• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /AI ತಂತ್ರಜ್ಞಾನದ ಮೂಲಕ ಆಸ್ತಿ ತೆರಿಗೆ ವಸೂಲಿ: ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವಿನೂತನ ಹೆಜ್ಜೆ

AI ತಂತ್ರಜ್ಞಾನದ ಮೂಲಕ ಆಸ್ತಿ ತೆರಿಗೆ ವಸೂಲಿ: ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವಿನೂತನ ಹೆಜ್ಜೆ

AI ಧ್ವನಿ ಏಜೆಂಟ್‌ ಮೂಲಕ ಸುಮಾರು 35.11 ಕೋಟಿ ರೂ. ಆಸ್ತಿ ತೆರಿಗೆ ವಸೂಲಿ ಮಾಡುವ ಮುಲಕ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವಿನೂತನ ಹೆಜ್ಜೆ ಇಟ್ಟಿದೆ.

Written ByYashaswini V
Published: Sep 30, 2026, 12:17 PM IST|Updated: Sep 30, 2026, 12:23 PM IST
joinshare
AI ತಂತ್ರಜ್ಞಾನದ ಮೂಲಕ ಆಸ್ತಿ ತೆರಿಗೆ ವಸೂಲಿ: ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವಿನೂತನ ಹೆಜ್ಜೆ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

2

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

3

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

4

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

5

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಆಸ್ತಿ ತೆರಿಗೆ ಪಾವತಿ ಮಾಡಬೇಕಾದ ಬಗ್ಗೆ ಮಾಹಿತಿ ಇಲ್ಲದ, ಪಾವತಿಸಲು ಮರೆತಿರುವ ಅಥವಾ ವರ್ಷಗಳಿಂದ ಪಾವತಿ ಬಾಕಿ ಉಳಿಸಿಕೊಂಡಿರುವವರಿಂದ ಪಾವತಿ ಮಾಡಿಸುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ವಿನೂತನ ಮಾದರಿಯಲ್ಲಿ ಪರಿಹಾರ ನೀಡಲು ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಮುಂದಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಕೆಲವು ಆಸ್ತಿ ಮಾಲೀಕರಿಗೆ ತಾವು ಪಾಲಿಕೆಗೆ ಪಾವತಿಸಲು ಬಾಕಿ ಇರಿಸಿಕೊಂಡಿರುವ ನಿಖರವಾದ ಒಟ್ಟು ತೆರಿಗೆ ಮೊತ್ತ ಎಷ್ಟು? ಎಂದಿನಿಂದ ಬಾಕಿ ಇದೆ? ಬಾಕಿ ತೆರಿಗೆಯನ್ನು ಹೇಗೆ ಆನ್‌ಲೈನ್‌ನಲ್ಲಿ ಸರಳವಾಗಿ ಪಾವತಿಸಬಹುದು? ಎಂಬುದರ ಬಗ್ಗೆ ತಿಳಿಯದೆ ತೆರಿಗೆ ಪಾವತಿಸುವಲ್ಲಿ ದೀರ್ಘಾವಧಿ ವಿಳಂಬವಾಗಿರುವುದು ಇತ್ಯಾದಿ ಅಂಶಗಳನ್ನು ಮನಗಂಡ ಪಾಲಿಕೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಎಲ್ಲ ಸುಸ್ತಿದಾರರನ್ನು ಪ್ರತಿ ದಿನ 2 ಬಾರಿ ಕರೆ ಮೂಲಕ ತಲುಪಿದ್ದು, ಪಾವತಿ ಸಂಬಂಧಿಸಿದಂತೆ ವಿಷಯ ಮನದಟ್ಟು ಮಾಡಿಸಿದೆ.

