• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ದೇವರ ಮೇಲಿದ್ದ ಭಾರೀ ಮೌಲ್ಯದ ಚಿನ್ನಾಭರಣ ಕಳವು.. ತಟ್ಟೆಯಲ್ಲಿದ್ದ ದಕ್ಷಿಣೆ ದುಡ್ಡನ್ನು ಬಿಟ್ಟಿರಲಿಲ್ಲ ಪಾಪಿ

ದೇವರ ಮೇಲಿದ್ದ ಭಾರೀ ಮೌಲ್ಯದ ಚಿನ್ನಾಭರಣ ಕಳವು.. ತಟ್ಟೆಯಲ್ಲಿದ್ದ ದಕ್ಷಿಣೆ ದುಡ್ಡನ್ನು ಬಿಟ್ಟಿರಲಿಲ್ಲ ಪಾಪಿ

ಬಂಧಿತ ಆರೋಪಿ ಅಶ್ವಥ್ ಕೆ.ಹೆಚ್, ಬಂಗಾರ ಕಳೆದುಕೊಂಡಿದ್ದವರ ಅಂದರೆ ದೂರುದಾರರ ಮನೆಯ ದೂರದ ಸಂಬಂಧಿ ಆಗಿದ್ದಾನೆ. ಆಗಾಗ ಅವರ ಮನೆಗೆ ಬಂದು ಹೋಗುತ್ತಿದ್ದನು.

Written ByBhimappa
Published: Sep 29, 2026, 12:53 PM IST|Updated: Sep 29, 2026, 12:58 PM IST
joinshare
ದೇವರ ಮೇಲಿದ್ದ ಭಾರೀ ಮೌಲ್ಯದ ಚಿನ್ನಾಭರಣ ಕಳವು.. ತಟ್ಟೆಯಲ್ಲಿದ್ದ ದಕ್ಷಿಣೆ ದುಡ್ಡನ್ನು ಬಿಟ್ಟಿರಲಿಲ್ಲ ಪಾಪಿ
Image Credit: BDA apartment

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

2

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

3

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

4

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

5

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Kengeri Kailash BDA apartment house stealing gold ornaments worth Rs 8 lakh:ಕೆಂಗೇರಿಯ ಕೈಲಾಸ್ ಬಿಡಿಎ ಅಪಾರ್ಟ್ಮೆಂಟ್‌ನಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣವೊಂದನ್ನು ಕೆಂಗೇರಿ ಪೊಲೀಸ್ ಠಾಣೆಯ ಅಧಿಕಾರಿಗಳು ಯಶಸ್ವಿಯಾಗಿ ಭೇದಿಸಿದ್ದಾರೆ. ದೂರದ ಸಂಬಂಧಿಯೊಬ್ಬನೇ ನಂಬಿಕೆದ್ರೋಹ ಎಸಗಿ, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ವಥ್ ಕೆ.ಹೆಚ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಮಾಡಲು ಆರೋಪಿ ಅಶ್ವಥ್ ಕೆ.ಹೆಚ್ ಮಾಡಿದ ಪ್ಲಾನ್ ಅವ ಚಾಣಾಕ್ಷತನ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಬಂಧಿತ ಆರೋಪಿ ಅಶ್ವಥ್ ಕೆ.ಹೆಚ್, ಬಂಗಾರ ಕಳೆದುಕೊಂಡಿದ್ದವರ ಅಂದರೆ ದೂರುದಾರರ ಮನೆಯ ದೂರದ ಸಂಬಂಧಿ ಆಗಿದ್ದಾನೆ. ಆಗಾಗ ಅವರ ಮನೆಗೆ ಬಂದು ಹೋಗುತ್ತಿದ್ದನು. ಈ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡಿದ್ದ ಆತ, ಕೃತ್ಯವೆಸಗಲು ಸಕ್ಕತ್ ಮಾಸ್ಟರ್ ಪ್ಲ್ಯಾನ್ ಮಾಡಿದ್ದನು. ಕಳೆದ ತಿಂಗಳು ದೂರುದಾರರ ಮನೆಯಲ್ಲಿ ಲಕ್ಷ್ಮಿ ಪೂಜೆ ಹಮ್ಮಿಕೊಳ್ಳಲಾಗಿತ್ತು. ಈ ವಿಶೇಷ ಪೂಜೆಗೆ ಮನೆಯವರು ತಮ್ಮ ದೂರದ ಸಂಬಂಧಿಯಾದ ಅಶ್ವಥ್ ಸೇರಿದಂತೆ ಇತರೆ ಸಂಬಂಧಿಕರನ್ನು ಆಹ್ವಾನಿಸಿದ್ದರು. ಅತ್ಯಂತ ಸಡಗರದಿಂದ ನೆರವೇರಿದ ಈ ಪೂಜೆಯ ಸಂದರ್ಭದಲ್ಲಿ ಅಶ್ವಥ್ ಕೂಡ ಭಾಗವಹಿಸಿದ್ದನು. ಪೂಜೆಯ ನೆಪದಲ್ಲಿ ಮನೆಗೆ ಬಂದಿದ್ದ ಈತ, ಮನೆಯ ರೂಮ್‌ಗಳು, ಕಪಾಟುಗಳು ಹಾಗೂ ಒಡವೆಗಳಿರುವ ಸ್ಥಳಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ್ದನು.

ಪೂಜೆ ಮುಗಿದ ಮಾರನೆಯ ದಿನ, ಅನಿವಾರ್ಯ ಕಾರಣಗಳಿಂದ ಮನೆಯ ಎಲ್ಲ ಸದಸ್ಯರು ಒಟ್ಟಿಗೆ ಹೊರಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಅಶ್ವಥ್, ತಕ್ಷಣ ತನ್ನ ಕಪಟನಾಟಕವನ್ನು ಶುರುಮಾಡಿದನು. ಈ ವೇಳೆ ಮನೆಗೆ ಬಂದಿದ್ದ ಅಶ್ಬಥ್ ಕೆ ಹೆಚ್ ಮನೆಯಲ್ಲಿ ಯಾರು ಇಲ್ಲದ್ದನ್ನ ಗಮನಿಸಿದ್ದನು. ಕಾರು ಪಾರ್ಕ್‌ ಮಾಡುವ ನೆಪದಲ್ಲಿ ಬಂದಿದ್ದನು. ನನ್ನದೇ ಮನೆಯ ಕೀ ಮಿಸ್ ಆಗಿದೆ ಎಂದು ನಂಬಿಸಿ ನಾಟಕವಾಡಿದನು. ತದನಂತರ ಸ್ಥಳಕ್ಕೆ ನಕಲಿ ಕೀ ತಯಾರಿಸುವವರನ್ನು ಕರೆತಂದನು. ನಕಲಿ ಕೀ ಮೂಲಕ ಮನೆಯ ಮುಖ್ಯ ಬಾಗಿಲನ್ನು ತೆರೆದ ಆತ ನೇರವಾಗಿ ಒಡವೆಗಳಿದ್ದ ಕೋಣೆಗಳ ಕಡೆಗೆ ಹೋಗಿದ್ದನು.

ಅಸಲಿ ಒಡವೆಗಳ ಜಾಗದಲ್ಲಿ ನಕಲಿ ಆಭರಣಗಳ ಅಳವಡಿಕೆ; ಈ ಕಳ್ಳತನದ ಪ್ರಮುಖ ಹೈಲೈಟ್ ಏನೆಂದರೆ, ಒಡವೆಗಳನ್ನು ಕದ್ದ ತಕ್ಷಣವೇ ಮನೆಯವರಿಗೆ ಅನುಮಾನ ಬಾರದಂತೆ ತಡೆಯಲು ಈತ ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಂಡಿದ್ದನು. ಮನೆಯಲ್ಲಿದ್ದ ಅಸಲಿ ಆಭರಣಗಳನ್ನು ಹೋಲುವಂಥ ನಕಲಿ ಆಭರಣಗಳನ್ನು ಆತ ತಂದಿದ್ದನು. ದೇವರ ಮೇಲಿದ್ದ ಹಾಗೂ ರೂಮ್‌ನಲ್ಲಿದ್ದ ಅಸಲಿ ಆಭರಣಗಳನ್ನು ತೆಗೆದುಕೊಂಡು, ಅದೇ ಜಾಗದಲ್ಲಿ ತಂದಿಟ್ಟಿದ್ದ ನಕಲಿ ಆಭರಣಗಳನ್ನು ಜೋಡಿಸಿದ್ದನು. ದೇವರ ಮನೆಯ ಪೂಜೆ ತಟ್ಟೆಯಲ್ಲಿದ್ದ 8 ಸಾವಿರ ರೂಪಾಯಿ ನಗದನ್ನು ಹಾಗೂ ಸರಿಸುಮಾರು 8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ ಆಗಿದ್ದನು.

ಅನುಮಾನ ಮೂಡಿದ್ದು ಹೇಗೆ; ಮನೆಗೆ ಮರಳಿದ ಮಾಲೀಕರಿಗೆ ಒಡವೆಗಳು ಹಾಗೇ ಇರುವುದು ಕಂಡುಬಂದರೂ, ಪೂಜೆ ತಟ್ಟೆಯಲ್ಲಿ ಇಡಲಾಗಿದ್ದ ನಗದು ಮಾತ್ರ ಮಾಯವಾಗಿರುವುದು ಕಂಡುಬಂದಾಗ ಅನುಮಾನ ಶುರುವಾಯಿತು. ತಕ್ಷಣ ಅನುಮಾನಗೊಂಡು ಆಭರಣಗಳನ್ನು ಹತ್ತಿರದಿಂದ ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅಸಲಿ ಒಡವೆಗಳು ಮಾಯವಾಗಿ ಅವುಗಳ ಜಾಗದಲ್ಲಿ ನಕಲಿ ಆಭರಣಗಳನ್ನು ಇರಿಸಲಾಗಿದೆ ಎಂಬ ಸತ್ಯ ಬಯಲಾಯಿತು.

ವಿಶೇಷವೆಂದರೆ, ದೂರುದಾರರ ಸಹೋದರನಿಗೆ ಸೇರಿದ ಕಟ್ ಆಗಿದ್ದ ಚಿನ್ನದ ಸರವೊಂದನ್ನು ದೂರುದಾರರ ಮನೆಯಲ್ಲಿಯೇ ಇರಿಸಲಾಗಿತ್ತು. ಆರೋಪಿ ಆ ಕಟ್ ಆಗಿದ್ದ ಸರ ಸೇರಿದಂತೆ ಒಟ್ಟು ಎರಡು ಸರಗಳು ಮತ್ತು ಒಂದು ಜೊತೆ ಬಳೆಗಳನ್ನು ದೋಚಿದ್ದನು. ತಕ್ಷಣ ಎಚ್ಚೆತ್ತುಕೊಂಡ ಮನೆಯವರು ಅಪಾರ್ಟ್ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಕೂಡಲೇ ಕೆಂಗೇರಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದರು.

ದೂರು ದಾಖಲಿಸಿಕೊಂಡ ತಕ್ಷಣ ಕಾರ್ಯಪ್ರವೃತ್ತರಾದ ಕೆಂಗೇರಿ ಠಾಣೆ ಪೊಲೀಸರು, ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳು ಮತ್ತು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿ ಅಶ್ವಥ್ ಕೆ.ಹೆಚ್. ನನ್ನು ಅರೆಸ್ಟ್‌ ಮಾಡಿದ್ದಾರೆ. ವಿಚಾರಣೆ ವೇಳೆ ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಪೊಲೀಸರು ಆತನಿಂದ ಕಳುವಾಗಿದ್ದ ಕೆಲ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ನಂಬಿಕೆ ಇಟ್ಟ ಸಂಬಂಧಿಕನೇ ಈ ರೀತಿಯ ವಂಚನೆ ಎಸಗಿರುವುದು ದೂರುದಾರರಿಗೆ ತೀವ್ರ ಆಘಾತ ತರಿಸಿದೆ. ಸದ್ಯ ಪೊಲೀಸರು ಆರೋಪಿಯನ್ನು ಅರೆಸ್ಟ್‌ ಮಾಡಿರುವ ಪೊಲೀಸರು ಇನ್ನು ಹೆಚ್ಚಿನ ವಿಚಾರಣೆಯನ್ನು ಕೈಗೊಂಡಿದ್ದಾರೆ.

Add Zee News as a Preferred Source
TAGS:
Crime