• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /4 ವರ್ಷದ ಲವ್‌ ಅನುಮಾನದಲ್ಲಿ ಅಂತ್ಯ : ಲಾಡ್ಜ್‌ನಲ್ಲಿ ಕೇರಳ ಸುಂದರಿಯ ಬರ್ಬರ ಹ*ತ್ಯೆ.. ಒಂಟಿ ರೂಮ್‌ನಲ್ಲಿ ಆಗಿದ್ದೇನು..?

4 ವರ್ಷದ ಲವ್‌ ಅನುಮಾನದಲ್ಲಿ ಅಂತ್ಯ : ಲಾಡ್ಜ್‌ನಲ್ಲಿ ಕೇರಳ ಸುಂದರಿಯ ಬರ್ಬರ ಹ*ತ್ಯೆ.. ಒಂಟಿ ರೂಮ್‌ನಲ್ಲಿ ಆಗಿದ್ದೇನು..?

ನಾಲ್ಕು ವರ್ಷಗಳ ಪ್ರೇಮ ಅನುಮಾನದ ಸುಳಿಗೆ ಸಿಲುಕಿ ದುರಂತ ಅಂತ್ಯ ಕಂಡಿದೆ. ಕೇರಳದಿಂದ ಬೆಂಗಳೂರಿಗೆ ಬಂದಿದ್ದ ಗಂಗಾ (22) ತನ್ನ ಪ್ರಿಯತಮ ಗೋಕುಲ್ ಕೃಷ್ಣ (23) ನಿಂದ ಕಾಟನ್ ಪೇಟೆಯ ಲಾಡ್ಜ್‌ನಲ್ಲಿ ಹತ್ಯೆಗೀಡಾಗಿದ್ದಾಳೆ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written ByKrishna NK
Published: Nov 27, 2026, 16:44 IST|Updated: Nov 27, 2026, 16:53 IST
joinshare
4 ವರ್ಷದ ಲವ್‌ ಅನುಮಾನದಲ್ಲಿ ಅಂತ್ಯ : ಲಾಡ್ಜ್‌ನಲ್ಲಿ ಕೇರಳ ಸುಂದರಿಯ ಬರ್ಬರ ಹ*ತ್ಯೆ.. ಒಂಟಿ ರೂಮ್‌ನಲ್ಲಿ ಆಗಿದ್ದೇನು..?
Image Credit: kerala girl murder case

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಈ ಸ್ಟಾರ್‌ ನಟಿ ಅಂದು ಟಾಯ್ಲೆಟ್ ಕ್ಲೀನರ್‌.. ಇಂದು 170 ಕೋಟಿ ರೂಪಾಯಿ ಒಡತಿ!  ಒಂದೇ ಸಿನಿಮಾದಿಂದ ಬದುಕೇ ಚೇಂಜ್‌

ಈ ಸ್ಟಾರ್‌ ನಟಿ ಅಂದು ಟಾಯ್ಲೆಟ್ ಕ್ಲೀನರ್‌.. ಇಂದು 170 ಕೋಟಿ ರೂಪಾಯಿ ಒಡತಿ! ಒಂದೇ ಸಿನಿಮಾದಿಂದ ಬದುಕೇ ಚೇಂಜ್‌

2

ಮೆಟ್ರೋ ನಿಲ್ದಾಣಗಳಲ್ಲಿ ಆತ್ಮಹತ್ಯೆ ತಡೆಯಲು ಏನೆಲ್ಲಾ ಕ್ರಮ ಕೈಗೊಳ್ಳಬಹುದು? ಪ್ಲಾಟ್‌ಫಾರಂ ಡೋರ್ ಹೊರತುಪಡಿಸಿ ಇರುವ ಪರ್ಯಾಯಗಳೇನು?

3

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್‌ಫಾರಂ ಸ್ಕ್ರೀನ್ ಡೋರ್ ಅಳವಡಿಕೆಗೆ ತೇಜಸ್ವಿ ಸೂರ್ಯ ಆಗ್ರಹ!

4

ವಿಜಯ್ ಸೇತುಪತಿ ಕಾಲರ್ ಹಿಡಿದ ರಾಜ್ ಬಿ ಶೆಟ್ಟಿ

5

ಇಂದಿನಿಂದ ನಂದಿನಿ ಮೊಸರು ದರ ಇಳಿಕೆ; ಹೊಸ ಬೆಲೆ ಎಷ್ಟು ಗೊತ್ತಾ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ಅವರಿಬ್ಬರದ್ದು ನಾಲ್ಕು ವರ್ಷದ ಲವ್. ಸಿಲಿಕಾನ್ ಸಿಟಿಯಲ್ಲಿ ಕೈಕೈ ಹಿಡಿದು ಸುತ್ತಾಡಿದ್ದ ಜೋಡಿ ಅದು. ಆದರೆ ಪ್ರಿಯತಮನಿಗೆ ಪ್ರಿಯತಮೆ ಮೇಲೆ ಅದೊಂದು ಕಾರಣಕ್ಕೆ ಅನುಮಾನ ಶುರುವಾಗಿತ್ತು. ಈ ಅನುಮಾನವೇ ಈಗ ನೆತ್ತರು ಹರಿಸಿದೆ. ಚಿನ್ನ, ರನ್ನ, ಮನದರಸಿ ಎನ್ನುತ್ತಿದ್ದವನು ಈಗ ಕೊಲೆಗಾರನಾಗಿಬಿಟ್ಟಿದ್ದಾನೆ. ಲಾಡ್ಜ್ ನಲ್ಲಿ ಪ್ರೇಯಸಿಯ ಹೆಣ ಬೀಳಿಸಿದ್ದಾನೆ. ಹಾಗಾದ್ರೆ ಏನಿದೂ ಕೇರಳ ಟೂ ಬೆಂಗಳೂರು‌ ಮರ್ಡರ್ ಸ್ಟೋರಿ ಅಂತೀರಾ ಹೇಳ್ತಿವಿ ನೋಡಿ..

ಈ ಫೋಟೋದಲ್ಲಿ ಕಾಣ್ತಿರುವ ಈಕೆಯ ಹೆಸರು ಗಂಗಾ ಅಂತಾ. ವಯಸ್ಸು 22 ವರ್ಷ. ಯಾವ ಹೀರೋಯಿನ್‌ಗೂ ಕಮ್ಮಿ ಇಲ್ಲಾ‌ ಕಣ್ರೀ. ಅಷ್ಟು ಮುದ್ದಾಗಿದ್ದಾಳೆ.. ಇನ್ನೂ ಹೀಗೆ ಏನೂ ಅರಿಯದವನಂತೆ ಕಾಣುತ್ತಿರುವ ಈತನ ಹೆಸರು ಗೋಕುಲ್ ಕೃಷ್ಣ ಅಂತಾ. ಈತನಿಗೂ ಬರೀ 23 ವರ್ಷ. ಇಬ್ಬರು ಸಹ ನೆರೆಯ ಕೇರಳದವರು. ನೆಲಮಂಗಲದ ಖಾಸಗಿ ಕಾಲೇಜಿನಲ್ಲಿ ನರ್ಸಿಂಗ್ ಓದುತ್ತಿದ್ದಾಗ ಇಬ್ಬರಿಗೂ ಪರಿಚಯವಾಗಿ ಪ್ರೇಮಕ್ಕೆ ತಿರುಗಿತ್ತು. ಆದರೆ ಈಗ ಅನುಮಾನ ಎಂಬುದು ಈ ಗಂಗಾಳ ಜೀವವನ್ನೇ ತೆಗೆದುಬಿಟ್ಟಿದ್ದೆ.

ಹೌದು, ನಾಲ್ಕು ವರ್ಷದಿಂದ ಜೂನಿಯರ್ ಗಂಗಾಳನ್ನು ಲವ್ ಮಾಡ್ತಿದ್ದ ಗೋಕುಲ್‌ಗೆ ಆಕೆ ಬೇರೆ ಯುವಕನ ಜೊತೆ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಶುರುವಾಗಿತ್ತು. ಇದೇ ವಿಷಯಕ್ಕೆ ಆಗಾಗ ಇಬ್ಬರ ನಡುವೆ ಗಲಾಟೆ ಆಗ್ತಿತ್ತು. ಇಷ್ಟದ್ರೂ ಗಂಗಾ ಕೆಲಸ ಹುಡುಕಬೇಕು ಅಂತಾ ಲವರ್ ಗೋಕುಲ್ ಜೊತೆ ಬೆಂಗಳೂರಿಗೆ ಬಂದಿದ್ಲು. ಹೀಗೆ ಬಂದವರು ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರೆಜೆನ್ಸಿ ಲಾಡ್ಜ್ ನಲ್ಲಿ ನಿನ್ನೆ ರೂಮ್ ಬಾಡಿಗೆ ಪಡೆದಿದ್ರು. ಗಂಗಾ ಮೇಲೆ ಅನುಮಾನ ಹೊಂದಿದ್ದ ಈ ಗೋಕುಲ್, ಪಕ್ಕಾ ಪ್ಲಾನ್ ಮಾಡಿ ಮೊದಲೇ ಚಾಕು ಖರೀದಿ ಮಾಡಿದ್ದ. ರಾತ್ರಿಯೆಲ್ಲಾ ಗಂಗಾ ಜೊತೆಗೆ ಚೆನ್ನಾಗಿಯೇ ಇದ್ದ. ಆದರೆ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಮತ್ತೆ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ನೀನು ಬೇರೆಯವರ ಜೊತೆ ಸಂಬಂಧ ಹೊಂದಿದ್ದೀಯಾ ಎಂದು ರೊಚ್ಚಿಗೆದ್ದು ತಂದಿದ್ದ ಚಾಕುವಿನಿಂದ ಗೋಕುಲ್ ಗಂಗಾಳ ಹೊಟ್ಟೆಗೆ ಇರಿದಿದ್ದಾನೆ. ಹೀಗಾಗಿ ತೀವ್ರ ರಕ್ತಸ್ರಾವದಿಂದ ಗಂಗಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಇನ್ನೂ ಘಟನಾ ಸ್ಥಳಕ್ಕೆ ಬಂದ ಕಾಟನ್ ಪೇಟೆ ಪೊಲೀಸರು ರಕ್ತದ ಮಡುವಿನಲ್ಲಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಆರೋಪಿ ಗೋಕುಲ್ ಕೃಷ್ಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಬೇರೆ ಯುವಕನ ಜೊತೆ ಸಂಬಂಧವಿದ್ದ ಕಾರಣ ಕೊಲೆ‌ ಮಾಡಿದ್ದಾಗಿ ಆರೋಪಿ ಗೋಕುಲ್ ಒಪ್ಪಿಕೊಂಡಿದ್ದಾನೆ. ಒಟ್ಟಿನಲ್ಲಿ ಮುದ್ದಾಗಿದ್ದ ಜೋಡಿ ನಡುವೆ ಅನುಮಾನವೆಂಬ ಪೆಡಂಭೂತ ವಕ್ಕರಿಸಿ ಇಡೀ ಜೀವನವೇ ಹಾಳಾಗಿದ್ದು ದುರಂತವೇ ಸರಿ.

Add Zee News as a Preferred Source
TAGS:
Kannada News