SOCIAL MEDIA

Newsletter

PARTNER SITES
Select Language Select State

ಜೀ ಕನ್ನಡ ನ್ಯೂಸ್ ಕರ್ನಾಟಕ ಐಡಲ್ ಅವಾರ್ಡ್ - 2026

ಜೀ ಕನ್ನಡ ನ್ಯೂಸ್ ಕರ್ನಾಟಕ ಐಡಲ್- 2026ರ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.

Written By Yashaswini V
Published: Sep 17, 2026, 07:28 AM IST | Updated: Sep 17, 2026, 07:33 AM IST
Join

ಕರ್ನಾಟಕ ಐಡಲ್ ಅವಾರ್ಡ್ - 2026: ಪಕ್ಷಾತೀತ ಹಾಗೂ ಜನಪರ ಸುದ್ದಿ ಬಿತ್ತರದ ಮೂಲಕ ರಾಜ್ಯದ ಮನೆ ಮಾತಾಗಿರುವ ಜೀ ಕನ್ನಡ ನ್ಯೂಸ್ ಕೇವಲ ಸುದ್ದಿಗಷ್ಟೇ ಸೀಮಿತವಾಗದೇ, ಜನಸೇವೆಯಲ್ಲೂ ತನ್ನ ಬದ್ಧತೆ ಪ್ರದರ್ಶಿಸುತ್ತಾ ಬಂದಿದೆ. ಇದೀಗ ಜೀ ವಾಹಿನಿಯು ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಸೇವೆ ಮಾಡಿದೆ.

ಜೀ ಕನ್ನಡ ನ್ಯೂಸ್ ಕರ್ನಾಟಕ ಐಡಲ್ ಅವಾರ್ಡ್ಸ್- 2026 ಎಂಬ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಲಾಗಿದ್ದು, ಶಿಕ್ಷಣ, ಆರೋಗ್ಯ ಸೇವೆ, ಸಮಾಜ ಸೇವೆ, ಕೃಷಿ ಮತ್ತು ಪರಿಸರ ಸಂರಕ್ಷಣೆ, ಕ್ರೀಡೆ, ಉದ್ಯಮ ಹಾಗೂ ನವೋದ್ಯಮ, ಕಲೆ ಮತ್ತು ಸಂಸ್ಕೃತಿ, ಆಡಳಿತ ಮತ್ತು ಸಾರ್ವಜನಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸಿದೆ.

ಜೀ ಕನ್ನಡ ನ್ಯೂಸ್ ವತಿಯಿಂದ ಬೆಂಗಳೂರು ನಗರದ ಲಲಿತಾ ಅಶೋಕ್ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಐಡಲ್ ಅವಾರ್ಡ್ಸ್ - 2026 ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಮ. ನಿ. ಪ್ರ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಅರಣ್ಯ ಮತ್ತು ಪರಿಸರ ಖಾತೆ ಸಚಿವರಾದ ರಾಮಲಿಂಗಾರೆಡ್ಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ಯು ಟಿ ಖಾದರ್, ಕಾರ್ಮಿಕ ಇಲಾಖೆ ಸಚಿವರಾದ ಸಂತೋಷ್ ಲಾಡ್, ದೆಹಲಿ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ, ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಉಪಸ್ಥಿತರಿದ್ದರು.

ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ, ನಟ, ಮಾಜಿ ಸಚಿವ ಬಿ ಸಿ ಪಾಟೀಲ್, ನಟಿ ಶುಭ ಪೂಂಜಾ, ಮ್ಯಾಕಿಸ್ ಗ್ರೂಪ್ ಆಫ್ ಕಂಪನೀಸ್ ಸಂಸ್ಥಾಪಕ ಅಧ್ಯಕ್ಷ ಮಾಧವ್ ಕಿರಣ್, ಬಂಡೆ ಮಹಾಕಾಳಿ ದೇವಸ್ಥಾನ ಟ್ರಸ್ಟಿ ಹಾಗೂ ನಿಮಾಪಕಿ ಜಿ ಎಸ್ ಲತಾ ಜಯಪ್ರಕಾಶ್ ಉಪಸ್ಥಿತಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.

ಈ ವೇಳೆ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹಾಗೂ ಹಿರಿಯ ಐಎಎಸ್‌ ಅಧಿಕಾರಿ, ಜಿಬಿಎ ಆಯುಕ್ತ ಕೆ ಎನ್‌ ರಮೇಶ್‌ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ಜೀ ಕನ್ನಡ ನ್ಯೂಸ್‌ನ ಸಂಪಾದಕರಾದ ರವಿ ಎಸ್ ಗೌಡ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ನೀಡಿ ಗೌರವಿಸಲಾಯಿತು.

ಜೀ ಕನ್ನಡ ನ್ಯೂಸ್ ಕರ್ನಾಟಕ ಐಡಲ್ ಅವಾರ್ಡ್ - 2026ರ ಪ್ರಶಸ್ತಿ ಪುರಸ್ಕೃತರ ಪಟ್ಟಿ ಈ ಕೆಳಕಂಡಂತಿದೆ:-
1. ಡಾ. ಎಸ್‌.ಎಸ್‌. ಪಾಟೀಲ್‌ - ಹೋಮಿಯೋಪತಿ ವೈದ್ಯರು ಹಾಗೂ ಸಾಹಿತಿಗಳು
2. ಶ್ರೀ ಶೀತಲ್ ಕುಮಾರ್‌ - ವ್ಯವಸ್ಥಾಪಕ ನಿರ್ದೇಶಕರು, SRF & ಸೆಕ್ಯುರಿಟಿ ಸರ್ವಿಸಸ್ ಪ್ರೈ.ಲಿ.
3. ಶ್ರೀ ಸಿ.ಪಿ. ಮುತ್ತಣ್ಣ - ನಿವೃತ್ತ ಕರ್ನಲ್‌ & ಸಮಾಜ ಸೇವಕರು 
4. ಶ್ರೀ ಡಾ. ಲಕ್ಷ್ಮೀನಾರಾಯಣಸ್ವಾಮಿ ಶಾಸ್ತ್ರೀ , ಜ್ಯೋತಿಷ್ಯರು ಮತ್ತು ವಾಸ್ತುತಜ್ಞರು
5. ಶ್ರೀಮತಿ ನಾಗಮಣಿ - ಸಮಾಜ ಸೇವಕಿ
6. ಡಾ. ವೈ.ಕೆ. ಬಾಲಕೃಷ್ಣಪ್ಪ - ಸಾಮಾಜಿಕ ಹೋರಾಟಗಾರ & ರೇಷ್ಮೆ ಇಲಾಖೆ ನಿವೃತ್ತ ಉಪ ನಿರ್ದೇಶಕರು
7. ಶ್ರೀ ಕೆ.ಎನ್‌.ರಮೇಶ್‌ - ಹಿರಿಯ IAS ಅಧಿಕಾರಿ, ಜಿಬಿಎ ಆಯುಕ್ತರು (ಜೀವಮಾನ ಸಾಧನೆ)
8. ಡಾ. ಎಂ.ಸಿ. ಸೆಂಥಿಲ್‌ ಕುಮಾರ್‌ - ಸಿದ್ಧ ಔಷಧ ತಜ್ಞರು
9. ಶ್ರೀ ವಿದ್ವಾನ್ ಎಂ. ರಾಜಣ್ಣ - ಶಿಕ್ಷಣ ಹಾಗೂ ಸಮಾಜ ಸೇವಕರು 
10. ಶ್ರೀಮತಿ ಮಮತಾ ದೇವರಾಜ್‌ - ಸಮಾಜ ಸೇವಕಿ
11. ಶ್ರೀ ವಿಜಯ್‌ ಗೂರೂಜಿ - ಜ್ಯೋತಿಷ್ಯ ತಜ್ಞರು
12. ಶ್ರೀ ಜಿ.ವಿ. ಸೀತಾರಾಮು - ಸಮಾಜಸೇವಕರು & ಮಾಜಿ ಅಧ್ಯಕ್ಷರು, ಭೋವಿ ಅಭಿವೃದ್ಧಿ ನಿಗಮ 
13. ಚೊಕ್ಕನಹಳ್ಳಿ ಚಂದ್ರು (ಚಿಕ್ಕಣ್ಣ) - ಕಾಂಗ್ರೆಸ್ ಮುಂಖಡರು, ಸಿ.ಎಚ್‌.ಬಿ ಗ್ರೂಪ್ ಸಂಸ್ಥಾಪಕರು, ಅಂಜನ್ ಅಕ್ಷಯ ಡೆವಲಪರ್ಸ್
14. ಶ್ರೀ ಹುಲ್ಲೇಶ್‌ ಬಜಂತ್ರಿ - ರಾಜ್ಯಾಧ್ಯಕ್ಷರು, ಕನ್ನಡ ಜನಾಭಿವೃದ್ಧಿ ವೇದಿಕೆ 
15. ಶ್ರೀ ಎಂ.ಆರ್‌. ರಾಘವೇಂದ್ರ - ಸಮಾಜ ಸೇವಕರು, ಅಧ್ಯಕ್ಷರು, ಹೆಚ್‌ಎಸ್‌ಆರ್‌ ಬ್ಲಾಕ್‌ ಕಾಂಗ್ರೆಸ್‌ & ಎಂಆರ್‌ಆರ್‌ ಸಂಸ್ಥೆ ಸಂಸ್ಥಾಪಕರು
16. ಶ್ರೀ ಸೋಲೂರು ಮಹೇಶ್‌ - ಸಮಾಜ ಸೇವಕರು 
17. ಶ್ರೀ ಎಂ. ಶಿವಕುಮಾರ್ - ಐಶ್ವರ್ಯ ಡೆವೆಲಪರ್ಸ್ ಮಾಲೀಕರು & ಸಮಾಜ ಸೇವಕರು
18. ಡಾ. ಮರಿಸ್ವಾಮಿ, ನಿವೃತ್ತ ಶಿಕ್ಷಕರು & ಸಮಾಜ ಸೇವಕರು
19. ಶ್ರೀ ಪ್ರಕಾಶ್‌ ಮಂಡೋತ್‌ - ರೈಲ್ವೆ ತಜ್ಞರು
20. ಶ್ರೀಮತಿ ಸುಮ ಕಿರಣ್‌ - ಸಮಾಜ ಸೇವಕರು 
21. ಶ್ರೀ ರಾಜಕುಮಾರ ಮಲಕಪ್ಪ ಮಾಳಿ - ಶಿಕ್ಷಣ ಕ್ಷೇತ್ರ
22. ಶ್ರೀ ಗಿರೀಶ್‌ ಕಾಸರವಳ್ಳಿ - ಖ್ಯಾತ ಚಲನಚಿತ್ರ ಹಿರಿಯ ನಿರ್ದೇಶಕರು (ಜೀವಮಾನ ಸಾಧನೆ)
23. ಶ್ರೀ ಸದಾನಂದ ಬಿ. ಬಂಗೇರ - ಹೋಟೆಲ್‌ ಉದ್ಯಮಿ 
24. ಶ್ರೀ.ಕೆ. ಸಂಜೀವ ಪೂಜಾರಿ - ಸಮಾಜ ಸೇವಕರು
25. ಶ್ರೀಮತಿ ಶಕುಂತಲಾ ಕೆ. ಬೆಲ್ಲದಾಳೆ - ಸಮಾಜ ಸೇವಕರು & ಸಹಕಾರಿ ಕ್ಷೇತ್ರದ ನಾಯಕಿ
26. ಶ್ರೀ ಶ್ರೀನಿವಾಸ್‌ ದಾಸಪ್ಪ - ಸಮಾಜ ಸೇವಕರು & ಉದ್ಯಮಿ
27. ಶ್ರೀ ಸೋಮಶೇಖರ್‌ - ಪ್ರಾಂಶುಪಾಲರು ಸರ್ಕಾರಿ ಐಟಿಐ ಕಾಲೇಜ್, ಬೆಟ್ಟದಪುರ
28. ಶ್ರೀ ಶಿವರಾಜ ಮಾರುತಿ ಬುಸಗುಂಡೆ  - ಉದ್ಯಮಿ
29. ಶ್ರೀಮತಿ ಮಧುರಾ ಅಶೋಕ್‌ ಕುಮಾರ್‌ - ಗಿನ್ನಿಸ್‌ ದಾಖಲೆ ರಕ್ತದಾನಿ & ಸಮಾಜ ಸೇವಕರು 
30. ಡಾ. ಎನ್‌. ನರಸಿಂಹ ಮೂರ್ತಿ - ನಟ & ನಿರ್ಮಾಪಕ, ಟೆಲಿಕಾಂ ಎಂಪ್ಲಾಯೀಸ್‌ ಅಂಡ್‌ ಅದರ್ಸ್‌ ಹೌಸಿಂಗ್‌ ವೆಲ್‌ಫೇರ್‌ ಟ್ರಸ್ಟ್‌ ಅಧ್ಯಕ್ಷ
31. ಡಾ. ಲತಾ ಜೈಪ್ರಕಾಶ್ - ನಟಿ, ನಿರ್ಮಾಪಕಿ, ನಿರ್ದೇಶಕಿ & ಬಂಡೆ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ 
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES