ನಾಳೆ ಬೆಳಗ್ಗೆ 6 ಗಂಟೆಯಿಂದ ಅಕ್ಟೋಬರ್ 23 ಸಂಜೆ 4 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧ
ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಬೆಂಗಳೂರು ನಗರದಲ್ಲಿ ಅಕ್ಟೋಬರ್ 21ರಿಂದ ಅಕ್ಟೋಬರ್ 23ರವರೆಗೆ ಮದ್ಯ ಮಾರಾಟ ನಿಷೇಧಿಸಿ ಆದೇಶಿಸಲಾಗಿದೆ.
ರಾಜ್ಯದಲ್ಲಿ ಮುಂಬರುವ ಕರ್ನಾಟಕ ವಿಧಾನ ಪರಿಷತ್ (ಎಂಎಲ್‌ಸಿ) ಚುನಾವಣೆ ಹಿನ್ನಲೆಯಲ್ಲಿ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಅಕ್ಟೋಬರ್ 21ರಿಂದ ಅಕ್ಟೋಬರ್ 23ರವರೆಗೆ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಎಂಎಲ್‌ಸಿ ಚುನಾವಣೆಗೆ ಮತದಾನ ಹಿನ್ನಲೆಯಲ್ಲಿ ಮದ್ಯ ನಿಷೇಧ;
ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾನ ಹಾಗೂ ಕರ್ನಾಟಕ ದಕ್ಷಿಣ ಪೂರ್ವ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಗೆ ಮತದಾನದ ಹಿನ್ನಲೆಯಲ್ಲಿ 21-10-26 ಬೆಳಿಗ್ಗೆ 6 ಗಂಟೆಯಿಂದ 23-10-26 ಸಂಜೆ 4 ಗಂಟೆಯವರೆಗೆ ತಾತ್ಕಾಲಿಕವಾಗಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಎಂಎಲ್‌ಸಿ ಚುನಾವಣೆ: ಎಲ್ಲೆಲ್ಲಿ ಮದ್ಯ ಮಾರಾಟ ನಿಷೇಧ?
ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಬೆಂಗಳೂರಿನ ಕೇಂದ್ರ ವಿಭಾಗ, ಪೂರ್ವ ವಿಭಾಗ, ಪಶ್ಚಿಮ ವಿಭಾಗ, ಉತ್ತರ ವಿಭಾಗ, ದಕ್ಷಿಣ ವಿಭಾಗ, ಆಗ್ನೇಯ ವಿಭಾಗ, ನೈಋತ್ಯ ವಿಭಾಗ, ವಾಯುವ್ಯ ವಿಭಾಗ, ಈಶಾನ್ಯ ವಿಭಾಗ, ವೈಟ್‌ಫೀಲ್ಡ್ ಪ್ರದೇಶ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ
ಬೆಂಗಳೂರು ನಗರ ಕಮೀಷನರೇಟ್ ನ 11 ವಿಭಾಗದ ಈ ಕೆಳಕಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ನಿಷೇಧ ಜಾರಿಯಲ್ಲಿರಲಿದೆ ಎನ್ನಲಾಗಿದೆ.
ಕೇಂದ್ರ ವಿಭಾಗ:
* ಹೈಗ್ರೌಂಡ್ಸ್
* ಕಬ್ಬನ್ ಪಾರ್ಕ್
* ಶೇಷಾದ್ರಿಪುರ ಪೊಲೀಸ್ ಠಾಣಾ ವ್ಯಾಪ್ತಿ
ಪೂರ್ವ ವಿಭಾಗ:
* ಪುಲಿಕೇಶಿನಗರ
* ಗೋವಿಂದಪುರ
ಪಶ್ಚಿಮ ವಿಭಾಗ:
* ಚಾಮರಾಜಪೇಟೆ
* ವಿಜಯನಗರ
* ಗೋವಿಂದರಾಜನಗರ
* ಅನ್ನಪೂರ್ಣೇಶ್ವರಿ ನಗರ
ಉತ್ತರ ವಿಭಾಗ:
* ರಾಜಾಜಿನಗರ
* ಮಲ್ಲೇಶ್ವರ
* ಸುಬ್ರಹ್ಮಣ್ಯನಗರ
* ಹೆಬ್ಬಾಳ
ದಕ್ಷಿಣ ವಿಭಾಗ:
* ವಿವಿ ಪುರ
* ಹನುಮಂತನಗರ
* ಜಯನಗರ
ಆಗ್ನೇಯ ವಿಭಾಗ:
* ಕೋರಮಂಗಲ
* ಹೆಚ್ ಎಸ್ ಆರ್ ಲೇಔಟ್
ನೈರುತ್ಯ ವಿಭಾಗ:
* ಕೆಂಗೇರಿ
* ಸುಬ್ರಹ್ಮಣ್ಯ ಪುರ
* ಕೋಣನಕುಂಟೆ
ವಾಯುವ್ಯ ವಿಭಾಗ:
* ಬ್ಯಾಡರಹಳ್ಳಿ
* ಬಾಗಲಗುಂಟೆ
ಈಶಾನ್ಯ ವಿಭಾಗ:
* ದೇವನಹಳ್ಳಿ
* ಅಮೃತಹಳ್ಳಿ
* ಯಲಹಂಕ
ವೈಟ್‌ಫೀಲ್ಡ್ ವಿಭಾಗ:
* ಕೆ ಆರ್ ಪುರ
ಎಲೆಕ್ಟ್ರಾನಿಕ್ ಸಿಟಿ:
* ಎಲೆಕ್ಟ್ರಾನಿಕ್ ಸಿಟಿ
* ಬೇಗೂರು
ಮತ ಎಣಿಕೆ ದಿನವೂ ಡ್ರೈ ಡೇ:
ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾನ ಹಾಗೂ ಕರ್ನಾಟಕ ದಕ್ಷಿಣ ಪೂರ್ವ ಪದವೀಧರರ ಕ್ಷೇತ್ರದ
ಎಂಎಲ್‌ಸಿ ಚುನಾವಣೆಯ ಮತ ಎಣಿಕೆ ಹಿನ್ನಲೆಯಲ್ಲಿ, ಹಲಸೂರ್ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ಟೋಬರ್ 27ರ ಬೆಳಿಗ್ಗೆ 6 ಗಂಟೆಯಿಂದ ಆ ದಿನ ರಾತ್ರಿ 11:59 ರವರೆಗಗೂ ಮದ್ಯ ನಿಷೇಧ ದಿನ (ಡ್ರೈ ಡೇ) ಜಾರಿಯಲ್ಲಿ ಇರಲಿದೆ ಎಂದು ತಿಳಿದುಬಂದಿದೆ.