ಲಾಡ್ಜ್‌ಗೆ ಕರೆದುಕೊಂಡು ಹೋಗಿ ಏನು ಮಾಡಿದ ಗೊತ್ತಾ.. ನಂಬಿ ಜೊತೆಗೆ ಹೋದ ಹೆಂಡತಿಗೆ..?
ವಿದ್ಯಾಳ ಪೋಷಕರು ಮದುವೆಗೆ ಒಪ್ಪದ ಕಾರಣ ಮತ್ತೆ ಓಡಿ ಹೋಗಿ ಮದುವೆ ಆದರು. ಮೊದ ಮೊದಲು ಜೋಡಿ ಹಕ್ಕಿಯ ರೀತಿ ಇದ್ದ ಜೋಡಿಗಳ ಪ್ರೀತಿಗೆ ಎರಡು ವರ್ಷದ ಹೆಣ್ಣು ಮಗು ಕೂಡ ಇದೆ.
Husband and wife case Doddaballapur: ಆಕೆ ನೂರಾರು ಕನಸುಗಳನ್ನ ಹೊತ್ತು ಪ್ರೀತಿಸಿ ಮದುವೆ ಆಗಿದ್ದಳು. ಪೋಷಕರ ವಿರೋಧದ ನಡುವೆಯೂ ನನಗೆ ಗಂಡನೇ ಬೇಕು ಎಂದು ಮದುವೆ ಆಗಿದ್ದ ಮಹಿಳೆ ಇಂದು ಲಾಡ್ಜ್‌ನಲ್ಲಿ ಮೃತಪಟ್ಟಿದ್ದಾಳೆ. ಕೌಟುಂಬಿಕ ಕಲಹದಿಂದ ದೂರವಾಗಿದ್ದ ಮಹಿಳೆಯನ್ನ ಪುಸಲಾಯಿಸಿದ ಗಂಡ, ಚಿನ್ನ ರನ್ನ ಎಂದು ರೂಂಗೆ ಕರೆದುಕೊಂಡು ಹೋಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಅಷ್ಟಕ್ಕೂ ಕೊಲೆಯಾದ ಮಹಿಳೆ ಯಾರು, ಕೊಲೆಗೆ ಕಾರಣ ಏನು ಅಂತಿರಾ?.
ಹೀಗೆ ತನ್ನಿಂದ ದೂರವಿದ್ದ ಹೆಂಡಿತಿಯನ್ನ ಮನವೊಲಿಸಿ ರೂಂಗೆ ಕರೆದುಕೊಂಡು ಹೋದ ಗಂಡ, ಕೃತ್ಯ ಎಸಗಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ SGS ಲಾಡ್ಜ್‌ನಲ್ಲಿ ಈ ಘಟನೆ ನಡೆದಿದೆ. ವಿದ್ಯಾ (23) ಕೊಲೆಯಾದ ಮಹಿಳೆ. ಆನಂದ್ ಕೊಲೆ ಮಾಡಿ ಎಸ್ಕೇಪ್ ಆಗಿರುವ ಆರೋಪಿ. ಆನಂದ್ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಮೂಲದವರು. ವಿದ್ಯಾ ಮತ್ತು ಆನಂದ್ ಪ್ರೀತಿಸಿ ಮದುವೆ ಆಗಿದ್ದರು. ವಿದ್ಯಾಗೆ ವಯಸ್ಸು ತುಂಬುವ ಮೊದಲೇ ಮದುವೆ ಆಗಿದ್ದ ಕಾರಣ ಆತ ಮೇಲೆ ಪೋಕ್ಸೋ ಪ್ರಕರಣ ಕೂಡ ದಾಖಲಾಗಿತ್ತು.
ಕೆಲ ತಿಂಗಳ ಕಾಲ ಜೈಲಿನಲ್ಲಿದ್ದ ಆನಂದ್ ಹೊರ ಬಂದು ವಿದ್ಯಾಗಳ ಜೊತೆಯಲ್ಲಿ ರಾಜಿಮಾಡಿಕೊಂಡು ಮದುವೆಗೆ ಮುಂದಾದ. ಆದರೆ ವಿದ್ಯಾಳ ಪೋಷಕರು ಮದುವೆಗೆ ಒಪ್ಪದ ಕಾರಣ ಮತ್ತೆ ಓಡಿ ಹೋಗಿ ಮದುವೆ ಆದರು. ಮೊದ ಮೊದಲು ಜೋಡಿ ಹಕ್ಕಿಯ ರೀತಿ ಇದ್ದ ಜೋಡಿಗಳ ಪ್ರೀತಿಗೆ ಎರಡು ವರ್ಷದ ಹೆಣ್ಣು ಮಗು ಕೂಡ ಇದೆ. ಆದರೆ ಕಾಲ ಕಳೆದಂತೆ ಇವರಿಬ್ಬರ ನಡುವೆ ಮನಸ್ಥಾಪ ಹೆಚ್ಚಾಗಿದೆ. ಹಾಗಾಗಿ ವಿದ್ಯಾ ಗಂಡನಿಂದ ಕೆಲ ತಿಂಗಳ ಹಿಂದೆ ದೂರವಾಗಿದ್ದಾಳೆ. ನಂತರ ಪೋಲೀಸ್ ಠಾಣೆಯಲ್ಲಿ ರಾಜೀ ಆಗಿದ್ದರಿಂದ ಮತ್ತೆ ಗಂಡನ ಜೊತೆಯಲ್ಲಿ ಹೋಗಿದ್ದಾಳೆ.
ಪೋಲೀಸ್ ಠಾಣೆಯಲ್ಲಿ ಒಪ್ಪಿಕೊಂಡು ಗಂಡನ ಜೊತೆಯಲ್ಲಿ ಹೋಗಿದ್ದ ವಿದ್ಯಾ ನಂತರ ಕೆಲ ತಿಂಗಳ ಹಿಂದೆ ಮತ್ತೆ ದೂರವಾಗಿದ್ದಾಳೆ. ಒಬ್ಬಂಟಿಯಾಗಿದ್ದ ಮಹಿಳೆ ಹೊಟ್ಟೆ ಪಾಡಿಗಾಗಿ ದೊಡ್ಡಬಳ್ಳಾಪುರ ಪಾಸ್ಕಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಗಂಡ ಆನಂದ್ ಕೂಡ ಖಾಸಗಿ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿರುತ್ತಾನೆ. ಈ ವೇಳೆ 15 ರ ರಾತ್ರಿ 11:48 ರ ವೇಳೆಯಲ್ಲಿ ದೊಡ್ಡಬಳ್ಳಾಪುರದ SGS ಲಾಡ್ಜ್‌ನಲ್ಲಿ ರೂಂ ಮಾಡಿಕೊಂಡು, ಕೈಯಲ್ಲಿ ಊಟದ ಪಾರ್ಸೆಲ್ ತೆಗೆದುಕೊಂಡು ಒಳಗೆ ಹೋಗಿದ್ದಾರೆ.
ಒಂದು ಗಂಟೆಯ ನಂತರ ಗಂಡ ಆನಂದ್ ರಾತ್ರಿಯೇ ಹೊರ ಬಂದು ರೂಂ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದಾನೆ. 24 ಗಂಟೆ ಕಳೆದ ನಂತರ ಲಾಡ್ಜ್ ಸಿಬ್ಬಂದಿ ಬೀಗ ಹಾಕಿರುವುದನ್ನ ನೋಡಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ರೂಂ ತೆಗೆದು ಒಳಗೆ ಹೋದ ಪೋಲೀಸರು ನೋಡಿದಾಗ, ಐಡಿ ಕಾರ್ಡ್ ನ ಟ್ಯಾಗ್ ಬಳಸಿ ಆಕೆಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಘಟನೆ ಕುರಿತು ದೊಡ್ಡಬಳ್ಳಾಪುರ ನಗರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ.
ಪ್ರೀತಿಸಿ ಮದುವೆ ಆಗಿದ್ದ ಕಾರಣ ಪೋಷಕರು ಈಕೆಯನ್ನ ಕ್ಯಾರೆ ಎನ್ನುತ್ತಿರಲಿಲ್ಲ. ಬದುಕಿದರೂ ನಿನ್ನ ಜೊತೆ, ಸತ್ತರೂ ನಿನ್ನ ಜೊತೆ ಎಂದು ಹೋಗಿದ್ದ ಮಹಿಳೆ ಇಂದು ಗಂಡನಿಂದಲೇ ಹೆಣವಾಗಿದ್ದಾಳೆ. ಇನ್ನೂ ಆರೋಪಿ ಪತ್ತೆ ಆದ ನಂತರ ಕೊಲೆಗೆ ನಿಖರ ಕಾರಣ ತಿಳಿದುಬರಬೇಕಿದೆ.