SOCIAL MEDIA

Newsletter

PARTNER SITES
Select Language Select State

ಬೆಂಗಳೂರು ವಾಹನ ಸವಾರರೇ ಗಮನಿಸಿ: ಅ. 10ರಿಂದ ಬಸವನಗರ ಮುಖ್ಯರಸ್ತೆಯಲ್ಲಿ ಸಂಚಾರ ನಿರ್ಬಂಧ, ಇಲ್ಲಿದೆ ಪರ್ಯಾಯ ಮಾರ್ಗ

ರಾಜ್ಯ ರಾಜಧಾನಿ ಬೆಂಗಳೂರಿಗರಿಗೆ ಇದು ಮಹತ್ವದ ಮಾಹಿತಿ ಆಗಿದ್ದು, ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಒಂದಾದ ಬಸವನಗರ ಮುಖ್ಯರಸ್ತೆಯಲ್ಲಿ ಇಂದಿನಿಂದ (ಅಕ್ಟೋಬರ್‌ 10) ಮುಂದಿನ 20 ದಿನಗಳ ಕಾಲ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಯಾವ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಇರಲಿದೆ? ಪರ್ಯಾಯ ವ್ಯವಸ್ಥೆ ಏನು ಎಂಬ ಪ್ರಮುಖ ಮಾಹಿತಿಗಾಗಿ ಮುಂದೆ ಓದಿ...

Written By Yashaswini V
Published: Oct 10, 2026, 08:42 AM IST | Updated: Oct 10, 2026, 08:45 AM IST
Join

ನೀವು ಸಿಲಿಕಾನ್‌ ಸಿಟಿ ಬೆಂಗಳೂರಿನ ನಿವಾಸಿಯೇ? ಹಾಗಿದ್ದರೆ ಈ ಸಂಚಾರ ಸಲಹೆ ಬಗ್ಗೆ ನೀವು ತಿಳಿಯುವುದು ಬಹಳ ಮುಖ್ಯ. ಬೆಂಗಳೂರಿನ ಬಸವನಗರ ಮುಖ್ಯರಸ್ತೆಯಲ್ಲಿ ಇಂದಿನಿಂದ (ಅಕ್ಟೋಬರ್‌ 10) ಮುಂದಿನ 20 ದಿನಗಳವರೆಗೆ ಸಂಚಾರವನ್ನು ನಿರ್ಬಂಧಿಸಲಾಗಿದೆ. ಬಸವನಗರ ಮುಖ್ಯರಸ್ತೆಯಲ್ಲಿ ಸಂಚಾರ ನಿರ್ಬಂಧಿಸಿರುವುದು ಏಕೆ? ಯಾವ್ಯಾವ ಮಾರ್ಗಗಳಲ್ಲಿ ವಾಹನಗಳು ಸಂಚರಿಸುವಂತಿಲ್ಲ? ಇದಕ್ಕೆ ಪರ್ಯಾಯ ಮಾರ್ಗವೇನು ಎಂಬ ಅಗತ್ಯ ಮಾಹಿತಿಗಳು ಇಲ್ಲಿವೆ.

ಬಸವನಗರ ಮುಖ್ಯರಸ್ತೆಯಲ್ಲಿ ಸಂಚಾರ ನಿರ್ಬಂಧಕ್ಕೆ ಕಾರಣ?
ಹೆಚ್.ಎ.ಎಲ್ ಬರ್‌ಪೋರ್ಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಗರ ಮುಖ್ಯ ರಸ್ತೆಗೆ ಅಡ್ಡಲಾಗಿ ಜಿ.ಬಿ.ಎ ವತಿಯಿಂದ ವಿಭೂತಿಪುರ ಕೆರೆ ಕಾಲುವೆಗೆ ಸೇತುವೆ ನಿರ್ಮಾಣ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಸವನಗರ ಮುಖ್ಯ ರಸ್ತೆಯಲ್ಲಿ ಅಕ್ಟೋಬರ್‌ 10, 2026 ರಿಂದ 20 ದಿನಗಳವರೆಗೆ ಈ ಮಾರ್ಗದಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ.

ವಾಹನ ಸಂಚಾರ ನಿರ್ಬಂಧಿಸಿರುವ ರಸ್ತೆ :
+ ಮಾರತ್ತಹಳ್ಳಿ, ಹೆಚ್.ಎ.ಎಲ್, ವಿಭೂತಿಪುರ ಹಾಗೂ ಬಸವನಗರ ಕಡೆಯಿಂದ ವಿಜ್ಞಾನ ನಗರ. ಕಗ್ಗದಾಸಪುರ, ಮಲ್ಲೇಶಪಾಳ್ಯ, ಬಿ.ಇ.ಎಂ.ಎಲ್ ಕಡೆಗೆ ಹೋಗುವ ಭಾರೀ ಸರಕು ವಾಹನಗಳ (ಹೆಚ್.ಜಿ.ಎ), ಬಿ.ಎಂ.ಟಿ.ಸಿ ಬಸ್‌ಗಳ, ಶಾಲಾ ಬಸ್‌ಗಳ ಮತ್ತು ಲಘು ಸರಕು ವಾಹನಗಳ (ಎಲ್.ಜಿ.ವಿ) ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.
+ ವಿಜ್ಞಾನ ನಗರ. ಕಗ್ಗದಾಸಪುರ, ಮಲ್ಲೇಶಪಾಳ್ಯ, ಬಿ.ಇ.ಎಂ.ಎಲ್ ಕಡೆಯಿಂದ ವಿಭೂತಿಪುರ, ಬಸವನಗರ ಹೆಚ್.ಎ.ಎಲ್, ಮಾರತ್ತಹಳ್ಳಿ ಕಡೆಗೆ ಹೋಗುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.

ನಿರ್ಬಂಧಿಸಲಾದ ಸಂಚಾರಕ್ಕೆ ಪರ್ಯಾಯ ಮಾರ್ಗ :
+ ಮಾರತ್ತಹಳ್ಳಿ, ಹೆಚ್.ಎ.ಎಲ್, ವಿಭೂತಿಪುರ, ಬಸವನಗರ ಕಡೆಯಿಂದ ವಿಜ್ಞಾನ ನಗರ. ಕಗ್ಗದಾಸ ಪುರ, ಮಲ್ಲೇಶ್‌ಪಾಳ್ಯ, ಬಿ.ಇ.ಎಂ.ಎಲ್‌ ಕಡೆಗೆ ಸಾಗುವ ಭಾರೀ ಸರಕು ವಾಹನಗಳು, ಲಘು ಸರಕು ವಾಹನಗಳು, ಬಿ.ಎಂ.ಟಿ.ಸಿ ಬಸ್‌ಗಳು ಹಾಗೂ ಶಾಲಾ ಬಸ್‌ಗಳಿಗೆ ಸಂಚಾರ ನಿರ್ಬಂಧ ಹೇರಲಾಗಿದೆ. ಮಾರತ್ಹಳ್ಳಿ, ಎಚ್‌ಎಎಲ್, ವಿಭೂತಿಪುರ ಮತ್ತು ಬಸವನಗರ ಕಡೆಯಿಂದ ವಿಜ್ಞಾನ ನಗರ ಅಥವಾ ಕಗ್ಗದಾಸಪುರಕ್ಕೆ ಸಾಗುವ ವಾಹನಗಳು ಓಲ್ಡ್‌ ಏರ್‌ಪೋರ್ಟ್‌ ಮಾರ್ಗವನ್ನು ಬಳಸಬಹುದಾಗಿದೆ. ಸುರಂಜನ್‌ದಾಸ್ ರಸ್ತೆ ಬ್ರಿಡ್ಜ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಸುರಂಜನ್‌ದಾಸ್ ರಸ್ತೆಯಲ್ಲಿ ಸಂಚರಿಸಬೇಕು. ಬಿಇಎಂಎಲ್ ಜಂಕ್ಷನ್‌ನಲ್ಲಿ ಮತ್ತೆ ಬಲ ತಿರುವು ಪಡೆದು ಮಲ್ಲೇಶಪಾಳ್ಯ ಮುಖ್ಯರಸ್ತೆಯ ಮೂಲಕ ವಿಜ್ಞಾನ ನಗರ ಮತ್ತು ಕಗ್ಗದಾಸಪುರ ತಲುಪಬಹುದು.

ವಿಜ್ಞಾನ ನಗರ, ಕಗ್ಗದಾಸಪುರ, ಮಲ್ಲೇಶಪಾಳ್ಯ, ಬಿ.ಇ.ಎಂ.ಎಲ್ ಕಡೆಯಿಂದ ವಿಭೂತಿಪುರ, ಬಸವನಗರ ಹೆಚ್.ಎ.ಎಲ್. ಮಾರತ್‌ಹಳ್ಳಿ ಕಡೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳು ಬಿಇಎಂಎಲ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಸುರಂಜನ್‌ದಾಸ್ ರಸ್ತೆಯಲ್ಲಿ ಸಾಗಬೇಕು. ಸುರಂಜನ್‌ದಾಸ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಹಳೆ ವಿಮಾನ ನಿಲ್ದಾಣ ರಸ್ತೆಯ ಮೂಲಕ ತಮ್ಮ ಗಮ್ಯಸ್ಥಾನ ತಲುಪಬಹುದು.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES