• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕೆರಿಯರ್
  • /ಯುಜಿ ನೀಟ್: ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಸ್ಟ್ರೇ ವೇಕೆನ್ಸಿ ಸುತ್ತಿನ ವೇಳಾಪಟ್ಟಿ ಪ್ರಕಟ

ಯುಜಿ ನೀಟ್: ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಸ್ಟ್ರೇ ವೇಕೆನ್ಸಿ ಸುತ್ತಿನ ವೇಳಾಪಟ್ಟಿ ಪ್ರಕಟ

ಯುಜಿ ನೀಟ್: ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಟ್ರೇ ವೇಕೆನ್ಸಿ ಸುತ್ತಿನ ವೇಳಾಪಟ್ಟಿ ಪ್ರಕಟಿಸಿದೆ.

Written ByYashaswini V
Published: Oct 10, 2026, 07:52 AM IST|Updated: Oct 10, 2026, 07:55 AM IST
joinshare
ಯುಜಿ ನೀಟ್: ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಸ್ಟ್ರೇ ವೇಕೆನ್ಸಿ ಸುತ್ತಿನ ವೇಳಾಪಟ್ಟಿ ಪ್ರಕಟ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಬೆಂಗಳೂರು ವಾಹನ ಸವಾರರೇ ಗಮನಿಸಿ: ಅ. 10ರಿಂದ ಬಸವನಗರ ಮುಖ್ಯರಸ್ತೆಯಲ್ಲಿ ಸಂಚಾರ ನಿರ್ಬಂಧ, ಇಲ್ಲಿದೆ ಪರ್ಯಾಯ ಮಾರ್ಗ

ಬೆಂಗಳೂರು ವಾಹನ ಸವಾರರೇ ಗಮನಿಸಿ: ಅ. 10ರಿಂದ ಬಸವನಗರ ಮುಖ್ಯರಸ್ತೆಯಲ್ಲಿ ಸಂಚಾರ ನಿರ್ಬಂಧ, ಇಲ್ಲಿದೆ ಪರ್ಯಾಯ ಮಾರ್ಗ

2

ಯುಜಿ ನೀಟ್: ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಸ್ಟ್ರೇ ವೇಕೆನ್ಸಿ ಸುತ್ತಿನ ವೇಳಾಪಟ್ಟಿ ಪ್ರಕಟ

3

ದಿನ ಭವಿಷ್ಯ 10-10-2026: ಮಹಾಲಯ ಅಮಾವಾಸ್ಯೆಯಂದು ಐಂದ್ರ ಯೋಗ.. ಯಾರಿಗೆ ಲಾಭ? ಯಾರಿಗೆ ನಷ್ಟ?

4

ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜಿನಾಮೆಗೆ ಸಿಎಂ ಡಿ.ಕೆ. ಶಿವಕುಮಾರ್ ಆಗ್ರಹ!

5

42ನೇ ವಯಸ್ಸಿನಲ್ಲೂ ಮಿಸ್ಟರ್‌ 360 ರೌದ್ರಾವತಾರ: 11 ಸಿಕ್ಸರ್, 40 ಎಸೆತಗಳಲ್ಲಿ 111 ರನ್ ಚಚ್ಚಿದ ಎಬಿಡಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಶುಕ್ರವಾರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶದ ಖಾಲಿ ಹುದ್ದೆಗಳ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟಿಸಿದೆ. ಅಭ್ಯರ್ಥಿಗಳು ಅಕ್ಟೋಬರ್‌ 13 ರಿಂದ 16ರವರೆಗೆ ಹೊಸ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ.

ಯಾರು ಅರ್ಜಿ ಸಲ್ಲಿಸಬಹುದು?
ಕೆಇಎ ಪ್ರಕಟಿಸಿರುವ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಪ್ರಸಕ್ತ ವರ್ಷದ ಯುಜಿ ನೀಟ್‌ನಲ್ಲಿ ಅರ್ಹತೆ ಪಡೆದು, ಇದುವರೆಗೆ ಕೆಇಎಯಲ್ಲಿ ನೋಂದಣಿ ಮಾಡದ ಅಭ್ಯರ್ಥಿಗಳಿಗೂ ಸಹ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.‌ ಪ್ರಸನ್ನ ತಿಳಿಸಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು, ಅಕ್ಟೋಬರ್ 16 ರಿಂದ 19 ರವರೆಗೆ ಹೊಸ ಆಯ್ಕೆ ನಮೂದನ್ನು ಅನುಮತಿಸಲಾಗುತ್ತದೆ. ಆಯ್ಕೆಗಳನ್ನು ನಮೂದಿಸುವ ಮೊದಲು ಎಚ್ಚರಿಕೆ ಠೇವಣಿಯನ್ನು ಪಾವತಿಸುವುದು ಕಡ್ಡಾಯವಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಿ, ಪರಿಶೀಲನಾ ಚೀಟಿಯನ್ನು ಡೌನ್ಲೋಡ್ ಮಾಡಿ, ಎಚ್ಚರಿಕೆ ಠೇವಣಿಯನ್ನು ಪಾವತಿಸಿ ನಂತರ ತಮ್ಮ ಆಯ್ಕೆಗಳನ್ನು ನಮೂದಿಸಲು ಸಲಹೆ ನೀಡಿದರು.

ಕಾಷನ್ ಡೆಪಾಸಿಟ್‌ಗೆ ಅನುಗುಣವಾಗಿ ಸೀಟು ಆಯ್ಕೆ: 
* ₹1,00,000 ಕಾಶನ್ ಠೇವಣಿ ಪಾವತಿಸುವ ಅಭ್ಯರ್ಥಿಗಳು ಸರ್ಕಾರಿ ವೈದ್ಯಕೀಯ ಸೀಟುಗಳು ಮತ್ತು ಎಲ್ಲಾ ವರ್ಗದ ದಂತ ಸೀಟುಗಳಿಗೆ ಆಯ್ಕೆಗಳನ್ನು ನಮೂದಿಸಲು ಅರ್ಹರಾಗಿರುತ್ತಾರೆ. 
* ₹12,00,117 ಕಾಶನ್ ಠೇವಣಿ ಪಾವತಿಸುವ ಅಭ್ಯರ್ಥಿಗಳು 'ಜಿ' (ಸರ್ಕಾರಿ) ಮತ್ತು 'ಪಿ' (ಖಾಸಗಿ) ಸೀಟುಗಳಿಗೆ ಆಯ್ಕೆಗಳನ್ನು ನಮೂದಿಸಲು ಅರ್ಹರಾಗಿರುತ್ತಾರೆ. 
* ₹25 ಲಕ್ಷ ಕಾಶನ್ ಠೇವಣಿ ಪಾವತಿಸುವ ಅಭ್ಯರ್ಥಿಗಳು ಎಲ್ಲಾ ವರ್ಗದ ಸೀಟುಗಳಿಗೆ ಆಯ್ಕೆಗಳನ್ನು ನಮೂದಿಸಲು ಅರ್ಹರಾಗಿರುತ್ತಾರೆ ಎಂದು ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
* ಸೀಟು ಹಂಚಿಕೆಯಾದ ಬಳಿಕ ಕಾಲೇಜಿಗೆ ವರದಿ ಮಾಡಿಕೊಳ್ಳದಿದ್ದರೆ ಕಾಷನ್ ಡೆಪಾಸಿಟ್ ಮುಟ್ಟುಗೋಲು ಮಾಡಿಕೊಳ್ಳಲಾಗುವುದು. ನಿಯಮಾನುಸಾರ ದಂಡವನ್ನೂ ಪಾವತಿಸಬೇಕಾಗುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.

ಯುಜಿ ನೀಟ್ ಸ್ಟ್ರೇ ವೇಕೆನ್ಸಿ ಸುತ್ತಿಗೆ ಯಾರೆಲ್ಲ ಅರ್ಹರು?
* ಇದುವರೆಗೆ ಕೆಇಎ ಮೂಲಕ ಯಾವುದೇ ಸೀಟು ಹಂಚಿಕೆ ಪಡೆಯದ ಅಭ್ಯರ್ಥಿಗಳು ಭಾಗವಹಿಸಬಹುದು
* ದಂತ ವೈದ್ಯಕೀಯ ಸೀಟು ಪಡೆದಿದ್ದು, ವೈದ್ಯಕೀಯ ಸೀಟಿಗೆ ಪ್ರವೇಶ ಪಡೆಯಲು ಬಯಸುವವರಿಗೂ ಅವಕಾಶ

ಇದರಲ್ಲಿ ಯಾರು ಅರ್ಜಿ ಸಲ್ಲಿಸುವಂತಿಲ್ಲ?
ಈಗಾಗಲೇ ಡೀಮ್ಡ್ ವಿಶ್ವವಿದ್ಯಾಲಯ, ಅಖಿಲ ಭಾರತ ಕೋಟಾ ಅಥವಾ ಇತರ ರಾಜ್ಯಗಳ ಮೂಲಕ ಮೊದಲ ಮೂರು ರೌಂಡ್ಸ್‌ನಲ್ಲಿ ಸೀಟ್‌ ಹಂಚಿಕೆ ಪಡೆದಿರುವವರಿಗೆ ಈ ಸುತ್ತಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.  

ಆಪ್ಷನ್ಸ್ ದಾಖಲಿಸುವ ಮುನ್ನ ಶುಲ್ಕ ಪರಿಶೀಲಿಸಿ:
* ಉಳಿಕೆ ಸೀಟುಗಳು ಮತ್ತು ಅವುಗಳ ಶುಲ್ಕದ ವಿವರಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ
* ಸೀಟುಗಳ ಲಭ್ಯತೆ ಮತ್ತು ಶುಲ್ಕ ಪರಿಶೀಲಿಸಿಯೇ ಆಪ್ಷನ್ಸ್ ದಾಖಲಿಸಲು ಸೂಚನೆ
* ಈಗಾಗಲೇ ಇತರ ಕೋರ್ಸ್‌ಗಳಿಗೆ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರುವವರು ಪೋಷಕರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವಂತೆ ಎಚ್. ಪ್ರಸನ್ನ ಸಲಹೆ.
 

Add Zee News as a Preferred Source
TAGS:
Education
Job