• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಕಳ್ಳತನ ಹೀಗೂ ಮಾಡಬಹುದಾ, ಬಾಂಗ್ಲಾ ಹುಡುಗಿ ಜತೆ ಮದುವೆ.. ಫ್ರಾನ್ಸ್, ಜರ್ಮನಿ, ಇಟಲಿ, ಭಾರತ, ನೇಪಾಳದಲ್ಲಿ ಸುತ್ತಾಟ

ಕಳ್ಳತನ ಹೀಗೂ ಮಾಡಬಹುದಾ, ಬಾಂಗ್ಲಾ ಹುಡುಗಿ ಜತೆ ಮದುವೆ.. ಫ್ರಾನ್ಸ್, ಜರ್ಮನಿ, ಇಟಲಿ, ಭಾರತ, ನೇಪಾಳದಲ್ಲಿ ಸುತ್ತಾಟ

ಬಾಂಗ್ಲಾದೇಶದ ಮೂಲದ ಯುವತಿಯ ಪರಿಚಯವಾಗಿತ್ತು. ಆಕೆಯನ್ನ ಪ್ರೀತಿಸಿ ಮದುವೆಯಾಗಿದ್ದ ವಿನೋದ್ ಕುಮಾರ್ ನಂತರ ಆಕೆಯೊಂದಿಗೆ ಬಾಂಗ್ಲಾದೇಶಕ್ಕೆ ತೆರಳಿ 9 ವರ್ಷ ಅಲ್ಲಿಯೇ ವಾಸವಿದ್ದ.

Written ByBhimappa
Published: Sep 23, 2026, 05:14 PM IST|Updated: Sep 23, 2026, 05:22 PM IST
joinshare
ಕಳ್ಳತನ ಹೀಗೂ ಮಾಡಬಹುದಾ, ಬಾಂಗ್ಲಾ ಹುಡುಗಿ ಜತೆ ಮದುವೆ.. ಫ್ರಾನ್ಸ್, ಜರ್ಮನಿ, ಇಟಲಿ, ಭಾರತ, ನೇಪಾಳದಲ್ಲಿ ಸುತ್ತಾಟ
Image Credit: Nenavat_Vinod_Kumar

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Bengaluru Police arrests Nenavat Vinod Kumar: ಅವನು‌ ಕಳ್ಳತನವನ್ನೇ ಕಾಯಕ‌ ಮಾಡಿಕೊಂಡಿದ್ದನು. ವಿಮಾನದಲ್ಲಿ ಸ್ಟೈಲಾಗಿ ಬರುತ್ತಿದ್ದನು. ಮನೆಯನ್ನೇ ಗುಡಿಸಿ ಗುಂಡಾಂತರ ಮಾಡಿ ವಿಮಾನದಲ್ಲೇ ಎಸ್ಕೇಪ್ ಆಗುತ್ತಿದ್ದನು. ಆದರೆ ಈ ಬಾರಿ ಆತನ ನಸೀಬು ಕೆಟ್ಟಿತ್ತು ಅನಿಸಿತ್ತದೆ. ಹೀಗಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿವನು ಜೈಲಲ್ಲಿ ಮುದ್ದೆ ಮುರಿಯುತ್ತಿದ್ದಾನೆ. ಇಷ್ಟುಕ್ಕೂ ಯಾರಿವ ಖತರ್ನಾಕ್‌ ಕಿಲಾಡಿ, ಇವನು ಮಾಡುವ ವೃತ್ತಿಯೇ ಕಳ್ಳತನನಾ, ಸ್ಟೈಲ್‌ ಆಗಿ, ಹೈಫೈ ಆಗಿ ಇರೋ ಇವನು ಮಾಡೋ ಕೆಲಸ ಮಾತ್ರ ಯಾರೂ ಮೆಚ್ಚುವುದೇ ಇಲ್ಲ.

ನೋಡೋಕೆ ಹೈಫೈ, ಕಳ್ಳತನವೇ ಫುಲ್ ಟೈಂ ಜಾಬ್..!
ಫ್ಲೈಟ್‌ನಲ್ಲಿ ಬಂದು ಕಳ್ಳತನ ಮಾಡ್ತಿದ್ದ ಮನೆಗಳ್ಳ ಲಾಕ್‌  

ಬಂಧಿತ ಆರೋಪಿಯ ಜೀವನವೇ ಬಲು ರೋಚಕ

ನೋಡೋಕೆ, ಮಾತನಾಡೋಕೆ ಡಿಸೆಂಟ್‌ ಆಗಿ ಕಾಣುವ ಇವನು ಮಾಡುವ ಕೆಲಸ ಮಾತ್ರ ಐನಾತಿ ಕೆಲಸ. ಮೂವತ್ತಕ್ಕೂ ಅಧಿಕ ಮನೆಗಳ್ಳತನ ಕೃತ್ಯದ ಆರೋಪಿ ಆಗಿರುವ ಕುಖ್ಯಾತ ಅಂತರ್ ರಾಜ್ಯ ಕಳ್ಳನನ್ನ ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನ ಹೆಸರು ನೇನಾವತ್ ವಿನೋದ್ ಕುಮಾರ್ ಅಲಿಯಾಸ್ ಮೊಹಮ್ಮದ್ ಬಷರ್ ನೂರ್ ಮೊಹಮ್ಮದ್‌. ಮೂಲತ: ತೆಲಂಗಾಣದವನು. ಇತ್ತೀಚೆಗೆ ವಿಲ್ಸನ್ ಗಾರ್ಡನ್‌ನ 10ನೇ ಕ್ರಾಸ್‌ನಲ್ಲಿರುವ ವೃದ್ಧ ದಂಪತಿಯ ಮನೆಗೆ ಯಾರೂ ಇಲ್ಲದ ವೇಳೆ ಅಕ್ರಮವಾಗಿ ನುಗ್ಗಿದ್ದ ಈ ಕಳ್ಳ, ಮನೆಯಲ್ಲಿದ್ದ ಬೆಲೆಬಾಳುವ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಬಂಧಿತನಿಂದ ಬರೋಬ್ಬರಿ 42 ಲಕ್ಷ ರೂಪಾಯಿ ಮೌಲ್ಯದ 271 ಗ್ರಾಂ ತೂಕದ ಚಿನ್ನಾಭರಣಗಳು, ವಿದೇಶಿ ಹಣವನ್ನ ಜಪ್ತಿ ಮಾಡಲಾಗಿದೆ. ಇನ್ನೂ ಬಂಧಿತ ಆರೋಪಿಯ ಜೀವನವೇ ಬಲು ರೋಚಕವಾಗಿದೆ. ಆರೋಪಿ ನೇನಾವತ್ ವಿನೋದ್ ಕುಮಾರ್ ಸಾಮಾನ್ಯ ಕಳ್ಳನಲ್ಲ. ಈತನ ವಿರುದ್ಧ ಹೈದರಾಬಾದ್, ಆಂಧ್ರಪ್ರದೇಶ, ಉತ್ತರಪ್ರದೇಶ ಸೇರಿದಂತೆ ದೇಶದಾದ್ಯಂತ 30ಕ್ಕೂ ಅಧಿಕ ಮನೆಗಳ್ಳತನ ಪ್ರಕರಣಗಳು ದಾಖಲಾಗಿವೆ. ಬಿ.ಟೆಕ್ ವ್ಯಾಸಾಂಗ ಮಾಡುತ್ತಿದ್ದಾಗಲೇ ಕಳ್ಳತನ ಪ್ರಕರಣವೊಂದರಲ್ಲಿ ಜೈಲುಪಾಲಾಗಿದ್ದ ಈತ ಒಂದು ವರ್ಷ ಶಿಕ್ಷೆ ಅನುಭವಿಸಿದ್ದ.

ನಂತರ ಕಾಲೇಜು ಡ್ರಾಪೌಟ್ ಆಗಿದ್ದ ಈತನಿಗೆ ಹೈದರಾಬಾದ್‌ನ ಸೆಲೂನ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಬಾಂಗ್ಲಾದೇಶದ ಮೂಲದ ಯುವತಿಯ ಪರಿಚಯವಾಗಿತ್ತು. ಆಕೆಯನ್ನ ಪ್ರೀತಿಸಿ ಮದುವೆಯಾಗಿದ್ದ ವಿನೋದ್ ಕುಮಾರ್ ನಂತರ ಆಕೆಯೊಂದಿಗೆ ಬಾಂಗ್ಲಾದೇಶಕ್ಕೆ ತೆರಳಿ 9 ವರ್ಷ ಅಲ್ಲಿಯೇ ವಾಸವಿದ್ದ. ಬಳಿಕ ಅಲ್ಲಿ ನಕಲಿ ಪಾಸ್‌ಪೋರ್ಟ್ ಪಡೆದು, ಫ್ರಾನ್ಸ್, ಜರ್ಮನಿ ಮತ್ತು ಇಟಲಿಯಲ್ಲಿ ಕೆಲಕಾಲ ಅಡುಗೆ ಕೆಲಸ ಮಾಡಿಕೊಂಡಿದ್ದ. ನಕಲಿ ದಾಖಲೆಗಳನ್ನ ಬಳಸಿ ನೇಪಾಳ ಗಡಿಯ ಮೂಲಕ ಭಾರತಕ್ಕೆ ಮರಳಿದ್ದ ಆರೋಪಿ ಪುನಃ ಕಳ್ಳತನದಲ್ಲಿ ಭಾಗಿಯಾಗಲಾರಂಭಿಸಿದ್ದ.

ಒಂದು ನಗರದಿಂದ ಮತ್ತೊಂದು ನಗರಕ್ಕೆ ಫ್ಲೈಟ್ ಮೂಲಕವೇ ಪ್ರಯಾಣಿಸುತ್ತಿದ್ದ ಈತ, ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಬಂದು ಬೆಂಗಳೂರಿನಲ್ಲಿ ಕೃತ್ಯ ಎಸಗಿದ್ದನು. ಕೃತ್ಯದ ಬಳಿಕ ದೆಹಲಿಗೆ ತೆರಳಿದ್ದ ಆರೋಪಿ ತನ್ನ ಪತ್ನಿಯನ್ನ ಭೇಟಿಯಾಗಿ ಮತ್ತೊಮ್ಮೆ ಬೆಂಗಳೂರಿಗೆ ಬಂದಾಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯೇ ಆರೋಪಿಯನ್ನ ಬಂಧಿಸಲಾಯಿತು. ಸದ್ಯ ಮತ್ತಷ್ಟು ಮಹತ್ವದ ಮಾಹಿತಿಗಳನ್ನ ಕಲೆಹಾಕಲಾಗುತ್ತಿದ್ದು, ಈ ಕುಖ್ಯಾತ ಅಂತರ್ ರಾಜ್ಯ ಕಳ್ಳನ ಕುರಿತು ಎಲ್ಲಾ ರಾಜ್ಯಗಳ ಪೊಲೀಸರೊಂದಿಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ. ವಿಮಾನದಲ್ಲಿ ಓಡಾಡುವ ಎಲ್ಲರು ಸಚಾಗಳಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿರುವುದಂತೂ ಸುಳ್ಳಲ್ಲ. 

ಹೀಗೆ ಕಳ್ಳತನ ಮಾಡಿಕೊಂಡು ‌ಆರೋಪಿ ವಿನೋದ್ ಕುಮಾರ್‌ ಪ್ರಪಂಚ ಸುತ್ತಾಡಿಕೊಂಡು ಇರುವುದು ಇದರಿಂದ ಗೊತ್ತಾಗುತ್ತದೆ. ಬಿಟೆಕ್‌ ಮುಗಿಸಿರುವ ಇವನು ಇಂತಹ ಕಾಯಕಕ್ಕೆ ಕೈ ಹಾಕಿರುವುದು ನಂಬಲು ಅಸಾಧ್ಯ ಎನ್ನಬಹುದು. ಏಕೆಂದರೆ ಬಿಟೆಕ್‌ ಮುಗಿಸಿದವರು ಎಲ್ಲಿಯಾದರೂ ಜಾಬ್‌ ಮಾಡಿಕೊಂಡು ಇರಬಹುದಿತ್ತು. ಅಥವಾ ಯಾವುದಾದರೂ ಶಿಕ್ಷಣ ಸಂಸ್ಥೆಗಳಲ್ಲಿ ಪ್ರೊಫೆಸರ್‌ ಆಗಿ ಇರಬಹುದಿತ್ತು. ಆದರೆ ಈ ಆಸಾಮಿಗೆ ಯಾರು ಈ ವೃತ್ತಿ ಹೇಳಿಕೊಟ್ಟರೂ ಎಂಬುದು ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗುತ್ತದೆ. ಉನ್ನತ ಶಿಕ್ಷಣ ಪಡೆದವರು ಇಂತಹ ವೃತ್ತಿಗೆ ಇಳಿದರೆ ಶಿಕ್ಷಣ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಾ ಹೋಗಬಹುದು. 
 

Add Zee News as a Preferred Source
TAGS:
Crime