SOCIAL MEDIA

Newsletter

PARTNER SITES
Select Language Select State

2018 ರಲ್ಲಿ ಡಬಲ್ ಮರ್ಡರ್ ಮಾಡಿದ ಅಣ್ಣ, ಈಗ 7 ಕೊಲೆಗೈದ ತಮ್ಮ! ಕ್ರಿಮಿನಲ್‌ ಸಹೋದರರ ಕರಾಳ ಹಿನ್ನೆಲೆ ರಿವೀಲ್‌‌

ರಾಜಾಜಿನಗರದಲ್ಲಿ ಏಳು ಜನರ ಸರಣಿ ಹತ್ಯೆ ಸಂಬಂಧಿಸಿ ಮೃತದೇಹ ಹುಡುಕಾಟದಲ್ಲಿ ಪೊಲೀಸರ ತಂಡಗಳು ನಿರತವಾಗಿವೆ.. ಈ ನಡುವೆ ಆರೋಪಿ ಇಂದುಶೇಖರ್ ಅಣ್ಣನ ಹಿನ್ನೆಲೆ ಬೆಳಕಿಗೆ ಬಂದಿದೆ.. 2018 ರಲ್ಲಿ ನಡೆದಿದ್ದ ಒಂದು ಭೀಕರ ಡಬಲ್ ಮರ್ಡರ್ ಸ್ಟೋರಿ ಮತ್ತೆ ನೆನೆಸಬೇಕಾಗಿದೆ.. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ.

Written By Krishna NK
Published: Nov 08, 2026, 17:47 IST | Updated: Nov 08, 2026, 17:49 IST
Image Credit: Crime News
Join

ಬೆಂಗಳೂರು : ರಾಜಧಾನಿಯ ರಾಜಾಜಿನಗರದ ಸರಣಿ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಶವ ಪತ್ತೆ ಕಾರ್ಯ ಮುಂದುವರೆಸಿದ್ದಾರೆ.. ಆರಂಭದಲ್ಲಿ ನಂದಿ ಬೆಟ್ಟದಲ್ಲಿ ಏಳು ವರ್ಷದ ಬಾಲಕ ಪುನೀತ್ ಶವ ಪತ್ತೆ ನಂತರ, ನಿನ್ನೆ ತಮಿಳುನಾಡಿನ ಸೇಲಂ ನಲ್ಲಿ ಎರಡು ಶವಗಳು ಪತ್ತೆಯಾಗಿದೆ.

ಸೇಲಂ ಬಳಿಯ ಏರ್ಕಾಡ್ ಘಾಟ್ ನಲ್ಲಿ ಆರೋಪಿ ಇಂದುಶೇಖರ್ ಪತ್ನಿ ಸುನಿತಾ ಮತ್ತು ಅತ್ತೆ ಅಂದರೆ ಸುನಿತಾ ತಾಯಿ ರೂಪವತಿಯ ಶವಗಳು ಪತ್ತೆಯಾಗಿವೆ. ಪ್ಲಾಸ್ಟಿಕ್ ಮತ್ತು ಪ್ಲಾಸ್ಟರ್ ಮೂಲಕ ಸುತ್ತಿ ಬಟ್ಟೆಗಳಿಂದ ಕವರ್ ಮಾಡಿ ಎಸೆದ ರೀತಿಯಲ್ಲಿ ಶವಗಳು ಪತ್ತೆಯಾಗಿವೆ.. ಬೆಂಗಳೂರಿನಿಂದ ಕುಟುಂಬಸ್ಥರನ್ನ ಕರೆದೊಯ್ದು ಮೃತದೇಹಗಳ ಗುರುತು ಪತ್ತೆ ಹಚ್ಚಿ ಸೇಲಂ ನಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ, ಬೆಂಗಳೂರಿಗೆ ತಂದು ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದು, ಮೈಸೂರಿನಲ್ಲಿ ಆರೋಪಿಗಳು ಎಸೆದಿರೋ ಶಿವಕುಮಾರ್ ಮತ್ತು ದಿವ್ಯ ಮೃತದೇಹಗಳ ಕುರುಹು ಸಹ ಪತ್ತೆಯಾಗಿದ್ದು, ನಾಲ್ಕು ಮೃತದೇಹಗಳನ್ನ ಒಟ್ಟಿಗೆ ಅಂತ್ಯಸಂಸ್ಕಾರ ಮಾಡುವ ಸಾಧ್ಯತೆಯಿದೆ.. ಶಿರಾಡಿ ಘಾಟ್ ಬಳಿ ಎಸೆದಿರುವ ಶಂಕರ್ ಮತ್ತು ನಳಿನಿ ಮೃತದೇಹ ಪತ್ತೆ ಹಚ್ಚುವುದು ಸ್ವಲ್ಪ ಕಠಿಣವಾಗಿದ್ದು, ಆರೋಪಿ ಕೂಡ ನಿಖರ ಜಾಗ ಹೇಳದೇ, ದಟ್ಟ ಕಾಡು ಆದ ಕಾರಣ ಪ್ರಾಣಿ ಪಕ್ಷಿಗಳು ನಾಶ ಪಡಿಸಿರುವ ಸಾಧ್ಯತೆಗಳು ಇವೆ.. ಬಹುತೇಕ ನಾಳೆ ಆರೋಪಿಯನ್ನ ಕರೆದೊಯ್ದು ಪತ್ತೆ ಕಾರ್ಯ ಮುಂದುವರೆಸುವ ಸಾಧ್ಯತೆಯಿದೆ..

ಇನ್ನು ಆರೋಪಿ ಇಂದುಶೇಖರ್ ನ ಅಣ್ಣನ ಹಿನ್ನೆಲೆ ಕೂಡ ಕರಾಳವಾಗಿದ್ದು ಮತ್ತೆ ಈ ಘಟನೆ ಅದನ್ನ ನೆನಪಿಸುವಂತೆ ಮಾಡಿದೆ.. ಇಂದುಶೇಖರ್ ಸ್ವಂತ ಅಣ್ಣ ಬೆಳತೂರು ರಮೇಶ್ ಆಸ್ತಿಗಾಗಿ‌ ಮಾಡಿದ್ದ ಡಬಲ್ ಮರ್ಡರ್ ಕೇಸ್ ಎಂಟು ವರ್ಷಗಳ ಹಿಂದೆ ರಾಜ್ಯವನ್ನೆ ಬೆಚ್ಚಿಬೀಳಿಸಿತ್ತು.. 15 ಕೋಟಿ ಮೌಲ್ಯದ 1.8 ಎಕರೆ ಜಾಗಕ್ಕಾಗಿ ರಮೇಶ್ ಡಬಲ್ ಮರ್ಡರ್ ಮಾಡಿದ್ದ.. ಬೆಂಗಳೂರಿನ ಬೆಳತೂರು ಸಮೀಪ ನಂಜಪ್ಪ ಎಂಬುವರಿಗೆ ಸೇರಿದ ಜಾಗವಿತ್ತು.. ನಂಜಪ್ಪ ಅದಾಗಲೆ ವಯೋಸಹಜವಾಗಿ ಸಾವನ್ನಪ್ಪಿದ್ದರು.. ಅನಾಥವಾಗಿದ್ದ ಕೋಟಿ ಮೌಲ್ಯದ ಜಾಗದ ಮೇಲೆ ರಮೇಶ್ ಕಣ್ಣಾಕಿದ್ದ.. ವೆಂಕಟರಮಣ ಎಂಬುವನನ್ನ ಕರೆತಂದು ನಂಜಪ್ಪ ಎಂದು ಬಿಂಬಿಸಿದ್ದ.. ಆತನ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಿಲ್ ಬರೆಸಿಕೊಂಡಿದ್ದ.. ನಂತರ 65 ವರ್ಷದ ಕೃಷ್ಣಪ್ಪ ಎಂಬ ಮತ್ತೊಬ್ಬ ವ್ಯಕ್ತಿಯನ್ನ ಕರೆಸಿ ನಕಲಿ ನಂಜಪ್ಪನನ್ನಾಗಿ ಬಿಂಬಿಸಿ ಆತನಿಗೆ ಬೇಧಿ ಮಾತ್ರೆ ನೀಡಿ ಕೊಲೆ ಮಾಡಿದ್ದ.. ಕೃಷ್ಣಪ್ಪ ಸತ್ತ ನಂತರ ನಂಜಪ್ಪ ಹೆಸರಿನಲ್ಲಿ ನಕಲಿ ಮರಣ ಪ್ರಮಾಣಪತ್ರ ಮಾಡಿಸಿದ್ದ.. ಕೊಲೆ ಸಂದರ್ಭದಲ್ಲಿ ರಮೇಶ್ ಜೊತೆಗೆ ತೋಟದ ಸೆಕ್ಯೂರಿಟಿ ಆಗಿದ್ದ ವೆಂಕಟಸ್ವಾಮಿ ಎಂಬ ವ್ಯಕ್ತಿಯಿದ್ದ.. ಕೊಲೆಯ ವಿಚಾರವನ್ನ ವೆಂಕಟಸ್ವಾಮಿ ತನ್ನ ಪತ್ನಿ ಸುಧಾರಾಣಿಗೆ ಹೇಳಿದ್ದ ಆದರೆ ಸುಧಾರಾಣಿ ಒಪ್ಪದೇ ವಿರೋಧ ಮಾಡಿದ್ದಳು.. ಈ ಹಿನ್ನಲೆ ಆಕೆಯನ್ನ ಮನೆಯಲ್ಲೆ ಬೆಂಕಿಹಚ್ಚಿ ಕೊಲೆ ಮಾಡಲಾಗಿತ್ತು.. ಕೊಲೆ ನಂತರ ಸುಧಾರಾಣಿಯದ್ದ ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತು.. ಆದ್ರೆ ತನಿಖೆಯಲ್ಲಿ ಸುಧಾರಾಣಿಯದ್ದು ಕೊಲೆ ಎಂದು ಪತ್ತೆಯಾಗಿತ್ತು.. ನಂತರ ಬೆಳತೂರು ರಮೇಶ್ ಮತ್ತು ವೆಂಕಟಸ್ವಾಮಿಯನ್ನ ಬೆಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದರು..

ಮೂರು ವರ್ಷ ಜೈಲಲ್ಲಿದ್ದ ರಮೇಶ್ 2021 ರಲ್ಲಿ ಜೈಲಿನಲ್ಲೆ ಮೃತಪಟ್ಟಿದ್ದ. ವರ್ತೂರು ಭಾಗದಲ್ಲಿ ಭೂ ಮಾಫಿಯಾ ನಡೆಸ್ತಿದ್ದ ರಮೇಶ್, ನಕಲಿ ದಾಖಲೆ ಸೃಷ್ಟಿ, ಧಮ್ಕಿ ಸೇರಿ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ.. ಈ ಹಿನ್ನಲೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಓಪನ್ ಮಾಡಲು ರೆಡಿ ಮಾಡಲಾಗಿತ್ತು. ಈಗ ಅಣ್ಣನ‌ ಹಾದಿಯಲ್ಲೆ ಏಳು ಕೊಲೆ ಮಾಡಿ ಸಂಚಲನ ಸೃಷ್ಟಿಸಿರೊ ಇಂದುಶೇಖರ್ ಪೊಲೀಸರಿಂದ ಬಂಧಿತನಾಗಿ ವಿಚಾರಣೆ ಎದುರಿಸ್ತಿದ್ದಾನೆ. ಏಳು ಕೊಲೆ ಸಂಬಂಧ ಪೊಲೀಸ್ ತನಿಖೆ ಮುಂದುವರೆದಿದ್ದು ಇನ್ನೂ ಏನೇನು ಸತ್ಯಗಳು ಹೊರಬರಲಿವೆ ಕಾದು ನೋಡಬೇಕಿದೆ..

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES