ಮಹಿಳೆ ಕೈ-ಕಾಲು ಕಟ್ಟಿ ಹಾಕಿ ಮಾಂಗಲ್ಯ ಸರ ಕಳ್ಳತನ.. ಕುತ್ತಿಗೆಗೆ ಚಾಕು ಇಟ್ಟು ಎಸ್ಕೇಪ್ ಆಗಲು ಯತ್ನ!
ಈ ಸಿಸಿಟಿವಿ ದೃಶ್ಯವನ್ನೊಮ್ಮೆ ನೋಡಿ ಡೊಮಿನೊಸ್ ಡಿಲಿವೆರೆ ಬಾಯ್ ಡ್ರೆಸ್ ಹಾಕಿಕೊಂಡೊರೊ ಆಸಾಮಿ ಕೈಗೆ ಗ್ಲೌಸ್,ತಲೆಗೆ ಹೆಲ್ಮೆಟ್ ಹಾಕಿಕೊಂಡು ರಸ್ತೆ ಬದಿಯಲ್ಲಿದ್ದ ಅಂಗಡಿಯೊಳಗೆ ನುಗ್ಗಿದ್ದ.
ಬೆಂಗಳೂರು: ಅದು ಸಿನಿಮಾ ಶೂಟಿಂಗ್ ಅನ್ನೇ ಮೀರಿಸುವಂತಹ ದೃಶ್ಯ.ನೋಡಿದ್ರೆ ಎಂತವರಾದ್ರು ಒಂದು ಕ್ಷಣ ಬೆಚ್ಚಿ ಬೀಳ್ತಾರೆ.ಎದೆ ಝಲ್ಲೆನ್ನುತ್ತೆ.ಮಹಿಳೆಯರಂತು ನಡುಗಿ ಹೋಗ್ತಾರೆ.ಮೈಮೇಲೆ ಚಿನ್ನಾಭರಣ ಹಾಕಿಕೊಳ್ಳೋಕು ಮುಂಚೆ ಒಂದು ಕ್ಷಣ ಯೋಚಿಸ್ತಾರೆ.ಯಾಕಂದ್ರೆ ಆಸಾಮಿಯೊಬ್ಬ ಮೆರೆದ ಅಟ್ಟಹಾಸ ಆ ರೀತಿಯಾಗಿದೆ.ಹಾಗಾದ್ರೆ ಅಂಥದ್ದೇನಾಯ್ತು ಅಂತಾ ತೋರಿಸ್ತೀವಿ ನೋಡಿ.
ಈ ಸಿಸಿಟಿವಿ ದೃಶ್ಯವನ್ನೊಮ್ಮೆ ನೋಡಿ ಡೊಮಿನೊಸ್ ಡಿಲಿವೆರೆ ಬಾಯ್ ಡ್ರೆಸ್ ಹಾಕಿಕೊಂಡೊರೊ ಆಸಾಮಿ ಕೈಗೆ ಗ್ಲೌಸ್,ತಲೆಗೆ ಹೆಲ್ಮೆಟ್ ಹಾಕಿಕೊಂಡು ರಸ್ತೆ ಬದಿಯಲ್ಲಿದ್ದ ಅಂಗಡಿಯೊಳಗೆ ನುಗ್ಗಿದ್ದ. ಹೀಗೆ ಹೋದವನು ಮಹಿಳೆಯ ಕೈ ಕಾಲು ಕಟ್ಟಿ ಹಾಕಿ ಎಸ್ಕೇಪ್ ಆಗಲು ಹೈಡ್ರಾಮಾವನ್ನೇ ಮಾಡಿದ್ದಾನೆ.ಸಿನಿಮಾ ಸ್ಟೈಲ್ ನಲ್ಲಿ ಮಹಿಳೆಯ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿ ಎಸ್ಕೇಪ್ ಆಗಲು ಯತ್ನಿಸಿದ್ದ ಆದ್ರೆ ಕೊನೆಗೂ ಸಾರ್ವಜನಿಕರ ಕೈಗೆ ಸಿಕ್ಕಾಕಿಕೊಂಡು.ಹಣ್ಣುಗಾಯಿ ನೀರುಗಾಯಿ ಆಗಿದ್ದ.ಆದ್ರೆ ಆತನ ಕೃತ್ಯ ಮಾತ್ರ ನಿಜಕ್ಕೂ ಬೆಚ್ಚಿ ಬೀಳುವಂತಿದೆ.
ಈತನ ಹೆಸರು ಪ್ರಭುರಾಜ್..ಈತನ ಅಟ್ಟಹಾಸಕ್ಕೆ ಜಯಶ್ರೀ ಎಂಬ 23 ವರ್ಷದ ಮಹಿಳೆ ನಲುಗಿ ಹೋಗಿದ್ದಾಳೆ.ಅಷ್ಟಕ್ಕೂ ಆಗಿದ್ದೇನು ಅಂದ್ರೆ,ಇಂದಿರಾನಗರ 100 ಫೀಟ್ ರಸ್ತೆಯಲ್ಲಿರುವ ಪ್ರೀಮಿಯಂ ಶೂ ಮತ್ತು ಬ್ಯಾಗ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಮಹಿಳೆ ಬೆಳಗ್ಗೆ 10 ಗಂಟೆಗೆ ಬಂದು ಎಂದಿನಂತೆ ಅಂಗಡಿ ಓಪನ್ ಮಾಡಿದ್ದಾಳೆ.11.45 ರ ಸುಮಾರಿಗೆ ಹೆಲ್ಮೆಟ್ ಹಾಗೂ ಹ್ಯಾಂಡ್ ಗ್ಲೌಸ್ ಧರಿಸಿ ಬಂದ ಪ್ರಭುರಾಜ್ ಯಾರೋ ನನ್ನನ್ನು ಸಾಯಿಸಲು ಬರ್ತಿದ್ದಾರೆ ಕಿರುಚಬೇಡಿ ಎಂದು ಕೇಳಿಕೊಂಡಿದ್ದ.ಒಂದೇ ಕ್ಷಣದಲ್ಲಿ ಮಹಿಳೆ ಕುಳಿತಿದ್ದ ರಿಸೆಪ್ಷನಿಸ್ಟ್ ಕೌಂಟರ್‌ಗೆ ಜಂಪ್ ಮಾಡಿದ್ದ. ಭಯಗೊಂಡ ಮಹಿಳೆ ತಮ್ಮ ಮಾಲೀಕರಿಗೆ ಕರೆ ಮಾಡಲು ಪ್ರಯತ್ನಿಸಿದ್ದಾಳೆ.ಅಷ್ಟರಲ್ಲಾಗಲೇ ಆಕೆಯನ್ನ ಕೆಳಗೆ ಕೂರಿಸಿ,ಬಾಯಿಯನ್ನು ಕೈಗಳಿಂದ ಮುಚ್ಚಿ ಆತನ ಬ್ಯಾಗಿನಲ್ಲಿದ್ದ ಚಾಕು ತೆಗೆದು ಕುತ್ತಿಗೆಗೆ ಇಟ್ಟು,ಕಿರುಚಾಡಿದ್ರೆ ಇಲ್ಲಿಯೇ ಸಾಯಿಸಿ ಬಿಡುತ್ತೇನೆಂದು ಹೆದರಿಸಿದ್ದಾನೆ.
