SOCIAL MEDIA

Newsletter

PARTNER SITES
Select Language Select State

ಹಳೆ ಪದ್ಧತಿ ಕೈಬಿಟ್ಟು, ಹೊಸ ಯೋಜನೆ ಅಳವಡಿಸಿಕೊಳ್ಳುವುದೇ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ : ಸಚಿವ ಕೆಬಿಜಿ

ರಾಜ್ಯ ರಾಜಧಾನಿಯಲ್ಲಿ ಕಸ ವಿಲೇವಾರಿ ಬಹು ದೊಡ್ಡ ಸಮಸ್ಯೆಯಾಗಿದ್ದು, ಇದೀಗ ಆನ್‌ಲೈನ್‌ ಟ್ರ್ಯಾಕಿಂಗ್‌ ವ್ಯವಸ್ಥೆಯ ಮೂಲಕ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ. ಇದರಿಂದ ಕಸ ವಿಲೇವಾರಿಗೆ ಸಂಬಂಧಿಸಿದ 33 ನೂತನ ಟೆಂಡರ್‌ ಪ್ಯಾಕೇಜ್‌ ಅನುಷ್ಠಾನಕ್ಕೆ ಸಚಿವ ಕೃಷ್ಣ ಬೈರೇಗೌಡ ಅಧಿಕೃತ ಚಾಲನೆ ನೀಡಿದ್ದಾರೆ.

Written By Yashaswini V
Published: Nov 12, 2026, 12:14 IST | Updated: Nov 12, 2026, 12:24 IST
Join

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಮುಖ್ಯ ಸಮಸ್ಯೆಗಳಲ್ಲಿ ಒಂದಾದ ಕಸ ವಿಲೇವಾರಿ ಸಮಸ್ಯೆಗೆ ಇದೀಗ ರಾಜ್ಯ ಸರ್ಕಾರ ಆನ್‌ಲೈನ್‌ ಟ್ರ್ಯಾಕಿಂಗ್‌ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ  ನಗರದ ಕಸ ವಿಲೇವಾರಿ ಸಂಬಂದಿಸಿದ  33 ಟೆಂಡರ್ ಪ್ಯಾಕೇಜ್ ಗಳ ಜಾರಿಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕೃತ ಚಾಲನೆ ನೀಡಿದ್ದಾರೆ.  

ಬೆಂಗಳೂರಲ್ಲಿ ನಡೆದ ಘನತ್ಯಾಜ್ಯ ಟೆಂಡರ್‌ ಅನುಷ್ಠಾನ ಸಭೆಯಲ್ಲಿ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಕಸದ ವಿಚಾರದಲ್ಲಿ ನಾವು ಜನರ ಮುಂದೆ ತಲೆ ತಗ್ಗಿಸುವ ಪರಿಸ್ಥಿತಿ ಎದುರಾಗಿದೆ.  ಜನರು ನಮ್ಮನ್ನು ನೋಡುವ ದೃಷ್ಟಿ ಬದಲಾಗಿದೆ. ಇದೀಗ ನಮಗೆ ಸರಿಪಡಿಸಿಕೊಳ್ಳಲು ಸುವರ್ಣ ಅವಕಾಶ ಸಿಕ್ಕಿದೆ. ಇದನ್ನೂ ಸರಿಯಾಗಿ ಬಳಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರ ತೀವ್ರ ಆಕ್ರೋಶ ಎದುರಿಸಬೇಕಾಗುತ್ತದೆ ಎಂದು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಹೀಗಾಗಿ ಹೊಸ ಗುತ್ತಿಗೆ ಪದ್ದತಿಯಲ್ಲಿ ಕಸದ ನಿರ್ವಹಣೆ ಮೇಲೆ ಆನ್ ಲೈನ್ ಟ್ರ್ಯಾಕಿಂಗ್ ವ್ಯವಸ್ಥೆ ಮಾಡಲಾಗಿದೆ.  ಈ ಹಿನ್ನಲೆಯಲ್ಲಿ ಏನಾದರೂ ಕಸದ ನಿರ್ಹಹಣೆಯಲ್ಲಿ ವಿಫಲವಾದ್ರೆ ಕೂಡಲೇ ಗುತ್ತಿಗೆದಾರನಿಗೆ ಫೈನ್ ವಿಧಿಸುವ ವ್ಯವಸ್ಥೆ ಮಾಡಲಾಗಿದೆ.  ಹೊಸ ವ್ಯವಸ್ಥೆ ಯಶಸ್ವಿ ಜಾರಿಗೊಳಿಸಿ ಅಂಟಿದ ಕಳಂಕ ತೊಡೆದುಹಾಕಲು ಒಟ್ಟಾಗಿ ಶ್ರಮಿಸುವ ಎಂದು ಹೇಳಿದ್ದಾರೆ.

ವಾಹನಗಳ ಫೋಟೋ, ಜಿಪಿಎಸ್ ಟ್ರ್ಯಾಕಿಂಗ್ ಹಾಗೂ ನಿಗದಿತ ರಸ್ತೆಗಳ ಸಂಚಾರ ಮಾಹಿತಿಯನ್ನು ಸರಿಯಾಗಿ ನಿರ್ವಹಿಸಿದರೆ ಶೇ. 90 ರಷ್ಟು ಸಮಸ್ಯೆಗಳು ತಾನಾಗಿಯೇ ನಿವಾರಣೆಯಾಗಲಿವೆ.  ಹೊಸ ವ್ಯವಸ್ಥೆಯ ಪ್ರಮುಖ ಅಂಶಗಳು ಹೀಗಿವೆ:

ಕಸದ ಬಿಲ್ ಜೆನರೇಷನ್ ವ್ಯವಸ್ಥೆಯನ್ನು ಸಂಪೂರ್ಣ ಆಟೋಮೇಷನ್ ಗೊಳ್ಳಲಿದೆ. ಪೌರಕಾರ್ಮಿಕರು, ಹೆಲ್ಪರ್, ಚಾಲಕರು ಹಾಗೂ ವಾಹನಗಳ ಹಾಜರಾತಿಯನ್ನು 'ಸಿಂಗಲ್ ಸಾಫ್ಟ್‌ವೇರ್'ನಲ್ಲಿ ಸಂಯೋಜನೆ ಮಾಡಲಾಗಿದೆ. ವಾಹನಗಳ ಫೋಟೋ, ಜಿಪಿಎಸ್ ಟ್ರ್ಯಾಕಿಂಗ್ ಹಾಗೂ ನಿಗದಿತ ರಸ್ತೆಗಳ ಸಂಚಾರ ಮಾಹಿತಿಯನ್ನು ಸರಿಯಾಗಿ ನಿರ್ವಹಿಸಿದರೆ ಶೇ. 90 ರಷ್ಟು ಸಮಸ್ಯೆ ನಿವಾರಣೆ ಮಾಡಬೇಕು. ಪ್ರತಿಯೊಂದು ಕಸದ ವಾಹನದ ಮೇಲೆಯೂ ಕ್ಯೂಆರ್ ಕೋಡ್‌ ಇರಬೇಕು.  

ಕೋಡ್ ಸ್ಕ್ಯಾನ್ ಮಾಡಿ ಸಾರ್ವಜನಿಕರು ನೇರವಾಗಿ ತಮ್ಮ ಅಭಿಪ್ರಾಯ ಮತ್ತು ದೂರುಗಳನ್ನು ದಾಖಲಿಸಬಹುದು. 33 ಪ್ಯಾಕೇಜ್‌ಗಳಡಿ 5,431 ವಾಹನಗಳೊಂದಿಗೆ 7 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗುತ್ತಿದೆ. ಘನತ್ಯಾಜ್ಯ ನಿರ್ವಹಣಾ ನಿಯಮಾವಳಿ ಪ್ರಕಾರ ಶೇ. 100 ರಷ್ಟು ತ್ಯಾಜ್ಯ ವಿಂಗಡಣೆಯಾಗುವುದು ಕಡ್ಡಾಯವಾಗಿದೆ. ಆರ್.ಎಫ್.ಐ.ಡಿ ಮತ್ತು ಫೇಸ್ ರೆಕಗ್ನಿಷನ್ ಮೂಲಕ ಹಾಜರಾತಿ ನಿರ್ವಹಿಸಲಾಗುತ್ತಿದ್ದು, ಐಸಿಸಿಸಿ ಮೂಲಕ ಲೈವ್ ಡೇಟಾ ಮಾನಿಟರ್ ಮಾಡಲಾಗುತ್ತದೆ. ಸರಿಯಾಗಿ ಸೇವೆ ನೀಡದಿದ್ದಲ್ಲಿ ಸಿಸ್ಟಮ್‌ನಲ್ಲೇ ಬ್ಲ್ಯಾಕ್‌ಲಿಸ್ಟ್ ಸೇರ್ಪಡೆ ಹಾಗೂ ದಂಡ ವಿಧಿಸುವ ವ್ಯವಸ್ಥೆ ಇರಲಿದೆ.

ಬೆಂಗಳೂರಿನ ನೈರ್ಮಲ್ಯ ಮತ್ತು ಸ್ವಚ್ಛತೆ ಕಾಪಾಡುವಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡಲು ಸಚಿವ ಕೃಷ್ಣ ಬೈರೇಗೌಡ ಕಟ್ಟುನಿಟ್ಟಿನ ನಿರ್ದೇಶನ  ನೀಡಿದ್ದಾರೆ. ಮುಂದಿನ 2.5 ತಿಂಗಳ ಅವಧಿಯಲ್ಲಿ ಒಟ್ಟು 30 ಪ್ಯಾಕೇಜ್‌ಗಳನ್ನು ಅನುಷ್ಠಾನಗೊಳಿಸಲಾಗುವುದು. ಮೊದಲ ಹಂತದಲ್ಲಿ 4, ಎರಡನೇ ಹಂತದಲ್ಲಿ 7 ಹಾಗೂ ಮುಂದಿನ ತಿಂಗಳು 3ನೇ ಹಂತದಲ್ಲಿ 7 ಪ್ಯಾಕೇಜ್‌ಗಳು ಜಾರಿಗೆ ಬರಲಿವೆ. ಹಳೆಯ ಪದ್ಧತಿಗಳನ್ನು ಕೈಬಿಟ್ಟು ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ನಾಗರಿಕರು ಸಮನ್ವಯದಿಂದ ಕೆಲಸ ಮಾಡಲು ಸಚಿವರು ಸೂಚನೆ ನೀಡಿದ್ದಾರೆ.

 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ZEENEWS TRENDING STORIES