ಮಾರ್ಚ್ ಮತ್ತು ಜೂನ್ ನಡುವಿನ ಅವಧಿಯಲ್ಲಿ, AI ಧ್ವನಿ ಏಜೆಂಟ್ ಮೂಲಕ 64 ವಾರ್ಡ್‌ಗಳಲ್ಲಿ ಬರೋಬ್ಬರಿ 4,54,908 ಕರೆಗಳನ್ನು ಮಾಡಲಾಗಿದ್ದು, ಒಟ್ಟು 59,604 ಆಸ್ತಿ ಮಾಲೀಕರನ್ನು ಅವರ ಮಾತೃಭಾಷೆ ಕನ್ನಡದಲ್ಲೇ ತಲುಪುವಲ್ಲಿ ಪಶ್ಚಿಮ ಪಾಲಿಕೆ ಯಶಸ್ವಿಯಾಗಿದೆ.

ಸ್ವಯಂಚಾಲಿತ AI ಕರೆ:
ಈ ಸ್ವಯಂಚಾಲಿತ AI ಕರೆಯು ನಾಗರಿಕರಿಗೆ ಅವರ ಬಾಕಿ ಇರುವ ಮೊತ್ತ ಎಷ್ಟು, ಯಾವ ವರ್ಷದಿಂದ ಬಾಕಿ ಇದೆ ಮತ್ತು ಅದನ್ನು ಆನ್‌ಲೈನ್‌ನಲ್ಲಿ ಹೇಗೆ ಪಾವತಿಸಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿ ನೀಡಿದೆ.

ಈ ಅಭಿಯಾನದ ಫಲವಾಗಿ 26,962 ಆಸ್ತಿ ಮಾಲೀಕರು ತೆರಿಗೆ ಪಾವತಿಸುವುದಾಗಿ ಒಪ್ಪಿಕೊಂಡಿದ್ದು, ಇದರಿಂದ 35.11 ಕೋಟಿ ರೂ. ಮೌಲ್ಯದ ಬಾಕಿ ಸಂಗ್ರಹಣೆಗೆ ದಾರಿ ಮಾಡಿಕೊಟ್ಟಿದೆ. ಇವರಲ್ಲಿ 10,303 ಜನರು ಪಾವತಿಗೆ ನಿರ್ದಿಷ್ಟ ದಿನಾಂಕವನ್ನು ತಿಳಿಸಿದ್ದರೆ, 5,747 ಜನರು ಶೀಘ್ರದಲ್ಲಿ ಪಾವತಿಸುವುದಾಗಿ ಭರವಸೆ ನೀಡಿದ್ದಾರೆ.

ತೆರಿಗೆ ಸುಸ್ತಿದಾರರನ್ನು ಗುರುತಿಸುವುದಕ್ಕಿಂತಲೂ ಅವರನ್ನು ತಲುಪುವುದು ಪಾಲಿಕೆಗೆ ಸವಾಲಿನ ಕೆಲಸವಾಗಿತ್ತು. ಒಂದು ಟ್ಯಾಕ್ಸ್‌ ಸೈಕಲ್ (tax cycle)ನಲ್ಲಿ ಲಕ್ಷಾಂತರ ಫೋನ್ ಕರೆಗಳನ್ನು ಮಾಡಲು ಒಂದು ಇಡೀ ಟ್ಯಾಕ್ಸ್‌ ಎಸ್ಟಾಬ್ಲಿಷ್‌ಮೆಂಟ್‌ಗಿಂತಲೂ ದೊಡ್ಡದಾದ ಬೃಹತ್ ಕಾಲ್ ಸೆಂಟರ್‌ ಅಗತ್ಯ ಬೀಳುತ್ತಿತ್ತು ಮತ್ತು ಇದರಿಂದಾಗಿ ಸಹಾಯಕ ಕಂದಾಯ ಅಧಿಕಾರಿಗಳ (ARO) ಸರ್ವೇ ಮತ್ತು ಫೀಲ್ಡ್‌ ರಿಕವರಿ ಕೆಲಸಗಳಿಗೆ ಅಡಚಣೆಯುಂಟಾಗಬಹುದಿತ್ತು. ಆದರೆ AI ಮೊದಲ ಹಂತದ ಕರೆಗಳನ್ನು ನಿರ್ವಹಿಸಿದ್ದರಿಂದ, ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕಾದ ಪ್ರಮುಖ ಪ್ರಕರಣಗಳ ಮೇಲೆ ಮಾತ್ರ ಗಮನಹರಿಸಲು ಅನುಕೂಲವಾಯಿತು. ಅಲ್ಲದೆ, ಈ ಉಪಕ್ರಮದಿಂದಾಗಿ, ಹಲವು ವರ್ಷಗಳಿಂದ ತಪ್ಪಾಗಿ ಉಳಿದಿದ್ದ ದಾಖಲೆಗಳು ಸರಿಪಡಿಸಲ್ಪಟ್ಟಿವೆ.

17,314 ನಿಷ್ಕ್ರಿಯ ಫೋನ್ ಸಂಖ್ಯೆಗಳು ಹಾಗೂ 6,315 ಬೇರೆಯವರ ಸಂಖ್ಯೆಗಳು ಆಸ್ತಿ ಹಳೆ ಮಾಲೀಕರಿಗೆ ಸೇರಿದ್ದ ಫೋನ್‌ ನಂಬರ್ ಪತ್ತೆಯಾಗಿ ಪಟ್ಟಿ ಪರಿಷ್ಕರಿಸಲ್ಪಟ್ಟಿದೆ. ಜತೆಗೆ 4,577 ಆಸ್ತಿಗಳಲ್ಲಿ ಯಾವುದೇ ಬಾಕಿ ಇಲ್ಲದಿರುವುದು ದೃಢಪಟ್ಟು, ಆ ನಾಗರಿಕರಿಗೆ ಅನಗತ್ಯ ನೋಟಿಸುಗಳು ತಪ್ಪಿವೆ. ಇದೀಗ ಹೊಸ ತಂತ್ರಜ್ಞಾನದಿಂದ ಈ ಸಮಸ್ಯೆಗೆ ಪರಿಹಾರ ಸಿಕ್ಕಿದೆ.

'ವೋಕಲ್‌ಲ್ಯಾಬ್ಸ್'ನಿಂದ ತಂತ್ರಜ್ಞಾನ ಅಭಿವೃದ್ಧಿ:
ಈ ತಂತ್ರಜ್ಞಾನವನ್ನು ಬೆಂಗಳೂರಿನ ಯುವ ಸ್ಟಾರ್ಟ್‌ಅಪ್ 'ವೋಕಲ್‌ಲ್ಯಾಬ್ಸ್' (VocalLabs) ಸಂಸ್ಥೆಯ ಮೂವರು ಸಂಸ್ಥಾಪಕರಾದ (ಐಐಟಿ ಮದ್ರಾಸ್‌ನ ಹಳೆ ವಿದ್ಯಾರ್ಥಿಗಳು) ನೀಲೇಶ್ ಕುಮಾರ್, ಮೃತ್ಯುಂಜಯ್ ದಾಸ್ ಮತ್ತು ರಾಗ್ ಸನಿಲ್ ಅವರು ಅಭಿವೃದ್ಧಿಪಡಿಸಿದ್ದಾರೆ.

ಪೌರಾಡಳಿತದ ಆದಾಯಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ತ್ವರಿತವಾಗಿ ಅರ್ಥಮಾಡಿಕೊಂಡು ಅವರು, ಸ್ಥಳೀಯ ಭಾಷೆ ಹಾಗೂ ಪರಿಸ್ಥಿತಿಗಳಿಗೆ ಅನುಗುಣವಾಗಿ ತ್ವರಿತವಾಗಿ ಪರಿಹಾರವನ್ನು ರೂಪಿಸಿದ್ದಾರೆ. ಇದೇ ವೇಳೆ ಪಾಲಿಕೆಯಿಂದ ಎಂದಿಗೂ ಕರೆ ಮಾಡಿ ಫೋನ್‌ ಮೂಲಕ ಪಾವತಿ ಮಾಡುವಂತೆ ಕೇಳುವುದಿಲ್ಲ. ಒಟಿಪಿಗಳು, ಕಾರ್ಡ್ ಸಂಖ್ಯೆಗಳು, ಯುಪಿಐ ಪಿನ್‌ಗಳು ಅಥವಾ ಬ್ಯಾಂಕ್ ವಿವರಗಳನ್ನು ಎಂದಿಗೂ ಕೇಳುವುದಿಲ್ಲ. ಇಂತಹ ವಂಚಕರ ಕರೆಗಳ ಬಗ್ಗೆ ಎಚ್ಚರವಹಿಸುವಂತೆ ನಾಗರಿಕರಲ್ಲಿ ಪಾಲಿಕೆ ಮನವಿ ಮಾಡಿದೆ.

ಒಂದು ವೇಳೆ ಆ ರೀತಿ ಕರೆ ಬಂದಲ್ಲಿ ಅದು ಪಾಲಿಕೆಯದ್ದಾಗಿರುವುದಿಲ್ಲ. ಈ ರೀತಿ ಘಟನೆಗಳು ನಡೆದಲ್ಲಿ ಕರೆ ಮಾಡಿದವರಿಗೆ ಮಾಹಿತಿ ನೀಡದೆ ಸಂಬಂಧಪಟ್ಟವರಿಗೆ ದೂರು ನೀಡುವಂತೆ ಕೋರಲಾಗಿದೆ. ಸುಸ್ತಿದಾರರಿಗೆ ಅಥವಾ ತೆರಿಗೆ ಪಾವತಿದಾರರಿಗೆ ಕಡ್ಡಾಯವಾಗಿ online portal https://bbmptax.karnataka.gov.in ನಲ್ಲಿ ಪಾವತಿಸಲು ಅಥವಾ ತಮ್ಮ ವ್ಯಾಪ್ತಿಯ ವಾರ್ಡ್/‌ ಸಹಾಯಕ ಕಂದಾಯ ಅಧಿಕಾರಿ ಕಚೇರಿಯಲ್ಲಿ ಬಾಕಿಗಳನ್ನು ಪಾವತಿಸುವಂತೆ ಮನವಿ ಮಾಡಿದೆ.

* ಒಟ್ಟು ಕರೆಗಳು: 4,54,908  
* ತಲುಪಲಾದ ಒಟ್ಟು ಆಸ್ತಿ ಮಾಲೀಕರ ಸಂಖ್ಯೆ: 59,604 (ಒಟ್ಟು 64 ವಾರ್ಡ್‌ಗಳಲ್ಲಿ)
* ತೆರಿಗೆ ಪಾವತಿಸುವುದಾಗಿ ಒಪ್ಪಿಕೊಂಡಿರುವ ಆಸ್ತಿ ಮಾಲೀಕರ ಸಂಖ್ಯೆ: 26,962
* ಇದರಿಂದ ಸಂಗ್ರಹವಾಗಲಿರುವ ಒಟ್ಟು ಬಾಕಿ: 35.11 ಕೋಟಿ ರೂ.
* ಪಾವತಿಗೆ ನಿರ್ದಿಷ್ಟ ದಿನಾಂಕ ತಿಳಿಸಿರುವ ಆಸ್ತಿ ಮಾಲೀಕರ ಸಂಖ್ಯೆ: 10,303 
* ಶೀಘ್ರದಲ್ಲಿ ಪಾವತಿಸುವುದಾಗಿ ಭರವಸೆ ನೀಡಿರುವ ಆಸ್ತಿ ಮಾಲೀಕರ ಸಂಖ್ಯೆ: 5,747
 

Add Zee News as a Preferred Source
TAGS:
Kannada News
Income Tax