SOCIAL MEDIA

Newsletter

PARTNER SITES
Select Language Select State

ಗಣೇಶ ವಿಸರ್ಜನೆ ವೇಳೆ ಮುಹೂರ್ತ ಫಿಕ್ಸ್.. ರೌಡಿಶೀಟರ್‌ಗೆ ಡ್ರ್ಯಾಗರಿಂದ ಇರಿದು ಹ*ತ್ಯೆ

ಗಣೇಶ ವಿಸರ್ಜನೆ ಮುಗಿಸಿ ವಾಪಸ್ ಮರುಳುವಾಗ ನಡುರಸ್ತೆಯಲ್ಲಿ ಡ್ರ್ಯಾಗರ್ ತೆಗೆದುಕೊಂಡು ಇರಿದು ಬಿಟ್ಟಿದ್ದಾರೆ. ಗಾಯಗೊಂಡಿದ್ದ ದೀಪಕ್ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಾರ್ಗ ಮಧ್ಯೆಯೇ ಪ್ರಾಣಬಿಟ್ಟಿದ್ದಾನೆ.

Written By Bhimappa
Published: Sep 28, 2026, 04:20 PM IST | Updated: Sep 28, 2026, 04:37 PM IST
Image Credit: bangalore_gulbarga
Join

rowdy sheeter Deepak alias Dipu: ಅದು ಹಲವು ವರ್ಷಗಳ ದ್ವೇಷ. ಅದೇ ದ್ವೇಷ ನಡುರಸ್ತೆಯಲ್ಲೇ ನೆತ್ತರು ಹರಿಸಿಬಿಟ್ಟಿದೆ. ಹಂತಕರು ರೌಡಿಶೀಟರ್ ಒಬ್ಬನ್ನನ್ನು ಅಡ್ಡಡ್ಡ ಮಲಗಿಸಿಬಿಟ್ಟಿದ್ದಾರೆ. ಅಂದರೆ ಭೀಕರವಾಗಿ ಕೊಲೆ ಮಾಡಿ ಬಿಟ್ಟಿದ್ದಾರೆ. ಗಣೇಶ ವಿಸರ್ಜನೆ ವೇಳೆ ಮುಹೂರ್ತ ಫಿಕ್ಸ್ ಮಾಡಿದ್ದವರು ಇರಿದು ಕೊಂದುಬಿಟ್ಟಿದ್ದಾರೆ. ಹಾಗಾದ್ರೆ ಕೊಲೆಯಾದವನು ಯಾರು, ಕೊಲೆ ಹೇಗೆ ನಡೀತು? ಎಂಬುದರ ಸಂಪೂರ್ಣವಾದ ಮಾಹಿತಿ ಇಲ್ಲಿದೆ.

ಗಣೇಶ ವಿಸರ್ಜನೆ ವೇಳೆ ಕಿರಿಕ್, ಕೊಲೆಯಲ್ಲಿ ಅಂತ್ಯ
ಡ್ರ್ಯಾಗರ್‌ನಿಂದ ಇರಿದು ರೌಡಿಶೀಟರ್ ಕಥೆ ಮುಗಿಸಿದ ಹಂತಕರು

ಬೆಂಗಳೂರಲ್ಲಿ ರೌಡಿಗಳ ಹಾವಳಿ ಹೆಚ್ಚಾಗುತ್ತಿದೆ. ನಾಮುಂದು ತಾಮುಂದು ಅನ್ನೋ ಹಾಗೇ ಅಟ್ಟಹಾಸ ಮೆರೆದು ಹೆಣಗಳನ್ನು ಉರುಳಿಸುತ್ತಿದ್ದಾರೆ. ಇದೇ ರೀತಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆ, ನಿನ್ನೆ ರಾತ್ರಿ ಗಣೇಶ ವಿಸರ್ಜನೆ ವೇಳೆ ಕೊಲೆಯಲ್ಲಿ ಅಂತ್ಯವಾಗಿದೆ. ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಗುಲ್ಬರ್ಗ ಕಾಲೋನಿಯಲ್ಲಿ ರೌಡಿ ಶೀಟರ್ ದೀಪಕ್ ಅಲಿಯಾಸ್ ದೀಪು  ಕೊಲೆಯಾಗಿ ಹೋಗಿದ್ದಾನೆ. ಗಣೇಶ ವಿಸರ್ಜನೆ ಮುಗಿಸಿ ವಾಪಸ್ ಮರುಳುವಾಗ ನಡುರಸ್ತೆಯಲ್ಲಿ ಡ್ರ್ಯಾಗರ್ ತೆಗೆದುಕೊಂಡು ಇರಿದಿದ್ದಾರೆ. ದಾಳಿಯಿಂದ ಗಾಯಗೊಂಡ ದೀಪಕ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ ದಾರಿಯ ಮಧ್ಯೆಯೇ ರೌಡಿಶೀಟರ್‌ ಮೃತಪಟ್ಟಿದ್ದಾನೆ. 

ನಂದಿನಿ ಲೇಔಟ್ ವ್ಯಾಪ್ತಿಯಲ್ಲಿ ಈ ದೀಪಕ್ ಸಾಕಷ್ಟು ಹವಾ ಮೆಂಟೇನ್ ಮಾಡ್ಕೊಂಡು ರೌಡಿ ಶೀಟರ್ ಆಗಿದ್ದನು. ನಂದಿನಿ 
ಲೇಔಟ್ ಅಲ್ಲಿ ಕೂರಿಸಿದ್ದ ಗಣೇಶನನ್ನ, ನಿನ್ನೆ ರಾತ್ರಿ ಪೀಣ್ಯ ವ್ಯಾಪ್ತಿಯ ಚೊಕ್ಕಸಂದ್ರ ಕೆರೆಯಲ್ಲಿ ವಿಸರ್ಜನೆ ಮಾಡೋದಕ್ಕೆ ದೀಪಕ್ ಮತ್ತು ಅವರ ಟೀಂ ಬಂದಿತ್ತು. ಇದೇ ಸಮಯಕ್ಕೆ ಕಾದು ಕುಳಿತಿದ್ದ ಎದುರಾಳಿ ಸುಮಂತ್ ಅಲಿಯಾಸ್ ಪಾರಿವಾಳ ಮತ್ತು ಟೀಂ ನೋಡನೋಡುತ್ತಿದ್ದಂತೆ ಅಟ್ಯಾಕ್ ಮಾಡಿದ್ದಾರೆ. ಗಣೇಶ ವಿಸರ್ಜನೆ ಮುಗಿಸಿ ವಾಪಸ್ ಮರುಳುವಾಗ ನಡುರಸ್ತೆಯಲ್ಲಿ ಡ್ರ್ಯಾಗರ್ ತೆಗೆದುಕೊಂಡು ಇರಿದು ಬಿಟ್ಟಿದ್ದಾರೆ. ಗಾಯಗೊಂಡಿದ್ದ ದೀಪಕ್ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಾರ್ಗ ಮಧ್ಯೆಯೇ ಪ್ರಾಣಬಿಟ್ಟಿದ್ದಾನೆ.

ಬನ್ನೇರುಘಟ್ಟ ಮೂಲದ ದೀಪಕ್ ಬೆಂಗಳೂರಿನ ನಂದಿನಿ ಲೇಔಟ್ ಅಲ್ಲಿ ಗಲಾಟೆ ವಿಚಾರಗಳಲ್ಲಿ ಹವಾ ಮೆಂಟೇನ್ ಮಾಡುತ್ತಿದ್ದನು. ಕಳೆದ ಶನಿವಾರ ದೀಪಕ್, ಈಶ್ವರ್ ಹಾಗೂ ಸುಮಂತ್ ಸುಮಂತ್ ಟೀಂ ನಡುವೆ ಗಲಾಟೆಯಾಗಿತ್ತು. ನಿನ್ನೆ ರಾತ್ರಿ ಗಣೇಶ ಮೆರವಣಿಗೆ ವೇಳೆ ಎದುರಾಳಿ ತಂಡದ ಯುವಕನ ಕಾಲು ತುಳಿದ ವಿಚಾರ ಮುಂದಿಟ್ಟುಕೊಂಡು ಗಲಾಟೆ ಮಾಡಿದ್ದಾರೆ. ಬಳಿಕ ನೋಡ ನೋಡುತ್ತಿದ್ದಂತೆ ಸುಮಂತ್ ಟೀಂ ಡ್ರ್ಯಾಗರ್ ತೆಗೆದು ಮೂರ್ನಾಲ್ಕು ಬಾರಿ ಚುಚ್ಚಿ ಪರಾರಿಯಾಗಿದ್ದರು. ಸದ್ಯ ಕೃತ್ಯದ ವೇಳೆ ಹತ್ತಕ್ಕೂ ಹೆಚ್ಚು ಮಂದಿ ಸ್ಥಳದಲ್ಲಿದ್ದರು ಎನ್ನಲಾಗಿದ್ದು, ಸಂತೋಷ, ದೇವರಾಜ್, ಮಹಿಪಾಲ್ ಅಂದರ್ ಆಗಿದ್ದಾರೆ.

ಕಾಲು ತುಳಿದ ವಿಚಾರಕ್ಕೆ ಗಲಾಟೆ ಮಾಡಿ ರೌಡಿಶೀಟರ್‌ನನ್ನು ಮುಗಿಸಿಯೇ ಬಿಟ್ಟಿದ್ದಾರೆ. ರೌಡಿಗಳು ಯಾವ ಕೆಲಸಕ್ಕೆ ಜಗಳ ಮಾಡುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ. ಇಲ್ಲಿಯೂ ಕೂಡ ಕೇವಲ ಕಾಲು ತುಳಿದ ಎಂದು ಕೃತ್ಯ ಎಸಗಲಾಗಿದೆ. 

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಈ ಘಟನೆ ಸುತ್ತಲಿನ ಏರಿಯಾಗಳಲ್ಲಿ ಭಯ ಹುಟ್ಟಿಸಿದ್ದು, ಎಸ್ಕೇಪ್ ಆಗಿರುವ ಕೆಲ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ಅದೆನೇ ಹೇಳಿ, ಗಣಪತಿ ವಿಸರ್ಜನೆ ಅಂದ್ರೆ ಅಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಆದರೆ ಗ್ಯಾಂಗ್ ವಾರ್‌ಗೆ ಸಾಕ್ಷಿಯಾಗಿದ್ದು ನಿಜಕ್ಕೂ ದುರಂತ. 

ಸುಂದರವಾದ ಬೆಂಗಳೂರು ನಗರದಲ್ಲಿ ರೌಡಿಶೀಟರ್‌ಗಳ ಹೊಡೆದಾಟ ಆಗಾಗ ನಡೆಯುತ್ತಲೇ ಇರುತ್ತದೆ. ಅದರಲ್ಲಿ ಗಣೇಶ ಹಬ್ಬದ ಸಮಯದಲ್ಲಿ ರೌಡಿಶೀಟರ್‌ಗಳ ಅಟ್ಟಹಾಸ ಮಿತಿಮೀರಿರುತ್ತದೆ. ಇಂತಹ ಸಂದರ್ಭಗಳಲ್ಲಿ ನಗರದ ಪೊಲೀಸರು ಹೆಚ್ಚು ನಿಗಾ ವಹಿಸಬೇಕು. ತಪ್ಪು ಮಾಡಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ಶಾಂತಿ, ಸುವವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಇಲಾಖೆಯ ಮೇಲಿದೆ. 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES