• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /ಉದ್ಯೋಗದಾತರು ನಿಮ್ಮ ವೇತನದಿಂದ PF ಕಡಿತಗೊಳಿಸಿದ್ದು, ಇನ್ನೂ ಇಪಿಎಫ್‌ಒ ಖಾತೆಗೆ ಹಣ ಜಮಾ ಆಗಿಲ್ವಾ? ಬಡ್ಡಿ ಮೇಲೆ ಏನು ಪರಿಣಾಮ?

ಉದ್ಯೋಗದಾತರು ನಿಮ್ಮ ವೇತನದಿಂದ PF ಕಡಿತಗೊಳಿಸಿದ್ದು, ಇನ್ನೂ ಇಪಿಎಫ್‌ಒ ಖಾತೆಗೆ ಹಣ ಜಮಾ ಆಗಿಲ್ವಾ? ಬಡ್ಡಿ ಮೇಲೆ ಏನು ಪರಿಣಾಮ?

ಇಪಿಎಫ್‌ಒ ಸದಸ್ಯರ ಖಾತೆಗೆ ಕಂಪನಿಗಳು ಪ್ರತಿ ತಿಂಗಳು 15ನೇ ತಾರೀಖಿನೊಳಗೆ ಪಿಎಫ್‌ ಕೊಡುಗೆಗಳನ್ನು ಜಮಾ ಮಾಡಬೇಕಾಗುತ್ತದೆ. ಪಿಎಫ್‌ ಹಣ ಜಮಾ ಮಾಡುವುದು ವಿಳಂಬವಾದರೆ ಇದಕ್ಕಾಗಿ ಕಂಪನಿಗಳು ಇಪಿಎಫ್‌ಒಗೆ ದಂಡ ಪಾವತಿಸಬೇಕಾಗಬಹುದು ಇಲ್ಲವೇ ಇತರ ಪರಿಣಾಮಗಳಿಗೂ ಕಾರಣವಾಗಬಹುದು

Written ByYashaswini V
Published: Oct 02, 2026, 10:08 AM IST|Updated: Oct 02, 2026, 10:10 AM IST
joinshare
ಉದ್ಯೋಗದಾತರು ನಿಮ್ಮ ವೇತನದಿಂದ PF ಕಡಿತಗೊಳಿಸಿದ್ದು, ಇನ್ನೂ ಇಪಿಎಫ್‌ಒ ಖಾತೆಗೆ ಹಣ ಜಮಾ ಆಗಿಲ್ವಾ? ಬಡ್ಡಿ ಮೇಲೆ ಏನು ಪರಿಣಾಮ?

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಉದ್ಯೋಗದಾತರು ನಿಮ್ಮ ವೇತನದಿಂದ PF ಕಡಿತಗೊಳಿಸಿದ್ದು, ಇನ್ನೂ ಇಪಿಎಫ್‌ಒ ಖಾತೆಗೆ ಹಣ ಜಮಾ ಆಗಿಲ್ವಾ? ಬಡ್ಡಿ ಮೇಲೆ ಏನು ಪರಿಣಾಮ?

ಉದ್ಯೋಗದಾತರು ನಿಮ್ಮ ವೇತನದಿಂದ PF ಕಡಿತಗೊಳಿಸಿದ್ದು, ಇನ್ನೂ ಇಪಿಎಫ್‌ಒ ಖಾತೆಗೆ ಹಣ ಜಮಾ ಆಗಿಲ್ವಾ? ಬಡ್ಡಿ ಮೇಲೆ ಏನು ಪರಿಣಾಮ?

2

ತಿಂಗಳಿಗೆ ₹1.5 ಲಕ್ಷ ದಾಟುವುದೇ ಸರ್ಕಾರಿ ನೌಕರರ ವೇತನ? ಇಲ್ಲಿದೆ ಕಂಪ್ಲೀಟ್ ಲೆಕ್ಕಾಚಾರ

3

ಇನ್ನು ಕೆಲವೇ ಗಂಟೆಗಳಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

4

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ದಿಢೀರ್‌ ಧನಯೋಗ! 12 ರಾಶಿಗಳ ಭವಿಷ್ಯ ಇಲ್ಲಿದೆ

