ಮಾರತ್ ಹಳ್ಳಿ ವಿಲ್ಲಾದಲ್ಲಿ ದೀಪಾವಳಿ ಪೂಲ್ ಪಾರ್ಟಿ... ಎಣ್ಣೆ ಜೊತೆ ಹುಕ್ಕಾ, ಡ್ರಗ್ಸ್ ಬಳಕೆ ಆರೋಪ!
ಇಂತ ರಿಚ್ ಪಾರ್ಟಿಗೆ ಇದ್ದಕ್ಕಿದ್ದಂತೆ ಸಿಸಿಬಿ ಶಾಕ್ ಕೊಟ್ಟಿತ್ತು.ಸದ್ಯ ಮೂವರನ್ನ ಅರೆಸ್ಟ್ ಮಾಡಿರೋ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು: ಅವರೆಲ್ಲ ಒಬ್ಬರಿಗೊಬ್ಬರಿಗೆ ಪರಿಚಯ ಇಲ್ಲದವರು. ಆದರೂ ಎಲ್ಲರೂ ಒಂದೇ ಕಡೆ ಸೇರಿದ್ರು. ಆ ಪಾರ್ಟಿಯಲ್ಲಿ ಎಣ್ಣೆ ಇತ್ತು. ಡಿಜೆ ಇತ್ತು.. ಅಷ್ಟಲ್ಲದೇ ಹುಕ್ಕಾ, ಡ್ರಗ್ಸ್ ಕೂಡ ಇತ್ತಂತೆ.. ಇಂತ ರಿಚ್ ಪಾರ್ಟಿಗೆ ಇದ್ದಕ್ಕಿದ್ದಂತೆ ಸಿಸಿಬಿ ಶಾಕ್ ಕೊಟ್ಟಿತ್ತು.ಸದ್ಯ ಮೂವರನ್ನ ಅರೆಸ್ಟ್ ಮಾಡಿರೋ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.
ಇದು ಬೆಂಗಳೂರಿನ ಮಾರತ್ ಹಳ್ಳಿಯ ಯಮಲೂರು ಕರಿಯಮ್ಮನ ಅಗ್ರಹಾರ ರೋಡ್ ನ ಖಾಸಗಿ ವಿಲ್ಲಾ. ಮೊನ್ನೆ ರಾತ್ರಿ ಅಂದ್ರೆ ದೀಪಾವಳಿ ಹಿಂದಿನ ದಿನರಾತ್ರಿ ಈ ವಿಲ್ಲಾದಲ್ಲಿ ಜೋರು ಪಾರ್ಟಿ ನಡೀತಿತ್ತು. ಒಳಗಡೆ 40-50 ಮಂದಿ ಹುಡುಗ ಹುಡುಗಿಯರು ಪಾರ್ಟಿ ನಶೆಯಲ್ಲಿದ್ರು.. ಆದರೆ ಈ ಪಾರ್ಟಿ ಮೇಲೆ ಇದ್ದಕ್ಕಿದ್ದಂತೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ರು.. ಒಳಗಡೆ ಇದ್ದವರೆಲ್ಲ ಬೆಚ್ಚಿಬಿದ್ರು. 50 ಮಂದಿ ಹುಡುಗು & ಹುಡುಗಿಯರ ಪಾರ್ಟಿ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರಿಗೆ ಎಣ್ಣೆ, ಹುಕ್ಕಾ ಜತೆ ಎಂಡಿಎಂಎ ಅಂತ ಡ್ರಗ್ಸ್ ಕೂಡ ಸಿಕ್ಕಿದ್ಯಂತೆ. ಬಳಿಕ ಪಾರ್ಟಿಯಲ್ಲಿದ್ದವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ರು. ಈ ವೇಳೆ ಪಾರ್ಟಿ ಆಯೋಜಕರು FV social 404 ಮತ್ತು hopzyx app ಮುಖಾಂತರ ಪೂಲ್ ಪಾರ್ಟಿ ಅಂತ ಪಾರ್ಟಿ ಆಯೋಜನೆ ಮಾಡ್ತಿದ್ರಂತೆ. ಬಳಿಕ ಯುವತಿಯರ ಮಾದಕ ಫೋಟೋ ವಿಡಿಯೋಗಳನ್ನ ಪೋಸ್ಟ್ ಮಾಡಿ ಗಾಳ ಹಾಕ್ತಿದ್ರಂತೆ. ಪ್ರತಿ ಯುವಕರಿಗೆ 1,710 ಯುವತಿಯರಿಗೆ 1,080ಕಪಲ್ಸ್ ಗೆ 2,400 ರೂ. ಪ್ರವೇಶ ಶುಲ್ಕ ಫಿಕ್ಸ್ ಮಾಡಿ, ಲೋಕೇಶನ್ ಗೆ ಕರೆಸಿಕೊಳ್ತಿದ್ರಂತೆ.
ಇನ್ನು ಪಾರ್ಟಿಯಲ್ಲಿ ಸಿಗುವ ಎಣ್ಣೆ ಸೇರಿದಂತೆ ಮಾದಕ ವಸ್ತುಗಳಿಗೆ ಸೆಪರೇಟ್ ಚಾರ್ಜ್ ಮಾಡಲಾಗಿ ರಾತ್ರಿ 09 ಗಂಟೆಯಿಂದ ಬೆಳಗಿನ ಜಾವ 05 ಗಂಟೆಯವರೆಗೆ ಪಾರ್ಟಿ ಆಯೋಜನೆ ಮಾಡಿದ್ರಂತೆ. ಅದೇ ರೀತಿ ಪಾರ್ಟಿ ನಡೆಸ್ತಿದ್ರು. ಆದ್ರೆ ಸಿಸಿಬಿ ಪೊಲೀಸರು ದಾಳಿ ಎಣ್ಣೆ, ಡ್ರಗ್ಸ್ ಸೇರಿದಂತೆ ಎಲ್ಲ ವಸ್ತುಗಳನ್ನ ಸೀಜ್ ಮಾಡಿ ಎಲ್ಲರ ರಕ್ತ ಮಾದರಿಯನ್ನ FSLಗೆ ರವಾನಿಸಿದ್ದಾರೆ. ಹಾಗೆ ಅರಿಹಂತ್ ಪಾಂಡೆ,ಅಭಿನವ್ ಪಾಂಡೆ ಮತ್ತು ಪಾರ್ಥ ಎಂಬ ಮೂವರು ಆರೋಪಿಗಳ ಬಂಧಿಸಿ ಮಾರತ್ ಹಳ್ಳೀ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಸದ್ಯ ಮಾರತ್ ಹಳ್ಳಿ ಪೊಲೀಸರು ತನಿಖೆ ನಡೆಸ್ತಿದ್ದು, ದೇಶಾದ್ಯಂತೆ ಇದೇ ರೀತಿ ಪಾರ್ಟಿಗಳನ್ನ ಆಯೋಜಿಸಿರೋ ಶಂಕೆ ಇದೆ.