• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು 7 ಕೊ*ಲೆ ಪ್ರಕರಣ: ಸಾಕ್ಷ್ಯ ನಾಶಕ್ಕೆ ಮಾಸ್ಟರ್‌ ಪ್ಲ್ಯಾನ್‌, FSL ತಜ್ಞರಿಂದ ಲೂಮಿನಾಲ್ ಪರೀಕ್ಷೆ

ಬೆಂಗಳೂರು 7 ಕೊ*ಲೆ ಪ್ರಕರಣ: ಸಾಕ್ಷ್ಯ ನಾಶಕ್ಕೆ ಮಾಸ್ಟರ್‌ ಪ್ಲ್ಯಾನ್‌, FSL ತಜ್ಞರಿಂದ ಲೂಮಿನಾಲ್ ಪರೀಕ್ಷೆ

ರಾಜಾಜಿನಗರ ನರಮೇಧ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಎವಿಡೆನ್ಸ್ ಕಲೆಕ್ಟ್ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಅಪ್ರಾಪ್ತೆ ಎನ್ನಿಸಿಕೊಂಡಿದ್ದ ಪಾಪಿ ಮಗಳನ್ನು ಖಾಕಿ ವಶಕ್ಕೆ ಪಡೆದಿದೆ. ಮತ್ತೊಂದು ಕಡೇ ಆರೋಪಿಯ ಕೃತ್ಯದ ಬಗ್ಗೆ ಮತ್ತಷ್ಟು ಸ್ಪೋಟಕ ಮಾಹಿತಿಗಳು ಹೊರಬಿದ್ದಿವೆ.

Written ByKrishna NK
Published: Nov 13, 2026, 16:01 IST|Updated: Nov 13, 2026, 16:02 IST
joinshare
ಬೆಂಗಳೂರು 7 ಕೊ*ಲೆ ಪ್ರಕರಣ: ಸಾಕ್ಷ್ಯ ನಾಶಕ್ಕೆ ಮಾಸ್ಟರ್‌ ಪ್ಲ್ಯಾನ್‌, FSL ತಜ್ಞರಿಂದ ಲೂಮಿನಾಲ್ ಪರೀಕ್ಷೆ
Image Credit: Crime News

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ಒಂದೇ ಕುಟುಂಬದ ಏಳು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಪೊಲೀಸರ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಏಳು ಮಂದಿಯ ತಲೆಗಳನ್ನು ರುಬ್ಬುಗುಂಡಿನಿಂದ ಜಜ್ಜಿ ಹತ್ಯೆ ಮಾಡಿದ್ದ ಆರೋಪಿ ಇಂದುಶೇಖರ್, ಕೃತ್ಯದ ಬಳಿಕ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದ, ಮನೆಯ ಹಾಲ್, ಬಾತ್‌ರೂಂ ಹಾಗೂ ಕೃತ್ಯಕ್ಕೆ ಬಳಸಿದ್ದ ರುಬ್ಬುಗುಂಡಿನ ಮೇಲಿದ್ದ ರಕ್ತದ ಕಲೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದ. ಹೀಗಾಗಿ ರಕ್ತದ ಸೂಕ್ಷ್ಮ ಕಲೆಗಳನ್ನು ಪತ್ತೆಹಚ್ಚಲು ಪೊಲೀಸರು ಇದೀಗ ಲೂಮಿನಾಲ್ ಟೆಸ್ಟ್ ಮೊರೆ ಹೋಗಿದ್ದಾರೆ.

ಎಫ್‌ಎಸ್‌ಎಲ್ ತಜ್ಞರ ತಂಡವನ್ನು ಆರೋಪಿ ಮನೆಗೆ ಕರೆದೊಯ್ದು ಹಾಲ್, ಬಾತ್‌ರೂಂ ಹಾಗೂ ರುಬ್ಬುಗುಂಡಿನ ಮೇಲೆ ಲೂಮಿನಾಲ್ ಪರೀಕ್ಷೆ ನಡೆಸಲಾಗಿದೆ. ರಕ್ತದ ಕಲೆಗಳನ್ನು ಪತ್ತೆಹಚ್ಚಲು ಬಳಸುವ ವಿಶೇಷ ರಾಸಾಯನಿಕ ಪರೀಕ್ಷೆಯೇ ಲೂಮಿನಾಲ್ ಟೆಸ್ಟ್ ಆಗಿದೆ. ರಕ್ತದ ಕಲೆಗಳನ್ನು ನೀರು ಅಥವಾ ರಾಸಾಯನಿಕ ಬಳಸಿ ಸ್ವಚ್ಛಗೊಳಿಸಿದ್ದರೂ, ಕೆಲವು ಸಂದರ್ಭಗಳಲ್ಲಿ ರಕ್ತದಲ್ಲಿರುವ ಹೀಮೋಗ್ಲೋಬಿನ್‌ನ ಅಂಶಗಳು ಸ್ಥಳದಲ್ಲಿ ಉಳಿದಿರಬಹುದು. ಅಂತಹ ಜಾಗಗಳಿಗೆ ಲೂಮಿನಾಲ್ ರಾಸಾಯನಿಕ ಸಿಂಪಡಿಸಿದಾಗ, ರಕ್ತದ ಅಂಶಗಳೊಂದಿಗೆ ಪ್ರತಿಕ್ರಿಯಿಸಿ ನೀಲಿ ಬಣ್ಣದ ಹೊಳಪು ಕಾಣಿಸಿಕೊಳ್ಳುತ್ತದೆ. ಇದರಿಂದ ಬರಿಗಣ್ಣಿಗೆ ಕಾಣದ ರಕ್ತದ ಗುರುತುಗಳನ್ನೂ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಪತ್ತೆಯಾದ ಮಾದರಿಗಳನ್ನು ಸಂಗ್ರಹಿಸಿ ಎಫ್‌ಎಸ್‌ಎಲ್ ಪ್ರಯೋಗಾಲಯಕ್ಕೆ ರವಾನಿಸಲಾಗುತ್ತದೆ. ಬಳಿಕ ಡಿಎನ್‌ಎ ಪರೀಕ್ಷೆ ಮೂಲಕ ಹತ್ಯೆಯಾದವರ ಮಾದರಿಗಳೊಂದಿಗೆ ಹೋಲಿಕೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಇನ್ನು ಇದೇ ಪ್ರಕರಣದಲ್ಲಿ ಅಪ್ರಾಪ್ತ ಮಗಳ ವಿಚಾರಣೆಯೂ ಮುಂದುವರಿದಿದೆ. ಅಪ್ರಾಪ್ತೆಯನ್ನು ಜುವೆನೈಲ್ ಜಸ್ಟಿಸ್ ಬೋರ್ಡ್ ಮುಂದೆ ಹಾಜರುಪಡಿಸಿದ್ದ ಪೊಲೀಸರು, ವಿಚಾರಣೆಗಾಗಿ 14 ದಿನಗಳ ಕಸ್ಟಡಿಗೆ ಮನವಿ ಮಾಡಿದ್ದರು. ಆದರೆ ನ್ಯಾಯಾಲಯ 10 ದಿನಗಳ ಕಾಲ ಪೊಲೀಸರ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ. ಇದೀಗ ಅಪ್ರಾಪ್ತೆಯ ವಿಚಾರಣೆಯನ್ನು ಪೊಲೀಸರು ಮುಂದುವರಿಸಿದ್ದಾರೆ. ಏಳು ಮಂದಿಯ ಹತ್ಯೆ ನಡೆದಾಗ ಅಪ್ರಾಪ್ತೆಯ ಪಾತ್ರವೇನು.. ಮನೆಯಲ್ಲೇ ಇಷ್ಟೊಂದು ಭೀಕರ ಕೃತ್ಯ ನಡೆದಿದ್ದರೂ ಆಕೆ ಏಕೆ ತಡೆಯಲಿಲ್ಲ, ಆರೋಪಿಯು ಮಗಳ ಮೇಲೆ ಪ್ರಭಾವ ಬೀರಿದ್ದನೇ ಅಥವಾ ಆಕೆಗೆ ಈ ಕೃತ್ಯದ ಬಗ್ಗೆ ಮೊದಲೇ ಮಾಹಿತಿ ಇತ್ತೇ.. ಇಂತಹ ಹಲವು ಮಹತ್ವದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಕೇಸ್‌ನಲ್ಲಿ ಆರೋಪಿ ಇಂದುಶೇಖರ್‌ನ ಮತ್ತೊಂದು ಸಂಚು ಬಯಲಾಗಿದ್ದು, ಶಂಕರ್ ಹಾಗೂ ನಳಿನಿ ದಂಪತಿಯ ಮೃತದೇಹ ಪತ್ತೆ ವೇಳೆ ಹಂತಕನ ಕೃತ್ಯಕ್ಕೆ ಪೊಲೀಸರೇ ಶಾಕ್ ಆಗಿದ್ದಾರೆ. ಮೃತದೇಹಗಳನ್ನು ಪ್ಯಾಕ್ ಮಾಡುವಾಗ ಒಣಮೆಣಸಿನಕಾಯಿ ತುರುಕಿದ್ದ ಆರೋಪಿ, ಪ್ರಾಣಿಗಳು ಹಾಗೂ ಪಕ್ಷಿಗಳು ಮೃತದೇಹಗಳನ್ನು ಹಾನಿಗೊಳಿಸಬಾರದು ಎಂಬ ಉದ್ದೇಶ ಹೊಂದಿದ್ದನಾ ಎಂಬ ಅನುಮಾನ ಶುರುವಾಗಿದೆ. ಮೆಣಸಿನಕಾಯಿ ಹಾಕಿದರೆ ಪೊಲೀಸ್ ಶ್ವಾನಗಳಿಗೆ ಮೃತದೇಹದ ವಾಸನೆ ಸಿಗುವುದಿಲ್ಲ ಎಂಬ ಲೆಕ್ಕಾಚಾರದಲ್ಲಿ ಈ ತಂತ್ರ ರೂಪಿಸಿದ್ದ. ಪೊಲೀಸರ ಪತ್ತೆ ಕಾರ್ಯಕ್ಕೆ ಅಡ್ಡಿಯಾಗುವಂತೆ ಪೂರ್ವಯೋಜನೆ ರೂಪಿಸಿದ್ದ ಇಂದುಶೇಖರ್‌ನ ಕೃತ್ಯದ ಹಿಂದಿನ ಉದ್ದೇಶವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಒಟ್ಟಾರೆ, ಲೂಮಿನಾಲ್ ಪರೀಕ್ಷೆಯ ವರದಿ ಹಾಗೂ ಅಪ್ರಾಪ್ತೆಯ ವಿಚಾರಣೆಯಿಂದ ಏಳು ಮಂದಿಯ ಬರ್ಬರ ಹತ್ಯೆಯ ಹಿಂದಿರುವ ಅಸಲಿ ಸತ್ಯ ಹೊರಬರಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

Add Zee News as a Preferred Source
TAGS:
Crime