ಬಳಿಕ ಆತನ ಬಳಿಯಿದ್ದ ಪೆವಿಕ್ವಿಕ್‌ನಿಂದ ಮಹಿಳೆ ಎರಡು ಕೈಗಳಿಗೆ ಹಚ್ಚಿ ಡೆಸ್ಕ್‌ಗೆ ಅಂಟಿಸಿದ್ದಾನೆ.ಡೆಸ್ಕ್ ಮೇಲಿದ್ದ ಬಟ್ಟೆಯನ್ನ ತೆಗೆದುಕೊಂಡು ಬಾಯಿಗೆ ತುರುಕಿ, ಮತ್ತೆ ಚಾಕುವನ್ನು ಕುತ್ತಿಗೆಗೆ ಇಟ್ಟಿದ್ದ. ಕುತ್ತಿಗೆ ಹಾಗೂ ಕೈಗೆ ಚಾಕುವಿನಿಂದ ಹಲ್ಲೆ ಮಾಡಿ,ಮಹಿಳೆಯ ಕತ್ತಿನಲ್ಲಿದ್ದ ಸುಮಾರು 35 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ,ಕಿತ್ತುಕೊಂಡು ಎಸ್ಕೇಪ್ ಆಗಲು ಯತ್ನಿಸಿದ್ದಾನೆ..
ಮಹಿಳೆ ಕೈಗಳನ್ನು ಫೆವಿಕ್ವಿಕ್‌ನಿಂದ ಬಿಡಿಸಿಕೊಂಡು,ಜೋರಾಗಿ ಕಿರುಚಾಡಿದಾಗ ಸಾರ್ವಜನಿಕರು ಅಂಗಡಿ ಬಳಿ ಬಂದಿದ್ದಾರೆ.ಈ ವೇಳೆ ಆತ ಮತ್ತೆ ಮಹಿಳೆ ಕೂದಲನ್ನು ಹಿಡಿದು ಅಂಗಡಿ ಒಳಗೆ ಎಳೆದುಕೊಂಡು ಹೋಗಿ,ಅಲ್ಲಿದ್ದ ಸಾರ್ವಜನಿಕರಿಗೆ ತನ್ನನ್ನು ಯಾರು ತಡೆಯಬೇಡಿ.ಯಾರಾದ್ರು ಮುಂದೆ ಬಂದ್ರೆ ಈಕೆಯ ಕತ್ತು ಕೊಯ್ದುಬಿಡೋದಾಗಿ ಹೆದರಿಸಿದ್ದು,ಜನರು ಕೂಡ ಮಹಿಳೆಯನ್ನ ಬಿಟ್ಟು ಆಟೋದಲ್ಲಿ ತೆರಳುವಂತೆ ಮನವಿ ಮಾಡಿಕೊಂಡಿದ್ದಾರೆ.ಆದ್ರು ಜನರ ಮಾತನ್ನು ನಂಬದ ಆಸಾಮಿ ಮಹಿಳೆಯ ಕುತ್ತಿಗೆಗೆ ಚಾಕು ಇಟ್ಟು. ಆಟೋವರೆಗೆ ಎಳೆದುಕೊಂಡೇ ಹೋಗಿದ್ದಾನೆ.ಈ ದೃಶ್ಯ ಮಾತ್ರ ಸಿನಿಮಾ ಕ್ರೈಂ ಸೀನ್ ಅನ್ನೇ ಮೀರಿಸುವಂತಿತ್ತು.
ಅಷ್ಟರಲ್ಲಾಗಲೇ ಹತ್ತಿರ ಬಂದ ಸ್ಥಳೀಯರು ಆತನನ್ನ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ..
ಸದ್ಯ ಆರೋಪಿಯನ್ನು ಬಂಧಿಸಿರುವ ಇಂದಿರಾನಗರ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದು,ಆತನ ಹಿನ್ನೆಲೆ ಕಲೆ ಹಾಕುತ್ತಿದ್ದಾರೆ.ಮೇಲ್ನೋಟಕ್ಕೆ ಪ್ರಭುರಾಜ್ ಮಾನಸಿಕ ಅಸ್ವಸ್ಥನ ರೀತಿ ಕಾಣ್ತಿದ್ದಾನೆ ಎಂದು ಪೊಲೀಸ್ ಮೂಲ ತಿಳಿಸಿದೆ.ಆತ ಯಾರು.. ಯಾಕಾಗಿ ಈ ಕೆಲಸ ಮಾಡಿದ್ದ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.