ಬೆಂಗಳೂರಿನ ಯಲಹಂಕ ನ್ಯೂಟೌನ್‌ನಲ್ಲಿ ಕಳೆದ ಶುಕ್ರವಾರ (ನವೆಂಬರ್ 13) ಹೆಂಡತಿ ಕಣ್ಣೆದುರೇ ನಡೆದಿದ್ದ ಗಂಡನ ಬರ್ಬರ ಹ*ತ್ಯೆಗೆ ಸಂಬಂಧಿಸಿದಂತೆ ಯಲಹಂಕ ನ್ಯೂ ಟೌನ್ ಪೊಲೀಸರು ಐವರು ಆರೋಪಿಗಳನ್ನು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ. ಇನ್ನು ಬಂಧಿತ ಆರೋಪಿಗಳನ್ನು ತನಿಖೆ ನಡೆಸಿದ ಪೊಲೀಸರಿಂದ ಈ ಘಟನೆ ಹಿಂದಿನ ಸುಪಾರಿ ರಹಸ್ಯ ಬಯಲಾಗಿದೆ.
ಕಿರಣ್ ಸೇರಿ ಐವರ ಬಂಧನ..
ಹೌದು, ಯಲಹಂಕದಲ್ಲಿ ಹೆಂಡತಿ ಮುಂದೆಯೇ ಗಂಡನ ಕೊ**ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಚರಣ್ ಎಂಬಾ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಹೆಂಡತಿ ಎದುರಿನಲ್ಲೇ ಕೊ**ಚ್ಚಿ ಕೊ**ಲೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ ಆಗಿದ್ದು, ಪ್ರಕರಣದ ಪ್ರಮುಖ ಆರೋಪಿ ಕಿರಣ್ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಸುಪಾರಿ ನೀಡಿ ಕೊ**ಲೆ:
ಸುಪಾರಿ ನೀಡಿದ್ದ ಕಿರಣ್ ಮತ್ತು ಮೃತ ಚರಣ್ ಇಬ್ಬರು ಒಟ್ಟಿಗೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. ಕೆಲ ವ್ಯವಹಾರದ ವಿಚಾರಕ್ಕೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಬಂದಿತ್ತು. ಇದೇ ವಿಚಾರಕ್ಕೆ ತನಗೆ ಕೋಟ್ಯಾಂತರ ರೂ. ಮೋಸ ಮಾಡಿದ್ದಾನೆ ಎಂದು ವ್ಯವಹಾರದದಿಂದ ಹೊರ ಬಂದಿದ್ದ ಕಿರಣ್, ಬಳಿಕ ಚರಣ್ ಮೇಲೆ ಹಗೆ ಸಾಧಿಸಿದ್ದ. ಇದೆ ಕಾರಣಕ್ಕೆ ರುದ್ರೇಶ್ ಎಂಬಾತನ ಜೊತೆಗೆ ಮಾತನಾಡಿ ಡೀಲ್ ನೀಡಿದ್ದ ಕಿರಣ್ ಸುಫಾರಿ ಕೊಟ್ಟು ಕೊ**ಲೆ ಮಾಡಿಸಿದ್ದಾನೆ ಎನ್ನಲಾಗಿದೆ.
ಮೂವತ್ತು ಲಕ್ಷಕ್ಕೆ ಚರಣ್ ಹ**ತ್ಯೆಗೆ ಸುಪಾರಿ:
ಉದ್ಯಮಿ ಚರಣ್ ಅವರನ್ನು ಕಿರಣ್ ಸುಪಾರಿ ಕೊಟ್ಟು ಕೊ*ಲೆ ಮಾಡಿಸಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕಿರಣ್ ಮೂವತ್ತು ಲಕ್ಷಕ್ಕೆ ಚರಣ್ ಹ**ತ್ಯೆಗೆ ಸುಪಾರಿ ನೀಡಿದ್ದನು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಯಲಹಂತ ನ್ಯೂ ಟೌನ್ ಪೊಲೀಸರಿಂದ ತನಿಖೆ ಮುಂದುವರೆದಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗಿದೆ.
ಕಿರಣ್ ಬಳಿ ಡೀಲ್ ತೆಗೆದುಕೊಂಡ ಬಳಿಕ ರುದ್ರೇಶ್ ಲೋಕೇಶ್ ಗೆ ಕೊ**ಲೆ ಮಾಡುವಂತೆ ತಿಳಿಸಿದ್ದ. ಅದರಂತೆ ಆಕಾಶ್ ಮತ್ತು ಕಿರಣ್ (ಇನ್ನೋರ್ವ ಕಿರಣ್) ಎಂಬುವವರಿಂದ ಉದ್ಯಮಿ ಚರಣ್‌ನನ್ನು ಹಾಡು ಹಗಲೇ ಬರ್ಬರವಾಗಿ ಹ**ತ್ಯೆಗೈಯಲಾಗಿದೆ.
ಚರಣ್ ಚಲನವಲನಗಳನ್ನು ಗಮನಿಸಿ ಪ್ಲಾನ್ ಮಾಡಿದ್ದ ಆರೋಪಿಗಳು.. ಕಚೇರಿಗೆ ಬಂದಾಗಲೇ ಹೊಡೆಯುವುದು ಸೂಕ್ತ ಎಂದು ಪ್ಲಾನ್ ಮಾಡಿದ್ದರು. ಅದರಂತೆ ಚರಣ್ ಆಫೀಸ್ ಗೆ ಬಂದಾಗಲೇ ಲಾಂಗು ಮಚ್ಚು ಬೀಸಿದ್ದ ಆಕಾಶ್ ಮತ್ತು ಕಿರಣ್ ಆತನ ಹೆಂಡತಿಯ ಕಣ್ಣೆದುರೇ ಕ್ರೌರ್ಯ ಮೆರೆದಿದ್ದರು. ಸದ್ಯ ಐವರನ್ನು ಅರೆಸ್ಟ್ ಮಾಡಿರುವ ಯಲಹಂಕ ನ್ಯೂಟೌನ್ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ಈಶಾನ್ಯ ವಿಭಾಗ ಡಿಸಿಪಿ ಮಿಥುನ್ ಕುಮಾರ್ ಜಿ. ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದು, ಚರಣ್ ಹಾಗೂ ಕಿರಣ್ ಈ ಹಿಂದೆ ಒಟ್ಟಿಗೆ ಇದ್ರು. ಗೌರಿ ಬಿದನೂರು ಕಡೆ ಇಬ್ಬರು ಕೂಡ ಒಟ್ಟಿಗೆ ಬ್ಯುಸಿನೆಸ್ ಮಾಡ್ತಿದ್ರು. ಕಿರಣ್ ಮೊದಲು ಪೈಟಿಂಗ್ ಕೆಲಸ ಮಾಡುತ್ತಿದ್ದ. ಚರಣ್ ಗೆ ಮೊದಲು ಕಿರಣ್ ಪೈಂಟರ್ ಕಂಟ್ರಾಕ್ಟ್ ಮಾಡ್ತಿದ್ದ. ಗೌರಿ ಬಿದನೂರಿನಲ್ಲಿ ಒಟ್ಟಿಗೆ ಲೇ ಔಟ್ ಡೆವಲ್ಪೆಂಟ್ ಮಾಡ್ತಿದ್ರು. ಅಲ್ಲಿಂದ ಲ್ಯಾಂಡ್ ವಿಚಾರವಾಗಿ ಭಿನ್ನಾಭಿಪ್ರಾಯವಾಗಿತ್ತು. ಕಿರಣ್ ರುದ್ರೇಶ್ @ ರೂಪೇಶ್ ಗೆ ಹಣ ಕೊಟ್ಟಿರ್ತಾನೆ. ಕಿರಣ್ ರುದ್ರೇಶ್ ಗೆ 15 ಲಕ್ಷ ಕೊಟ್ಟಿರ್ತಾನೆ. ರುದ್ರೇಶ್ ಆ ಹಣವನ್ನ ಸಂಪೂರ್ಣವಾಗಿ ಖರ್ಚು ಮಾಡಿಕೊಳ್ತಾನೆ. ಅನಂತರ ಕಿರಣ್ ರುದ್ರೇಶ್ ಗೆ ಚರಣ್ ನನ್ನ ಕೊ*ಲ್ಲಲು ಹೇಳ್ತಾನೆ. ರುದ್ರೇಶ್ ಲೋಕೆಶ್ ಎಂಬುವವನನ್ನು ಕಂಟ್ಯಾಕ್ಟ್ ಮಾಡ್ತಾನೆ. ಹಣ ಸಿಗುತ್ತೆ ಆತನನ್ನ ಸಾ**ಯಿಸುವಂತೆ ರುದ್ರೇಶ್ ಲೋಕೇಶ್ ಗೆ ಹೇಳ್ತಾನೆ. ಅಗ ಲೋಕೇಶ್ ತನ್ನ ಮಗ ಕಿರಣ್ ಗೆ ಸುಫಾರಿ ಕೊಡ್ತಾನೆ. ಅನಂತರದಲ್ಲಿ ಚರಣ್ ನನ್ನ ಆಕಾಶ್ ಮತ್ತು ಕಿರಣ್ ಕೊ**ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ತನಿಖೆ ವೇಳೆ ಬಯಲಾಯ್ತು ಸ್ಪೋಟಕ ವಿಚಾರ..
ಅಪ್ಪನೇ ಕೊ*ಲೆ ಮಾಡಲು ಸುಪಾರಿ ಪಡೆದು ಹತ್ಯೆಗೆ ಮಗನನ್ನು ಕಳಿಸಿರುವುದು ಬಯಲಿಗೆ ಬಂದಿದೆ.ಉದ್ಯಮಿ ಕಿರಣ್ ಆತನ ಜೊತೆಗೆ ಪರಿಚಯ ಇದ್ದ ರುದ್ರೇಶ್ ಗೆ ಸುಪಾರಿ ನೀಡಿದ್ದ..
ಹದಿನೈದು ಲಕ್ಷ ಹಣವನ್ನೂ ಪಡೆದಿದ್ದ ರುದ್ರೇಶ್ ಅಲಿಯಾಸ್ ರೂಪೇಶ್, ಬಳಿಕ ರುದ್ರೇಶ್ ನಾವು ಕೆಲಸ ಮುಗಿಸಿ ಮತ್ತೆ ಹದಿನೈದು ಲಕ್ಷ ಹಣ ಕೇಳಿಕೊಳ್ಳುವ ಎಂದು ಮೂವತ್ತು ಲಕ್ಷದ ಡೀಲ್ ಇದು ಎಂದು ಲೋಕೇಶ್ ಗೆ ಒಪ್ಪಿಸಿದ್ದ. ಡೀಲ್ ಪಡೆದ ಬಳಿಕ ತನ್ನ ಮಗ ಕಿರಣ್ ಗೆ ಹೇಳಿದ್ದ ಲೋಕೇಶ್.. ತಂದೆ ಹೇಳಿದಂತೆ ಗೆಳೆಯ ಆಕಾಶ್ ಜೊತೆಗೆ ಬಂದಿದ್ದ ಕಿರಣ್, ಚರಣ್ ಹ*ತ್ಯೆ ಮಾಡಿದ್ದನು.
ಪಾಪ ಪ್ರಾಯಶ್ಚಿತ್ತಕ್ಕಾಗಿ ಮಂಜುನಾಥನ ದರ್ಶನಕ್ಕೆ ತೆರಳಿದ್ದ ಆರೋಪಿಗಳು:
ಚರಣ್ ಹ**ತ್ಯೆ ಬಳಿಕ ಧರ್ಮಸ್ಥಳಕ್ಕೆ ಹೋಗಿದ್ದ ಆರೋಪಿಗಳು, ಪಾಪ ಪ್ರಾಯಶ್ಚಿತ ಮಾಡಿಕೊಳ್ಳಲು ಮಂಜುನಾಥನ ದರ್ಶನ ಪಡೆದಿದ್ದರು ಎನ್ನಲಾಗಿದೆ. ಇದೀಗ ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿಸಿರುವ ಯಲಹಂಕ ನ್ಯೂಟೌನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.