• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ಅವರದ್ದು ಮದುವೆಯಾಗಿ ಕೆಲವೇ ವರ್ಷಗಳಾಗಿತ್ತು.. ಜೋಡಿಯ ಸಂಸಾರದಲ್ಲಿ ಅರಳಬೇಕಿದ್ದ ನಗು, ಇಂದು ಅನುಮಾನಾಸ್ಪದ ಸಾವಿನೊಂದಿಗೆ ಕಣ್ಣೀರಿನ ಕಡಲಲ್ಲಿ ಮುಳುಗಿದೆ. ತುಮಕೂರು ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದರ ರೋಚಕ ಕಥೆ ಇಲ್ಲಿದೆ..

Written ByKrishna NK
Published: Oct 30, 2026, 08:23 PM IST|Updated: Oct 30, 2026, 08:24 PM IST
joinshare
ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?
Image Credit: Crime news

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
Bigg Boss Kannada 13: ತಾಂಡವ್ vs ಜಗದೀಶ್; ಈ ವಾರದ ಕ್ಯಾಪ್ಟನ್ ಪಟ್ಟ ಯಾರಿಗೆ? ರೋಚಕ ಹಣಾಹಣಿ!

Bigg Boss Kannada 13: ತಾಂಡವ್ vs ಜಗದೀಶ್; ಈ ವಾರದ ಕ್ಯಾಪ್ಟನ್ ಪಟ್ಟ ಯಾರಿಗೆ? ರೋಚಕ ಹಣಾಹಣಿ!

2

ಸೂಪರ್ ಎಲ್ ನಿನೊ ಭೀತಿ : ಭಾರತದಲ್ಲಿ 55 ಸಾವಿರಕ್ಕೂ ಅಧಿಕ ಸಾ*ವುಗಳ ಎಚ್ಚರಿಕೆ!

3

ನಾಳೆ ಕರ್ನಾಟಕ ಬಂದ್, ನಾಡಿದ್ದು ಜೈಲ್ ಭರೋ; ತೀವ್ರ ಸ್ವರೂಪ ಪಡೆದ ಕಬ್ಬು ಬೆಳೆಗಾರರ ಹೋರಾಟ

4

ಆಂಕರ್ ಅನುಶ್ರೀ ಪತಿ ರೋಷನ್ ಅಸಲಿ ವಯಸ್ಸು ಎಷ್ಟು ಗೊತ್ತಾ?

5

ಡಿಜಿಟಲ್‌ನಲ್ಲಿ ZEE5 ಅಬ್ಬರ, ಫಿಫಾ ವಿಶ್ವಕಪ್ ಯಶಸ್ಸು : ZEE ಸಮೂಹದಿಂದ ಭರ್ಜರಿ ಆದಾಯ ಗಳಿಕೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ತುಮಕೂರು : ಅಮ್ಮ.. ಅಮ್ಮ ಬೇಕು ಅಂತ ಎದೆ ಒಡೆಯುವ ಹಾಗೆ ಅಳುತ್ತಿರೋ ಈ ಕಂದಮ್ಮನಿಗೆ ಏನು ತಾನೇ ಗೊತ್ತು ನನ್ನಮ್ಮ ಈ ಭೂಮಿ ಮೇಲೆ ಇಲ್ಲ ಅಂತ. ಕೇವಲ ಎರಡೂವರೆ ವರ್ಷದ ಆ ಹಸುಗೂಸಿನ ಅಳು, ಕರುಳು ಚುರುಕೆನ್ನುವಂತೆ ಮಾಡಿದೆ. ಅಮ್ಮ ಬೇಕು, ಅಮ್ಮ ಬೇಕು ಅಂತ ಆ ಮಗು ಕಣ್ಣೀರು ಹಾಕುತ್ತಿದ್ದರೆ, ನೋಡುವವರ ಎದೆಯೂ ಒಡೆದು ಹೋಗುತ್ತಿತ್ತು. ಹೌದು. ಮದುವೆಯಾಗಿ ಕೆಲವೇ ವರ್ಷಗಳಾಗಿವೆ, ಆದ್ರೆ ಇವತ್ತು ಆ ಸಂಸಾರ ಮಾತ್ರ ಕಣ್ಣೀರಿನ ಕಡಲಲ್ಲಿ ಮುಳುಗಿಹೋಗಿದೆ. ತುಮಕೂರು ತಾಲೂಕಿನ ಯಲ್ಲಾಪುರದಲ್ಲಿ ನಡೆದ ಈ ಹೃದಯ ವಿದ್ರಾವಕ ಘಟನೆಯ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ‌‌..

ಈ ಚೆಂದುಳ್ಳಿ ಚೆಲುವೆಯ ಹೆಸರು ಸುಷ್ಮಿತಾ ಅಂತ ವಯಸ್ಸಿನ್ನೂ 24.. ಚಿಕ್ಕವಯಸ್ಸಿಗೆ ಸಂಸಾರದ ಜವಾಬ್ದಾರಿ ಹೊತ್ತವಳು ಇವತ್ತು ನೆನಪು ಮಾತ್ರ ಆಗಿದ್ದಾಳೆ.. ನಿನ್ನೆ ಮೊನ್ನೆ ತನ್ಕ ರೀಲ್ಸ್ ಹಾಡಿ ನಲಿಯುತ್ತಿದ್ದ ಸುಷ್ಮಿತಾ ಇವತ್ತು ಒಬ್ಬಂಟಿಯಾಗಿ ಶವಾಗಾರದಲ್ಲಿ ಮಲಗಿದ್ದಾಳೆ.. ಚೆನ್ನಾಗಿದ್ದ ಹುಡುಗಿ ಹೀಗ್ ಮಾಡ್ಕೊಂಡ್ ಬಿಟ್ಲಲ್ಲ ಎಂಬ ನೋವು ಒಂದ್ಕಡೆಯಾದ್ರೆ ತನ್ನಮ್ಮನನ್ನ ಕಳೆದ್ಕೊಂಡ ಆ ಎರಡೂವರೆ ವರ್ಷದ ಕಂದಮ್ಮ ಕಣ್ಣೀರು ನೆರೆದಿದ್ದವರ ಹೃದಯವೇ ಒಡೆಯುವಂತ್ತಿತ್ತು..

ಹೌದು.. ​ತುಮಕೂರು ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ‌‌.. ಸುಷ್ಮಿತಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮದುವೆಯಾದ ದಿನದಿಂದಲೂ ಆ ದಂಪತಿ ನಡುವೆ ಕಲಹಗಳು ನಡೆಯುತ್ತಲೇ ಇದ್ದವಂತೆ. ಹಲವು ಬಾರಿ ಹಿರಿಯರ ಸಮಕ್ಷಮದಲ್ಲಿ ರಾಜಿಸಂಧಾನಗಳು ಕೂಡ ನಡೆದಿದ್ದವು. ಆದ್ರೀಗ, ಎಲ್ಲವೂ ಸರಿಹೋಗುತ್ತದೆ ಅಂದುಕೊಳ್ಳುವಷ್ಟರಲ್ಲಿಯೇ ಸುಷ್ಮಿತಾ ಸಾವಿನ ಮನೆ ಬಾಗಿಲು ತಟ್ಟಿದ್ದಾಳೆ..

​ಸಾವಿನ ಹಿಂದೆ  ಹಲವು ಅನುಮಾನಗಳು ದಟ್ಟವಾಗಿ ಆವರಿಸಿವೆ. ಮೊನ್ನೆ ಸಂಜೆಯಷ್ಟೇ ಗಂಡನ ಜೊತೆಯಲ್ಲಿ ಮನೆಗೆ ಬಂದಿದ್ದ ಸುಷ್ಮಿತಾಳ ಕಿವಿಯಲ್ಲಿ ಹಾಗೂ ತೊಡೆಯಲ್ಲಿ ರಕ್ತವಿತ್ತು ಅಂತ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಇದು ಆತ್ಮಹತ್ಯೆಯಲ್ಲ, ಬದಲಿಗೆ ಕೊಲೆ ಮಾಡಿ ಬಳಿಕ ನೇಣುಹಾಕಿದ್ದಾರೆ ಅಂತ ಮೃತಳ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತೀಚೆಗಷ್ಟೇ ತನ್ನ ಖುಷಿಯ ಲೋಕದಲ್ಲಿ ರೀಲ್ಸ್ ಗಳಿಗೆ ಹೆಜ್ಜೆ ಹಾಕಿದ್ದ ಆ ಹೆಣ್ಣುಮಗಳು, ಇಂದು ಇಹಲೋಕವನ್ನೇ ತ್ಯಜಿಸಿರುವುದು ವಿಧಿ ವಿಪರ್ಯಾಸವೇ ಸರಿ..

​​ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಷ್ಮಿತಾಳ ಪತಿ ಶ್ರೀನಿವಾಸ್‌ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್, ಪೊಲೀಸರ ವಿಚಾರಣೆ ವೇಳೆ ಹಲವು ವಿಚಾರ ತಿಳಿಸಿದ್ದಾನೆ.. ನಾವು ತಮಾಷೆಗಾಗಿ ಜಗಳ ಆಡಿದ್ವಿ, ಬಳಿಕ ನಾನು ಈಚೆ ಬಂದೆ, ಮತ್ತೆ ಮನೆಗೆ ಹೋಗುವ ವೇಳೆಗೆ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ಸಮರ್ಥನೆ ನೀಡಿದ್ದಾನೆ. ಆದರೆ ಈ ಸಾವಿನ ಹಿಂದೆ ಅಸಲಿ ಸತ್ಯ ಏನು ಅನ್ನೋದು ಪೊಲೀಸ್ ತನಿಖೆಯಿಂದಷ್ಟೇ ಹೊರಬರಬೇಕಿದೆ.

​ಈ ಎಲ್ಲದರ ನಡುವೆ ಅಪ್ಪನೂ ಇಲ್ಲ, ಅಮ್ಮನೂ ಇಲ್ಲದೆ ಆ ಎರಡೂವರೆ ವರ್ಷದ ಹಸುಗೂಸು ಮಾತ್ರ ಅನಾಥವಾಗಿದೆ. ಅಮ್ಮ ಬೇಕು... ಅಮ್ಮ ಬೇಕು... ಅಂತ ಆ ಮಗು ಅಂಗಲಾಚುತ್ತಿರುವುದನ್ನು ನೋಡಿದರೆ, ಕಲ್ಲು ಹೃದಯದವರ ಕಣ್ಣಲ್ಲೂ ಕಣ್ಣೀರು ಹರಿಯುತ್ತದೆ. ತಾಯಿಯ ಪ್ರೀತಿಯಿಂದ ವಂಚಿತವಾಗಿರುವ ಆ ಕಂದಮ್ಮನ ಗೋಳು ಮಾತ್ರ ನೋಡುತ್ತಿದ್ದರೆ ಮೈ ಜುಮ್ಮೆನಿಸುತ್ತದೆ. ಸದ್ಯ ಈ ಸಂಬಂಧ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ..

Add Zee News as a Preferred Source
TAGS:
Crime