• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಉದ್ಘಾಟನೆಯಾದ ಕೇವಲ 4 ತಿಂಗಳಲ್ಲೇ ಅಧ್ವಾನಗೊಂಡ 631 ಕೋಟಿ ವೆಚ್ಚದ ರಸ್ತೆ!

ಉದ್ಘಾಟನೆಯಾದ ಕೇವಲ 4 ತಿಂಗಳಲ್ಲೇ ಅಧ್ವಾನಗೊಂಡ 631 ಕೋಟಿ ವೆಚ್ಚದ ರಸ್ತೆ!

ಕೆಂಪೇಗೌಡ ಜನ್ಮದಿನಾಚರಣೆಯ ವಿಶೇಷ ದಿನವಾದ ಜೂನ್ 27ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಮಹತ್ವಾಕಾಂಕ್ಷೆಯ ರಸ್ತೆಯನ್ನು ಲೋಕಾರ್ಪಣೆಗೊಳಿಸಿದ್ದರು.

Reported ByManjunath NaragundEdited ByManjunath Naragund
Published: Oct 27, 2026, 12:34 PM IST|Updated: Oct 27, 2026, 12:45 PM IST
joinshare
ಉದ್ಘಾಟನೆಯಾದ ಕೇವಲ 4 ತಿಂಗಳಲ್ಲೇ ಅಧ್ವಾನಗೊಂಡ 631 ಕೋಟಿ ವೆಚ್ಚದ ರಸ್ತೆ!
Image Credit: Road

About the Author

Manjunath Naragund

Manjunath Naragund

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.
Read More

Trending

  • News
  • Photos
  • Videos
ಧನ್ವೀರ್ ವಿವಾದದ ಬೆನ್ನಲ್ಲೇ ಸ್ಪೋಟಕ ಬೆಳವಣಿಗೆ : ಜೈಲಿನಲ್ಲಿ ದರ್ಶನ್ ಭೇಟಿಯಾಗಲಿರುವ ವಿಜಯಲಕ್ಷ್ಮಿ-ಝೈದ್ ಖಾನ್

ಧನ್ವೀರ್ ವಿವಾದದ ಬೆನ್ನಲ್ಲೇ ಸ್ಪೋಟಕ ಬೆಳವಣಿಗೆ : ಜೈಲಿನಲ್ಲಿ ದರ್ಶನ್ ಭೇಟಿಯಾಗಲಿರುವ ವಿಜಯಲಕ್ಷ್ಮಿ-ಝೈದ್ ಖಾನ್

2

ಮಂಗಳೂರಿನ ವ್ಯಕ್ತಿ ಇಸ್ರೇಲ್‌ನಲ್ಲಿ ನಾಪತ್ತೆ; ಆತಂಕದಲ್ಲಿ ಕುಟುಂಬಸ್ಥರು

3

ಹೊಸ ಮನೆಗೆ ಅಪ್ಪಿತಪ್ಪಿಯೂ ಈ 4 ವಸ್ತುಗಳನ್ನ ತರಬೇಡಿ! ಸುಖ-ಶಾಂತಿ, ಸಮೃದ್ಧಿಗೆ ಈ ನಿಯಮ ಪಾಲಿಸಿ

4

ಅರ್ನಬ್ ಚಂಡಮಾರುತ ಎಫೆಕ್ಟ್: ಹಲವು ರೈಲುಗಳ ಸಂಚಾರ ರದ್ದು; ಸಂಪೂರ್ಣ ಪಟ್ಟಿ ಇಲ್ಲಿದೆ

5

ರಾಜ್ಯ ಸರ್ಕಾರ 'ಜೀರೋ ಬ್ಯಾಲೆನ್ಸ್' ಸರ್ಕಾರ, ದಿವಾಳಿಯಾಗಿದೆ: ಸುನೀಲ್ ಕುಮಾರ್ ತೀವ್ರ ವಾಗ್ದಾಳಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ಅಭಿವೃದ್ಧಿಯ ಮೈಲಿಗಲ್ಲು ಎಂದು ಬಿಂಬಿತವಾಗಿ, ಬರೋಬ್ಬರಿ 631 ಕೋಟಿ ರೂಪಾಯಿಗಳ ಭಾರಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಎಸ್.ಎಂ. ಕೃಷ್ಣ ಮಲ್ಟಿ ಆಕ್ಸೆಸ್ ರೋಡ್ ಉದ್ಘಾಟನೆಯಾದ ಕೇವಲ ನಾಲ್ಕು ತಿಂಗಳ ಅಲ್ಪಾವಧಿಯಲ್ಲೇ ತನ್ನ ಗುಣಮಟ್ಟ ಕಳೆದುಕೊಂಡು ಅಧ್ವಾನಗೊಂಡಿದೆ. ರಸ್ತೆಯಲ್ಲಿ ಅಲ್ಲಲ್ಲಿ ಬೃಹತ್ ಗುಂಡಿಗಳು, ತಗ್ಗುಗಳು ಸೃಷ್ಟಿಯಾಗಿರುವುದು ಹಾಗೂ ಜಲ್ಲಿ-ಟಾರ್ ಕಿತ್ತುಬಂದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕೆಂಪೇಗೌಡ ಜನ್ಮದಿನಾಚರಣೆಯ ವಿಶೇಷ ದಿನವಾದ ಜೂನ್ 27ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಮಹತ್ವಾಕಾಂಕ್ಷೆಯ ರಸ್ತೆಯನ್ನು ಲೋಕಾರ್ಪಣೆಗೊಳಿಸಿದ್ದರು. ನದಿ ಕ್ರಾಸ್‌ನಿಂದ ಮೈಸೂರು ರಸ್ತೆಯ ಚಲ್ಲಘಟ್ಟ ಮೆಟ್ರೋ ಡಿಪೋವರೆಗೆ ನಿರ್ಮಿಸಲಾಗಿರುವ ಅಂದಾಜು ಹತ್ತೂವರೆ ಕಿಲೋಮೀಟರ್ ಉದ್ದದ ಈ ರಸ್ತೆಯು ಸಂಚಾರಕ್ಕೆ ಮುಕ್ತವಾಗುವುದಲ್ಲದೇ ಜನರಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕಾಮಗಾರಿಯ ಕಳಪೆ ಗುಣಮಟ್ಟದಿಂದಾಗಿ ಈಗ ರಸ್ತೆಯ ಅಸ್ತಿತ್ವವೇ ಪ್ರಶ್ನಾರ್ಹವಾಗಿದೆ.

ವಾಸ್ತವವಾಗಿ, ರಸ್ತೆ ಉದ್ಘಾಟನೆಗೂ ಮುನ್ನವೇ ಮಾಗಡಿ ರಸ್ತೆ ಬಳಿ ಗುಂಡಿಗಳು ಬಿದ್ದಿದ್ದವು. ಆಗ ತುರ್ತಾಗಿ ದುರಸ್ತಿ ಕಾರ್ಯ ಕೈಗೊಳ್ಳಲಾಗಿತ್ತಾದರೂ, ಇತ್ತೀಚೆಗೆ ಸುರಿದ ಮಳೆಗೆ ರಸ್ತೆಯ ದುಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಸೂಲಿಕೆರೆ ಸಮೀಪದಲ್ಲಿ ರಸ್ತೆಯ ಮೇಲ್ಪದರ ಸಂಪೂರ್ಣವಾಗಿ ಕಿತ್ತುಬಂದಿದ್ದು, ಒಳಗಿನ ಕಲ್ಲುಗಳೆಲ್ಲ ಮೇಲೆದ್ದು ರಸ್ತೆಯ ತುಂಬ ಹರಡಿಕೊಂಡಿವೆ. ಇದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಇತರೆ ವಾಹನ ಚಾಲಕರು ನಿತ್ಯ ಪ್ರಾಣಭಯದಿಂದ ಸಂಚರಿಸುವಂತಾಗಿದೆ.

ಇನ್ನು ಕಾಮಗಾರಿ ಮುಕ್ತಾಯದ ಹಂತದಲ್ಲಿ ನಿರ್ಮಿಸಲಾಗಿರುವ ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಕೆಳಗಿನ ಸುರಂಗ ಪ್ರವೇಶದ ಬಳಿ ರಸ್ತೆಯು ಸಂಪೂರ್ಣವಾಗಿ ತಗ್ಗು-ದಿಣ್ಣೆಯಂತಾಗಿದೆ. ಡಾಂಬರೀಕರಣ ಮಾಡುವ ಮುನ್ನ ಕೆಳಭಾಗದಲ್ಲಿ ಮಣ್ಣು ಮತ್ತು 'ವೆಟ್ ಮಿಕ್ಸ್' ಅನ್ನು ವೈಜ್ಞಾನಿಕವಾಗಿ ಹಾಗೂ ಸೂಕ್ತ ರೀತಿಯಲ್ಲಿ ಹಾಕಿ ಗಟ್ಟಿಗೊಳಿಸದಿರುವುದೇ ಈ ಅಡೆತಡೆಗಳಿಗೆ ಮತ್ತು ರಸ್ತೆ ಕುಸಿತಕ್ಕೆ ಪ್ರಮುಖ ಕಾರಣ ಎಂದು ತಜ್ಞರು ಮತ್ತು ಸ್ಥಳೀಯರು ಆರೋಪಿಸಿದ್ದಾರೆ.

ಇಷ್ಟೇ ಅಲ್ಲದೆ, ಚಲ್ಲಘಟ್ಟ ಮೆಟ್ರೋ ಡಿಪೋ ಕೆಳಗಿನ ಸುರಂಗ ಮಾರ್ಗದಲ್ಲಿ ನೀರು ಸೋರಿಕೆಯಾಗುತ್ತಿರುವುದು ಗಂಭೀರ ಲೋಪವನ್ನು ಎತ್ತಿ ತೋರಿಸುತ್ತದೆ. ರಸ್ತೆಯ ಸರಿಯಾದ ನಿರ್ವಹಣೆ ಇಲ್ಲದಿರುವುದು ಮತ್ತು ರಾತ್ರಿ ವೇಳೆ ವಿದ್ಯುತ್ ದೀಪಗಳ ವ್ಯವಸ್ಥೆಯೂ ಇಲ್ಲದಿರುವುದರಿಂದ ಸಾರ್ವಜನಿಕರು, ವಿಶೇಷವಾಗಿ ಮಹಿಳೆಯರು ಮತ್ತು ಹಿರಿಯ ನಾಗರಿಕರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.

ಕೋಟಿ ಕೋಟಿ ಸಾರ್ವಜನಿಕರ ತೆರಿಗೆ ಹಣವನ್ನು ಸುರಿದು ನಿರ್ಮಿಸಿದ ರಸ್ತೆಯೊಂದು ಕೇವಲ ನಾಲ್ಕು ತಿಂಗಳಿಗೆ ಹಾಳಾಗಿರುವುದು ಬಿಡಿಎ ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯವನ್ನು ಬಟಾಬಯಲು ಮಾಡಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು, ತತ್‌ಕ್ಷಣವೇ ರಸ್ತೆಯನ್ನು ಸಮರ್ಪಕವಾಗಿ ದುರಸ್ತಿಪಡಿಸಬೇಕು ಹಾಗೂ ಕಳಪೆ ಕಾಮಗಾರಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮತ್ತು ವಾಹನ ಸವಾರರು ಬಲವಾಗಿ ಒತ್ತಾಯಿಸಿದ್ದಾರೆ.
 

Add Zee News as a Preferred Source
TAGS:
Kannada News