SOCIAL MEDIA

Newsletter

PARTNER SITES
Select Language Select State

ಉದ್ಯಾನ ನಗರಿನ ಸುತ್ತಾಡಿ.. ಬೆಂಗಳೂರಲ್ಲಿ ನೀವು ನೋಡಲೇಬೇಕಾದ ಆಕರ್ಷಣೀಯ ಸ್ಥಳಗಳು

ಮೃಗಾಲಯ, ಸಾಕು ಪ್ರಾಣಿಗಳ ಮೂಲೆ, ಪ್ರಾಣಿಗಳ ರಕ್ಷಣಾ ಕೇಂದ್ರ, ಚಿಟ್ಟೆ ಆವರಣ, ಅಕ್ವೇರಿಯಂ, ಹಾವಿನ ಮನೆ, ಸಫಾರಿ ಉದ್ಯಾನ ಹೊಂದಿರುವ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಉದ್ಯಾನದಲ್ಲಿ ಪ್ರಾಚೀನ ದೇವಾಲಯಗಳು ಇದ್ದು ಇದು ಚಾರಣ ಮತ್ತು ಪಾದಯಾತ್ರೆಯ ತಾಣವಾಗಿದೆ.

Reported By Bhimappa Written By Bhimappa
Published: Sep 17, 2026, 02:41 PM IST | Updated: Sep 17, 2026, 03:04 PM IST
Image Credit: File Photo
Join

ಬೆಂಗಳೂರು ಎಂದರೆ ಇಡೀ ವಿಶ್ವಕ್ಕೆ ಆಕರ್ಷಿಯ ಸ್ಥಳವಾಗಿದೆ. ವಿಶ್ವದಲ್ಲಿ ಯಾವುದೇ ನಗರಕ್ಕೆ ಹೋದರೂ ಬೆಂಗಳೂರು ನಗರದ ಹೆಸರು ಗೊತ್ತಿರುವವರು ಇದ್ದೇ ಇರುತ್ತಾರೆ ಎನ್ನಬಹುದು. ಪ್ರಪಂಚದಲ್ಲಿ ಅಷ್ಟೊಂದು ಖ್ಯಾತಿ, ಪ್ರಸಿದ್ಧಿ, ಹೆಸರನ್ನು ಸಿಲಿಕಾನ್‌ ಸಿಟಿ ಪಡೆದುಕೊಂಡಿದೆ. ದಿನಲೂ ನೂರಾರು ಬೆಳವಣಿಗೆ ನಡೆಯುವ ಈ ಬೆಂಗಳೂರಿನಲ್ಲಿ ಪ್ರವಾಸಿ ತಾಣಗಳಿಂದಲೂ ಪ್ರವಾಸಿಗರನ್ನು ಸೆಳೆಯುತ್ತಿರುತ್ತದೆ. ಇಷ್ಟೇ ಅಲ್ಲ, ಉದ್ಯೋಗ ಹರಸಿಕೊಂಡು ಎಷ್ಟೋ ಜನರು ಬೆಂಗಳೂರಿಗೆ ಆಗಮಿಸಿದ್ದು ಎಲ್ಲರಿಗೂ ಆಶ್ರಯವನ್ನು ನೀಡಿದೆ. ನಿತ್ಯ ಲಕ್ಷಂತಾರ ಜನರು ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿದ್ದು ಇದರಲ್ಲಿ ಕರ್ನಾಟಕದವರಿಗಿಂತ ಬೇರೆ ರಾಜ್ಯಗಳ ಜನರೇ ಅಧಿಕ ಸಂಖ್ಯೆಯಲ್ಲಿ ಇದ್ದಾರೆ.‌ ದೇಶದ ವಿವಿಧ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ಜನರು ಉದ್ಯೋಗಕ್ಕಾಗಿ ಈ ಉದ್ಯಾನ ನಗರಿಗೆ ಬಂದಿದ್ದರಿಂದ ಅಷ್ಟೇ ಪ್ರಮಾಣದಲ್ಲಿ ಜನದಟ್ಟಣೆ ಕೂಡ ಇದೆ. ಇದರಿಂದ ದಿನನಿತ್ಯ ನಗರದಲ್ಲಿ ಹೇಳತೀರದಷ್ಟು ಟ್ರಾಫಿಕ್‌ ಆಗುತ್ತದೆ. ಕೇವಲ 10 ನಿಮಿಷ ಪ್ರಯಾಣ ಇರುವ ಸ್ಥಳಕ್ಕೆ ಬರೋಬ್ಬರಿ ಅರ್ಧಗಂಟೆ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಇದೆ. ಎಷ್ಟೇ ಜನರು ಬೆಂಗಳೂರಿಗೆ ಬಂದರೂ ನಗರದ ಅಂದವೇನು ಕಡಿಮೆ ಆಗಿಲ್ಲ. ದಿನದಿಂದ ದಿನಕ್ಕೆ ಬೆಂಗಳೂರು ಗಾರ್ಡನ್‌ ಸಿಟಿಯಾಗಿ ಬೆಳೆಯುತ್ತಿದ್ದು ಗಾರ್ಡನ್‌ ಸಿಟಿ ಆಫ್‌ ಇಂಡಿಯಾ ಎಂದು ಖ್ಯಾತಿ ಪಡೆದುಕೊಂಡಿದೆ. ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಬೆಂಗಳೂರು ಕೂಡ ಒಂದಾಗಿದೆ. ಇಲ್ಲಿ ನೋಡಲೇಬೇಕಾದ ಸ್ಥಳಗಳು.

