ಪ್ರಿಯಕರನ ಮೋಹಕ್ಕೆ ಬಿದ್ದು ಹೆತ್ತ ಮಗನನ್ನೇ ಕೊ*ಲೆಗೈದ ಕ್ರೂರಿ ತಾಯಿ: ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಕೃತ್ಯ
ಬೆಂಗಳೂರು ಮಹಿಳೆ ಜೊತೆಗೆ ಮಹಾರಾಷ್ಟ್ರ ಯುವಕನ ಲವ್ವಿಡವ್ವಿ.. ಕಥೆಯಲ್ಲಿ ಪ್ರಿಯಕರನಿಗಾಗಿ ಹೆತ್ತ ಮಗನನ್ನೇ ಕೊ*ಲೆಗೈದ ಕ್ರೂರಿ ತಾಯಿಯ ಭಯಾನಕ ಕಥೆ.
ಬೆಂಗಳೂರಿನ ಮಹಿಳೆಯೊಬ್ಬಳು ಮಹಾರಾಷ್ಟ್ರದ ಯುವಕನ ಮೋಹಕ್ಕೆ ಬಿದ್ದು ಆತನಿಗಾಗಿ ತಾನೆತ್ತ ಮಗನನ್ನೇ ಕೊ*ಲೆಗೈದಿದ್ದಾರೆ. ಪ್ರಿಯಕರನಿಗಾಗಿ ಎದೆ ಎತ್ತರಕ್ಕೆ ಬೆಳೆದ ಮಗನನ್ನೇ ಬ*ಲಿ ಪಡೆದಿರುವ ರಾಕ್ಷಸಿ ತಾಯಿಯ ಈ ಬೆಚ್ಚಿ ಬೀಳಿಸುವ ಘಟನೆ ಬೆಳಗಾವಿಯಲ್ಲಿ ಬಯಲಾಗಿದ್ದು ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿದೆ.
ಹೌದು, ಬೆಂಗಳೂರು ಮೂಲದ ಮಹಿಳೆಗೆ ಮಹಾರಾಷ್ಟ್ರ ಯುವಕನ ಜೊತೆ ಲವ್ವಿಡವ್ವಿ ಆರಂಭವಾಗಿತ್ತು. ಆದರೆ ಅವರ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದು ಆಕೆಯ ಮಗ. ಇದರಿಂದಾಗಿ, ಪ್ರಿಯಕರನಿಗಾಗಿ ಹೆತ್ತ ಕಂದನನ್ನೇ ಕೊ*ಲೆ ಮಾಡಲು ಯೋಜನೆ ರೂಪಿಸಿದ್ದ ಕ್ರೂರಿ ತಾಯಿ, ಬೆಳಗಾವಿಯ ಕನ್ನಡ ರಾಜ್ಯೋತ್ಸವ ನೋಡುವ ನೆಪದಲ್ಲಿ ಮಗನನ್ನು ಕರೆಸಿ ಆತನನ್ನು ಹ*ತ್ಯೆಗೈಯಲು ಪ್ಲಾನ್ ಮಾಡಿದ್ದಳು. ಕನ್ನಡ ಬಾವುಟದಿಂದ ಕುತ್ತಿಗೆ ಬಿಗಿದು ತನ್ನ ಮಗ ವಿಜಯ್ ನಾರಾಯಣ (24) ನನ್ನು ಬರ್ಬರವಾಗಿ ಹ*ತ್ಯೆಗೈಯಲಾಗಿದೆ.
ಹ*ತ್ಯೆ ಬೇಧಿಸಲು ಮುಂದಾದ ಪೊಲೀಸರಿಗೆ ಸಿಕ್ಕಿದ್ದು ಶಾಕಿಂಗ್ ಮಾಹಿತಿ:
ವಿಜಯ್ ನಾರಾಯಣ್ (24) ಬೆಂಗಳೂರು ಆರ್.ಟಿ ನಗರ ನಿವಾಸಿ ಆಗಿದ್ದು, ಬೆಳಗಾವಿ ಹೊರವಲಯದ ಹೆದ್ದಾರಿ ಪಕ್ಕದ ನಿರ್ಜನ ಪ್ರದೇಶದಲ್ಲಿ ಯುವಕನ ಮೃತದೇಹ ಸಿಕ್ಕಿತ್ತು. ಯುವಕನ ಮೊಬೈಲ್ ಕಾಲ್ ಡಿಟೇಲ್ಸ್ ಆಧರಿಸಿ ಕೊ*ಲೆ ಪ್ರಕರಣ ಪತ್ತೆಗೆ ಮುಂದಾದ ಮಾಳಮಾರುತಿ ಠಾಣೆ ಇನ್ಸ್ಪೆಕ್ಟರ್ ಬಿ.ಆರ್. ಗಡ್ಡೇಕರ ಮತ್ತವರ ತಂಡಕ್ಕೆ ಸಿಕ್ಕಿದ್ದು, ಮಗನ ಹ*ತ್ಯೆ ಹಿಂದೆ ತಾಯಿ, ಆತನ ಪ್ರಿಯಕರ ಮತ್ತು ಸ್ನೇಹಿತರ ಪಾತ್ರ ಬಯಲಾಗಿದೆ.
ಕೊ*ಲೆ ಹಿಂದಿನ ಕಾರಣ:
ಬೆಂಗಳೂರು ಮೂಲದ ಮೀಣಾ ನಾರಾಯಣ್ ಬ್ಯೂಟಿ ಪಾರ್ಲರ್ ಒಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಆಕಸ್ಮಿಕವಾಗಿ ಭೇಟಿ ಆದ ಮಹಾರಾಷ್ಟ್ರ ಯುವಕ ರಾಕೇಶ್ ಜೊತೆ ಆಕೆಗೆ ಸಲುಗೆ ಬೆಳೆದಿತ್ತು. ಸಲುಗೆ ನಂತರ ಪ್ರೇಮವಾಗಿ ಬದಲಾಗಿತ್ತು.
ಈ ವೇಳೆ ಮೀನಾ ನಾರಾಯಣ್ ಪ್ರಿಯಕರ ರಾಕೇಶನನ್ನೇ ತನ್ನ ಕಾರು ಚಾಲಕನಾಗಿ ನೇಮಿಸಿಕೊಂಡಿದ್ದಳು. ಈ ಇಬ್ಬರ ಅನೈತಿಕ ಸಂಬಂಧ ಗೊತ್ತಾಗಿ ಮೀನಾ ಮಗ ವಿಜಯ್ ನಾರಾಯಣ್ ಆಕ್ಷೇಪ ವ್ಯಕ್ತಪಡಿಸಿದ್ದನು. ಆದರೂ, ಪ್ರಿಯಕರನ ಸಹವಾಸ ಬಿಡದ ಮೀನ ಕೆಲ ದಿನಗಳಿಂದ ವಿಜಯ್‌ಗೆ ಗೊತ್ತಾಗದ ಹಾಗೇ ಅನೈತಿಕ ಸಂಬಂಧ ಮುಂದುವರೆಸಿದ್ದಳು.
ತಮ್ಮಿಬ್ಬರ ಅನೈತಿಕ ಸಂಬಂಧಕ್ಕೆ ವಿಜಯ್ ಅಡ್ಡಿ ಆಗ್ತಾನೆಂದು ಜೋಡಿ ಆತನ ಕಥೆ ಮುಗಿಸಲು ಪ್ಲ್ಯಾನ್ ಮಾಡಿದ್ದರು. ಈ ಹಿನ್ನಲೆಯಲ್ಲಿ ರಾಜ್ಯೋತ್ಸವ ನೋಡಿ ಬರೋಣ ಎಂದು ವಿಜಯ್‌ನನ್ನು ಬೆಳಗಾವಿಗೆ ಹ*ತಕರು ಕರೆತಂದಿದ್ದರು. ಮೀನಾ ಜೊತೆಗೂಡಿ ವಿಜಯ್ ಹ*ತ್ಯೆಗೆ ಪ್ಲಾನ್ ರೂಪಿಸಿದ್ದ ರಾಕೇಶ್ ಮಹಾರಾಷ್ಟ್ರ ಮೂಲದ ನಾಲ್ವರು ಸ್ನೇಹಿತರನ್ನೂ ಅಲ್ಲಿಗೆ ಕರೆಸಿ ವಿಜಯ್ ಹ*ತ್ಯೆಗೈದಿದ್ದಾರೆ.
ತಾಯಿಯೇ ಮಗನಿಗೆ ಚಟ್ಟ ಕಟ್ಟಿರುವ ಪ್ರಕರಣ ಬೇಧಿಸಿರುವ ಪೊಲೀಸರು ಆರೋಪಿಗಳಾದ ಮೀನಾ, ರಾಕೇಶ ಮತ್ತು ಆತನ ಸ್ನೇಹಿತರಾದ ಸಚಿನ್, ಮನೋಜ್, ತಮ್ಮಣ್ಣ, ಏಕನಾಥ ಎಂಬುವವರನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.