SOCIAL MEDIA

Newsletter

PARTNER SITES
Select Language Select State

ಕೊ*ಲೆಪಾತಕ ತಂದೆ, ಕುತಂತ್ರಿ ಮಗಳು : ರಾಜಾಜಿನಗರ ಹತ್ಯಾಕಾಂಡಕ್ಕೆ ರೋಚಕ ತಿರುವು

ರಾಜಧಾನಿಯಲ್ಲಿ ನಡೆದ ನರಮೇಧ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಒಂದೇ ಕುಟುಂಬದ ಏಳು ಜನರ ಭೀಕರ ಹತ್ಯೆಯ ಹಿಂದಿನ ತಂದೆ ಮತ್ತು ಮಗಳ ಕರಾಳ ಸಂಚು ಬಯಲಾಗಿದೆ. ಅಪ್ಪನ ಕೈಗೊಂಬೆಯಾಗಿದ್ದ ಅಪ್ರಾಪ್ತ ಮಗಳು ಕೃತ್ಯದ ಅವಧಿಯಲ್ಲಿ ಬರೋಬ್ಬರಿ 15 ದಿನಗಳ ಕಾಲ ಕಾಲೇಜಿಗೆ ಗೈರುಹಾಜರಾಗಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಮತ್ತಷ್ಟು ರೋಚಕ ತಿರುವು ಸಿಕ್ಕಿದೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Nov 18, 2026, 18:46 IST | Updated: Nov 18, 2026, 18:51 IST
Image Credit: Bengaluru News
Join

ಬೆಂಗಳೂರು : ರಾಜಾಜಿನಗರದ ನರಮೇಧ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿರುವ ಪೊಲೀಸರಿಗೆ ಸ್ಪೋಟಕ ಅಂಶಗಳು ಗೊತ್ತಾಗಿವೆ‌. 7 ಜನರ ಕೊಲೆಗಾಗಿ ಪಾಪಿ ಮಗಳು ತಂದೆಯ ಜೊತೆ ಸೇರಿ ನಡೆಸಿರುವ ಒಂದೊಂದೇ ಕುತಂತ್ರಗಳು ಬೆಳಕಿಗೆ ಬರ್ತಿವೆ. ಕೊಲೆಪಾತಕ ಅಪ್ಪನ ಕೈಗೊಂಬೆಯಾಗಿದ್ದ ಮಗಳು ಹುನ್ನಾರ ಏನಾಗಿತ್ತು ಎಂಬುದನ್ನು ಹೇಳ್ತಿವಿ ನೋಡಿ.

ರಾಜಾಜಿನಗರದ ಒಂದೇ ಕುಟುಂಬದ ಏಳು ಜನರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆಯಲ್ಲಿ ದಿನಕ್ಕೊಂದು ಸ್ಪೋಟಕ ವಿಚಾರಗಳು ಬಯಲಾಗುತ್ತಿವೆ. ಆರೋಪಿ ಇಂದುಶೇಖರ್‌ನ ಅಪ್ರಾಪ್ತ ಮಗಳ ಪಾತ್ರ ಎಷ್ಟರಮಟ್ಟಿಗೆ ಇದೆ ಎಂಬುದು ಗೊತ್ತಾಗುತ್ತಿದೆ. ತಂದೆ ಮಾಡಿದ ಕೃತ್ಯಕ್ಕೆ ಮಗಳು ಕೂಡ ಸಾಥ್ ನೀಡಿದ್ದಳಾ ಎಂಬ ಅನುಮಾನಕ್ಕೆ ಕಾರಣವಾಗುವಂತಹ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೊಲೆ ನಡೆದ ಅವಧಿಯಲ್ಲಿ ಮಗಳು ಬರೋಬ್ಬರಿ 15 ದಿನಗಳ ಕಾಲ ಕಾಲೇಜಿಗೆ ರಜೆ ಹಾಕಿದ್ದಳು ಎಂಬುದು ಬಟಬಯಲಾಗಿದೆ.

ಹೌದು,ದ್ವಿತೀಯ ಪಿಯುಸಿ ಓದುತ್ತಿರುವ ಇಂದುಶೇಖರ್‌ನ ಅಪ್ರಾಪ್ತ ಮಗಳು ಅಕ್ಟೋಬರ್ 15ರಿಂದ ಅಕ್ಟೋಬರ್ 30ರವರೆಗೆ ಕಾಲೇಜಿಗೆ ಹೋಗಿರಲಿಲ್ಲ. ಕಾಲೇಜಿನ ಹಾಜರಾತಿ ದಾಖಲಾತಿಗಳನ್ನು ಪರಿಶೀಲಿಸಿದಾಗ ಸತತ 15 ದಿನ ರಜೆ ಹಾಕಿರುವ ವಿಚಾರ ಬಯಲಾಗಿದೆ. ಇದೇ ಅವಧಿಯಲ್ಲಿ ಇಂದುಶೇಖರ್ ತನ್ನ ಪತ್ನಿ ಸೇರಿದಂತೆ ಒಂದೇ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿದ್ದ. ಅಷ್ಟೇ ಅಲ್ಲ, ಮಗಳನ್ನೂ ಬ್ರೈನ್‌ವಾಷ್ ಮಾಡಿದ್ದರಿಂದ ಅಪ್ಪನ ಕೈಗೊಂಬೆಯಾಗಿದ್ದಳು. ಇದೀಗ ಮಗಳ ಪಾತ್ರದ ಬಗ್ಗೆಯೂ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

ಇನ್ನೊಂದೆಡೆ, ಏಳು ಜನರ ಸರಣಿ ಹತ್ಯೆ ಪ್ರಕರಣದ ಆರೋಪಿ ಇಂದುಶೇಖರ್‌ನ ಪೊಲೀಸ್ ಕಸ್ಟಡಿ ಇಂದಿಗೆ ಮುಕ್ತಾಯವಾಗಿದ್ದು, ಹ ಆರೋಪಿಯನ್ನು ಇಂದು ನ್ಯಾಯಾಲಯದ ಮುಂದೆ  ಪೊಲೀಸರು ಹಾಜರುಪಡಿಸಿದ್ದರು. ಮತ್ತಷ್ಟು ವಿಚಾರಣೆ ನಡೆಸುವ ಹಿನ್ನೆಲೆ ಆರೋಪಿಯನ್ನು ಮತ್ತೆ 10 ದಿನ ಕಸ್ಟಡಿಗೆ ಪಡೆದಿದ್ದಾರೆ. ಈಗಾಗಲೇ ವಿಚಾರಣೆ ವೇಳೆ ಹಲವು ಮಹತ್ವದ ಮಾಹಿತಿಗಳನ್ನು ಕಲೆಹಾಕಿರುವ ಪೊಲೀಸರು, ಹತ್ಯೆಯ ಹಿಂದಿನ ಕಾರಣಗಳು ಹಾಗೂ ಮಗಳ ಪಾತ್ರದ ಕುರಿತು ತನಿಖೆ ಮುಂದುವರಿಸಿದ್ದಾರೆ. ಒಟ್ಟಿನಲ್ಲಿ ರಾಜಾಜಿನಗರದ ಏಳು ಜನರ ಹತ್ಯೆ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ವಿಚಾರಗಳು ಬಯಲಾಗುತ್ತಿದ್ದು, ಪೊಲೀಸರ ಮುಂದಿನ ತನಿಖೆ ತೀವ್ರ ಕುತೂಹಲ ಮೂಡಿಸಿದೆ.

