• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಪತ್ನಿಯ ಎದುರೇ ಮಚ್ಚಿನಿಂದ ಕೊಚ್ಚಿ ಉದ್ಯಮಿ ಹ*ತ್ಯೆ..! ದೃಶ್ಯಕಂಡು ಬೆಚ್ಚಿಬಿದ್ದ ಜನ.. ಅಸಲಿಗೆ ಆಗಿದ್ದೇನು?

ಪತ್ನಿಯ ಎದುರೇ ಮಚ್ಚಿನಿಂದ ಕೊಚ್ಚಿ ಉದ್ಯಮಿ ಹ*ತ್ಯೆ..! ದೃಶ್ಯಕಂಡು ಬೆಚ್ಚಿಬಿದ್ದ ಜನ.. ಅಸಲಿಗೆ ಆಗಿದ್ದೇನು?

ಹಾಡುಹಗಲೇ ನಡೆದ ಭೀಕರ ಹತ್ಯೆಯೊಂದು ರಾಜಧಾನಿ ಜನರನ್ನು ಬೆಚ್ಚಿ ಬೀಳಿಸಿದೆ. ಎಂದಿನಂತೆ ಪತ್ನಿಯೊಂದಿಗೆ ಕಚೇರಿಗೆ ಬಂದಿದ್ದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು, ದುಷ್ಕರ್ಮಿಗಳು ಕಚೇರಿಯ ಮುಂದೆಯೇ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.. ಘಟನೆಯ ಸಂಪೂರ್ಣ ವಿವರ ಇಲ್ಲಿದೆ..

Written ByKrishna NK
Published: Nov 13, 2026, 17:30 IST|Updated: Nov 13, 2026, 17:31 IST
joinshare
ಪತ್ನಿಯ ಎದುರೇ ಮಚ್ಚಿನಿಂದ ಕೊಚ್ಚಿ ಉದ್ಯಮಿ ಹ*ತ್ಯೆ..! ದೃಶ್ಯಕಂಡು ಬೆಚ್ಚಿಬಿದ್ದ ಜನ.. ಅಸಲಿಗೆ ಆಗಿದ್ದೇನು?
Image Credit: Crime news

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ಆತ ರಿಯಲ್ ಎಸ್ಟೇಟ್ ಉದ್ಯಮಿ.‌ ಎಂದಿನಂತೆ ಇವತ್ತು ಬೆಳಗ್ಗೆ ಹೆಂಡತಿ ಜೊತೆಗೆ ಕಚೇರಿಗೆ ಬಂದಿದ್ದ. ಆತನಿಗೂ ಗೊತ್ತಿರಲಿಲ್ಲ ಇದು ಆತನ ಕೊನೆ ದಿನ ಅಂತಾ. ಕೆಲ ಸೆಕೆಂಡ್‌ಗಳಷ್ಟೇ ಕಚೇರಿ ಮುಂದೆಯೇ ಹೆಣವಾಗಿ ಹೋಗಿದ್ದಾನೆ. ಅಷ್ಟಕ್ಕೂ ಆಗಿದ್ದೇನೂ, ಕೊಲೆಯಾದವನು ಯಾರು ಎಂಬುದನ್ನು ಹೇಳ್ತಿವಿ ನೋಡಿ.

ನೋಡಿದ್ರಲ್ಲ ಈ ಭಯಾನಕ ದೃಶ್ಯವನ್ನ. ಗಂಡನ ಪ್ರಾಣ ಹೋಗುತ್ತಿದೆ. ಹೆಂಡತಿ ಸಹಾಯಕ್ಕೆ ಸ್ಥಳೀಯರನ್ನು ಸಹಾಯಕ್ಕೆ ಕರೆಯುತ್ತಿದ್ದಾಳೆ. ಆದರೆ ಅಷ್ಟರಲ್ಲಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಹೌದು, ಬೆಂಗಳೂರಿನ ಯಲಹಂಕ ನ್ಯೂಟೌನ್‌ನಲ್ಲಿ ಬೆಳ್ಳಂಬೆಳಿಗ್ಗೆ ನೆತ್ತರು ಹರಿದಿದೆ. ರಿಯಲ್ ಎಸ್ಟೇಟ್ ಉದ್ಯಮಿಯನ್ನ ಆತನ ಕಚೇರಿಯ ಮುಂದೆಯೇ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿ ಕೊಚ್ಚಿಕೊಚ್ಚಿ ಕೊಲೆ ಮಾಡಲಾಗಿದೆ.

ಹೌದು.. ಇವತ್ತು ಎಂದಿನಂತೆ ಕೊಲೆಯಾದ ಚರಣ್ ಬೆಳಗ್ಗೆ ಪತ್ನಿ ವಿಮರ್ಷಿಣಿ ಜೊತೆ ಆಫೀಸ್ ಗೆ ಬಂದಿದ್ರು.‌ ಕಾರಿಳಿದ ಪತ್ನಿ ಮೊದಲ ಮಹಡಿಯಲ್ಲಿದ್ದ ಆಫೀಸ್ ಕಡೆಗೆ ಹೋಗ್ತಿದ್ರು. ಚರಣ್ ಕಾರು ಪಾರ್ಕ್ ಮಾಡಿ ಫೋನ್ ನಲ್ಲಿ ಮಾತನಾಡುತ್ತಿದ್ದ. ಆದಾಗಲೇ ಚರಣ್ ಕಚೇರಿಯ ಮುಂದೆ ಬೈಕ್ ನಲ್ಲಿ ಬಂದಿದ್ದ ಇಬ್ಬರು ಹಂತಕರು ಹೊಂಚು ಹಾಕಿ ಕುಳಿತ್ತಿದ್ರು. ಚರಣ್ ನೋಡ್ತಿದ್ದಂತೆ ಬೈಕ್ ನಿಂದ ಇಳಿದು ಬಂದ ಹಂತಕ ಮಚ್ಚಿನಿಂದ ಅಟ್ಯಾಕ್ ಮಾಡಿದ್ದಾನೆ.‌ ಮನಸ್ಸೋ ಇಚ್ಚೆ ತಲೆಯನ್ನ ಕೊಚ್ಚಿದ್ದಾನೆ. ಕೇವಲ 1 ನಿಮಿಷದಲ್ಲಿ ಕೆಲಸ ಮುಗಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಭೀಕರ ದಾಳಿಗೆ ಒಳಗಾಗಿದ್ದ ಚರಣ್ ಅಲ್ಲೇ ಕುಸಿದು ಬಿದ್ದಿದ್ದಾನೆ. ನರಳಿ- ನರಳಿ ಪ್ರಾಣಬಿಟ್ಟಿದ್ದಾನೆ.‌ ಇದನ್ನು ಕಣ್ಣಾರೆ ಕಂಡ ಜನ ಬೆಚ್ಚಿಬಿದ್ದಿದ್ದಾರೆ.

ಅತ್ತ ಗಂಡನ ಕೊಲೆಯನ್ನ ಕಣ್ಣಾರೆ ಕಂಡ ಪತ್ನಿ ಗೋಳಾಡಿದ್ದಾಳೆ. ತಕ್ಷಣ ಮಾಹಿತಿ ತಿಳಿದ ಯಲಹಂಕ ನ್ಯೂ ಟೌನ್ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆ ರವಾನಿಸಿದ್ದಾರೆ. ಪೋಸ್ಟ್ ಮಾರ್ಟ್ಂ ಮುಗಿಸಿ ಕುಟುಂಸ್ಥರಿಗೆ ಮೃತದೇಹ ಹಸ್ತಾಂತರಿಸಿದ್ದಾರೆ.

ಚರಣ್ ಮೂಲತಃ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹರಿಸಂದ್ರ ಗ್ರಾಮದ ನಿವಾಸಿ. ಯಲಹಂಕದ ಕೋಗಿಲು ಸಮೀಪ ವಾಸವಾಗಿದ್ದು, ಕಳೆದ ಮೂರು ವರ್ಷಗಳ ಹಿಂದೆ ಮದುವೆ ಆಗಿತ್ತು. ಯಲಹಂಕ ನ್ಯೂ ಟೌನ್‌ನಲ್ಲಿ ಧನಿ ಪ್ರಾಪರ್ಟೀಸ್ ಎಂಬಾ ರಿಯಲ್ ಎಸ್ಟೇಟ್ ಕಂಪನಿ ಹೊಂದಿದ್ರು. ರಾಮನಗರ, ಚನ್ನಪಟ್ಟಣ ಹಾಗೂ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು.

ಕಳೆದ ಹಲವು ವರ್ಷಗಳಿಂದ ಯಲಹಂಕ ಭಾಗದಲ್ಲಿ ಲ್ಯಾಂಡ್ ಹಾಗೂ ಸೈಟ್‌ಗಳ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಚರಣ್‌ಗೆ, ಜಮೀನು ವಿಚಾರವಾಗಿ ಕೆಲವರ ಜೊತೆ ಕಿರಿಕ್ ಇತ್ತು. ಇದೇ ಹಳೆಯ ದ್ವೇಷವೇ ಹತ್ಯೆಗೆ ಕಾರಣವಾಗಿರಬಹುದೇ ಎಂಬ ಅನುಮಾನ ಪೊಲೀಸರನ್ನ ಕಾಡುತ್ತಿದೆ. ಅಲ್ಲದೇ, ಈ ಹತ್ಯೆ ಹಿಂದೆ ಸುಪಾರಿ ಕೊಲೆ ನಡೆದಿರುವ ಸಾಧ್ಯತೆಯ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ಚರಣ್ ಅವರ ವ್ಯವಹಾರ, ಆಸ್ತಿ ವಿಚಾರ ಹಾಗೂ ಹಳೆಯ ವೈಷಮ್ಯದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಅದೆನೇ ಹೇಳಿ. ಹಾಡುಹಗಲೇ ನಡೆದಿರುವ ಈ ಹತ್ಯೆ ಸ್ಥಳೀಯರನ್ನು ಬೆಚ್ಚಿಬೀಳಿಸಿರೋದಂತು ಸುಳ್ಳಲ್ಲ.

Add Zee News as a Preferred Source
TAGS:
Crime