5

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ನೌಕರರ ಭವಿಷ್ಯ ನಿಧಿ ಸಂಸ್ಥೆಯ ನಿಯಮಗಳ ಪ್ರಕಾರ, ಪ್ರತಿ ಕಂಪನಿಯು ನೌಕರರ ಸಂಬಳದಿಂದ ಕಡಿತಗೊಳಿಸಲಾದ ಪಿಎಫ್‌ ಹಣವನ್ನು ಪ್ರತಿ ತಿಂಗಳು 15ನೇ ತಾರೀಖಿನೊಳಗೆ ಅವರ ಪಿಎಫ್‌ ಖಾತೆಗೆ ಜಮಾ ಮಾಡಬೇಕು. ಒಂದೊಮ್ಮೆ ಉದ್ಯೋಗದಾತರು ನೌಕರರ ವೇತನದಿಂದ ಪಿಎಫ್‌ ಹಣವನ್ನು ಕಡಿತಗೊಳಿಸಿಸದ್ದು, ಇಪಿಎಫ್‌ಒಗೆ ಆ ಹಣ ಜಮಾ ಆಗಿಲ್ಲದಿದ್ದರೆ ಇದು ಇಪಿಎಫ್‌ ಬಡ್ಡಿಯ ಮೇಲೂ ಪರಿಣಾಮ ಬೀರುತ್ತದೆಯೇ? ನೌಕರರಿಗೆ ಇದರಿಂದ ಉಂಟಾಗುವ ನಷ್ಟವೇನು? ಈ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.

ಉಳಿತಾಯ ಯೋಜನೆ:
ವಾಸ್ತವವಾಗಿ, ಇಪಿಎಫ್‌ ಸರ್ಕಾರಿ ಬೆಂಬಲಿತ ಉಳಿತಾಯ ಯೋಜನೆ ಆಗಿದ್ದು ಇದರಲ್ಲಿ ಉದ್ಯೋಗಿಯ ಮೂಲ ವೇತನ ಮತ್ತು ತುಟ್ಟಿಭತ್ಯೆಯ ತಲಾ 12% ಕೊಡುಗೆಯನ್ನು ಉದ್ಯೋಗಿ ಮತ್ತು ಉದ್ಯೋಗದಾತರಿಬ್ಬರೂ ನೀಡುತ್ತಾರೆ. ಇಪಿಎಫ್‌ಒ 2026 ಚೌಕಟ್ಟಿನ ಪ್ರಕಾರ, ಈ ಕೊಡುಗೆಯನ್ನು ಉದ್ಯೋಗಿ ಮತ್ತು ಉದ್ಯೋಗದಾತರು ಇಬ್ಬರಿಗೂ  ₹ 1,800 ಕ್ಕೆ ಮಿತಿಗೊಳಿಸಲಾಗಿದೆ. ಆದರೆ, ಸ್ವಯಂಪ್ರೇರಿತ ಆಧಾರದ ಮೇಲೆ ನೌಕರರು ಹೆಚ್ಚಿನ ಕೊಡುಗೆಯನ್ನು ಆಯ್ಕೆ ಮಾಡುವ ಅವಕಾಶವನ್ನು ಪಡೆಯುತ್ತಾರೆ.

ಉದ್ಯೋಗದಾತರು ನಿಮ್ಮ ವೇತನದಿಂದ ಪಿಎಫ್‌ ಹಣ ಕಡಿತಗೊಳಿಸಿದ್ದು ಅದನ್ನು ಇನ್ನೂ ಇಪಿಎಫ್‌ಒ ಖಾತೆಗೆ ಜಮಾ ಮಾಡಿಲ್ಲದಿದ್ದರೆ ಏನಾಗುತ್ತೆ?
ವಾಸ್ತವವಾಗಿ, ಉದ್ಯೋಗದಾತರು ನೌಕರರ ಪಿಎಫ್‌ ಹಣವನ್ನು ಕಡಿತಗೊಳಿಸಿದ್ದು ಆ ಹಣವನ್ನು ಜಮಾ ಮಾಡುವಲ್ಲಿ ವಿಳಂಬವಾಗುವುದು ಅಸಾಮಾನ್ಯ ಸಂಗತಿ ಏನೂ ಅಲ್ಲ. ಆದರೆ, ತಡವಾಗಿ ಪಿಎಫ್‌ ಠೇವಣಿ ಮಾಡುವುದು ಇಪಿಎಫ್‌ ಖಾತೆಗೆ ಜಮಾ ಆಗಿರುವ ಬಡ್ಡಯ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಚಿಂತೆಯನ್ನು ಉಂಟು ಮಾಡುತ್ತದೆ. ಈ ಹಿನ್ನಲೆಯಲ್ಲಿ ಇದರ ಬಗ್ಗೆ ಮಾಹಿತಿ ತಿಳಿದಿರುವುದು ಬಹಳ ಅಗತ್ಯ.