ಸರ್ಕಾರಿ ವಸ್ತುಸಂಗ್ರಹಾಲಯ: 1865 ರಲ್ಲಿ ಆಗಿನ ಮೈಸೂರು ರಾಜ್ಯವೂ ಮೈಸೂರು ಮುಖ್ಯ ಆಯುಕ್ತ ಎಲ್‌ಬಿ ಬೌರಿಂಗ್‌ ಅವರ ಬೆಂಬಲದೊಂದಿಗೆ ಸರ್ಜನ್‌ ಎಡ್ವರ್ಡ್‌ ಬಾಲ್ಫೋರ್‌ ಅವರ ಮಾರ್ಗದರ್ಶನದಲ್ಲಿ ಸರ್ಕಾರಿ ವಸ್ತುಸಂಗ್ರಹಾಲಯವನ್ನು ಸ್ಥಾಪನೆ ಮಾಡಿತು. ಇದು ಇಡೀ ಭಾರತದ ಅತ್ಯಂತ ಹಳೆಯ ವಸ್ತುಸಂಗ್ರಹಾಲಗಳಲ್ಲಿ ಒಂದಾಗಿರುವುದು ವಿಶೇಷ. ಇಲ್ಲಿ ಹಳೆಯ ಕಾಲದ ಆಭರಂಗಳು, ಶಿಲ್ಪಕಲೆ, ನಾಣ್ಯಗಳು ಮತ್ತು ರಾಜರು ಕಾಲಗಳ ಇತಿಹಾಸದ ಶಾಸನಗಳನ್ನು ಸಂಗ್ರಹಿಸಿ ಇಡಲಾಗಿದೆ. ಪುರಾತತ್ವ ಮತ್ತು ಭೈವೈಜ್ಞಾನಿಕ ಕಲಾಕೃತಿಗಳ ಅಪತೂಪದ ಸಂಗ್ರಹವನ್ನು ಹೊಂದಿದೆ. ಇದರ ಇನ್ನೊಂದು ವಿಶೇಷ ಎಂದರೆ ಇಲ್ಲಿ ಹಲ್ಮಿಡಿ ಶಾಸನವನ್ನು ನೀವು ನೋಡಬಹುದು. ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿದೆ.    

ಚಿಟ್ಟೆ ಉದ್ಯಾನ; ಭಾರತದಲ್ಲಿಯೇ ಮೊಟ್ಟ ಮೊದಲ ಚಿಟ್ಟೆ ಉದ್ಯಾನವನ್ನು ಸ್ಥಾಪನೆ ಮಾಡಿರುವುದು ಇದೇ ಬೆಂಗಳೂರಿನ ಬನ್ನೆರುಘಟ್ಟದಲ್ಲಿ. ಅಂದಿನ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕಪಿಲ್‌ ಸಿಬಲ್‌ ಅವರು ಬೆಂಗಳೂರಿನಲ್ಲಿ ಚಿಟ್ಟೆ ಉದ್ಯಾನವನ್ನು 2006 ನವೆಂಬರ್ 25 ರಂದು ಆವರಣವನ್ನು ತೆರೆದರು. ಈ ಚಿಟ್ಟೆ ಉದ್ಯಾನವು 7.5 ಎಕರೆ ಪ್ರದೇಶ ಇದೆ. ಇಲ್ಲಿ ಚಿಟ್ಟೆಗಳ ಸಂರಕ್ಷಣಾಲಯ, ವಸ್ತುಸಂಗ್ರಹಾಲಯ ಮತ್ತು ಆಡಿಯೋವಿಶುವಲ್‌ ರೂಮ್‌ ಅನ್ನು ಹೊಂದಿದೆ. ಪಾಲಿ ಕರ್ಬೊನೇಟ್‌ ಮೇಲ್ಛಾವಣಿಯನ್ನು ಹೊಂದಿರುವ ವೃತ್ತಾಕಾರದ ಆವರಣವಾದ ಚಿಟ್ಟೆ ಸಂರಕ್ಷಣಾಲಲವಯ ಹತ್ತು ಸಾವಿರ ಚದರ ಅಡಿಯಷ್ಟು ಇದೆ. ಸಂರಕ್ಷಣಾಲದ ಒಳಗೆ ಇಪ್ಪತ್ತಕ್ಕೂ ಅಧಿಕ ಜಾತಿಯ ಚಿಟ್ಟೆಗಳನ್ನು ಪೋಷಣೆ ಪರಿಸರವನ್ನು ವಿನ್ಯಾಸ ಮಾಡಲಾಗಿದೆ. ಇಲ್ಲಿ ಆರ್ದ್ರ ಉಷ್ಣವಲಯದ ಹವಾಮಾನವಾಗಿದ್ದು ಕೃತಕ ಜಲಪಾತ ಮತ್ತು ವಿವಿಧ ಸಸ್ಯವರ್ಗಗಳಿಂದ ಚಿಟ್ಟೆಗಳನ್ನು ಆಕರ್ಷಣೆ ಮಾಡುವಂತೆ ನಿರ್ಮಿಸಲಾಗಿದೆ.

ಜವಾಹರಲಾಲ್ ನೆಹರು ತಾರಾಲಯ; ಭಾರತದ ಮೊದಲ ಪ್ರಧಾನ ಮಂತ್ರಿಯ ಹೆಸರಿನ ಐದು ತಾರಾಲಯಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಐದು ತಾರಾಲಯಗಳಲ್ಲಿ ಬೆಂಗಳೂರಿನಲ್ಲಿರುವ ಜವಾಹರ‌ ಲಾಲ್ ನೆಹರು ತಾರಾಲಯವು ಒಂದಾಗಿದೆ. ಬೆಂಗಳೂರಿನಲ್ಲಿರುವ ಜವಾಹರ‌ ಲಾಲ್ ನೆಹರು ತಾರಾಲಯವನ್ನು 1989 ರಲ್ಲಿ ಬೆಂಗಳೂರು ಸಿಟಿ ಕಾರ್ಪೊರೇಷನ್‌ ಸ್ಥಾಪಿಸಿತು. ನೆಹರು ತಾರಾಲಯಗಳು ಭಾರತದ ಐದು ಸ್ಥಳಗಳಲ್ಲಿವೆ. ಬೆಂಗಳೂರು ಬಿಟ್ಟು ಉಳಿದ ನಾಲ್ಕು ನಗರಗಳು ಎಂದರೆ ಮುಂಬೈ, ನವದೆಹಲಿ, ಅಲಹಾಬಾದ್‌ ಮತ್ತು ಪುಣೆ ಆಗಿವೆ. ಬೆಂಗಳೂರಿನ ಹೈಗ್ರೌಂಡ್ಸ್‌ ಏರಿಯಾದಲ್ಲಿದೆ.    

ಸೇಂಟ್ ಮೇರಿಸ್ ಬೆಸಿಲಿಕಾ: ಬೆಂಗಳೂರಿನಲ್ಲಿ ಅತ್ಯಂತ ಚರ್ಚ್‌ ಕೂಡ ಇದೆ. ಪ್ರವಾಸಿಗರು ಇಲ್ಲಿಗೂ ಭೇಟಿ ನೀಡಬಹುದು. ಸೇಂಟ್‌ ಮೇರಿಸ್‌ ಬೆಸಿಲಿಕಾ ಕರ್ನಾಟಕ ರಾಜ್ಯದ ಬೆಂಗಳೂರಿನ ಆರ್ಚ್ಡಯಸೀಸ್‌ನಲ್ಲಿದೆ. ಇದು ಬೆಂಗಳೂರಿನ ಅತ್ಯಂತ ಹಳೆಯ ಚರ್ಚ್‌ಗಳಲ್ಲಿ ಒಂದಾಗಿದೆ. ಸಣ್ಣ ಬೆಸಿಲಿಕಾ ಸ್ಥಾನಮಾನಕ್ಕೆ ಏರಿಸಲಾದ ಕರ್ನಾಟಕ ರಾಜ್ಯದ ಮೊದಲ ಚರ್ಚ್‌ ಇದು ಆಗಿದೆ. ಪ್ರತಿ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ಸೇಂಟ್‌ ಮೇರಿಸ್‌ ಹಬ್ಬದ ಸಮಯದಲ್ಲಿ ನಡೆಯುವ ಹಬ್ಬಗಳಿಗೆ ಇದು ಪ್ರಸಿದ್ಧಿ ಪಡೆದಿದೆ. ಹಬ್ಬದಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾಗುತ್ತಾರೆ. ಆಗ ನೋಡುವುದು ಒಂದು ವೈಭೋಗ. ಇದು ಶಿವಾಜಿನಗರದಲ್ಲಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ; ಬೆಂಗಳೂರು ಬಳಿಯ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವನ್ನು 1970 ರಲ್ಲಿ ಸ್ಥಾಪನೆ ಮಾಡಲಾಯಿತು. ಸ್ಥಾಪನೆ ಮಾಡಿದ ನಾಲ್ಕು ವರ್ಷಗಳ ಬಳಿಕ 1974 ರಲ್ಲಿ ರಾಷ್ಟ್ರೀಯ ಉದ್ಯಾನವನ ಎಂದು ಘೋಷಣೆ ಮಾಡಲಾಯಿತು. 2002 ರಲ್ಲಿ ಈ ಉದ್ಯಾನದ ಒಂದು ಭಾಗವು ಜೈವಿಕ ಮೀಸಲು ಆಯಿತು. ಮೃಗಾಲಯ, ಸಾಕು ಪ್ರಾಣಿಗಳ ಮೂಲೆ, ಪ್ರಾಣಿಗಳ ರಕ್ಷಣಾ ಕೇಂದ್ರ, ಚಿಟ್ಟೆ ಆವರಣ, ಅಕ್ವೇರಿಯಂ, ಹಾವಿನ ಮನೆ, ಸಫಾರಿ ಉದ್ಯಾನ ಹೊಂದಿರುವ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಉದ್ಯಾನದಲ್ಲಿ ಪ್ರಾಚೀನ ದೇವಾಲಯಗಳು ಇದ್ದು ಇದು ಚಾರಣ ಮತ್ತು ಪಾದಯಾತ್ರೆಯ ತಾಣವಾಗಿದೆ. ಕರ್ನಾಟಕ ಮೃಗಾಲಯ ಪ್ರಾಧಿಕಾರ, ಬೆಂಗಳೂರಿನ ಕೃಷ ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ಅಶೋಕ ಟ್ರಸ್ಟ್‌ ಫಾರ್‌ ರಿಸರ್ಚ್‌ ಇನ್‌ ಎಕಾಲಜಿ ಅಂಡ್‌ ಎನ್ವಿರಾನ್ಮೆಂಟ್‌ ಸಹಯೋಗಿ ಸಂಸ್ಥೆಗಳು ಆಗಿವೆ. ರಾಷ್ಟ್ರೀಯ ಉದ್ಯಾನದಲ್ಲಿ ಆರು ಗ್ರಾಮೀಣ ಸೊಗಡಿನ ಗ್ರಾಮಗಳಿದ್ದು ಕುರಿ, ದನ ಮತ್ತು ಜಾನುವಾರು ಸಾಕಣೆಗಾಗಿ ಮೂರು ದೊಡ್ಡ ಪ್ರದೇಶಗಳಿವೆ. ಪ್ರವಾಸಿಗರು ನೋಡಲೇಬೇಕಾದ ಸ್ಥಳ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಆಗಿದೆ.  

ಲಾಲ್‌ಬಾಗ್;‌ ಇದು ಬೆಂಗಳೂರಿನ ಮಾವಳ್ಳಿ ಬಳಿ ಇದೆ. ಲಾಲ್‌ ಬಾಗ್‌ ಅಥವಾ ಲಾಲ್‌ ಬಾಗ್‌ ಬೊಟಾನಿಕಲ್‌ ಗಾರ್ಡನ್ಸ್‌ ಅಂದರೆ ರೆಡ್‌ ಗಾರ್ಡನ್ಸ್‌, ಇದು ಭಾರತದ ದಕ್ಷಿಣ ಬೆಂಗಳೂರಿನ ಪ್ರಸಿದ್ಧ ಸಸ್ಯೋದ್ಯನವಾಗಿದೆ. ಈ ಲಾಲ್‌ ಬಾಗ್‌ನಲ್ಲಿ 1889 ರಲ್ಲಿ ಗಾಜಿನ ಮನೆಯನ್ನು ನಿರ್ಮಾಣ ಮಾಡಲಾಯಿತು. ಇಲ್ಲಿ ಪ್ರತಿ ವರ್ಷ ಎರಡು ಹೂವಿನ ಪ್ರದರ್ಶನಗಳನ್ನು ಜನವರಿ 26 ಮತ್ತು ಆಗಸ್ಟ್‌ 15 ರಂದು ಆಯೋಜನೆ ಮಾಡಲಾಗುತ್ತದೆ. ಇದು ಬೆಂಗಳೂರಿನ ಪ್ರಮುಖವಾದ ಆಕರ್ಷಣೆಗಳಲ್ಲಿ ಒಂದಾಗಿದೆ. ಕೆಲವು ಜಾತಿಯ ಪಕ್ಷಿಗಳ ಇಲ್ಲಿ ನೆಲೆಸುತ್ತವೆ. ಮೈನಾ, ಗಿಣಿಗಳು, ಕಾಗೆಗಳು, ಬ್ರಾಹ್ಮಿನಿ ಪತಂಗ, ಕೊಳದ ಹೆರಾನ್‌, ಸಾಮಾನ್ಯ ಎಗ್ರೆಟ್‌, ಕಿಂಗ್‌ ಫಿಶನ್‌, ಮಚ್ಚೆಯುಳ್ಳ ಗೂಬೆಗಳು, ಮಚ್ಚೆಯುಳ್ಳ ಪತಂಗ, ಮಚ್ಚೆಯುಳ್ಳ ಪೆಲಿಕನ್‌, ಬಾತುಕೋಳಿಗಳು, ಭಾರತೀಯ ಕಾರ್ಮರಂಟ್‌, ಪರ್ಪಲ್‌ ಮೂರ್‌ ಹೆನ್‌ ಸೇರಿದಂತೆ ಇನ್ನು ಹಲವಾರು ಪಕ್ಷಿಗಳು ಲಾಲ್‌ಬಾಗ್‌ನಲ್ಲಿ ನೆಲೆಸುತ್ತಿವೆ. 
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES