• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಪ್ರಿಯಕರನ ಮೋಹಕ್ಕೆ ಬಿದ್ದು ಹೆತ್ತ ಮಗನನ್ನೇ ಕೊ*ಲೆಗೈದ ಕ್ರೂರಿ ತಾಯಿ: ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಕೃತ್ಯ

ಪ್ರಿಯಕರನ ಮೋಹಕ್ಕೆ ಬಿದ್ದು ಹೆತ್ತ ಮಗನನ್ನೇ ಕೊ*ಲೆಗೈದ ಕ್ರೂರಿ ತಾಯಿ: ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಕೃತ್ಯ

ಬೆಂಗಳೂರು ಮಹಿಳೆ ಜೊತೆಗೆ ಮಹಾರಾಷ್ಟ್ರ ಯುವಕನ ಲವ್ವಿಡವ್ವಿ.. ಕಥೆಯಲ್ಲಿ ಪ್ರಿಯಕರನಿಗಾಗಿ ಹೆತ್ತ ಮಗನನ್ನೇ ಕೊ*ಲೆಗೈದ ಕ್ರೂರಿ ತಾಯಿಯ ಭಯಾನಕ ಕಥೆ.

Written ByYashaswini V
Published: Nov 10, 2026, 10:55 IST|Updated: Nov 10, 2026, 11:07 IST
joinshare
ಪ್ರಿಯಕರನ ಮೋಹಕ್ಕೆ ಬಿದ್ದು ಹೆತ್ತ ಮಗನನ್ನೇ ಕೊ*ಲೆಗೈದ ಕ್ರೂರಿ ತಾಯಿ: ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಕೃತ್ಯ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರಿನ ಮಹಿಳೆಯೊಬ್ಬಳು ಮಹಾರಾಷ್ಟ್ರದ ಯುವಕನ ಮೋಹಕ್ಕೆ ಬಿದ್ದು ಆತನಿಗಾಗಿ ತಾನೆತ್ತ ಮಗನನ್ನೇ ಕೊ*ಲೆಗೈದಿದ್ದಾರೆ. ಪ್ರಿಯಕರನಿಗಾಗಿ ಎದೆ ಎತ್ತರಕ್ಕೆ ಬೆಳೆದ ಮಗನನ್ನೇ ಬ*ಲಿ ಪಡೆದಿರುವ ರಾಕ್ಷಸಿ ತಾಯಿಯ ಈ ಬೆಚ್ಚಿ ಬೀಳಿಸುವ ಘಟನೆ ಬೆಳಗಾವಿಯಲ್ಲಿ ಬಯಲಾಗಿದ್ದು ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿದೆ.

ಹೌದು, ಬೆಂಗಳೂರು ಮೂಲದ ಮಹಿಳೆಗೆ ಮಹಾರಾಷ್ಟ್ರ ಯುವಕನ ಜೊತೆ ಲವ್ವಿಡವ್ವಿ ಆರಂಭವಾಗಿತ್ತು. ಆದರೆ ಅವರ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದು ಆಕೆಯ ಮಗ. ಇದರಿಂದಾಗಿ, ಪ್ರಿಯಕರನಿಗಾಗಿ ಹೆತ್ತ ಕಂದನನ್ನೇ ಕೊ*ಲೆ ಮಾಡಲು ಯೋಜನೆ ರೂಪಿಸಿದ್ದ ಕ್ರೂರಿ ತಾಯಿ, ಬೆಳಗಾವಿಯ ಕನ್ನಡ ರಾಜ್ಯೋತ್ಸವ ನೋಡುವ ನೆಪದಲ್ಲಿ ಮಗನನ್ನು ಕರೆಸಿ ಆತನನ್ನು ಹ*ತ್ಯೆಗೈಯಲು ಪ್ಲಾನ್‌ ಮಾಡಿದ್ದಳು. ಕನ್ನಡ ಬಾವುಟದಿಂದ ಕುತ್ತಿಗೆ ಬಿಗಿದು ತನ್ನ ಮಗ ವಿಜಯ್ ನಾರಾಯಣ (24) ನನ್ನು ಬರ್ಬರವಾಗಿ ಹ*ತ್ಯೆಗೈಯಲಾಗಿದೆ.

ಹ*ತ್ಯೆ ಬೇಧಿಸಲು ಮುಂದಾದ ಪೊಲೀಸರಿಗೆ ಸಿಕ್ಕಿದ್ದು ಶಾಕಿಂಗ್‌ ಮಾಹಿತಿ:
ವಿಜಯ್ ನಾರಾಯಣ್ (24)  ಬೆಂಗಳೂರು ಆರ್.ಟಿ ನಗರ ನಿವಾಸಿ ಆಗಿದ್ದು, ಬೆಳಗಾವಿ ಹೊರವಲಯದ ಹೆದ್ದಾರಿ ಪಕ್ಕದ ನಿರ್ಜನ ಪ್ರದೇಶದಲ್ಲಿ ಯುವಕನ ಮೃತದೇಹ ಸಿಕ್ಕಿತ್ತು. ಯುವಕನ ಮೊಬೈಲ್ ಕಾಲ್ ಡಿಟೇಲ್ಸ್ ಆಧರಿಸಿ ಕೊ*ಲೆ ಪ್ರಕರಣ ಪತ್ತೆಗೆ ಮುಂದಾದ ಮಾಳಮಾರುತಿ ‌ಠಾಣೆ ಇನ್ಸ್ಪೆಕ್ಟರ್ ‌ಬಿ.ಆರ್. ಗಡ್ಡೇಕರ ಮತ್ತವರ ತಂಡಕ್ಕೆ ಸಿಕ್ಕಿದ್ದು, ಮಗನ ಹ*ತ್ಯೆ ಹಿಂದೆ ತಾಯಿ, ಆತನ ಪ್ರಿಯಕರ ಮತ್ತು ಸ್ನೇಹಿತರ ಪಾತ್ರ ಬಯಲಾಗಿದೆ.  

ಕೊ*ಲೆ ಹಿಂದಿನ ಕಾರಣ:
ಬೆಂಗಳೂರು ಮೂಲದ ಮೀಣಾ ನಾರಾಯಣ್‌ ಬ್ಯೂಟಿ ಪಾರ್ಲರ್‌ ಒಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಆಕಸ್ಮಿಕವಾಗಿ ಭೇಟಿ ಆದ ಮಹಾರಾಷ್ಟ್ರ ‌ಯುವಕ ರಾಕೇಶ್ ಜೊತೆ ಆಕೆಗೆ ಸಲುಗೆ ಬೆಳೆದಿತ್ತು. ಸಲುಗೆ ನಂತರ ಪ್ರೇಮವಾಗಿ ಬದಲಾಗಿತ್ತು.

ಈ ವೇಳೆ ಮೀನಾ ನಾರಾಯಣ್‌ ಪ್ರಿಯಕರ ರಾಕೇಶ‌ನನ್ನೇ ತನ್ನ ಕಾರು ಚಾಲಕನಾಗಿ ನೇಮಿಸಿಕೊಂಡಿದ್ದಳು. ಈ ಇಬ್ಬರ ಅನೈತಿಕ ಸಂಬಂಧ ಗೊತ್ತಾಗಿ ಮೀನಾ ಮಗ ವಿಜಯ್‌ ನಾರಾಯಣ್ ಆಕ್ಷೇಪ ವ್ಯಕ್ತಪಡಿಸಿದ್ದನು. ಆದರೂ, ಪ್ರಿಯಕರನ ಸಹವಾಸ ಬಿಡದ ಮೀನ ಕೆಲ ದಿನಗಳಿಂದ ವಿಜಯ್‌ಗೆ ಗೊತ್ತಾಗದ ಹಾಗೇ ಅನೈತಿಕ ಸಂಬಂಧ ಮುಂದುವರೆಸಿದ್ದಳು.

ತಮ್ಮಿಬ್ಬರ ಅನೈತಿಕ ಸಂಬಂಧಕ್ಕೆ ವಿಜಯ್ ಅಡ್ಡಿ ಆಗ್ತಾನೆಂದು ಜೋಡಿ ಆತನ ಕಥೆ ಮುಗಿಸಲು ಪ್ಲ್ಯಾನ್ ಮಾಡಿದ್ದರು. ಈ ಹಿನ್ನಲೆಯಲ್ಲಿ ರಾಜ್ಯೋತ್ಸವ ನೋಡಿ ಬರೋಣ ಎಂದು ವಿಜಯ್‌ನನ್ನು ಬೆಳಗಾವಿಗೆ ಹ*ತಕರು ಕರೆತಂದಿದ್ದರು. ಮೀನಾ ಜೊತೆಗೂಡಿ ವಿಜಯ್‌ ಹ*ತ್ಯೆಗೆ ಪ್ಲಾನ್‌ ರೂಪಿಸಿದ್ದ ರಾಕೇಶ್‌ ಮಹಾರಾಷ್ಟ್ರ ಮೂಲದ ನಾಲ್ವರು ಸ್ನೇಹಿತರನ್ನೂ ಅಲ್ಲಿಗೆ ಕರೆಸಿ ವಿಜಯ್ ಹ*ತ್ಯೆಗೈದಿದ್ದಾರೆ.

ತಾಯಿಯೇ ಮಗನಿಗೆ ಚಟ್ಟ ಕಟ್ಟಿರುವ ಪ್ರಕರಣ ಬೇಧಿಸಿರುವ ಪೊಲೀಸರು ಆರೋಪಿಗಳಾದ ಮೀನಾ, ರಾಕೇಶ ಮತ್ತು ಆತನ ಸ್ನೇಹಿತರಾದ ಸಚಿನ್, ಮನೋಜ್, ತಮ್ಮಣ್ಣ, ಏಕನಾಥ ಎಂಬುವವರನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. 
 

Add Zee News as a Preferred Source
TAGS:
Crime
Kannada News