SOCIAL MEDIA

Newsletter

PARTNER SITES
Select Language Select State

ಜಿಬಿಎನಲ್ಲಿ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ ಬಯಲು

FDA N. ರವಿಕುಮಾರ್ ಎಂಬ ವಂಚಕ ನೌಕರ ತನ್ನ ಕುಟುಂಬಸ್ಥರ ಹೆಸರುಗಳಲ್ಲಿ ಹಲವು ನಕಲಿ ಸಂಸ್ಥೆಗಳನ್ನು ಸೃಷ್ಟಿಸಿಕೊಂಡು ಪಾಲಿಕೆಗೆ ಬೃಹತ್ ವಂಚನೆಯನ್ನು ಮಾಡಿದ್ದಾನೆ ಎಂದು ಎನ್ ಆರ್ ರಮೇಶ್ ಆರೋಪಿಸಿದ್ದಾರೆ.

Written By Chetana Devarmani
Published: Nov 03, 2026, 05:17 PM IST | Updated: Nov 03, 2026, 05:18 PM IST
Join

ಬೆಂಗಳೂರು: ಜಿಬಿಎನಲ್ಲಿ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ.ಕಂಪ್ಯೂಟರ್, ಪ್ರಿಂಟರ್ ಹಾಗು ಬ್ಲೀಚಿಂಗ್ ಪೌಡರ್ ಖರೀದಿಯಲ್ಲಿ
43.50 ಕೋಟಿ ಮೊತ್ತವನ್ನು ವಂಚನೆ ಕುರಿತು ಬಿಜೆಪಿ ಮುಖಂಡ ಎನ್ ಆರ್ ರಮೇಶ್  ಲೋಕಾಯುಕ್ತ ಹಾಗು ED ನಲ್ಲಿ ದಾಖಲಿಸಿದ್ದಾರೆ ..ಈ ಕುರಿತು ಇಲ್ಲಿದೆ ಫುಲ್ ಡಿಟೇಲ್ಸ್.

43.50 ಕೋಟಿ ಜಿಬಿಎ ಅಕ್ರಮದ ಕುರಿತು ED ಹಾಗೂ ಲೋಕಾಯುಕ್ತದಲ್ಲಿ ಬಿಜೆಪಿ ಮುಖಂಡ N. R. ರಮೇಶ್ ಇಂದು ದೂರು ದಾಖಲಿಸಿದ್ದಾರೆ..
ಈ ಹಿಂದಿನ ಬಿಬಿಎಂಪಿಯ ಪೂರ್ವ ವಲಯ, ಪಶ್ಚಿಮ ವಲಯ, ಮಹದೇವಪುರ ವಲಯ ಮತ್ತು ರಾಜರಾಜೇಶ್ವರಿ ನಗರ ವಲಯಗಳಲ್ಲಿ ಈ ಹಗರಣ ನಡೆದಿದೆ ಎಂದು ದೂರು ನೀಡಿದ್ದಾರೆ. 01/04/2023 ರಿಂದ 31/07/2026 ರ ಮೂರು ವರ್ಷಗಳ ಅವಧಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ 43.50 ಕೋಟಿ ಮೊತ್ತದ ಪಾಲಿಕೆಯ ಹಣವನ್ನು ಲೂಟಿ ಮಾಡಲಾಗಿದೆ.ಕಾನೂನು ಬಾಹಿರವಾಗಿ ಸಹಕಾರ ನೀಡಿರುವ 04 ಮಂದಿ ಕಾರ್ಯಪಾಲಕ ಅಭಿಯಂತರರು ಮತ್ತು 04 ಮಂದಿ MOH ಗಳ ವಿರುದ್ಧವೂ ದೂರುಗಳು ದಾಖಲಾಗಿದೆ. FDA N. ರವಿಕುಮಾರ್ ಎಂಬ ವಂಚಕ ನೌಕರ ತನ್ನ ಕುಟುಂಬಸ್ಥರ ಹೆಸರುಗಳಲ್ಲಿ ಹಲವು ನಕಲಿ ಸಂಸ್ಥೆಗಳನ್ನು ಸೃಷ್ಟಿಸಿಕೊಂಡು ಪಾಲಿಕೆಗೆ ಬೃಹತ್ ವಂಚನೆಯನ್ನು ಮಾಡಿದ್ದಾನೆ ಎಂದು ಎನ್ ಆರ್ ರಮೇಶ್  ಆರೋಪಿಸಿದ್ದಾರೆ.