ಪ್ರಕರಣದ ಹಿನ್ನೆಲೆ
ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಇಂದುಶೇಖರ್ ಹಾಗೂ ಆತನ ಪತ್ನಿ ಸುನಿತಾ ನಡುವೆ ಕೌಟುಂಬಿಕ ಕಲಹವಿತ್ತು. ಪತ್ನಿ ತವರು ಮನೆಯವರ ಬೆಂಬಲದೊಂದಿಗೆ ತನ್ನನ್ನು ಕಡೆಗಣಿಸುತ್ತಿದ್ದಾಳೆ ಮತ್ತು ನಿರಂತರವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದಾಳೆ ಎಂಬ ದ್ವೇಷ ಹಾಗೂ ಆಕ್ರೋಶವನ್ನು ಇಂದುಶೇಖರ್ ಹೊಂದಿದ್ದನೆಂದು ಆರೋಪಿಸಲಾಗಿದೆ. ಇದರ ಜೊತೆಗೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಹಾಗೂ ಹಣಕಾಸಿನ ವಿವಾದವೂ ಈ ಕೃತ್ಯಕ್ಕೆ ಪ್ರಮುಖ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕುಟುಂಬದ ದ್ವೇಷದ ಹಿನ್ನೆಲೆಯಲ್ಲಿ ಇಂದುಶೇಖರ್ ಒಂದೊಂದೇ ಜೀವಗಳನ್ನು ಬಲಿ ಪಡೆಯಲು ಸಂಚು ರೂಪಿಸಿದ್ದನು. ಮಟನ್ ಊಟದ ನೆಪದಲ್ಲಿ ಸಂಬಂಧಿಕರನ್ನು ತನ್ನ ಮನೆಗೆ ಕರೆಸಿಕೊಳ್ಳುತ್ತಿದ್ದ. ಹೀಗೆ ಆಕೆಯ ಪತ್ನಿ ಸುನಿತಾ ಸೇರಿದಂತೆ ಅತ್ತೆ ರೂಪಾವತಿ, ಬಾವಂದಿರಾದ ಶಿವಕುಮಾರ್ ಮತ್ತು ಶಂಕರ್, ಅವರ ಪತ್ನಿಯರಾದ ದಿವ್ಯಾ ಮತ್ತು ನಳಿನಿ ಹಾಗೂ 7 ವರ್ಷದ ಬಾಲಕ ಪುನೀತ್ ಸೇರಿದಂತೆ ಒಟ್ಟು ಏಳು ಜನರನ್ನು ಆತ ಅತ್ಯಂತ ಕ್ರೂರವಾಗಿ ಹತ್ಯೆಗೈದಿದ್ದಾನೆ. ಕೊಲೆ ಮಾಡಿದ ಬಳಿಕ ಶವಗಳನ್ನು ಮರೆಮಾಚಲು ಹಾಗೂ ಸಾಕ್ಷ್ಯ ನಾಶಪಡಿಸಲು ರಾತ್ರೋರಾತ್ರಿ ಕಾರಿನಲ್ಲಿ ಸಾಗಿಸಿ ವಿಲೇವಾರಿ ಮಾಡಿದ್ದನು. ಈ ಕುರಿತು ನಳಿನಿ ಅವರ ತಾಯಿ ನೀಡಿದ ನಾಪತ್ತೆ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರಿಗೆ ಬೆಚ್ಚಿಬೀಳಿಸುವ ಸತ್ಯಗಳು ತಿಳಿದುಬಂದವು.

ಇದೀಗ ಈ ಪ್ರಕರಣದಲ್ಲಿ ಆರೋಪಿ ಇಂದುಶೇಖರ್‌ನ ದ್ವಿತೀಯ ಪಿಯುಸಿ ಓದುತ್ತಿರುವ ಅಪ್ರಾಪ್ತ ಮಗಳ ಪಾತ್ರದ ಬಗ್ಗೆಯೂ ಗಂಭೀರ ಅನುಮಾನಗಳು ವ್ಯಕ್ತವಾಗಿವೆ. ತಂದೆಯ ಜೊತೆ ಸೇರಿ ಮಗಳು ಕೂಡ ಈ ಕೃತ್ಯಕ್ಕೆ ಕೈಜೋಡಿಸಿದ್ದಳಾ ಎಂಬ ಕೋನದಲ್ಲಿ ತನಿಖೆ ಮುಂದುವರಿದಿದೆ. ತನಿಖೆ ವೇಳೆ ಸಿಕ್ಕ ಆಘಾತಕಾರಿ ಮಾಹಿತಿಯೆಂದರೆ, ಕೊಲೆಗಳು ನಡೆದ ಅಕ್ಟೋಬರ್ 15ರಿಂದ ಅಕ್ಟೋಬರ್ 30ರವರೆಗಿನ ಬರೋಬ್ಬರಿ 15 ದಿನಗಳ ಕಾಲ ಆ ಮಗಳು ಕಾಲೇಜಿಗೆ ಹೋಗದೆ ಗೈರುಹಾಜರಾಗಿದ್ದಳು. ತಂದೆ ಮಗಳನ್ನು ಬ್ರೈನ್‌ವಾಶ್ ಮಾಡಿ ತನ್ನ ಕೃತ್ಯಕ್ಕೆ ಬಳಸಿಕೊಂಡಿದ್ದಾನೆಯೇ ಎಂಬ ಬಗ್ಗೆಯೂ ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ.  

ಒಟ್ಟಾರೆಯಾಗಿ, ಕೌಟುಂಬಿಕ ಕಲಹ ಹಾಗೂ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆದ ಈ ರಾಜಾಜಿನಗರದ ಹತ್ಯಾಕಾಂಡವು ಬೆಂಗಳೂರು ಮಾತ್ರವಲ್ಲದೆ ಇಡೀ ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES