• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಅವರು ಸಿಎಂ ಪತ್ನಿ, ಶಿಷ್ಟಾಚಾರ ಉಲ್ಲಂಘನೆಯಾದ್ರು ತಪ್ಪೇನಿಲ್ಲ : ಸಚಿವ ಯತೀಂದ್ರ ಸಿದ್ದರಾಮಯ್ಯ

ಅವರು ಸಿಎಂ ಪತ್ನಿ, ಶಿಷ್ಟಾಚಾರ ಉಲ್ಲಂಘನೆಯಾದ್ರು ತಪ್ಪೇನಿಲ್ಲ : ಸಚಿವ ಯತೀಂದ್ರ ಸಿದ್ದರಾಮಯ್ಯ

ನಮ್ಮ ತಂದೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 40 ವರ್ಷಗಳ ಕಳಂಕರಹಿತ ರಾಜಕೀಯ ಜೀವನದ ವರ್ಚಸ್ಸು ಮತ್ತು ಲೆಗಸಿಯನ್ನು ಹಾಳು ಮಾಡುವ ಉದ್ದೇಶದಿಂದಲೇ 'ಸ್ಟಿಂಗ್ ಆಪರೇಷನ್' ಹೆಸರಿನಲ್ಲಿ ವ್ಯವಸ್ಥಿತ ಬ್ಲ್ಯಾಕ್‌ಮೇಲ್ ತಂತ್ರ ನಡೆಸಲಾಗಿದೆ, ಇದರಲ್ಲಿ ನಮ್ಮ ಪಕ್ಷದ ಕೆಲವು ಪ್ರಭಾವಿಗಳ ಕೈವಾಡವೂ ಇದೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written ByKrishna NK
Published: Oct 23, 2026, 04:41 PM IST|Updated: Oct 23, 2026, 04:44 PM IST
joinshare
ಅವರು ಸಿಎಂ ಪತ್ನಿ, ಶಿಷ್ಟಾಚಾರ ಉಲ್ಲಂಘನೆಯಾದ್ರು ತಪ್ಪೇನಿಲ್ಲ : ಸಚಿವ ಯತೀಂದ್ರ ಸಿದ್ದರಾಮಯ್ಯ
Image Credit: Yathindra Siddaramaiah on Sting Operation

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಇನ್ನೊಂದು ವಾರದಲ್ಲಿ ಸ್ಟಿಂಗ್ ಆಪರೇಷನ್ ಅಸಲಿ ಸತ್ಯ ಹೊರಕ್ಕೆ : ಸಚಿವ ಪ್ರಿಯಾಂಕ್ ಖರ್ಗೆ

ಇನ್ನೊಂದು ವಾರದಲ್ಲಿ ಸ್ಟಿಂಗ್ ಆಪರೇಷನ್ ಅಸಲಿ ಸತ್ಯ ಹೊರಕ್ಕೆ : ಸಚಿವ ಪ್ರಿಯಾಂಕ್ ಖರ್ಗೆ

2

Kwala Intel: ದಲಾಲ್ ಸ್ಟ್ರೀಟ್‌ನಲ್ಲಿ AI ಕ್ರಾಂತಿ; ಷೇರು ಮಾರುಕಟ್ಟೆ ರಿಸರ್ಚ್‌ ಈಗ ಇನ್ನಷ್ಟು ಸುಲಭ!

3

ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಭಾರಿ ಹಿನ್ನಡೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

4

ವಿಜಯಲಕ್ಷ್ಮಿ ದರ್ಶನ್‌ ಮ್ಯಾನೇಜರ್‌ಗೆ ಬೆದರಿಕೆ ಆರೋಪ : ನಟ ಧನ್ವೀರ್ ವಿರುದ್ಧ ದೂರು ದಾಖಲು

5

ಪಶ್ಚಿಮ ಪದವೀಧರ ಕ್ಷೇತ್ರದ ಮತಗಟ್ಟೆಯಲ್ಲಿ ಅವ್ಯವಸ್ಥೆ ಆರೋಪ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಮೈಸೂರು: ತಮ್ಮ ತಂದೆಯವರ ವರ್ಚಸ್ಸಿಗೆ ಮಸಿ ಬಳಿಯಲು ಮತ್ತು ಲೆಗಸಿಯನ್ನು ಹಾಳು ಮಾಡಲು ಕೆಲವರು ವ್ಯವಸ್ಥಿತವಾಗಿ 'ಸ್ಟಿಂಗ್ ಆಪರೇಷನ್' ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ ತಂತ್ರ ನಡೆಸುತ್ತಿದ್ದಾರೆ ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಚಿನ ಹಿಂದೆ ಸ್ವಪಕ್ಷದವರೂ ಸೇರಿ ಕೆಲ ಪ್ರಭಾವಿಗಳು ಶಾಮೀಲಾಗಿದ್ದಾರೆ ಎಂದು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಪುತ್ತೂರು ಟಿಕೆಟ್‌ಗಾಗಿ ನಡೆದ ಈ ಷಡ್ಯಂತ್ರದ ಹಿಂದೆ ನಮ್ಮದೇ ಪಕ್ಷದ ಓರ್ವ ಮಹಿಳೆಯೂ ಇದ್ದಾರೆ ಎಂದು ತಿಳಿಸಿದ ಅವರು, ಟಿಕೆಟ್ ಗಿಳಿಸಿಕೊಳ್ಳಲು ಈ ರೀತಿಯ ಬ್ಲ್ಯಾಕ್ ಮೇಲ್ ರಾಜಕಾರಣ ಮಾಡಲಾಗುತ್ತಿದೆ ಎಂದರು. ಅಷ್ಟೇ ಅಲ್ಲದೆ, ಕಳೆದ 40 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಯಾವುದೇ ಕಳಂಕವಿಲ್ಲದೆ ಜನಸೇವೆ ಮಾಡಿರುವ ನಮ್ಮ ತಂದೆಯ ಹೆಸರಿಗೆ ಕಳಂಕ ತರಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಇದರಿಂದ ತಂದೆಯವರು ಬಹಳ ಬೇಸರಗೊಂಡಿದ್ದಾರೆ. ಆದರೆ ಸತ್ಯ ನಮ್ಮ ಕಡೆ ಇದೆ, ಶೀಘ್ರದಲ್ಲೇ ಹೊರಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ಟಿಂಗ್ ಪ್ರಕರಣದ ತನಿಖೆ ಕುರಿತು ಮಾತನಾಡಿ, ಈಗಾಗಲೇ ಪತ್ರಕರ್ತ ರಾಕೇಶ್ ಶೆಟ್ಟಿ ಸೇರಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನಮ್ಮ ಸರ್ಕಾರದ ತನಿಖೆ ಮೇಲೆ ಸಂಪೂರ್ಣ ನಂಬಿಕೆ ಇದೆ. ತನಿಖೆ ಪ್ರಕ್ರಿಯೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ. ಅಕಸ್ಮಾತ್ ತನಿಖೆಯಲ್ಲಿ ಏನಾದರೂ ಲೋಪ ಕಂಡುಬಂದರೆ, ನಾವೇ ಸ್ವತಃ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸುತ್ತೇವೆ. ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳಿದ್ದರೂ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ, ಎಲ್ಲರಿಗೂ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಎಂದು ತಂದೆಯೇ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದರು.

ಇದೇ ವೇಳೆ, ದಸರಾ ಸರ್ಕಾರಿ ಜಾಹೀರಾತಿನಲ್ಲಿ ಉಸ್ತುವಾರಿ ಸಚಿವರ ಫೋಟೋ ಹಾಕದ ವಿಚಾರದ ಕುರಿತು ಸ್ಪಷ್ಟನೆ ನೀಡಿದ ಅವರು, "ಪ್ರತಿ ಬಾರಿಯೂ ಉಸ್ತುವಾರಿ ಸಚಿವರ ಫೋಟೋಗಳನ್ನು ಹಾಕುವ ಸಂಪ್ರದಾಯವಿಲ್ಲ. ನಾನು ಈ ಕುರಿತು ಪರಿಶೀಲಿಸಿದ್ದೇನೆ. ಆದರೆ ಈ ಬಾರಿ ಜಾಹೀರಾತಿನಲ್ಲಿ ಮಹಾರಾಜರ ಫೋಟೋಗಳನ್ನು ಮುದ್ರಿಸಲಾಗಿದೆ. ಮಹಾರಾಜರು ಒಂದು ನಿರ್ದಿಷ್ಟ ರಾಜಕೀಯ ಪಕ್ಷದಲ್ಲಿದ್ದಾರೆ ಎಂಬ ಕಾರಣಕ್ಕೆ ನಮ್ಮ ಕಾರ್ಯಕರ್ತರು ಉಸ್ತುವಾರಿ ಸಚಿವರ ಫೋಟೋ ಯಾಕೆ ಹಾಕಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ ಅಷ್ಟೇ" ಎಂದು ತಿಳಿಸಿದರು.

ಮುಖ್ಯಮಂತ್ರಿಯವರ ಪತ್ನಿ ದಸರಾ ಉದ್ಘಾಟನೆ ವೇಳೆ ಪುಷ್ಪಾರ್ಚನೆ ಮಾಡಿದ ಬಗ್ಗೆಯೂ ಮಾತನಾಡಿದ ಯತೀಂದ್ರ, ಶಿಷ್ಟಾಚಾರದ ಪಟ್ಟಿಯಲ್ಲಿ ಸಿಎಂ ಪತ್ನಿ ಹಾಗೂ ಇಬ್ಬರು ಸಿಎಂಗಳು ಎಂಬ ಹೆಸರುಗಳಿರಲಿಲ್ಲ ಎಂಬುದು ನಿಜ. ಆದರೆ ಸಿಎಂ ಪತ್ನಿ ಪುಷ್ಪಾರ್ಚನೆ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಅವರು ಸರ್ಕಾರದ ಅಧಿಕೃತ ಕೆಲಸಗಳೇನೂ ಮಾಡಿಲ್ಲವಲ್ಲ, ಕೇವಲ ಭಕ್ತಿಯಿಂದ ದೇವಿಗೆ ನಮನ ಸಲ್ಲಿಸಿದ್ದಾರೆ. ಹೀಗಾಗಿ ಶಿಷ್ಟಾಚಾರ ಉಲ್ಲಂಘನೆಯಾಗಿದ್ದರೂ ಅದರಲ್ಲಿ ತಪ್ಪೇನೂ ಇಲ್ಲ ಎಂದು ಸಮರ್ಥಿಸಿಕೊಂಡರು.

Add Zee News as a Preferred Source
TAGS:
Karnataka Politics