ಪಿಎಫ್‌ ವಿಳಂಬ ಪಾವತಿಯಿಂದ ಪಿಎಫ್‌ ಬಡ್ಡಿಯ ಮೇಲೆ ಪರಿಣಾಮ ಬೀರುತ್ತದೆಯೇ?
ನಿಮ್ಮಲ್ಲೂ ಈ ಪ್ರಶ್ನೆ ಇದ್ದರೆ ಇದಕ್ಕೆ ಉತ್ತರ ಖಂಡಿತವಾಗಿಯೂ ಇಲ್ಲ. ಉದ್ಯೋಗದಾತರು ನಿಮ್ಮ ವೇತನದಿಂದ ಪಿಎಫ್‌ ಹಣವನ್ನು ಕಟ್‌ ಮಾಡಿದ್ದು ಅದಿನ್ನೂ ಪಿಎಫ್‌ ಖಾತೆಗೆ ಜಮಾ ಆಗಿಲ್ಲದಿದ್ದರೆ ಅಥವಾ ಪಿಎಫ್‌ ವಿಳಂಬ ಪಾವತಿಯಿಂದ ನಿಮ್ಮ ಇಪಿಎಫ್‌ ಖಾತೆಗೆ ಹಾಕುವ ಬಡ್ಡಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆಂದರೆ, ಇಪಿಎಫ್‌ಒಗೆ ಇಪಿಎಫ್‌ ಕೊಡುಗೆಗಳನ್ನು ಠೇವಣಿ ಮಾಡುವ ಜವಾಬ್ದಾರಿ ಸಂಪೂರ್ಣವಾಗಿ ಉದ್ಯೋಗದಾತರ ಮೇಲಿದೆ ಮತ್ತು ಬಾಕಿಗಳನ್ನು ಮೇಲೆ ತಿಳಿಸಿದ ನಿಗದಿತ ಸಮಯದೊಳಗೆ ಠೇವಣಿ ಮಾಡುವುದು ಕೂಡ ಅವರದ್ದೇ ಜವಾಬ್ದಾರಿ ಆಗಿದೆ. ಹಾಗಾಗಿ, ಒಂದೊಮ್ಮೆ ಉದ್ಯೋಗದಾತರು ನೌಕರರ ವೇತನದಿಂದ ಪಿಎಫ್‌ ಹಣವನ್ನು ಕಡಿತಗೊಳಿಸಿದ್ದು ಆ ಹಣವನ್ನು ಸಮಯಕ್ಕೆ ಸರಿಯಾಗಿ ಠೇವಣಿ ಮಾಡಲು ವಿಫಲವಾದರೆ, ನಿವೃತ್ತ ನಿಧಿ ಸಂಸ್ಥೆಯ ನಿಯಮಗಳ ಅಡಿಯಲ್ಲಿ ಇದಕ್ಕಾಗಿ ಉದ್ಯೋಗದಾತರು ಬಡ್ಡಿ ಹಾಗೂ ದಂಡದ ಹಾನಿಯನ್ನು ಭರಿಸಬೇಕಾಗುತ್ತದೆ.

ಇಪಿಎಫ್‌ಒ ಇಪಿಎಫ್‌ ಬಾಕಿ ಎಷ್ಟಿದೆ ಎಂಬುದರ ಆಧಾರದ ಮೇಲೆ ನಿಗದಿತ ಸಮಯದಲ್ಲಿ ತನ್ನ ಪಿಎಫ್‌ ಸದಸ್ಯರಿಗೆ ಪೂರ್ಣ ಬಡ್ಡಿಯನ್ನು ನೀಡುತ್ತದೆ. ಇದು ಕೊಡುಗೆಗಳ ಅವಧಿಯಲ್ಲಿ ಸದಸ್ಯರಿಗೆ ನೀಡಬೇಕಾದ ಬಡ್ಡಿಯ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ.

ಈ ಕುರಿತಂತೆ ಇಪಿಎಫ್‌ಒ FAQ ನಲ್ಲಿ ಸ್ಪಷ್ಟಪಡಿಸಿದ್ದು, ಪಿಎಫ್‌ ಪಾವತಿ ತಡವಾದರೆ ಉದ್ಯೋಗದಾತರಿಗೆ ಕಾಯ್ದೆಯ ಸೆಕ್ಷನ್ 7Q ಅಡಿಯಲ್ಲಿ ದಂಡದ ಬಡ್ಡಿ ಮತ್ತು ಸೆಕ್ಷನ್ 14B ಅಡಿಯಲ್ಲಿ ದಂಡದ ಹಾನಿಯನ್ನು ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಇಪಿಎಫ್‌ಒ ನೀಡಿರುವ ಮಾಹಿತಿಗಳ ಪ್ರಕಾರ, ಅರ್ಹ ಕಂಪನಿಗಳು ಈಗ ಬಾಕಿ ಇರುವ ಇಪಿಎಫ್ ಹಾನಿ ಪ್ರಕರಣಗಳನ್ನು ಕಡಿಮೆ ದರದಲ್ಲಿ ಇತ್ಯರ್ಥಪಡಿಸಬಹುದು. ವಾಸ್ತವವಾಗಿ, ಜೂನ್‌ನಲ್ಲಿ ಇಪಿಎಫ್‌ಒ ತನ್ನ ವಿಶ್ವಾಸ್ 2026 ಯೋಜನೆಯಡಿ ಆರು ತಿಂಗಳ ಅವಧಿಯನ್ನು ಪರಿಚಯಿಸಿತು. ಇದರ ಅಡಿಯಲ್ಲಿ, ಅರ್ಹ ಸಂಸ್ಥೆಗಳಿಗೆ/ಕಂಪನಿಗಳಿಗೆ ಬಾಕಿ ಇರುವ ಇಪಿಎಫ್ ಹಾನಿ ಪ್ರಕರಣಗಳನ್ನು ಕಡಿಮೆ ದರದಲ್ಲಿ ಇತ್ಯರ್ಥಪಡಿಸಲು ಅವಕಾಶವನ್ನು ನೀಡಿತು. ಉದ್ಯೋಗದಾತರು ಇಪಿಎಫ್ ಬಾಕಿ ಪಾವತಿಸದಿರುವುದು ಅಥವಾ ವಿಳಂಬವಾಗಿ ಪಾವತಿಸುವುದರಿಂದ ಉಂಟಾಗುವ ನ್ಯಾಯಾಲಯದ ವಿವಾದಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಈ ಯೋಜನೆಯ ಗುರಿ ಆಗಿದೆ.

ಅನೇಕ ಸಂದರ್ಭಗಳಲ್ಲಿ, ಉದ್ಯೋಗದಾತರು ಈ ದಂಡಗಳನ್ನು ಪ್ರಶ್ನಿಸಿ, ತಾವು ತಪ್ಪಿತಸ್ಥರಲ್ಲ ಎಂದು ಹೇಳುವ ಮೂಲಕ ಅಥವಾ ಹೆಚ್ಚಿನ ದಂಡದ ದರವನ್ನು ಪಾವತಿಸುವಲ್ಲಿ ಆರ್ಥಿಕ ಮುಗ್ಗಟ್ಟಿನ್ನು ಎದುರಿಸುತ್ತಿರುವುದರಿಂದ, ದೀರ್ಘ ಮೊಕದ್ದಮೆಗಳು ಮತ್ತು ಬಾಕಿ ಇರುವ ಪ್ರಕರಣಗಳ ಸಂಗ್ರಹಕ್ಕೆ ಕಾರಣವಾಗುತ್ತದೆ ಎಂಬುದನ್ನು ಇಪಿಎಫ್‌ಒ ಗಮನಕ್ಕೆ ತಂದಿದ್ದು, ಕಂಪನಿಗಳ ಹೊರೆಯನ್ನು ಕಡಿಮೆ ಮಾಡುವ ನಿಟ್ಟನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
 

Add Zee News as a Preferred Source
TAGS:
EPFO
EPFO News