• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /7 ಕೊಲೆಗಳ ಬಳಿಕವೂ ನಿಲ್ಲದ ಕ್ರೌರ್ಯ.. ಇನ್ನಿಬ್ಬರ ಹತ್ಯೆಗೆ ಸಿದ್ಧವಾಗಿದ್ದ ಇಂದುಶೇಖರ್!

7 ಕೊಲೆಗಳ ಬಳಿಕವೂ ನಿಲ್ಲದ ಕ್ರೌರ್ಯ.. ಇನ್ನಿಬ್ಬರ ಹತ್ಯೆಗೆ ಸಿದ್ಧವಾಗಿದ್ದ ಇಂದುಶೇಖರ್!

Bengaluru family massacre : ರಾಜಾಜಿನಗರದಲ್ಲಿ ನಡೆದ ಏಳು ಜನರ ಭೀಕರ ಹತ್ಯಾಕಾಂಡದ ಹಿಂದಿನ ಒಂದೊಂದೇ ರಹಸ್ಯಗಳು ಬಯಲಾಗ್ತಿವೆ. ಕೇವಲ 15 ದಿನಗಳ ಅಂತರದಲ್ಲಿ ಏಳು ಕೊಲೆ ಮಾಡಿ ಮೃತದೇಹಗಳನ್ನು ಬೇರೆ ಬೇರೆ ಘಾಟ್‌ಗಳಲ್ಲಿ ಎಸೆದು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ. ಅಷ್ಟಕ್ಕೂ ಯಾವ ದಿನ ಯಾರ ಹತ್ಯೆಯಾಯಿತು, ಹೇಗಿತ್ತು ನರಮೇಧ ಎಂಬುದರ ಕಂಪ್ಲೀಟ್ ಟೈಮ್‌ಲೈನ್‌ ಇಲ್ಲಿದೆ.

Written ByRamya. R. Gowda
Published: Nov 07, 2026, 17:41 IST|Updated: Nov 07, 2026, 18:20 IST
joinshare
7 ಕೊಲೆಗಳ ಬಳಿಕವೂ ನಿಲ್ಲದ ಕ್ರೌರ್ಯ.. ಇನ್ನಿಬ್ಬರ ಹತ್ಯೆಗೆ ಸಿದ್ಧವಾಗಿದ್ದ ಇಂದುಶೇಖರ್!

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Bengaluru family massacre : ರಾಜಾಜಿನಗರದಲ್ಲಿ ನಡೆದ ಏಳು ಜನರ ಭೀಕರ ಹತ್ಯಾಕಾಂಡದ ಹಿಂದಿನ ಒಂದೊಂದೇ ರಹಸ್ಯಗಳು ಬಯಲಾಗ್ತಿವೆ. ಕೇವಲ 15 ದಿನಗಳ ಅಂತರದಲ್ಲಿ ಏಳು ಕೊಲೆ ಮಾಡಿ ಮೃತದೇಹಗಳನ್ನು ಬೇರೆ ಬೇರೆ ಘಾಟ್‌ಗಳಲ್ಲಿ ಎಸೆದು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ. ಅಷ್ಟಕ್ಕೂ ಯಾವ ದಿನ ಯಾರ ಹತ್ಯೆಯಾಯಿತು, ಹೇಗಿತ್ತು ನರಮೇಧ ಎಂಬುದರ ಕಂಪ್ಲೀಟ್ ಟೈಮ್‌ಲೈನ್‌ ಇಲ್ಲಿದೆ.

ಪತ್ನಿ ಸುನೀತಾ ಜೊತೆ ಜಗಳವಾಡಿದ್ದ ಇಂದುಶೇಖರ್, ಅಕ್ಟೋಬರ್ 14ರ ಬುಧವಾರವೇ ಕೊಲೆಗೆ ಪ್ಲಾನ್ ಮಾಡಿದ್ದ. ಅಂದೇ ಕೊಲೆಗೆ ಬೇಕಾದ ನಿದ್ದೆ ಮಾತ್ರೆ, ಮೃತದೇಹಗಳನ್ನು ತುಂಬಲು ಪ್ಲಾಸ್ಟಿಕ್ ಚೀಲ, ಕಟ್ಟಲು ಹಗ್ಗ ಖರೀದಿಸಿದ್ದ.ಅಕ್ಟೋಬರ್ 16ರ ಶುಕ್ರವಾರ ರಾತ್ರಿ ಪತ್ನಿ ಸುನೀತಾಳ ಕೊಲೆಗೆ ಸಜ್ಜಾಗಿದ್ದ. ಮಾಂಸಾಹಾರದ ಅಡುಗೆ ಮಾಡಿ, ಮದ್ಯ ಸೇವನೆ ಮಾಡಿದ್ದ. ಊಟದ ವೇಳೆ ಮದ್ಯದಲ್ಲಿ ನಿದ್ದೆ ಮಾತ್ರೆ ಬೆರೆಸಿ ಸುನೀತಾಗೆ ನೀಡಿದ್ದ. ಆಕೆ ಪ್ರಜ್ಞೆ ತಪ್ಪುವವರೆಗೆ ಕಾಯುತ್ತಿದ್ದ ಶೇಖರ್, ಬಳಿಕ ರುಬ್ಬುವ ಕಲ್ಲಿನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದ.

ಈ ಭೀಕರ ಕೃತ್ಯವನ್ನು ಅಪ್ರಾಪ್ತ ಮಗಳು ಕಣ್ಣಾರೆ ಕಂಡು ಶಾಕ್‌ಗೆ ಒಳಗಾಗಿದ್ದಳು. ಬಳಿಕ ಮಗಳ ಮನವೊಲಿಸಿ, ಆಕೆಯ ಸಹಾಯದಿಂದ ಸುನೀತಾ ಮೃತದೇಹವನ್ನು ಚೀಲದಲ್ಲಿ ಪ್ಯಾಕ್ ಮಾಡಿದ್ದ. ಮೃತದೇಹವನ್ನು ಬೆಡ್‌ರೂಮ್‌ನಲ್ಲೇ ಇಟ್ಟಿದ್ದ.ಇನ್ನು ಅಕ್ಟೋಬರ್ 17ರ ಶನಿವಾರ,ಮಗಳು ಸುನೀತಾಳಿಗೆ ನಿರಂತರವಾಗಿ ರೂಪವತಿ ಕರೆ ಮಾಡಿದ್ದರು.ಸುನೀತಾ ಮೊಬೈಲ್ ಸ್ವಿಚ್ ಆಫ್ ಬಂದಿದ್ದರಿಂದ ಅಳಿಯ ಇಂದುಶೇಖರ್‌ಗೆ ಕರೆ ಮಾಡಿದ್ದರು. ಸುನೀತಾ ಇಲ್ಲೇ ಇದ್ದಾಳೆ, ಮನೆಗೆ ಬನ್ನಿ ಎಂದು ಅತ್ತೆಯನ್ನೇ ಆಹ್ವಾನಿಸಿದ್ದ. ಹೀಗಾಗಿ ಅಕ್ಟೋಬರ್ 18ರ ಭಾನುವಾರ ಬೆಳಗ್ಗೆ ಭಾಷ್ಯಂ ಸರ್ಕಲ್ ಬಳಿಯ ಅಳಿಯನ ಮನೆಗೆ ರೂಪವತಿ ಬಂದಿದ್ದರು. ಮಗಳು ಎಲ್ಲಿ ಎಂದು ಕೇಳಿದಾಗ ದ್ವಂದ್ವ ಉತ್ತರ ನೀಡಿದ್ದ ಶೇಖರ್. ಇದೇ ವೇಳೆ ಅಪ್ರಾಪ್ತ ಮಗಳು ಅಜ್ಜಿಗೆ ಊಟ ಬಡಿಸಿದ್ದಳು. ಮಾಂಸಾಹಾರದ ಊಟದ ಜೊತೆಗೆ ಮದ್ಯವನ್ನೂ ನೀಡಲಾಗಿತ್ತು.ಟಿವಿ ಸೌಂಡ್ ಜಾಸ್ತಿ ಮಾಡಿ ಊಟ ಮಾಡುತ್ತಿದ್ದ ಅತ್ತೆಯ ತಲೆಗೆ ಹಿಂದಿನಿಂದ ರುಬ್ಬುವ ಕಲ್ಲಿನಿಂದ ಹೊಡೆದು ಇಂದುಶೇಖರ್ ಹತ್ಯೆ ಮಾಡಿದ್ದ. ಬಳಿಕ ತಂದೆ-ಮಗಳು ಸೇರಿ ರೂಪವತಿ ಮೃತದೇಹವನ್ನೂ ಚೀಲದಲ್ಲಿ ಪ್ಯಾಕ್ ಮಾಡಿದ್ದರು.

ಅಕ್ಟೋಬರ್ 19ರ ರಾತ್ರಿ ಪತ್ನಿ ಮತ್ತು ಅತ್ತೆಯ ಮೃತದೇಹಗಳನ್ನು ಕಾರಿನಲ್ಲಿ ಸಾಗಿಸಿದ್ದ ತಂದೆ-ಮಗಳು, ತಮಿಳುನಾಡಿನ ಸೇಲಂ ಮತ್ತು ಧರ್ಮಪುರಿ ನಡುವಿನ ಘಾಟ್ ಪ್ರದೇಶದಲ್ಲಿ ಎಸೆದಿದ್ದರು. ಆದರೆ ಇಬ್ಬರ ಮೊಬೈಲ್‌ಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು.

ಇನ್ನು ಮೂರನೇ ಹಂತದಲ್ಲಿ ಹಂತಕನ ಟಾರ್ಗೆಟ್ ಆಗಿದ್ದು ಸುನೀತಾಳ ಸಹೋದರ ಶಿವಕುಮಾರ್ ಕುಟುಂಬ.ಅಕ್ಟೋಬರ್ 23ರ ಶುಕ್ರವಾರ ಬೆಳಗ್ಗೆ ಅಕ್ಕ ಮತ್ತು ತಾಯಿಗೆ ಕರೆ ಮಾಡಿದ್ದ ಶಿವಕುಮಾರ್‌ಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಹೀಗಾಗಿ ಭಾವ ಇಂದುಶೇಖರ್‌ಗೆ ಕರೆ ಮಾಡಿದ್ದರು. ಸುನೀತಾ ಮತ್ತು ರೂಪವತಿ ಟ್ರಿಪ್‌ಗೆ ಹೋಗಿದ್ದಾರೆ. ನೀವು ಪತ್ನಿ ದಿವ್ಯಾ, ಮಗ ಪುನೀತ್ ಜೊತೆ ಮನೆಗೆ ಬಂದು ಊಟ ಮಾಡಿಕೊಂಡು ಹೋಗಿ ಎಂದು ಆಹ್ವಾನಿಸಿದ್ದ.ಭಾವನ ಮಾತು ನಂಬಿ ಅಕ್ಟೋಬರ್ 24ರ ಶನಿವಾರ ಶಿವಕುಮಾರ್, ಪತ್ನಿ ದಿವ್ಯಾ ಮತ್ತು ಮಗ ಪುನೀತ್ ಜೊತೆ ಅಕ್ಕನ ಮನೆಗೆ ಬಂದಿದ್ದರು.ಅಂದು ರಾತ್ರಿ ದಂಪತಿಗೆ ಮಾಂಸಾಹಾರದ ಊಟ, ಮದ್ಯದ ಜೊತೆ ನಿದ್ದೆ ಮಾತ್ರೆ ನೀಡಲಾಗಿತ್ತು. ದಿವ್ಯಾ ಮತ್ತು ಪುನೀತ್ ಬೆಡ್‌ರೂಮ್‌ನಲ್ಲಿ ಮಲಗಿದ್ದರೆ, ಶಿವಕುಮಾರ್ ಹಾಲ್‌ನಲ್ಲಿ ಮಲಗಿದ್ದರು.

ಇದೇ ಸಮಯಕ್ಕಾಗಿ ಕಾಯುತ್ತಿದ್ದ ಇಂದುಶೇಖರ್, ರುಬ್ಬುವ ಕಲ್ಲಿನಿಂದ ಶಿವಕುಮಾರ್ ತಲೆಗೆ ಹೊಡೆದು ಹತ್ಯೆ ಮಾಡಿದ್ದ. ಬಳಿಕ ಮೃತದೇಹವನ್ನು ಪ್ಯಾಕ್ ಮಾಡಿ ಅಡುಗೆ ಮನೆಯಲ್ಲಿಟ್ಟಿದ್ದರು.
ಅಕ್ಟೋಬರ್ 25ರ ಭಾನುವಾರ ಬೆಳಗಿನ ಜಾವ ವಾಶ್‌ರೂಮ್‌ಗೆಂದು ಎದ್ದು ಬಂದಿದ್ದ ದಿವ್ಯಾ, ಪತಿ ಎಲ್ಲಿ ಎಂದು ಪ್ರಶ್ನಿಸಿದ್ದರು. ಈ ವೇಳೆ ಆಕೆಯ ತಲೆಗೆ ರುಬ್ಬುವ ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ್ದ. ತಾಯಿಯ ಕಿರುಚಾಟ ಕೇಳಿ ಓಡಿ ಬಂದ ಬಾಲಕ ಪುನೀತ್‌ನನ್ನೂ ಹತ್ಯೆ ಮಾಡಿದ್ದ.ಬಳಿಕ ತಂದೆ-ಮಗಳು ಸೇರಿ ದಿವ್ಯಾ ಮತ್ತು ಪುನೀತ್ ಮೃತದೇಹಗಳನ್ನೂ ಪ್ಯಾಕ್ ಮಾಡಿದ್ದರು.ಅಕ್ಟೋಬರ್ 27ರ ಮಂಗಳವಾರ ಬೆಳಗಿನ ಜಾವ ಮೂರು ಮೃತದೇಹಗಳನ್ನು ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ಮನೆಯಿಂದ ಹೊರಟಿದ್ದರು. ಮೈಸೂರಿನ ಚಾಮುಂಡಿ ಬೆಟ್ಟದ ಬಳಿ ಶಿವಕುಮಾರ್ ಮತ್ತು ದಿವ್ಯಾ ಮೃತದೇಹಗಳನ್ನು ಎಸೆದಿದ್ದರು. ಆದರೆ ಬಾಲಕ ಪುನೀತ್ ಮೃತದೇಹವನ್ನು ಬೆಂಗಳೂರಿಗೆ ವಾಪಸ್ ತಂದಿದ್ದರು.ಇಷ್ಟೇ ಅಲ್ಲ, ದಿವ್ಯಾ ಮೊಬೈಲ್‌ನಿಂದಲೇ ಆಕೆಯ ತಾಯಿಗೆ ನಾವು ಟ್ರಿಪ್‌ಗೆ ಬಂದಿದ್ದೇವೆ ಎಂದು ಸಂದೇಶವನ್ನೂ ಹಂತಕ ಕಳುಹಿಸಿದ್ದ.


ಐದು ಜನರ ಹತ್ಯೆ ಬಳಿಕವೂ ಇಂದುಶೇಖರ್‌ನ ಕ್ರೌರ್ಯ ನಿಂತಿರಲಿಲ್ಲ. ಮುಂದಿನ ಟಾರ್ಗೆಟ್ ಆಗಿದ್ದು ಮತ್ತೊಬ್ಬ ಸಂಬಂಧಿ ಶಂಕರ್ ಮತ್ತು ಆತನ ಪತ್ನಿ ನಳಿನಿ.ಅಕ್ಟೋಬರ್ 31ರ ಶನಿವಾರ ಅಕ್ಕ, ತಾಯಿ ಹಾಗೂ ಶಿವಕುಮಾರ್‌ಗೆ ಕರೆ ಮಾಡಿದ್ದ ಶಂಕರ್. ಯಾರೂ ಕರೆ ಸ್ವೀಕರಿಸದ ಹಿನ್ನೆಲೆ ಭಾವ ಇಂದುಶೇಖರ್‌ಗೆ ಕರೆ ಮಾಡಿದ್ದರು.ನಿಮ್ಮ ಅಕ್ಕ, ತಾಯಿ, ಶಿವು, ದಿವ್ಯಾ ಮತ್ತು ಮಗ ಎಲ್ಲರೂ ಟ್ರಿಪ್‌ಗೆ ಹೋಗಿದ್ದಾರೆ ಎಂದು ಇಂದು ಶೇಖರ್ ಸುಳ್ಳು  ಹೇಳಿದ್ದ. ನೀವು ಪತ್ನಿ ನಳಿನಿ ಮತ್ತು ಮಗ ಯತೀನ್ ಜೊತೆ ಮನೆಗೆ ಬನ್ನಿ, ಊಟ ಮಾಡಿಕೊಂಡು ಹೋಗಿ ಎಂದು ಆಹ್ವಾನಿಸಿದ್ದ.ನವೆಂಬರ್ 1ರ ಭಾನುವಾರ ಶಂಕರ್, ಪತ್ನಿ ನಳಿನಿ ಮತ್ತು ಮಗ ಯತೀನ್ ಜೊತೆ ಅಕ್ಕನ ಮನೆಗೆ ಬಂದಿದ್ದರು. ಎಂದಿನಂತೆ ಮಾಂಸಾಹಾರದ ಊಟ, ಮದ್ಯದ ಜೊತೆ ನಿದ್ದೆ ಮಾತ್ರೆ ನೀಡಲಾಗಿತ್ತು.

ರಾತ್ರಿ ಇಬ್ಬರೂ ನಿದ್ರೆಯ ಮಂಪರಿಗೆ ಜಾರುತ್ತಿದ್ದಂತೆ ಶಂಕರ್ ಮತ್ತು ನಳಿನಿಯ ತಲೆಗೆ ರುಬ್ಬುವ ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ್ದ. ಬಳಿಕ ಇಬ್ಬರ ಮೃತದೇಹಗಳನ್ನೂ ಚೀಲದಲ್ಲಿ ತುಂಬಿ ಪ್ಯಾಕ್ ಮಾಡಿದ್ದ ತಂದೆ-ಮಗಳು.ಆದರೆ ಬಾಲಕ ಯತೀನ್‌ನನ್ನು ಕೊಲ್ಲಲು ಬೇರೆ ದಿನ ನಿಗದಿಪಡಿಸಿದ್ದರು ಎಂಬು ತನಿಖೆಯಲ್ಲಿ ಬಯಲಾಗಿದೆ. ಅಲ್ಲಿಯವರೆಗೆ ಪುನೀತ್ ಮೃತದೇಹ ಕಾರಿನ ಡಿಕ್ಕಿಯಲ್ಲೇ ಇತ್ತು.ನವೆಂಬರ್ 2ರ ಸೋಮವಾರ ಬೆಳಗಿನ ಜಾವ ಮೂರು ಮೃತದೇಹಗಳನ್ನು ವಿಲೇವಾರಿ ಮಾಡಲು ಆರೋಪಿಗಳು ಕಾರಿನಲ್ಲಿ ಹೊರಟಿದ್ದರು. ಮೊದಲು ಶಿರಾಡಿ ಘಾಟ್ ಬಳಿ ಶಂಕರ್ ಮತ್ತು ನಳಿನಿ ಮೃತದೇಹಗಳನ್ನು ಎಸೆದಿದ್ದರು. ಬಳಿಕ ಪುನೀತ್ ಮೃತದೇಹವನ್ನು ನಂದಿ ಬೆಟ್ಟದ ಬಳಿ ಎಸೆದಿದ್ದರು.ಈ ವೇಳೆ ಬಾಲಕ ಯತೀನ್ ಕೂಡ ಹಂತಕರ ಜೊತೆಯಲ್ಲೇ ಇದ್ದ ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.

ಇತ್ತ ಏಳು ಮಂದಿ ಕುಟುಂಬಸ್ಥರು ಸತತವಾಗಿ ಸಂಪರ್ಕಕ್ಕೆ ಸಿಗದ ಹಿನ್ನೆಲೆ ಅನುಮಾನಗೊಂಡಿದ್ದರು. ನವೆಂಬರ್ 2ರ ಸೋಮವಾರ ಸಂಜೆ ಶ್ರೀರಾಮಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದರು. ರಾತ್ರಿ ತಡವಾದ ಹಿನ್ನೆಲೆ ನವೆಂಬರ್ 3ರ ಮಂಗಳವಾರ ನಳಿನಿ ತಾಯಿ ತುಂಗಮ್ಮ ಏಳು ಮಂದಿ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು.ಪ್ರಕರಣ ದಾಖಲಿಸಿಕೊಂಡ ಶ್ರೀರಾಮಪುರ ಪೊಲೀಸರು ತನಿಖೆಗೆ ಇಳಿದಿದ್ದರು. ನಾಪತ್ತೆಯಾದ ಏಳು ಮಂದಿಯ ಮೊಬೈಲ್ ಸಂಪರ್ಕ, ಕರೆಗಳ ಮಾಹಿತಿ ಸೇರಿದಂತೆ ಹಲವು ಆಯಾಮಗಳಲ್ಲಿ ಪರಿಶೀಲನೆ ನಡೆಸಿದ್ದರು.ಈ ವೇಳೆ ಮೊಬೈಲ್ ಟವರ್ ಡಂಪ್ ಪರಿಶೀಲಿಸಿದಾಗ ಆರು ಜನರ ಮೊಬೈಲ್‌ಗಳು ಒಂದೇ ಕಡೆ ನೆಟ್‌ವರ್ಕ್‌ನಲ್ಲಿ ಇರೋದು ಗೊತ್ತಾಗಿತ್ತು. ಈ ಆರು ಮೊಬೈಲ್‌ಗಳ ಪೈಕಿ ಹಂತಕ ಇಂದುಶೇಖರ್‌ನ ಮೊಬೈಲ್ ಸಂಖ್ಯೆಯೂ ಅಲ್ಲಿಯೇ ಆ್ಯಕ್ಟಿವ್ ಆಗಿತ್ತು. ಹಂತಕನ ಪತ್ತೆಗೆ ಇದೇ ಪ್ರಮುಖ ಸುಳಿವಾಗಿತ್ತು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ನವೆಂಬರ್ 4ರ ಬುಧವಾರ ಇಂದುಶೇಖರ್ ಮತ್ತು ಅಪ್ರಾಪ್ತ ಬಾಲಕಿಯನ್ನು ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದು, ಬಾಲಕ ಯತೀನ್‌ನನ್ನು ರಕ್ಷಿಸಿದ್ದರು.ಪೊಲೀಸರು ವಿಚಾರಣೆ ನಡೆಸುತ್ತಿದ್ದಂತೆ ಏಳು ಜನರ ಹತ್ಯೆಯ ಒಂದೊಂದೇ ರಹಸ್ಯ ಬಯಲಾಗಿತ್ತು. ಕೊಲೆಗೂ ಮುನ್ನ ನಡೆಸಿದ್ದ ಸಿದ್ಧತೆ, ನಿದ್ದೆ ಮಾತ್ರೆ ಬಳಕೆ, ಮೃತದೇಹಗಳನ್ನು ಚೀಲದಲ್ಲಿ ಪ್ಯಾಕ್ ಮಾಡಿದ್ದು, ಬೇರೆ ಬೇರೆ ಪ್ರದೇಶಗಳಲ್ಲಿ ಎಸೆದಿದ್ದ ವಿವರಗಳು ತನಿಖೆಯಲ್ಲಿ ಗೊತ್ತಾಗಿವೆ.

ಇನ್ನೂ ಇಬ್ಬರ ಹತ್ಯೆಗೆ ಸ್ಕೆಚ್, ಬೆಚ್ಚಿಬೀಳಿಸುವ ಸಂಚು ಬಯಲು..
ಒಂದು ಕೊಲೆ ಮಾಡಿದರೆ ಸಿಕ್ಕಿಬೀಳುವ ಭಯ ಯಾರಿಗಾದರೂ ಇರುತ್ತೆ. ಆದರೆ ಇಲ್ಲಿ ಏಳು ಜನರನ್ನು ಹಂತ ಹಂತವಾಗಿ ಮುಗಿಸಲು  ಹಂತಕ ಇಂದುಶೇಖರ್ ಪ್ಲಾನ್ ಮಾಡಿಕೊಂಡಿದ್ದ.ಕೊಲೆ ಬಳಿಕ ಮೃತದೇಹಗಳನ್ನು ಚೀಲದಲ್ಲಿ ಪ್ಯಾಕ್ ಮಾಡಿ ಬೆಡ್‌ರೂಮ್, ಅಡುಗೆ ಮನೆ ಹಾಗೂ ಕಾರಿನ ಡಿಕ್ಕಿಯಲ್ಲಿ ಇಟ್ಟಿದ್ದ. ಬಳಿಕ ಕಾರಿನಲ್ಲಿ ಸಾಗಿಸಿ ಬೇರೆ ಬೇರೆ ಘಾಟ್‌ಗಳಲ್ಲಿ ಎಸೆದು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ.ಇನ್ನು ಮೃತರ ಮೊಬೈಲ್‌ಗಳನ್ನು ತಮ್ಮ ಬಳಿಯೇ ಇಟ್ಟುಕೊಂಡು, ಕೆಲವರ ಮೊಬೈಲ್‌ನಿಂದ ಕುಟುಂಬಸ್ಥರಿಗೆ ಸುಳ್ಳು ಸಂದೇಶಗಳನ್ನು ಕಳುಹಿಸಿ ಅವರು ಟ್ರಿಪ್‌ಗೆ ಹೋಗಿದ್ದಾರೆ ಎಂಬಂತೆ ಬಿಂಬಿಸಿದ್ದ.ಆದರೆ ಪೊಲೀಸರ ತಾಂತ್ರಿಕ ತನಿಖೆ ಮುಂದೆ ಹಂತಕನ ಎಲ್ಲಾ ಆಟ ಬಯಲಾಗಿತ್ತು.ಇಷ್ಟೇ ಅಲ್ಲ, ಬಾಲಕ ಯತೀನ್ ಸೇರಿದಂತೆ ಇನ್ನೂ ಇಬ್ಬರನ್ನು ಹತ್ಯೆ ಮಾಡಲು ಇಂದುಶೇಖರ್ ನಿರ್ಧರಿಸಿದ್ದ ಎಂಬ ಆಘಾತಕಾರಿ ಅಂಶವೂ ಪೊಲೀಸರ ತನಿಖೆಯಲ್ಲಿ ಹೊರಬಂದಿದೆ.
ಒಟ್ಟಿನಲ್ಲಿ ಪತ್ನಿಯ ಮೇಲಿನ ದ್ವೇಷಕ್ಕೆ ಏಳು ಜನರ ಹತ್ಯೆ, ಅಪ್ರಾಪ್ತ ಮಗಳನ್ನೂ ಕೃತ್ಯದಲ್ಲಿ ಬಳಸಿಕೊಂಡ ಆರೋಪ, ಮತ್ತೆರಡು ಜೀವಗಳನ್ನು ಬಲಿ ಪಡೆಯಲು ಸಂಚು, ರಾಜಾಜಿನಗರದ ಈ ನರಮೇಧ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.

 

Add Zee News as a Preferred Source
TAGS:
Crime