ರವಿಕುಮಾರ್ ತನ್ನ ಕುಟುಂಬಸ್ಥರ ಹೆಸರುಗಳಲ್ಲಿ - 1) N. S. Enterprises, 2) N.S.R. Enterprises, 3) Santhosh S. Enterprises, 4) Sharan Enterprises, 5) Lakshmi Balaji Enterprises 6) Alpha Omega Enterprises ಸೇರಿದಂತೆ ಇನ್ನೂ ಹಲವು ನಕಲಿ ಸಂಸ್ಥೆಗಳನ್ನು ಸೃಷ್ಟಿ ಈ ಮೂಲಕ ಪಾಲಿಕೆಯ ಹಣವನ್ನು ಲೂಟಿ ಮಾಡಿರುವುದಾಗಿ ಎನ್ ಅರ್ ರಮೇಶ್ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಇವುಗಳ ಜೊತೆಗೆ ಇನ್ನೊಂದಷ್ಟು ಮಂದಿ ವಂಚಕರು - Balaji Associates, Shobha Enterprises, Vinayaka Enterprises, Mahesh Agency, G.M.K. Enterprises, Venkatadri Enterprises, Sathya Enterprises, Preetham Enterprises ಎನ್ನುವ ಹೆಸರುಗಳಲ್ಲಿ ಹಾಗೂ H. C. ಪ್ರವೀಣ್ ಗೌಡ, P. S. Nataraj ಮತ್ತು Girish ಎಂಬುವವರು ಈ ಲೂಟಿ ಕಾರ್ಯದಲ್ಲಿ ಭಾಗಿಗಳಾಗಿರುತ್ತಾರೆ ಎಂದು ಆರೋಪಿಸಿದ್ದಾರೆ..

ಕೇವಲ ಶಾಂತಿನಗರ ವಿಭಾಗದ ಕಾರ್ಯಪಾಲಕ ಅಭಿಯಂತರರ ಕಛೇರಿಗೆ 05 ವರ್ಷಗಳಲ್ಲಿ 113 ಸಲ Computers / Printers / Copiers / Stationery Materials ಗಳನ್ನು ಪೂರೈಕೆ ಮಾಡಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಭ್ರಷ್ಟ ಅಧಿಕಾರಿಗಳ ನೆರವಿನಿಂದ ₹. 8,91,46,526/- ಗಳಷ್ಟು ಬೃಹತ್ ಪ್ರಮಾಣದ ಹಣವನ್ನು ಪಾಲಿಕೆಗೆ ವಂಚನೆ ಮಾಡಲಾಗಿದೆ ಎಂದು ಎನ್ ಆರ್ ಆರ್ ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ  ಕೃಷ್ಣ ಭೈರೇಗೌಡರನ್ನು ಹಾಗೂ GBA ಮುಖ್ಯ ಆಯುಕ್ತರಿಗೂ N. R. ರಮೇಶ್ ದೂರು ನೀಡಲಾಗಿದೆ. ಹಾಗೆಯೇ, N. ರವಿಕುಮಾರ್ ಅವರನ್ನು ಸೇವೆಯಿಂದ ವಜಾಗೊಳಿಸುವುದಲ್ಲದೇ, ಎಲ್ಲಾ ವಂಚಕ ಸಂಸ್ಥೆಗಳನ್ನು ಕೂಡಲೇ ಕಪ್ಪು ಪಟ್ಟಿಗೆ ಸೇರಿಸಲು ದೂರಿನಲ್ಲಿ ಎನ್ ಆರ್ ಆರ್ ಆಗ್ರಹಿಸಿದ್ದಾರೆ. ವಂಚಕ ಸಂಸ್ಥೆಗಳು ಮತ್ತು ಭ್ರಷ್ಟ ಅಧಿಕಾರಿಗಳಿಂದ ಸಂಪೂರ್ಣ ಹಣವನ್ನು ವಾಪಸ್ಸು ಪಡೆಯುವ ಸಂಬಂಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು N. R. ರಮೇಶ್ ಆಗ್ರಹಿಸಿದ್ದಾರೆ..
 

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."

ZEENEWS TRENDING STORIES