• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ರಾಜ್ಯದಲ್ಲಿ ಕೋಳಿ ಸಾಕಾಣಿಕೆದಾರರ ಪ್ರತಿಭಟನೆ; ಚಿಕನ್, ಮೊಟ್ಟೆ ದರ ಏರಿಕೆ ಸಾಧ್ಯತೆ

ರಾಜ್ಯದಲ್ಲಿ ಕೋಳಿ ಸಾಕಾಣಿಕೆದಾರರ ಪ್ರತಿಭಟನೆ; ಚಿಕನ್, ಮೊಟ್ಟೆ ದರ ಏರಿಕೆ ಸಾಧ್ಯತೆ

ಮೆಕ್ಕೆಜೋಳ ಮತ್ತು ಸೋಯಾಬೀನ್ ಸೇರಿದಂತೆ ಕೋಳಿ ಆಹಾರದ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ರಾಜ್ಯದ ಕೋಳಿ ಸಾಕಾಣಿಕೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written ByKrishna NK
Published: Nov 28, 2026, 20:04 IST|Updated: Nov 28, 2026, 20:06 IST
joinshare
ರಾಜ್ಯದಲ್ಲಿ ಕೋಳಿ ಸಾಕಾಣಿಕೆದಾರರ ಪ್ರತಿಭಟನೆ; ಚಿಕನ್, ಮೊಟ್ಟೆ ದರ ಏರಿಕೆ ಸಾಧ್ಯತೆ
Image Credit: Poultry Farmers

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ವಿಜಯ್ ಸೇತುಪತಿ ಕಾಲರ್ ಹಿಡಿದ ರಾಜ್ ಬಿ ಶೆಟ್ಟಿ

ವಿಜಯ್ ಸೇತುಪತಿ ಕಾಲರ್ ಹಿಡಿದ ರಾಜ್ ಬಿ ಶೆಟ್ಟಿ

2

ಇಂದಿನಿಂದ ನಂದಿನಿ ಮೊಸರು ದರ ಇಳಿಕೆ; ಹೊಸ ಬೆಲೆ ಎಷ್ಟು ಗೊತ್ತಾ?

3

ಹೊಸಪೇಟೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಗಮನ ಸೆಳೆಯುತ್ತಿದೆ ವಿಜಯನಗರ ಸಾಮ್ರಾಜ್ಯದ ವೈಭವ

4

ಸಕ್ಕರೆಗೆ ₹60 ಬೆಂಬಲ ಬೆಲೆ ನಿಗದಿಪಡಿಸಿ, ವಾಣಿಜ್ಯ ಸಕ್ಕರೆ ದರ ₹100ಕ್ಕೆ ಹೆಚ್ಚಿಸಿ; ಸಂಸದ ಜಗದೀಶ್ ಶೆಟ್ಟರ್‌ಗೆ ರೈತರ ಮನವಿ

5

ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ಒದ್ದಾಡುತ್ತಿದ್ದವರಿಗೆ ತಕ್ಷಣ ನೆರವಾದ ಮಾಜಿ ಸಚಿವ ನಾರಾಯಣಗೌಡ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ರಾಜ್ಯದಲ್ಲಿ ಕೋಳಿ ಸಾಕಾಣಿಕೆ ಉದ್ಯಮವು ಗಂಭೀರ ಬಿಕ್ಕಟ್ಟು ಮತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕೋಳಿ ಆಹಾರದ ಪ್ರಮುಖ ಕಚ್ಚಾ ವಸ್ತುಗಳಾದ ಮೆಕ್ಕೆಜೋಳ ಮತ್ತು ಸೋಯಾಬೀನ್ ಬೆಲೆಗಳು ಗಣನೀಯವಾಗಿ ಏರಿಕೆಯಾಗಿರುವುದರಿಂದ ಉತ್ಪಾದನಾ ವೆಚ್ಚ ತೀವ್ರವಾಗಿ ಹೆಚ್ಚಿದೆ. ಇದರಿಂದ ಕಂಗಾಲಾಗಿರುವ ಕೋಳಿ ಸಾಕಾಣಿಕೆದಾರರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ನಡುವೆ, ಮುಂಬರುವ ದಿನಗಳಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆಯ ದರವನ್ನು ಹೆಚ್ಚಿಸುವ ಕುರಿತೂ ನಿರ್ಧಾರ ಹಾಗೂ ಬೇಡಿಕೆಗಳನ್ನು ಮುಂದಿಡಲಾಗಿದೆ.

ಹೌದು.. ಕೋಳಿ ಸಾಕಾಣಿಕೆ ರೈತರ ಹಿತರಕ್ಷಣೆ ಮತ್ತು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಕೋಳಿ ಸಾಕಾಣಿಕೆದಾರರು ಆಕ್ರೋಶ ವ್ಯಕ್ತಪಡಿಸಿ ಹೋರಾಟದ ಹಾದಿ ಹಿಡಿದಿದ್ದಾರೆ. ಒಂದೆಡೆ, ಸಾಕಾಣಿಕೆ ದರವನ್ನು ಪ್ರತಿ ಕೆ.ಜಿಗೆ ₹10 ನೀಡುವಂತೆ ರೈತ ಸಂಘಟನೆಗಳು ಪಟ್ಟು ಹಿಡಿದು ಆಗ್ರಹಿಸುತ್ತಿದ್ದರೆ, ಮತ್ತೊಂದೆಡೆ ಪಶು ಆಹಾರದ ಕಚ್ಚಾ ವಸ್ತುಗಳ ದರ ಹೆಚ್ಚಳದಿಂದ ಇಡೀ ಕುಕ್ಕುಟೋದ್ಯಮ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು, ಮುಂಬರುವ ದಿನಗಳಲ್ಲಿ ಕೋಳಿ ಮಾಂಸದ ದರವನ್ನು ಪ್ರತಿ ಕೆ.ಜಿಗೆ ₹40 ರಿಂದ ₹50 ಹಾಗೂ ಮೊಟ್ಟೆಯ ಬೆಲೆಯನ್ನು ಪ್ರತಿ ಮೊಟ್ಟೆಗೆ ₹3 ರಿಂದ ₹4 ವರೆಗೆ ಏರಿಕೆ ಮಾಡುವಂತೆ ಬೇಡಿಕೆ ಇಡಲಾಗಿದೆ.

ಸದ್ಯ ಪಶು ಆಹಾರದ ಬೆಲೆಯು ಪ್ರತಿ ಟನ್‌ಗೆ ₹15,000 ರಷ್ಟು ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ಈ ದಿಢೀರ್ ಬೆಲೆ ಏರಿಕೆಯಿಂದ ಉಂಟಾದ ಉತ್ಪಾದನಾ ವೆಚ್ಚವನ್ನು ತಾಳಲಾರದೆ ಕೋಳಿ ಸಾಕಾಣಿಕೆದಾರರು ಭಾರಿ ನಷ್ಟ ಅನುಭವಿಸುವಂತಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ದೇಶದ ಸುಮಾರು ಶೇ. 20 ರಿಂದ ಶೇ. 25 ರಷ್ಟು ಕೋಳಿ ಫಾರಂಗಳು ಬಾಗಿಲು ಮುಚ್ಚುವ ಸ್ಥಿತಿಗೆ ತಲುಪುವ ಅಪಾಯವಿದೆ ಎಂದು ಆತಂಕ ವ್ಯಕ್ತವಾಗಿದೆ. ಅಲ್ಲದೆ, ಕೋಳಿ ಆಹಾರ ತಯಾರಿಕಾ ಘಟಕಗಳ ಉತ್ಪಾದನೆ ಮತ್ತು ಬೇಡಿಕೆಯಲ್ಲೂ ಶೇ. 15 ರಿಂದ ಶೇ. 25 ರಷ್ಟು ಕುಸಿತ ಕಂಡುಬರುವ ಸಾಧ್ಯತೆ ಇದೆ.

ಕೋಳಿ ಸಾಕಾಣಿಕೆ ವಲಯವು ಕೇವಲ ಸಾಕಾಣಿಕೆ ದರದ ವಿವಾದವನ್ನಷ್ಟೇ ಎದುರಿಸುತ್ತಿಲ್ಲ. ಬದಲಿಗೆ ಪಶು ಆಹಾರದ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಲೂ ತೀವ್ರ ಹೊಡೆತ ಅನುಭವಿಸುತ್ತಿದೆ. ಪ್ರಮುಖವಾಗಿ ಮೆಕ್ಕೆಜೋಳ ಮತ್ತು ಸೋಯಾಬೀನ್ ಬೆಲೆಗಳು ಏರಿಕೆಯಾಗಿರುವುದು ಕೋಳಿ ಸಾಕಾಣಿಕೆಯ ಒಟ್ಟಾರೆ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಿದೆ.

ಈ ಹಿನ್ನೆಲೆಯಲ್ಲಿ, ತಮ್ಮ ಬೇಡಿಕೆಗಳು ಈಡೇರುವವರೆಗೆ ಕೋಳಿ ಫಾರಂಗಳಲ್ಲಿ ಹೊಸ ಕೋಳಿ ಮರಿಗಳನ್ನು ಲಿಫ್ಟ್ ಮಾಡಿಕೊಳ್ಳಬಾರದು (ಸೇರಿಸಿಕೊಳ್ಳಬಾರದು) ಹಾಗೂ ಸಿದ್ಧವಾಗಿರುವ ಕೋಳಿಗಳನ್ನು ಮಾರಾಟಕ್ಕೆ ನೀಡಬಾರದು ಎಂಬ ಕಠಿಣ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಕೋಳಿ ಸಾಕಾಣಿಕೆದಾರರ ಈ ಹೋರಾಟ ಮತ್ತು ದರ ಏರಿಕೆಯ ಬೇಡಿಕೆ ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ, ಹಾಗೂ ಇದರಿಂದ ಗ್ರಾಹಕರು ಮತ್ತು ಮಾರುಕಟ್ಟೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

Add Zee News as a Preferred Source
TAGS:
Kannada News