞಾನದ ವಂದೇ ಭಾರತ್ ರೈಲು
* ಆರಾಮದಾಯಕ ಆಸನ ವ್ಯವಸ್ಥೆ, ಆಧುನಿಕ ಒಳಾಂಗಣ ವಿನ್ಯಾಸ
* ಆಟೋಮ್ಯಾಟಿಕ್ ಬಾಗಿಲುಗಳ ಸೌಲಭ್ಯ 
* ಆಧುನಿಕ ಸುರಕ್ಷತಾ ವ್ಯವಸ್ಥೆಗಳೊಂದಿಗೆ ರೈಲು ಸಂಚಾರ
* ಪಶ್ಚಿಮ ಘಟ್ಟದ ಸುಂದರ ಪ್ರಕೃತಿ ಸೌಂದರ್ಯದ ನಡುವೆ ರೈಲು ಪ್ರಯಾಣ
* ಸಕಲೇಶಪುರ–ಸುಬ್ರಹ್ಮಣ್ಯ ಘಾಟ್ ಮಾರ್ಗದಲ್ಲಿ ವೇಗದ ಮಿತಿ
* ಈ ಮಾರ್ಗದಲ್ಲಿ ಗರಿಷ್ಠ ಕಾರ್ಯಾಚರಣಾ ವೇಗ ಗಂಟೆಗೆ 54 ಕಿ.ಮೀ.
* ಘಾಟ್ ಪ್ರದೇಶದಲ್ಲಿ ಗಂಟೆಗೆ 30 ಕಿ.ಮೀ.ಗಿಂತ ಕಡಿಮೆ ವೇಗದಲ್ಲಿ ಸಂಚಾರ

ಸಾರ್ವಜನಿಕರಿಗೆ ಆಗುವ ಅನುಕೂಲಗಳು: 
* ಬೆಂಗಳೂರು–ಗೋವಾ ಪ್ರಯಾಣಿಕರಿಗೆ ನೇರ ರೈಲು ಸಂಪರ್ಕ
* ಕರಾವಳಿ ಕರ್ನಾಟಕದ ಜನರಿಗೆ ಬೆಂಗಳೂರಿಗೆ ಪ್ರಯಾಣಿಸಲು ಹೊಸ ಆಯ್ಕೆ
* ಮಂಗಳೂರು, ಉಡುಪಿ, ಕುಂದಾಪುರ ಭಾಗದ ಜನರಿಗೆ ಅನುಕೂಲ
* ಮುರ್ಡೇಶ್ವರ, ಗೋಕರ್ಣ, ಕಾರವಾರ ಪ್ರವಾಸಿಗರಿಗೆ ಅನುಕೂಲ
* ಮೂಕಾಂಬಿಕಾ ಮತ್ತು ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ತೆರಳುವ ಭಕ್ತರಿಗೆ ಅನುಕೂಲ
* ಕರಾವಳಿ ಪ್ರವಾಸೋದ್ಯಮಕ್ಕೆ ವಂದೇ ಭಾರತ್ ರೈಲಿನಿಂದ ಹೊಸ ಉತ್ತೇಜನ
* ಬೆಂಗಳೂರು–ಕರಾವಳಿ ನಡುವಿನ ವ್ಯಾಪಾರ, ಶಿಕ್ಷಣ ಮತ್ತು ಪ್ರವಾಸೋದ್ಯಮ ಸಂಪರ್ಕಕ್ಕೆ ಬಲ. 
 

Add Zee News as a Preferred Source
TAGS:
Indian Railways
Narendra Modi
Kannada News