SOCIAL MEDIA

Newsletter

PARTNER SITES
Select Language Select State

ಕೆಂಗೇರಿ ಕಂದಾಯ ಇಲಾಖೆಯಲ್ಲಿ ಬೃಹತ್‌ ಅಕ್ರಮ: ಅನಧಿಕೃತ ಅಪಾರ್ಟ್‌ಮೆಂಟ್‌ಗಳಿಗೆ ʼಬಿʼ ಖಾತಾ ಹಗರಣ ಬಯಲಿಗೆ!

ಬೆಂಗಳೂರು ಪಶ್ಚಿಮ ನಗರ ಪಾಲಿಕೆ ನಿಯಮಗಳನ್ನು ಗಾಳಿಗೆ ತೂರಿ 4 ಪ್ರಮುಖ ಅಪಾರ್ಟ್‌ಮೆಂಟ್‌ಗಳಿಗೆ ಅಕ್ರಮ ಬಿ- ಖಾತಾ ನೀಡಲಾಗಿದ್ದು, ಇದರಲ್ಲಿ ಭಾಗಿಯಾಗಿರುವ ಬಿಲ್ಡರ್‌ಗಳು ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಆಗಿದೆ.

Written By Yashaswini V
Published: Sep 22, 2026, 11:48 AM IST | Updated: Sep 22, 2026, 11:50 AM IST
Join

“ಕೆಂಗೇರಿ ವಿಭಾಗದ ಕಂದಾಯ ಇಲಾಖೆಯ ಭ್ರಷ್ಟ ವಂಚಕ ಅಧಿಕಾರಿಗಳು ಕಾನೂನು ಬಾಹಿರವಾಗಿ ನಿರ್ಮಿಸಿರುವ 04 Apartment Flat  ಗಳಿಗೆ ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ, ‘ಬಿ’ವಹಿ ಖಾತಾಗಳನ್ನು ಮಾಡಿಕೊಟ್ಟಿರುವ ಹಗರಣ” ಕುರಿತು ಪೊಲೀಸ್‌ ಮಹಾ ನಿರೀಕ್ಷಕರು, ಕರ್ನಾಟಕ ಲೋಕಾಯುಕ್ತ, ಅಂಬೇಡ್ಕರ್‌ ವೀಧಿ ಬೆಂಗಳೂರು ಇವರಿಗೆ ಬೆಂಗಳೂರು ನಾಗರೀಕ ಹಕ್ಕು ಹೋರಾಟ ಸಮಿತಿ (ರಿ) ಉಪಾಧ್ಯಕ್ಷ ಗಣೇಶ್‌ ಸಿಂಗ್‌ ಬಿ. ಪತ್ರ ಬರೆದಿದ್ದಾರೆ. ಕೆಂಗೇರಿ ವಿಭಾಗದ ಅಪಾರ್ಟ್‌ಮೆಂಟ್ 'ಬಿ' ಖಾತಾ ಹಗರಣವೇನು? ಅಧಿಕಾರಿಗಳು ಮತ್ತು ಬಿಲ್ಡರ್‌ಗಳ ವಿರುದ್ಧ ಲೋಕಾಯುಕ್ತಕ್ಕೆ ಸಲ್ಲಿಕೆಯಾದ ದೂರಿನಲ್ಲಿ ಏನಿದೆ ಎಂಬ ಪ್ರಮುಖ ಮಾಹಿತಿ ಇಲ್ಲಿದೆ.

ಕರ್ನಾಟಕ ಲೋಕಾಯುಕ್ತ ಪೊಲೀಸ್‌ ಮಹಾ ನಿರೀಕ್ಷಕರಿಗೆ ಪತ್ರ ಬರೆದಿರುವ ಬೆಂಗಳೂರು ನಾಗರೀಕ ಹಕ್ಕು ಹೋರಾಟ ಸಮಿತಿ (ರಿ) ಉಪಾಧ್ಯಕ್ಷ ಗಣೇಶ್‌ ಸಿಂಗ್‌ ಬಿ. , ಮೇಲ್ಕಂಡ ವಿಷಯಗಳಿಗೆ ಸಂಬಂಧಿಸಿದಂತೆ, ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಯಶವಂತಪುರ ವಿಧಾನಸಭಾ ಕ್ಷೇತ್ರದ ವಾರ್ಡ್  198 (ಹೆಮ್ಮಿಗೆಪುರ ವಾರ್ಡ್) ರ ರಘುವನಹಳ್ಳಿ ಬಡಾವಣೆಯಲ್ಲಿ ರವೀಂದ್ರ (9900098881) ಮತ್ತು ಧನಂಜಯ್ (9743697333) ಎಂಬ ವಂಚಕ ಬಿಲ್ಡರ್ ಗಳು 1) SR Goldline, 2) SR Silverline, 3) SR Platinum, 4) SR Diamond ಎಂಬ ಹೆಸರಿನಲ್ಲಿ 04 ವಸತಿ ಸಮುಚ್ಛಯ (Apartments) ಗಳನ್ನು ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ನಿರ್ಮಿಸಿರುತ್ತಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸದರಿ ಅಕ್ರಮ ಕಟ್ಟಡಗಳಿಗೆ “ಪ್ರಾರಂಭಿಕ ಪ್ರಮಾಣ ಪತ್ರ”(CC) ಮತ್ತು “ಸ್ವಾಧೀನಾನುಭವ ಪ್ರಮಾಣ ಪತ್ರ”(OC) ಗಳನ್ನು ಇದುವರೆವಿಗೂ ಪಡೆದಿರುವುದಿಲ್ಲ. ಅಲ್ಲದೇ, ಈ ಕ್ಷಣದವರೆಗೂ ಸದರಿ 04 ವಸತಿ ಸಂಕೀರ್ಣಗಳಿಗೆ BESCOM ಸಂಸ್ಥೆಯು ವಿದ್ಯುತ್ ಸಂಪರ್ಕವನ್ನೇ ನೀಡಿರುವುದಿಲ್ಲ. ಹೀಗಿದ್ದರೂ ಸಹ, ಮೇಲೆ ತಿಳಿಸಿರುವ ಇಬ್ಬರು ವಂಚಕ ಬಿಲ್ಡರ್ ಗಳು ಸದರಿ Apartment ಗಳಲ್ಲಿರುವ Flat ಗಳಿಗೆ ವಿವಿಧ ದಿನಾಂಕಗಳಂದು ಖಾತಾಗಳನ್ನು ಕೋರಿ ಅರ್ಜಿ ಸಲ್ಲಿಸಿದ ನಂತರ ಖಾತಾಗಳನ್ನು ಮಾಡಿಕೊಟ್ಟಿರುವ ಕಾನೂನು ಬಾಹಿರ ಕಾರ್ಯ ನಡೆದಿರುತ್ತದೆ !!!

ಆಘಾತಕಾರಿ ವಿಷಯವೆಂದರೆ, ಕೆಂಗೇರಿ ವಿಭಾಗದ ಕಂದಾಯ ಇಲಾಖೆಯ ಪರಮ ವಂಚಕ ಅಧಿಕಾರಿಗಳು ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ - CC / OC ಪಡೆಯದ ಮತ್ತು BESCOM ಸಂಸ್ಥೆಯಿಂದ ವಿದ್ಯುತ್ ಸಂಪರ್ಕವನ್ನೇ ಪಡೆಯದ ಅಕ್ರಮ ಕಟ್ಟಡಗಳಲ್ಲಿರುವ Flat ಗಳಿಗೆ ತಲಾ 50 ಸಾವಿರ ರೂಪಾಯಿಗಳಿಂದ 01 ಲಕ್ಷ ರೂಪಾಯಿಗಳಷ್ಟು ಲಂಚದ ಹಣವನ್ನು ಪಡೆದು ‘ಬಿ’ವಹಿ ಖಾತಾಗಳನ್ನು ಮಾಡಿಕೊಟ್ಟಿರುತ್ತಾರೆ !!!

ಮೇಲೆ ತಿಳಿಸಿರುವ 04 ಕಟ್ಟಡಗಳಲ್ಲಿನ 20 ಕ್ಕೂ ಹೆಚ್ಚು Flat ಗಳಿಗೆ ನಕಲಿ e-PID ಗಳನ್ನು ಸೃಷ್ಟಿಸಿ ‘ಬಿ’ವಹಿ ಖಾತಾಗಳನ್ನು ಮಾಡಿಕೊಟ್ಟಿರುತ್ತಾರೆ. ಈ ಮೂಲಕ ಬೆಂಗಳೂರು ಪಶ್ಚಿಮ ನಗರ ಪಾಲಿಕೆಗೆ ಸುಮಾರು 01 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ನಷ್ಟ ಉಂಟು ಮಾಡಿರುತ್ತಾರೆ. ಆದುದರಿಂದ, ಇಂತಹ ಮಹಾ ವಂಚನೆ ಮತ್ತು ಕಾನೂನು ಬಾಹಿರ ಕಾರ್ಯವನ್ನು ಎಸಗಿರುವ ಮತ್ತು ಪಾಲಿಕೆಗೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟು ಮಾಡಿರುವ ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿ, ಸಹಾಯಕ ಕಂದಾಯ ಅಧಿಕಾರಿ, ಕಂದಾಯ ಪರಿವೀಕ್ಷಕ, ಗುಮಾಸ್ತ ಮತ್ತು ಗಣಕಯಂತ್ರ ನಿರ್ವಾಹಕ ಸೇರಿದಂತೆ ಎಲ್ಲ ಪರಮ ಭ್ರಷ್ಟ ಅಧಿಕಾರಿಗಳು ಮತ್ತು ನೌಕರರನ್ನು ಕೂಡಲೇ ಅಮಾನತುಗೊಳಿಸಿ, ಇಲಾಖಾ ತನಿಖೆಗೆ ಆದೇಶಿಸಬೇಕೆಂದು ಮತ್ತು ಅವರುಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕೆಂದು ಹಾಗೂ ಕಾನೂನು ಬಾಹಿರವಾಗಿ ಮಾಡಿರುವ ಎಲ್ಲ 20 ಕ್ಕೂ ಹೆಚ್ಚು ಖಾತಾಗಳನ್ನು ಕೂಡಲೇ ರದ್ದುಪಡಿಸುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಹಾಗೂ ಮೇಲೆ ತಿಳಿಸಿರುವ 04 ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ ಕೂಡಲೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ದಾಖಲೆಗಳ ಸಹಿತ GBA ಮುಖ್ಯ ಆಯುಕ್ತರು  ಮತ್ತು ವಿಶೇಷ ಆಯುಕ್ತರು (ಕಂದಾಯ) ರವರನ್ನು ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತರನ್ನು ಆಗ್ರಹಿಸಲಾಗಿದೆ.

ಮಹಾ ವಂಚನೆ ಮತ್ತು ಕಾನೂನು ಬಾಹಿರ ಕಾರ್ಯವನ್ನು ಎಸಗಿರುವ ಮತ್ತು ಪಾಲಿಕೆಗೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟು ಮಾಡಿರುವ ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿ, ಸಹಾಯಕ ಕಂದಾಯ ಅಧಿಕಾರಿ, ಕಂದಾಯ ಪರಿವೀಕ್ಷಕ, ಗುಮಾಸ್ತ ಮತ್ತು ಗಣಕಯಂತ್ರ ನಿರ್ವಾಹಕ ಸೇರಿದಂತೆ ಎಲ್ಲ ಪರಮ ಭ್ರಷ್ಟ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ವಂಚನೆ,  ನಕಲಿ ದಾಖಲೆ ತಯಾರಿಕೆ, ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದಂತಹ ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ದಾಖಲೆಗಳ ಸಹಿತ ಲೋಕಾಯುಕ್ತ IGP ಅವರಿಗೂ ಸಹ ದೂರು ಸಲ್ಲಿಸಲಾಗಿದೆ.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES