ನಂದಿನಿ ಹಾಲಿನ ಪುಡಿ ಕಲಬೆರಕೆ ಪ್ರಕರಣ; ಮನ್ಮುಲ್ ಪ್ರಭಾವಿ ಆರೋಪಿ ಮಾಜಿ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ ಬಂಧನ.!
ಒಂದೆಡೆ 100 ಕೋಟಿ ಅವ್ಯವಹಾರದ ಆರೋಪ ಕೇಳಿ ಬರ್ತಿದ್ರೆ, ಮತ್ತೊಂದೆಡೆ ನೂರು ಕೋಟಿಯಲ್ಲ 3 ಕೋಟಿ ಅನ್ನೋ ಎಂದು ಮನ್ಮುಲ್ ಆಡಳಿತ ಮಂಡಳಿ ಹೇಳ್ತಿದ್ರೆ ಇತ್ತ ಪ್ರಕರಣವನ್ನು ಸಿಬಿಐ ಅಥವಾ ಇಡಿ ತನಿಖೆಗೆ ವಹಿಸುವಂತೆ ದೋಸ್ತಿ ನಾಯಕರು ಆಗ್ರಹಿಸ್ತಿದ್ದಾರೆ. ಆದ್ರೆ ಇದೀಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ.
ಮಂಡ್ಯ ಮನ್ಮುಲ್ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇಷ್ಟು ದಿನ ಪ್ರಭಾವಿ ಆರೋಪಿ ಮನ್ಮಲ್ ನ ಮಾಜಿ ಅಧ್ಯಕ್ಷನ ವಿಚಾರಣೆ ನಡೆಸುತ್ತಿದ್ದ ಪೊಲೀಸರು ಆರೋಪ ಸಾಭಿತಾದ ಹಿನ್ನೆಲೆ ಇದೀಗ ಬಂಧಿಸಿದ್ದಾರೆ. ಮಂಡ್ಯದಲ್ಲಿ ಸದ್ದು ಮಾಡ್ತಿರೋ ಮನ್ಮುಲ್ ಹಾಲಿನ ಪುಡಿ ಕಲಬೆರಕೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ತಿದೆ. ಒಂದೆಡೆ 100 ಕೋಟಿ ಅವ್ಯವಹಾರದ ಆರೋಪ ಕೇಳಿ ಬರ್ತಿದ್ರೆ, ಮತ್ತೊಂದೆಡೆ ನೂರು ಕೋಟಿಯಲ್ಲ 3 ಕೋಟಿ ಅನ್ನೋ ಎಂದು ಮನ್ಮುಲ್ ಆಡಳಿತ ಮಂಡಳಿ ಹೇಳ್ತಿದ್ರೆ ಇತ್ತ ಪ್ರಕರಣವನ್ನು ಸಿಬಿಐ ಅಥವಾ ಇಡಿ ತನಿಖೆಗೆ ವಹಿಸುವಂತೆ ದೋಸ್ತಿ ನಾಯಕರು ಆಗ್ರಹಿಸ್ತಿದ್ದಾರೆ. ಆದ್ರೆ ಇದೀಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ.
ನಂದಿನಿ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐವರ ಬಂಧನವಾಗಿದೆ. ಇಷ್ಟು ದಿನ ಮಾಜಿ ಅಧ್ಯಕ್ಷ ಯು.ಸಿ. ಶಿವಕುಮಾರ್ @ ಉಮ್ಮಡಹಳ್ಳಿ ಶಿವಪ್ಪ ಅವರ ವಿಚಾರಣೆಯೂ ನಡೆಯುತ್ತಿತ್ತು. ಬಂಧಿತ ಅಧಿಕಾರಿಗಳ ಹೇಳಿಕೆ ಆಧರಿಸಿ ಮದ್ದೂರು ಪೊಲೀಸರು ವಿಚಾರಣೆ ನಡೆಸುತ್ತಿದ್ರು. ಪ್ರಕರಣದ ವಿಚಾರಣೆ ವೇಳೆ ಶಿವಕುಮಾರ್ ಪಾತ್ರ ಸಾಬೀತಾಗಿದೆ. ಇದೀಗ ಪ್ರಬಲ ಆರೋಪಿ ಶಿವಪ್ಪನನ್ನು ಮದ್ದೂರು ಪೊಲೀಸರು ಬಂಧಿಸಿದ್ದಾರೆ.
ಇನ್ನು ಆರೋಪಿ ಪ್ರಭಾವಿ ಆಗಿದ್ದ ಕಾರಣಕ್ಕೆ ಬಂಧಿಸದೆ ನೋಟೀಸ್ ನೀಡಿ ವಿಚಾರಣೆ ಮಾಡ್ತಿದ್ದಾರೆ. ಅನ್ನೋ ರಾಜಕೀಯ ವಲಯದಲ್ಲೂ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ನೆನ್ನೆ ಮದ್ದೂರು ಠಾಣೆಯಲ್ಲಿ ಪ್ರಮುಖ ಆರೋಪಿ ಜಾಧವ್ ಎದುರು ಶಿವಕುಮಾರ್ ಮುಖಾಮುಖಿ ಕೂರಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಠಾಣೆಯಲ್ಲೇ ಮಾತಿನ ಚಕಮಕಿ ನಡೆದಿದೆ. ಪ್ರಕರಣದಲ್ಲಿ ವಿಚಾರಣೆ ವೇಳೆ ಶಿವಕುಮಾರ್ ಪಾತ್ರ ಸಾಬೀತಾಗಿ ಬಂಧನ ಮಾಡಿದ್ದಾರೆ. ಮಾಜಿ ಅಧ್ಯಕ್ಷ ಶಿವಕುಮಾರ್ ನನ್ನು ಪೊಲೀಸರು ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ.
ಇನ್ನು ಇತ್ತೀಚೆಗೆ ಮನ್ಮುಲ್ ನಿರ್ದೇಶಕರಿಬ್ಬರ ಜೊತೆ ಪ್ರಮುಖ ಆರೋಪಿ ಜಾಧವ್ ಮಾತನಾಡಿರೋ ಆಡಿಯೋ ವೈರಲ್ ಆಗಿತ್ತು. ಈ ವೈರಲ್ ಆಡಿಯೋದಲ್ಲಿ ಮಾಜಿ ಅಧ್ಯಕ್ಷನ ಕೈವಾಡ ಉಲ್ಲೇಖವಾಗಿತ್ತು. ಈ ಆಡಿಯೋದಿಂದ ಇದೀಗ ಪೊಲೀಸರಿಂದ ಮಾಜಿ ಅಧ್ಯಕ್ಷ ಶಿವಪ್ಪ ಬಂಧನವಾಗಿದೆ. ಮನ್ಮುಲ್ ನಲ್ಲಿ ಒಂದಲ್ಲ ಒಂದು ಪ್ರಕರಣ ಬಯಲಿಗೆ ಬರುತ್ತಾ ಇದೆ.ಮಾಜಿ ಅಧ್ಯಕ್ಷನ ಬಂಧನ ಎಲ್ಲರ ಅಚ್ಚರಿ ಮೂಡಿಸಿದ್ದು, ಮನ್ಮುಲ್ ಪ್ರಕರಣದ ಸಂಪೂರ್ಣ ಸತ್ಯ ಏನು ? ಯಾರು ತಪ್ಪಿತಸ್ಥರು? ಇನ್ನೂ ಯಾರ ಕೈವಾಡ ಇದೆ ಎಂಬುದಕ್ಕೆ ಪೊಲೀಸರ ತನಿಖೆಯೇ ಉತ್ತರ ನೀಡಬೇಕಿದೆ.