• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಲಾಡ್ಜ್‌ಗೆ ಕರೆದುಕೊಂಡು ಹೋಗಿ ಏನು ಮಾಡಿದ ಗೊತ್ತಾ.. ನಂಬಿ ಜೊತೆಗೆ ಹೋದ ಹೆಂಡತಿಗೆ..?

ಲಾಡ್ಜ್‌ಗೆ ಕರೆದುಕೊಂಡು ಹೋಗಿ ಏನು ಮಾಡಿದ ಗೊತ್ತಾ.. ನಂಬಿ ಜೊತೆಗೆ ಹೋದ ಹೆಂಡತಿಗೆ..?

ವಿದ್ಯಾಳ ಪೋಷಕರು ಮದುವೆಗೆ ಒಪ್ಪದ ಕಾರಣ ಮತ್ತೆ ಓಡಿ ಹೋಗಿ ಮದುವೆ ಆದರು. ಮೊದ ಮೊದಲು ಜೋಡಿ ಹಕ್ಕಿಯ ರೀತಿ ಇದ್ದ ಜೋಡಿಗಳ ಪ್ರೀತಿಗೆ ಎರಡು ವರ್ಷದ ಹೆಣ್ಣು ಮಗು ಕೂಡ ಇದೆ.

Reported ByBhimappaEdited ByBhimappa
Published: Sep 18, 2026, 07:47 AM IST|Updated: Sep 18, 2026, 07:55 AM IST
joinshare
ಲಾಡ್ಜ್‌ಗೆ ಕರೆದುಕೊಂಡು ಹೋಗಿ ಏನು ಮಾಡಿದ ಗೊತ್ತಾ.. ನಂಬಿ ಜೊತೆಗೆ ಹೋದ ಹೆಂಡತಿಗೆ..?
Image Credit: File Photo

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಇಂದಿನ ದಿನ ಭವಿಷ್ಯ: ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ದಿಢೀರ್‌ ಧನಯೋಗ! 12 ರಾಶಿಗಳ ಭವಿಷ್ಯ ಇಲ್ಲಿದೆ

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ದಿಢೀರ್‌ ಧನಯೋಗ! 12 ರಾಶಿಗಳ ಭವಿಷ್ಯ ಇಲ್ಲಿದೆ

2

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

3

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

4

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

5

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Husband and wife case Doddaballapur: ಆಕೆ ನೂರಾರು ಕನಸುಗಳನ್ನ ಹೊತ್ತು ಪ್ರೀತಿಸಿ ಮದುವೆ ಆಗಿದ್ದಳು. ಪೋಷಕರ‌ ವಿರೋಧದ ನಡುವೆಯೂ ನನಗೆ ಗಂಡನೇ ಬೇಕು ಎಂದು ಮದುವೆ ಆಗಿದ್ದ ಮಹಿಳೆ ಇಂದು ಲಾಡ್ಜ್‌ನಲ್ಲಿ ಮೃತಪಟ್ಟಿದ್ದಾಳೆ. ಕೌಟುಂಬಿಕ ಕಲಹದಿಂದ ದೂರವಾಗಿದ್ದ ಮಹಿಳೆಯನ್ನ ಪುಸಲಾಯಿಸಿದ ಗಂಡ, ಚಿನ್ನ ರನ್ನ ಎಂದು ರೂಂಗೆ ಕರೆದುಕೊಂಡು ಹೋಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಅಷ್ಟಕ್ಕೂ ಕೊಲೆಯಾದ ಮಹಿಳೆ ಯಾರು, ಕೊಲೆಗೆ ಕಾರಣ ಏನು ಅಂತಿರಾ?.

ಹೀಗೆ ತನ್ನಿಂದ ದೂರವಿದ್ದ ಹೆಂಡಿತಿಯನ್ನ ಮನವೊಲಿಸಿ ರೂಂಗೆ ಕರೆದುಕೊಂಡು ಹೋದ ಗಂಡ, ಕೃತ್ಯ ಎಸಗಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ SGS ಲಾಡ್ಜ್‌ನಲ್ಲಿ ಈ ಘಟನೆ ನಡೆದಿದೆ. ವಿದ್ಯಾ (23) ಕೊಲೆಯಾದ ಮಹಿಳೆ. ಆನಂದ್ ಕೊಲೆ ಮಾಡಿ ಎಸ್ಕೇಪ್ ಆಗಿರುವ ಆರೋಪಿ. ಆನಂದ್ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಮೂಲದವರು. ವಿದ್ಯಾ ಮತ್ತು ಆನಂದ್ ಪ್ರೀತಿಸಿ ಮದುವೆ ಆಗಿದ್ದರು. ವಿದ್ಯಾಗೆ ವಯಸ್ಸು ತುಂಬುವ ಮೊದಲೇ ಮದುವೆ ಆಗಿದ್ದ ಕಾರಣ ಆತ ಮೇಲೆ ಪೋಕ್ಸೋ ಪ್ರಕರಣ ಕೂಡ ದಾಖಲಾಗಿತ್ತು.

ಕೆಲ ತಿಂಗಳ ಕಾಲ ಜೈಲಿನಲ್ಲಿದ್ದ ಆನಂದ್ ಹೊರ ಬಂದು ವಿದ್ಯಾಗಳ ಜೊತೆಯಲ್ಲಿ ರಾಜಿಮಾಡಿಕೊಂಡು ಮದುವೆಗೆ ಮುಂದಾದ. ಆದರೆ ವಿದ್ಯಾಳ ಪೋಷಕರು ಮದುವೆಗೆ ಒಪ್ಪದ ಕಾರಣ ಮತ್ತೆ ಓಡಿ ಹೋಗಿ ಮದುವೆ ಆದರು. ಮೊದ ಮೊದಲು ಜೋಡಿ ಹಕ್ಕಿಯ ರೀತಿ ಇದ್ದ ಜೋಡಿಗಳ ಪ್ರೀತಿಗೆ ಎರಡು ವರ್ಷದ ಹೆಣ್ಣು ಮಗು ಕೂಡ ಇದೆ. ಆದರೆ ಕಾಲ ಕಳೆದಂತೆ ಇವರಿಬ್ಬರ ನಡುವೆ ಮನಸ್ಥಾಪ ಹೆಚ್ಚಾಗಿದೆ. ಹಾಗಾಗಿ ವಿದ್ಯಾ ಗಂಡನಿಂದ ಕೆಲ ತಿಂಗಳ ಹಿಂದೆ ದೂರವಾಗಿದ್ದಾಳೆ. ನಂತರ ಪೋಲೀಸ್ ಠಾಣೆಯಲ್ಲಿ ರಾಜೀ ಆಗಿದ್ದರಿಂದ ಮತ್ತೆ ಗಂಡನ ಜೊತೆಯಲ್ಲಿ ಹೋಗಿದ್ದಾಳೆ.

ಪೋಲೀಸ್ ಠಾಣೆಯಲ್ಲಿ ಒಪ್ಪಿಕೊಂಡು ಗಂಡನ ಜೊತೆಯಲ್ಲಿ ಹೋಗಿದ್ದ ವಿದ್ಯಾ ನಂತರ ಕೆಲ ತಿಂಗಳ ಹಿಂದೆ ಮತ್ತೆ ದೂರವಾಗಿದ್ದಾಳೆ. ಒಬ್ಬಂಟಿಯಾಗಿದ್ದ ಮಹಿಳೆ ಹೊಟ್ಟೆ ಪಾಡಿಗಾಗಿ ದೊಡ್ಡಬಳ್ಳಾಪುರ ಪಾಸ್ಕಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಗಂಡ ಆನಂದ್ ಕೂಡ ಖಾಸಗಿ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿರುತ್ತಾನೆ. ಈ ವೇಳೆ 15 ರ ರಾತ್ರಿ 11:48 ರ ವೇಳೆಯಲ್ಲಿ ದೊಡ್ಡಬಳ್ಳಾಪುರದ SGS  ಲಾಡ್ಜ್‌ನಲ್ಲಿ ರೂಂ ಮಾಡಿಕೊಂಡು, ಕೈಯಲ್ಲಿ ಊಟದ ಪಾರ್ಸೆಲ್ ತೆಗೆದುಕೊಂಡು ಒಳಗೆ ಹೋಗಿದ್ದಾರೆ.

ಒಂದು ಗಂಟೆಯ ನಂತರ ಗಂಡ ಆನಂದ್ ರಾತ್ರಿಯೇ ಹೊರ ಬಂದು ರೂಂ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದಾನೆ. 24 ಗಂಟೆ ಕಳೆದ ನಂತರ ಲಾಡ್ಜ್ ಸಿಬ್ಬಂದಿ ಬೀಗ ಹಾಕಿರುವುದನ್ನ ನೋಡಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ರೂಂ ತೆಗೆದು ಒಳಗೆ ಹೋದ ಪೋಲೀಸರು ನೋಡಿದಾಗ, ಐಡಿ ಕಾರ್ಡ್ ನ ಟ್ಯಾಗ್ ಬಳಸಿ ಆಕೆಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಘಟನೆ ಕುರಿತು ದೊಡ್ಡಬಳ್ಳಾಪುರ ನಗರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ.

ಪ್ರೀತಿಸಿ ಮದುವೆ ಆಗಿದ್ದ ಕಾರಣ ಪೋಷಕರು ಈಕೆಯನ್ನ ಕ್ಯಾರೆ ಎನ್ನುತ್ತಿರಲಿಲ್ಲ‌. ಬದುಕಿದರೂ ನಿನ್ನ ಜೊತೆ, ಸತ್ತರೂ ನಿನ್ನ ಜೊತೆ ಎಂದು ಹೋಗಿದ್ದ ಮಹಿಳೆ ಇಂದು ಗಂಡನಿಂದಲೇ ಹೆಣವಾಗಿದ್ದಾಳೆ. ಇನ್ನೂ ಆರೋಪಿ ಪತ್ತೆ ಆದ ನಂತರ ಕೊಲೆಗೆ ನಿಖರ ಕಾರಣ ತಿಳಿದುಬರಬೇಕಿದೆ.
 

Add Zee News as a Preferred Source
TAGS:
Crime