• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮಧುಗಿರಿ ಏಕಶಿಲಾ ಬೆಟ್ಟದಲ್ಲಿ ಟ್ರಕ್ಕಿಂಗ್: ಒಂದೇ ಬಾರಿಗೆ 4 ವಿಶ್ವ ದಾಖಲೆಗಳ ನಿರ್ಮಾಣ

ಮಧುಗಿರಿ ಏಕಶಿಲಾ ಬೆಟ್ಟದಲ್ಲಿ ಟ್ರಕ್ಕಿಂಗ್: ಒಂದೇ ಬಾರಿಗೆ 4 ವಿಶ್ವ ದಾಖಲೆಗಳ ನಿರ್ಮಾಣ

ಏಷ್ಯಾದ ಎರಡನೇ ಅತಿ ಎತ್ತರದ ಏಕಶಿಲಾ ಬೆಟ್ಟವಾದ ಮಧುಗಿರಿಯಲ್ಲಿ ಒಮ್ಮೆಗೆ ನಾಲ್ಕು ವಿಶ್ವ ದಾಖಲೆಗಳನ್ನು ನಿರ್ಮಿಸಿದ ಚಾರಣಿಗರು.

Written ByYashaswini V
Published: Nov 16, 2026, 09:12 IST|Updated: Nov 16, 2026, 15:35 IST
joinshare
ಮಧುಗಿರಿ ಏಕಶಿಲಾ ಬೆಟ್ಟದಲ್ಲಿ ಟ್ರಕ್ಕಿಂಗ್: ಒಂದೇ ಬಾರಿಗೆ 4 ವಿಶ್ವ ದಾಖಲೆಗಳ ನಿರ್ಮಾಣ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಇದೇ ಮೊಟ್ಟ ಮೊದಲ ಬಾರಿಗೆ ಏಷ್ಯಾದ ಎರಡನೇ ಅತೀದೊಡ್ಡ ಏಕಶಿಲಾ ಬೆಟ್ಟ ಎಂಬ ಖ್ಯಾತಿ ಪಡೆದ, ತುಮಕೂರು ಜಿಲ್ಲೆಯ ಮಧುಗಿರಿ ಏಕಶಿಲಾ ಬೆಟ್ಟ  ಏರುವ ಮೂಲಕ ಚಾರಣಿಗರು ವಿಶ್ವ ದಾಖಲೆ ಮಾಡಿದ್ದಾರೆ.

ಬೆಟ್ಟ ಏರುವ ಚಾರಣ ಕಾರ್ಯಕ್ರಮ:
ಮಧುಗಿರಿ ತಾಲೂಕು ಆಡಳಿತ ಮತ್ತು ರೋಟರಾಕ್ಸ್ ಜಿಲ್ಲಾ ಪರಿಷತ್ ವತಿಯಿಂದ ಬೆಟ್ಟ ಏರುವ ಚಾರಣ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಏಕಶಿಲಾ ಬೆಟ್ಟ ಏರುವ ಚಾರಣಿಗರಿಗೆ ಹಸಿರು ಬಾವುಟದ ನಿಶಾನೆ ತೋರಿಸುವ ಮೂಲಕ ಕಾರ್ಯಕ್ರಮಕ್ಕೆ ಎಂಎಲ್‌ಸಿ ರಾಜೇಂದ್ರ ರಾಜಣ್ಣ ಚಾಲನೆ ನೀಡಿದರು.

ಒಂದೇ ಬಾರಿಗೆ ಬೆಟ್ಟ ಏರಿ ದಾಖಲೆ:
ಚಾರಣಿಗರು ಹಾಗೂ ಸಾರ್ವಜನಿಕರು ಸೇರದಂತೆ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಜನ ಒಂದೇ ಬಾರಿಗೆ ಬೆಟ್ಟ ಏರಿ ದಾಖಲೆ ನಿರ್ಮಿಸಿದರು. ಅಲ್ಲದೇ ಬೆಟ್ಟದ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಚಾರಣಿಗರು ಸಂಭ್ರಮಿಸಿದರು.

ಪೆನ್ಸಿಲ್ ಟವರ್ ನಿರ್ಮಾಣ:
ಇನ್ನು ಏಷ್ಯಾದ ಎರಡನೇ ಅತಿ ಎತ್ತರದ ಏಕಶಿಲಾ ಬೆಟ್ಟ ಎಂದೇ ಹೆಸರು ಪಡೆದಿರುವ ಮಧುಗಿರಿ ಏಕಶಿಲಾ ಬೆಟ್ಟದ ಮುಖ್ಯ ದ್ವಾರದಲ್ಲಿ 25 ಸಾವಿರ ಪೆನ್ಸಿಲ್ ಬಳಸಿ ಪೆನ್ಸಿಲ್ ಟವರ್ ನಿರ್ಮಾಣ ಹಾಗೂ 7,777 ನೋಟ್ ಬುಕ್ ಬಳಸಿ ನಿರ್ಮಿಸಿದ ಬೃಹತ್ತಾದ ಸಂದೇಶದ ಚಿತ್ರ ಮತ್ತು ಅದರಲ್ಲಿನ ಸಂದೇಶಗಳ ಸಂಗ್ರಹ ಮಾಡಲಾಗಿದ್ದು ಸಹ ವರ್ಲ್ಡ್ ಬುಕ್ ಆಫ್ ಎಕ್ಸಲೆನ್ಸ್ ರೆಕಾರ್ಡ್ ದಾಖಲೆಗಳನ್ನು ನಿರ್ಮಿಸಿತು.

ಬರಿ 25 ಸಾವಿರ ಪೆನ್ಸಿಲ್ ಮತ್ತು 7,777 ನೋಟ್‌ಬುಕ್ ಬಳಸಿ ದಾಖಲೆ ನಿರ್ಮಿಸುವುದಲ್ಲದೇ, ಅವುಗಳನ್ನು ಬುಡಕಟ್ಟು ಜನಾಂಗದ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಉಚಿತವಾಗಿ ವಿತರಿಸಲು ನಿರ್ಧರಿಸಲಾಗಿದೆ.

ಒಟ್ಟಾರೆ ಬೃಹದಾಕಾರದ ಏಷಿಯಾದ ಎರಡನೇ ಅತಿದೊಡ್ಡ ಏಕಶಿಲಾ ಬೆಟ್ಟ ಹಲವು ವಿಶ್ವ ದಾಖಲಿಗಳಿಗೆ ಸಾಕ್ಷಿಯಾಗುವುದಲ್ಲದೇ ಚಾರಣಿಗರ ಬೆಟ್ಟ ಏರುವ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು.

ಜಿಲ್ಲಾ ರೋಟರಾಕ್ಸ್‌ ಪ್ರತಿನಿಧಿ ಸಂಜಯ್‌ ಈ ಬಗ್ಗೆ ಮಾತನಾಡಿದ್ದು, ಮಧುಗಿರಿಯ ಏಕಶಿಲಾ ಬೆಟ್ಟದಲ್ಲಿ ನಾವು ನಾಲ್ಕು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದೇವೆ. ವರ್ಡ್‌ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಒಂದು ಹಾಗೂ ವರ್ಲ್ಡ್ ಬುಕ್ ಆಫ್ ಎಕ್ಸಲೆನ್ಸ್‌ನಲ್ಲಿ ಮೂರು ದಾಖಲೆಗಳನ್ನು ನಿರ್ಮಿಸುತ್ತಿದ್ದೇವೆ. ಮಧುಗಿರಿ ಬೆಟ್ಟದಲ್ಲಿ ಈ ಹಿಂದೆ 1,600 ಮಂದಿ ಒಟ್ಟಿಗೆ ಟ್ರಕಿಂಗ್‌ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದರು. ಇದು ಇಲ್ಲಿ ಬೆಟ್ಟ ಏರುವ ಚಾರಣದಲ್ಲಿ ಅತಿ ಹೆಚ್ಚು. ಈ ಬಾರಿ ಒಂದೇ ಬಾರಿಗೆ 3,000 ಜನ ಟ್ರಕಿಂಗ್‌ ಮಾಡುತ್ತಿದ್ದೇವೆ. ಇದರಲ್ಲಿ 2,000 ಮಂದಿ ರೋಟರಾಕ್ಸ್‌ ಮೂಲಕ ಬಂದಿದ್ದು, 1,000 ಮಂದಿ ಸ್ಥಳೀಯವಾಗಿ ಬಂದಿದ್ದಾರೆ. ಹಿಂದಿನ ರೆಕಾರ್ಡ್‌ ಬ್ರೇಕ್‌ ಮಾಡುತ್ತಿರುವುದು ನಮಗೆ ತುಂಬಾ ಸಂತೋಷದಾಯಕ ವಿಚಾರವಾಗಿದೆ.

ಯುವ ಪೀಳಿಗೆ ಏನು ಮಾಡಬಹುದೆಂದು ನಾವು ಜಗತ್ತಿಗೆ ತೋರಿಸಬೇಕಿತ್ತು. ನಮ್ಮ ಭಾರತೀಯರು, ಕರ್ನಾಟಕದಲ್ಲಿರುವ ಯುವ ಜನರು ಬರೀ ಸುತ್ತಾಡುವುದು, ಪಾರ್ಟಿಗಳನ್ನು ಮಾಡುವುದಷ್ಟೇ ಅಲ್ಲ.. ಈ ರೀತಿ ವಿಶ್ವ ದಾಖಲೆಗಳನ್ನು ನಿರ್ಮಿಸುವ ಕೆಲಸಗಳನ್ನೂ ಸಹ ಮಾಡುತ್ತೇವೆ. ಇದರ ಭಾಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಚಾರಣದ ಹಿಂದಿದೆ ಈ ಮಹತ್ವದ ಉದ್ದೇಶ:
ಮಧುಗಿರಿ ಬೆಟ್ಟದಲ್ಲಿ ವಿಶ್ವ ದಾಖಲೆ ಕೇವಲ ಚಾರಣದ ಉದ್ದೇಶವನ್ನು ಮಾತ್ರ ಹೊಂದಿಲ್ಲ. ಇಲ್ಲಿ ಕಲೆಕ್ಟ್‌ ಮಾಡಿರುವ ಹಣದಿಂದ, ಬುಡಕಟ್ಟು ಸಮುದಾಯದ ಮಕ್ಕಳ ಕಲಿಕೆಗೆ ಅಗತ್ಯವಾದ ಶಾಲಾ ಕೊಠಡಿಗಳ ವ್ಯವಸ್ಥೆ ಇರುವುದಿಲ್ಲ. ಸರಿಯಾದ ಪುಸ್ತಕ, ಪೆನ್ಸಿಲ್‌ಗಳೂ ಸಹ ಇರುವುದಿಲ್ಲ. ಅಂತಹ ಮಕ್ಕಳಿಗೆ ಶಾಲಾ ಕಲಿಕೆಗೆ ಅಗತ್ಯವಾದ ಸ್ಟೇಷನರಿಗಳನ್ನು ಒದಗಿಸುತ್ತಿದ್ದೇವೆ. ಬುಡಕಟ್ಟು ಸಮುದಾಯದ ಎರಡು ಶಾಲೆಗಳನ್ನು ಪುನರುಜ್ಜೀವನಗೊಳಿಸುತ್ತಿದ್ದೇವೆ ಎಂದು ಸಂಜಯ್‌ ಮಾಹಿತಿ ನೀಡಿದ್ದಾರೆ. 
 

Add Zee News as a Preferred Source
TAGS:
Travel
Kannada News